Search
  • Follow NativePlanet
Share
ಮುಖಪುಟ » ಸ್ಥಳಗಳು » ಅನಂತನಾಗ್ » ಆಕರ್ಷಣೆಗಳು » ನಾಗ್‍ಬಾಲ್

ನಾಗ್‍ಬಾಲ್, ಅನಂತನಾಗ್

1

ನಾಗ್‍ಬಾಲ್ ಎಂಬುದು ಅನಂತ್‍ನಾಗ್ ಜಿಲ್ಲೆಯಲ್ಲಿರುವ ಒಂದು ಪ್ರಮುಖ ಹಿಂದೂ ಯಾತ್ರಾ ಸ್ಥಳವಾಗಿದೆ. ಈ ಸ್ಥಳಕ್ಕೆ ಭೇಟಿಕೊಟ್ಟಾಗ ಪ್ರವಾಸಿಗರು ಬೆಟ್ಟದ ಬುಡದಲ್ಲಿ ಉಕ್ಕಿ ಹರಿಯುವ ಒಂದು ಝರಿಯನ್ನು ಕಾಣಬಹುದು. ಈ ಝರಿಯು ಅನಂತ ಎಂದು ಕರೆಯಲ್ಪಡುವ ವಿಷ್ಟುವಿನ ಆರಾಧಿಸುವ ಸ್ಥಳವಾಗಿ ಖ್ಯಾತಿಪಡೆದಿದೆ. ಪ್ರವಾಸಿಗರು ನಾಗ್‍ಬಾಲ್ ಸಂಕೀರ್ಣದ ಒಳಗೆ ಹಳೆಯ ಚಿನಾರ್ ಗಳನ್ನು ಹೊಂದಿರುವ ಒಂದು ದೊಡ್ಡ ಕಲ್ಯಾಣಿಯನ್ನು ನೋಡಬಹುದು. ಈ ಕಲ್ಯಾಣಿಯ ಒಳಗಡೆ ಇರುವ ಮೀನುಗಳನ್ನು ಅತ್ಯಂತ ಪವಿತ್ರವಾದವುಗಳೆಂದು ಭಾವಿಸಲಾಗಿದೆ.

ಈ ಪವಿತ್ರ ಝರಿಯ ಪಕ್ಕದಲ್ಲಿ ಒಂದು ಪಾಳು ಬಿದ್ದ ಸಣ್ಣ ದೇವಾಲಯವನ್ನು ನಾವು ನೋಡಬಹುದು. ಈ ದೇವಾಲಯವನ್ನು ಕಾಶ್ಮೀರದಲ್ಲಿ ಆಳಿದ ಡೊಗ್ರ ಮನೆತನದ ಮಹಾರಾಜ ರಣಬೀರ್ ಸಿಂಗ್‍ನ ಅವಧಿಯಲ್ಲಿ ನಿರ್ಮಿಸಲಾಯಿತು. ಆದರೆ ಈ ದೇವಾಲಯವು ಪ್ರಸ್ತುತ ಶಿಥಿಲಾವಸ್ಥೆಯಲ್ಲಿದೆ. ಯಾತ್ರಾರ್ಥಿಗಳು ಇಲ್ಲಿ ಅನಂತ ಭಗವಾನ್ ಮೂರ್ತಿಯನ್ನು ನೋಡಬಹುದು.

ಶಿವಜೀ ದೇವಾಲಯವು ನಾಗ್‍ಬಾಲ್ ಸಂಕೀರ್ಣದಲ್ಲಿರುವ ಮತ್ತೊಂದು ಧಾರ್ಮಿಕ ಕೇಂದ್ರವಾಗಿದೆ. ಈ ಯಾತ್ರಾಸ್ಥಳವು ಈ ಸಂಕೀರ್ಣದಲ್ಲಿರುವ ಅತ್ಯಂತ ಹಳೆಯ ದೇವಾಲಯವಾಗಿದೆ. ಇದನ್ನು ಮಹಾರಾಜ ಪ್ರತಾಪ್ ಸಿಂಗ್‍ರವರ ಆಡಳಿತಾವಧಿಯಲ್ಲಿ ಅಂದರೆ,1885 ಮತ್ತು 1925 ರ ನಡುವೆ ನಿರ್ಮಿಸಲಾಯಿತು. ಹಿಂದೂ ಧಾರ್ಮಿಕ ಕೇಂದ್ರಗಳ ಹೊರತಾಗಿ ಇಲ್ಲಿ ಒಂದು ಗುರುದ್ವಾರ ಸಹ ಇದೆ. ಈ ಸ್ಥಳದಲ್ಲಿ ಒಂದು ಗಂಧಕದ ಚಿಲುಮೆ ಸಹ ಉಕ್ಕಿ ಹರಿಯುತ್ತದೆ. ಇದು ಎಲ್ಲ ತರಹದ ಚರ್ಮ ವ್ಯಾಧಿಗಳನ್ನು ನಿವಾರಿಸುವ ಗುಣವನ್ನು ಹೊಂದಿದೆ ಎಂದು ನಂಬಲಾಗುತ್ತದೆ.

One Way
Return
From (Departure City)
To (Destination City)
Depart On
07 Sep,Mon
Return On
08 Sep,Tue
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
07 Sep,Mon
Check Out
08 Sep,Tue
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
07 Sep,Mon
Return On
08 Sep,Tue