Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು » ಬಾಬಾ ದಾವೂದ್ ಖಾಕಿ ಮಸೀದಿ

ಬಾಬಾ ದಾವೂದ್ ಖಾಕಿ ಮಸೀದಿ, ಅನಂತನಾಗ್

1

ಸುಮಾರು 600 ವರ್ಷಗಳ ಹಿಂದೆ ನಿರ್ಮಿಸಲಾದ ಮಸ್ಜೀದ್ ಬಾಬಾ ದಾವೂದ್ ಖಾಕಿಯು ಈ ನಗರದಲ್ಲಿರುವ ಅತ್ಯಂತ ಹಳೆಯ ಮಸೀದಿಯಾಗಿದೆ. ಇದು ಅನಂತ್‍ನಾಗ್‍ನ ರೇಶಿ ಬಜಾರಿನಲ್ಲಿರುವ ಮೊಹಲ ಖಾಕಿ ಶಬನ್‍ನಲ್ಲಿ ನೆಲೆಗೊಂಡಿದೆ. ಈ ಮಸೀದಿಯು ಹಝರತ್ ಶೇಖ್ ಬಾಬಾ ದಾವೂದ್ ಖಾಕಿರವರಿಂದ ಈ ಹೆಸರು ಪಡೆದಿದೆ. ಇವರು ಈ ಪ್ರಾಂತ್ಯದ ಪ್ರಖ್ಯಾತ ವಿದ್ವಾಂಸರಾಗಿದ್ದರು. ಇವರು ಈ ಪ್ರಾಂತ್ಯದ ಮುಖ್ಯ ಖಾಜಿಯಾಗಿದ್ದ ಹಝರತ್ ಶೇಕ್ ಹಮ್‍ಝ ಮಖ್‍ದೂಮ್ ಸಾಹಿಬ್‍ರವರ ಅನುಯಾಯಿಯಾಗಿದ್ದರು. ಹಝರತ್ ಶೇಕ್ ಬಾಬಾ ದಾವೂದ್ ಖಾಕಿಯವರು ಈ ಪ್ರಾಂತ್ಯದಲ್ಲಿ ಇಸ್ಲಾಂ ಅನ್ನು ಪ್ರಚಾರ ಮಾಡಿ ಪ್ರವರ್ಧಮಾನಕ್ಕೆ ತರುವ ದೃಷ್ಟಿಯಿಂದ ಹಲವಾರು ಮಸೀದಿಗಳನ್ನು ನಿರ್ಮಿಸಿದರು. ಅದರಲ್ಲಿ  ಬಾಬಾ ದಾವೂದ್ ಖಾಕಿ ಮಸೀದಿ ಸಹ ಒಂದು. ಇಲ್ಲಿನ ಸ್ಥಳ ಪುರಾಣದಂತೆ ಸಂತ ಶಾ ಹಮ್‍ದನ್‍ರವರು ಇರಾನಿನಿಂದ ಈ ಮಸೀದಿಗೆ ಬಂದರಂತೆ. ಅವರು ಬಂದಾಗ ಈ ಮಸೀದಿಯು ಇನ್ನು ಬುನಾದಿಯಾಗಿತ್ತಂತೆ. ಈ ಗುಡಿಯ ನೆಲಮಹಡಿಯನ್ನು ಸಂತ ಶಾ ಹಮ್‍ದನ್‍ರವರ ಮಗನಾದ ಮೀರ್ ಮುಹಮ್ಮದ್ ಹಮ್‍ದಾನಿಯವರು ಕ್ರಿ.ಶ. 1397ರಲ್ಲಿ ನಿರ್ಮಿಸಿದರಂತೆ. ಇದರ ನಂತರ ಬಾಬಾ ದಾವೂದ್ ಖಾಕಿಯವರಿಂದ ಕ್ರಿ.ಶ 1579 ಮತ್ತು 1582 ರಲ್ಲಿ ಅನುಕ್ರಮವಾಗಿ ಮಸೀದಿಯ 2 ಮತ್ತು 3ನೇ ಮಹಡಿಯಲ್ಲಿ ನಿರ್ಮಿಸಲಾಯಿತು. ಅನಂತ್‍ನಾಗ್‍ನಲ್ಲಿ 10 ವರ್ಷ ಕಳೆದ ಮೇಲೆ ಸಂತ ಖಾಕಿಯವರು ಕ್ರಿ.ಶ 1587ರಲ್ಲಿ ಕೊನೆಯುಸಿರೆಳೆದರು.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu