ಮಂಗ್ಲಿಯವಸ್, ಇದೊಂದು 800 ವರ್ಷ ಹಳೆಯದಾದ ಜನಪ್ರಿಯವ ಮರವಾಗಿದ್ದು, ಅಜ್ಮೇರದ ರಾಷ್ಟ್ರೀಯ ಹೆದ್ದಾರಿ 8 ರಿಂದ ಬಿಯೆವಾರ್ ಕಡೆಗೆ 26 ಕಿ.ಮೀ ದೂರದಲ್ಲಿದೆ. ಈ ಮರವನ್ನು ಕಲ್ಪವೃಕ್ಷ ಎಂದು ಕರೆಯಲಾಗುತ್ತದೆ, ಇಲ್ಲಿ ಹರಕೆ ಹೊತ್ತುಕೊಳ್ಳುವವರ ಬೇಡಿಕೆಯು ಈಡೇರುತ್ತದೆ ಎಂದು ಹೇಳಲಾಗುತ್ತದೆ. ಇದರಿಂದಾಗಿ ದೇಶಾದ್ಯಂತದ ಭಕ್ತರು ಇಲ್ಲಿಗೆ ಬರುತ್ತಾರೆ. ಇಲ್ಲಿಗೆ ಬರುವ ಪ್ರವಾಸಿಗರು ಮರಕ್ಕೆ ನೂಲನ್ನು ಕಟ್ಟಿ, ತಮ್ಮ ಬಯಕೆ ಈಡೇರಲಿ ಎಂದು ಕೋರಿಕೊಳ್ಳುತ್ತಾರೆ.


Click it and Unblock the Notifications