ವಡಗೊಕ್‍ಗ್ರೆಯು ಪಶ್ಚಿಮ ಗರೊ ಬೆಟ್ಟಗಳಲ್ಲಿರುವ ಅದ್ಭುತವಾದ ಪ್ರವಾಸಿ ತಾಣವಾಗಿದೆ. ಅದರಲ್ಲಿಯೂ ಇತಿಹಾಸ ಮತ್ತು ನಾಗರೀಕತೆಗಳ ಕುರಿತಾಗಿ ಕುತೂಹಲವಿರುವವರಿಗೆ ಇದು ಹೇಳಿ ಮಾಡಿಸಿದ ಸ್ಥಳವಾಗಿರುತ್ತದೆ. ನಾಲ್ಕನೆಯ ಶತಮಾನದಲ್ಲಿ ಬ್ರಹ್ಮ ಪುತ್ರ ನದಿಯಿಂದ ಕೊಚ್ಚಿ ಹೋದ ಈ ಸ್ಥಳದಲ್ಲಿ ಒಂದು ದೊಡ್ಡ ನಗರ ಮತ್ತು ಧಾರ್ಮಿಕ ಕೇಂದ್ರವಿತ್ತು ಎಂದು ಭಾರತೀಯ ಸರ್ವೇಕ್ಷಣಾ ವಿಭಾಗವು ತನ್ನ ಉತ್ಖನನಗಳ ಆಧಾರದ ಮೇಲೆ ಅಭಿಪ್ರಾಯ ಪಟ್ಟಿದೆ.
ಇಲ್ಲಿ ನಡೆದ ಉತ್ಖನನವು ವಡಗೊಕ್‍ಗ್ರೆಯ ನಗರವು ಒಂದು ಕಾಲದಲ್ಲಿ ಬೌದ್ಧ ಮತ್ತು ಹಿಂದೂ ಧರ್ಮಗಳ ನೆಲೆಯಾಗಿತ್ತು ಮತ್ತು ಈ ಎರಡು ಧರ್ಮಗಳ ಅಂತಸತ್ವವನ್ನು ನಾವು ಈ ಪ್ರದೇಶದಲ್ಲಿ ಇಂದಿಗು ನಾವು ನೋಡಬಹುದು. ಈ ಪ್ರಾಚೀನ ನಗರವು ಬ್ರಹ್ಮ ಪುತ್ರ ನದಿಯ ದಂಡೆಯ ಮೇಲೆ ನೆಲೆಗೊಂಡಿತ್ತು. ಇದು ಈ ಭಾಗದಲ್ಲಿ ಸುಮಾರು 2000 ವರ್ಷಗಳಿಂದಲು ಹರಿಯುತ್ತಿದೆ. ಇಡೀ ನಗರವು ತುಂಬಾ ಅಚ್ಚು ಕಟ್ಟಿನಿಂದ ನಿರ್ಮಾಣ ಮಾಡಲಾಗಿದ್ದು, ಸುಟ್ಟ ಇಟ್ಟಿಗೆಗಳನ್ನು ಕಟ್ಟಡ ನಿರ್ಮಾಣ ಮಾಡಲು ಬಳಸಿರುವ ಸಾಕ್ಷಾಧಾರಗಳು ನಮಗೆ ಇಲ್ಲಿ ದೊರೆತಿವೆ. ಆದರೆ ಎಲ್ಲರೂ ಅತ್ಯಾಶ್ಚರ್ಯಪಡುವ ವಿಚಾರವೇನೆಂದರೆ ಇಲ್ಲಿ ನಡೆದ ಉತ್ಖನನದಲ್ಲಿ ಒಂದೇ ಒಂದು ಮೂಳೆ ಸಹ ದೊರೆತಿಲ್ಲ!.
ವಡಗೊಕ್‍ಗ್ರೆಗೆ ತಲುಪಲು ಇಚ್ಛಿಸುವವರು ಟುರದಿಂದ ಪ್ರವಾಸಿ ವಾಹನಗಳನ್ನು ತೆಗೆದುಕೊಂಡು ಬರುವುದು ಉತ್ತಮ.


Click it and Unblock the Notifications