ಆನಾ ಸಾಗರ ಕೆರೆ, 13 ಕಿ.ಮೀ ವ್ಯಾಪ್ತಿಯಲ್ಲಿ ಹರಡಿಕೊಂಡಿದ್ದು, ಪೃಥ್ವಿರಾಜ್ ಚೌಹಾಣ್‌ರ ಅಜ್ಜ ಅಣ್ಣಾಜಿ ಚೌಹಾನ್ ಕಾಲದಲ್ಲಿ ಇದನ್ನ ನಿರ್ಮಿಸಲಾಯಿತು. 1135 ಮತ್ತು 1150 ರಲ್ಲಿ ಸ್ಥಳಿಯರ ಸಹಾಯದಿಂದ ಈ ಕೆರೆಯನ್ನು ನಿರ್ಮಿಸಲಾಯ್ತು.ದೌಲತ್ ಬಾಗ್ ಗಾರ್ಡನ್‌ನ್ನು ಜಹಾಂಗಿರ್ ನಿರ್ಮಿಸಿದ್ದು, ಇದು ಕೆರೆಯ ಸುತ್ತಲೂ ಇದೆ. ಕೆರೆಯು ಒಂದು ದ್ವೀಪವನ್ನೂ ಹೊಂದಿದ್ದು, ಸುಂದರವಾದ ಪಾರ್ಕ್‌ಗಳು ಮತ್ತು ಮಾರ್ಬಲ್‌ನ ಪೆವಿಲಿಯನ್‌ನ್ನು ಹೊಂದಿದೆ. ಬೋಟ್‌ಗಳು ಮತ್ತು ವಾಟರ್ ಸ್ಕೂಟರುಗಳು ಕೂಡಾ ದ್ವೀಪವನ್ನು ತಲುಪಲು ದೌಲತ್ ಬಾಗ್‌ನ ಉತ್ತರ ಭಾಗದಿಂದ ಲಭ್ಯವಿದೆ.ಕೆರೆಯ ಸೌಂದರ್ಯವನ್ನು ಹೆಚ್ಚಿಸಲು ಮೊಘಲರು ಹೆಚ್ಚಿನ ನಿರ್ಮಾಣವನ್ನೂ ಕೂಡಾ ಮಾಡಲಾಗುವುದು. ಸರ್ಕ್ಯೂಟ್ ಹೌಸ್, ಕೆರೆಯ ಸಮೀಪದಲ್ಲಿ ಬ್ರಿಟಿಷರಿಗಾಗಿ ನಿರ್ಮಿಸಿದ ಮನೆಯಾಗಿತ್ತು.


Click it and Unblock the Notifications