ಕೊಲಾಬಾ ಕೋಟೆಯನ್ನು ಮುಂಬೈಯ ಜನರು ಇಷ್ಟಪಡುವ ಕೊಲಾಬಾ (Colaba) ಮಾರುಕಟ್ಟೆ ಎಂದು ಗೊಂದಲ ಮಾಡಿಕೊಳ್ಳಬೇಡಿ! ಕೊಲಾಬಾ ಕೋಟೆಯು ಅಲಿಬಾಗ್ ತೀರದ ಹತ್ತಿರದಲ್ಲಿಯೆ ಇದೆ. ಈ ಐತಿಹಾಸಿಕ ಕೋಟೆಯು ಪ್ರಸಿದ್ಧ ಮರಾಠಾ ಯೋಧ ಶಿವಾಜಿಯ ನಿಧನಕ್ಕಿಂತ ಮೊದಲು ಅವರಿಂದಲೆ ಸ್ಥಾಪಿತವಾದ ಕೊನೆಯ ಕೋಟೆಯಾಗಿದೆ.
ಕುಲಾಬಾ ಎಂತಲೂ...
ಸಮುದ್ರದ ಅಲೆಯ ಹೊಡೆತ ಕಡಿಮೆ ಇರುವ ಸಂದರ್ಭದಲ್ಲಿ ಮೂರು ಶತಕಗಳ ಹಿಂದಿನ ಕೋಟೆಯನ್ನು ನೋಡಬಹುದು. ಭಾರತದ ಪುರಾತತ್ವ ಇಲಾಖೆಯು ಈ ಕೋಟೆಯ ಸಂರಕ್ಷಣೆಗೋಸ್ಕರ ಪ್ರಯಾಣಿಕರಿಗೆ ಸ್ಮಾರಕದಂತಹ ಕೋಟೆಯನ್ನು ಪ್ರವೇಶಿಸಲು ಶುಲ್ಕವನ್ನು ನಿಗದಿಪಡಿಸಿದೆ.
ಖಾಂಡೇರಿ ಕೋಟೆಯು ಸುಮಾರು 320 ವರ್ಷಗಳ ಹಿಂದೆ ಅಂದರೆ 1678 ರಲ್ಲಿ ಪೇಶ್ವೆ...
ಈ ಬೀಚ್ ಗೆ ಅಲಿಬಾಗ್ ಪಟ್ಟಣದ ಹೆಸರನ್ನೇ ಇಡಲಾಗಿದೆ. ಅಲಿಬಾಗ್ ಪಟ್ಟಣಕ್ಕೆ ಭೇಟಿ ನೀಡಿದರೆ ನೋಡಲೆ ಬೇಕಾದಂತಹ ಸ್ಥಳ ಈ ಕಡಲ ತೀರ. ಇಲ್ಲಿಂದ ಕೊಲಾಬಾ ಕೋಟೆಯನ್ನು ಸುಲಭವಾಗಿ ನೋಡಬಹುದು. ಇಲ್ಲಿ ಅಪಾರವಾಗಿ ಕಪ್ಪು ಮರಳನ್ನು ಕಾಣಬಹುದು. ಇತರ ಬೀಚ್ ಗಳಂತೆಯೆ ಇಲ್ಲಿಯೂ ಆಹಾರ ಮಳಿಗೆಗಳಿದ್ದು ಪ್ರವಾಸಿಗರು ಬಯಸುವ ಸ್ಥಳೀಯ...
ಅಕ್ಷಿ ಕಡಲ ತೀರ ಅಲಿಬಾಗ್ ನಲ್ಲಿರುವ ಇನ್ನೊಂದು ಪ್ರಮುಖ ಆಕರ್ಷಣೆ. ಅಲಿಬಾಗ್ ನಿಂದ ಕೇವಲ 5 ಕೀ. ಮಿ ದೂರದಲ್ಲಿ ಅಕ್ಷಿ ಬೀಚ್ ಅನ್ನು ಕಾಣಬಹುದು. ಅಕ್ಷಿ ಬೀಚ್ ಅತ್ಯಂತ ರಮಣೀಯವಾಗಿದ್ದು ಬೆಳ್ಳಿ – ಬಿಳಿ ಮರಳ ದಂಡೆಯನ್ನು ಹೊಂದಿದೆ. ಈ ಸ್ಥಳವು ಜಾಹೀರಾತು ಹಾಗೂ ಸಿನಿಮಾ ಚಿತ್ರೀಕರಣಕ್ಕೆ ಹೆಸರಾದ...
