ಅಗಸ್ತಿಯರ್ ಜಲಪಾತದ ಬಳಿ ಇರುವ ಈ ಊರಿಗೆ ಜನರು ಕಿರಿದಾಗಿ ವಿಕೆ ಪುರಂ ಎಂದೂ ಕರೆಯುತ್ತಾರೆ. (ನಮ್ಮಲ್ಲಿ ನರಸಿಂಹರಾಜಪುರ ಎನ್ನಾರ್ ಪುರ ಆಗಿಲ್ಲವೇ ಹಾಗೇ). ಈ ಊರಿನಲ್ಲಿ ವಿವಿಧ ಧರ್ಮದ ಜನರು ಸಹಬಾಳ್ವೆ ನಡೆಸುತ್ತಾ ಬಂದಿದ್ದಾರೆ. ಅಂತೆಯೇ ಈ ಊರಿನಲ್ಲಿ ಹಲವಾರು ದೇವಾಲಯಗಳ ಜೊತೆಗೆ ಸುಂದರ ಚರ್ಚುಗಳೂ ಇವೆ. ಶಿವನ್ ದೇವಾಲಯ, ಸಿವಂತಿಯಪ್ಪರ್ ದೇವಾಲಯ, ನಾರಾಯಣ ಸ್ವಾಮಿ ದೇವಾಲಯ, ಶ್ರೀ ವೇಣುಗೋಪಾಲಕೃಷ್ಣನ್ ದೇವಾಲಯ, ಬಾಲಸುಬ್ರಹ್ಮಣಿಯಂ ಕೋವಿಲ್ ಜೊತೆಗೇ ಹೋಲಿ ಕ್ಯಾಲ್ವರಿ ಚರ್ಚ್, ಸೇಂಟ್ ಪೀಟರ್ಸ್ ಚರ್ಚ್ ಗಳು ಊರಿನ ಸೌಂದರ್ಯವನ್ನು ಹೆಚ್ಚಿಸಿವೆ. ಈ ಊರಿನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಉತ್ತಮ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಭತ್ತದ ಕೃಷಿ ಪ್ರಮುಖ ಚಟುವಟಿಕೆಯಾಗಿದ್ದರೂ ಇತ್ತೀಚೆಗೆ ಪ್ರಾರಂಭಿಸಲಾದ ಮದುರಾ ಕೋಟ್ಸ್ ಮತ್ತು ಮಾಸ್ ಬಿಸಿನೆಸ್ ಸೊಲ್ಯೂಶನ್ಸ್ ಸಂಸ್ಥೆಗಳು ಹೆಚ್ಚಿನ ಉದ್ಯೋಗಾವಕಾಶಗಳನ್ನು ಒದಗಿಸುತ್ತವೆ.


Click it and Unblock the Notifications