ಕಿಹಿಮ್ – ನಾಗೋನ್ ಎಂಬ ಎರಡು ಅವಳಿ ಕಡಲ ತೀರಗಳು ಅಲಿಬಾಗ್ ನಿಂದ 10 ಕೀ. ಮಿ ಅಂತರದಲ್ಲಿವೆ. ಕಿಹಿಮ್ ಬೀಚ್ ಅಡಿಕೆ ಹಾಗೂ ತೆಂಗಿನ ಮರಗಳಿಂದ ಸುತ್ತುವರೆದಿದೆ. ಅಲ್ಲದೆ ಇಲ್ಲಿರುವ ಅಪರೂಪದ ನಾನಾ ವಿಧದ ಪಕ್ಷಿಗಳು ಹಾಗೂ ಪಾತರಗಿತ್ತಿ / ಚಿಟ್ಟೆಗಳು ಇಲ್ಲಿನ ಸೌಂದರ್ಯವನ್ನು ಇಮ್ಮಡಿಗೊಳಿಸಿವೆ.
ಈ ಪ್ರದೇಶಗಳಲ್ಲಿ...
ಕನೇಶ್ವರ ದೇವಸ್ಥಾನವು ಚಿರಪರಿಚಿತವಾದ ಶಿವ ದೇವಾಲಯ. ಈ ದೇವಾಲಯವು ಅಲಿಬಾಗ್ ನಿಂದ 12 ಕೀ. ಮಿ ದೂರದಲ್ಲಿದ್ದು, 900 ಅಡಿ ಎತ್ತರದಲ್ಲಿ ಬೆಟ್ಟದ ಮೇಲಿದೆ. ಯಾತ್ರಾರ್ಥಿಗಳು, ಭಕ್ತಾದಿಗಳು 500 ಮೆಟ್ಟಿಲುಗಳನ್ನು ಹತ್ತಿ ಭಗವಂತ ಶಿವನ ದರ್ಶನವನ್ನು ಮಾಡಬಹುದು. ಈ ದೇವಾಲಯವು ರಾಜ ರಾಮದೇವ್ ಯಾದವ್ ನಿಂದ...
ಸೋಮೇಶ್ವರ ದೇವಾಲಯ ಅಲಿಬಾಗ್ ನ ಪುರಾತನವಾದ ದೇವಾಲಯ. ಇದು ಚಿಕ್ಕ ಅಕ್ಷಿ ಎಂಬ ಹಳ್ಳಿಯಲ್ಲಿದ್ದು ಅಲಿಬಾಗ್ ನಿಂದ ಕೇವಲ 3 ಕೀ. ಮಿ ಅಂತರದಲ್ಲಿದೆ. ಈ ದೇವಸ್ಥಾನವನ್ನು ಶಾತವಾಹನರ ಕಾಲದಲ್ಲಿ ನಿರ್ಮಿಸಲಾಗಿದೆ.
ಸೋಮೇಶ್ವರ ದೇವಾಲಯವು ಸೋಮೇಶ್ವರ ಎಂದು ಕರೆಯಲ್ಪಡುವ ಭಗವಂತ ಶಿವನಿಗೆ ಸಮರ್ಪಿಸಲಾಗಿದೆ. ಪುರಾಣಗಳ...
ಮಾಂಡವಾ ಕಡಲ ತೀರ ಪರಿಶುದ್ಧವಾದ, ಉತ್ತಮವಾದ ಬೀಚ್ ಗಳನ್ನು ಒಂದೆಡೆ ಸೇರಿಸುವಂತಿದ್ದು ಈ ಸನ್ನಿವೇಶ ಎಂಥವರ ಮನಸ್ಸನ್ನೂ ಸೂರೆಗೊಳ್ಳುತ್ತದೆ. ಇದು ಅಲಿಬಾಗ್ ನ ಉತ್ತರಕ್ಕೆ 20 ಕೀ. ಮಿ ದೂರದಲ್ಲಿದೆ.
ಈ ಬೀಚ್ ನ ಸುತ್ತ ಕೆಲವು ಬಾಲಿವುಡ್ ತಾರೆಯರ ಬಂಗಲೆಗಳನ್ನು ಕಾಣಬಹುದು. ಆಶ್ಚರ್ಯವೆಂದರೆ ಭಾರತದ ಗೇಟ್ವೆಯನ್ನು...