Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ದರಿಬೊಕ್‍ಗ್ರೆ ಗ್ರಾಮೀಣ ಪ್ರವಾಸೋದ್ಯಮ

ದರಿಬೊಕ್‍ಗ್ರೆ ಗ್ರಾಮೀಣ ಪ್ರವಾಸೋದ್ಯಮ, ವೆಸ್ಟ್ ಗಾರೊ ಹಿಲ್ಸ್

1

ದರಿಬೊಕ್‍ಗ್ರೆ ಎಂಬುದು ಗರೊ ಬೆಟ್ಟಗಳಲ್ಲಿರುವ ಒಂದು ಸಣ್ಣ ಹಳ್ಳಿಯಾಗಿದೆ. ಇದು ನೊಕ್ರೆಕ್ ರಾಷ್ಟ್ರೀಯ ಉದ್ಯಾನವನದ ಸಮೀಪದಲ್ಲಿ ನೆಲೆಗೊಂಡಿದೆ. ಕೃಷಿಯಲ್ಲಿ ಆಧುನಿಕ ತಂತ್ರಙ್ಞಾನದ ಪ್ರಭಾವ ಹೆಚ್ಚಾದಂತೆಲ್ಲ ಜನರ ತೊಡಗಿಸಿಕೊಳ್ಳುವಿಕೆ ಮತ್ತು ಮಾನವ ಸಂಪನ್ಮೂಲದ ಬಳಕೆ ಇಳಿಮುಖವಾಗತೊಡಗಿತು. ಆಗ ಜನರು ತಮ್ಮ ಜೀವನೋಪಾಯಕ್ಕಾಗಿ ಏನನ್ನಾದರೂ ಹುಡುಕಿಕೊಳ್ಳುವ ಅನಿವಾರ್ಯತೆ ಎದುರಾಯಿತು. ಇಂತಹ ಪರಿಸ್ಥಿತಿ ದರಿಬೊಕ್‍ಗ್ರೆ ಹಳ್ಳಿಯವರಿಗೆ ಉಂಟಾದಾಗ ಅವರು ಕಂಡು ಕೊಂಡ ಮಾರ್ಗವೇ ಈ ಗ್ರಾಮೀಣ ಪ್ರವಾಸೋದ್ಯಮ.

ಈ ಗ್ರಾಮೀಣ ಪ್ರವಾಸೋದ್ಯಮ ಸ್ಥಾಪಿಸಲು ಇದ್ದ ಮೂಲ ಉದ್ದೇಶವೇ ಪ್ರವಾಸಿಗರನ್ನು ಗ್ರಾಮೀಣ ಜೀವನಶೈಲಿಗೆ ತೊಡಗಿಸುವುದು ಮತ್ತು ಅದರ ಸ್ಥೂಲ ಪರಿಚಯ ಮಾಡಿಕೊಡುವುದಾಗಿದೆ. ಈ ಯೋಜನೆಯು ನೊಕ್ರೆಕ್ ರಾಷ್ಟ್ರೀಯ ಉದ್ಯಾನವನಕ್ಕೆ ಬರುವ ಪ್ರವಾಸಿಗರನ್ನು ಪ್ರಮುಖ ಗುರಿಯಾಗಿಸಿಕೊಂಡಿದೆ. ಈ ರಾಷ್ಟ್ರೀಯ ಉದ್ಯಾನವನವು ಪಶ್ಚಿಮ ಗರೊ ಬೆಟ್ಟಗಳಲ್ಲಿನ ಅತ್ಯಂತ ಎತ್ತರದ ಶೃಂಗವಾಗಿದೆ. ಈ ಹಳ್ಳಿಯ ಸಮಿತಿಯು ಇಲ್ಲಿಗೆ ಭೇಟಿ ನೀಡುವ ಪ್ರವಾಸಿಗರಿಗೆ ಅಗತ್ಯ ಸೌಕರ್ಯಗಳನ್ನು ನೀಡುವ ವ್ಯವಸ್ಥೆಯನ್ನು ಅಚ್ಚು ಕಟ್ಟಾಗಿ ಮಾಡುತ್ತದೆ.

ಇಲ್ಲಿ ಕುಟೀರಗಳನ್ನು ನಿರ್ಮಿಸಲಾಗಿದ್ದು, 200-400 ರೂಪಾಯಿ ಬಾಡಿಗೆಯ ದರದಲ್ಲಿ ಇವುಗಳ ಅನುಕೂಲ ಪಡೆಯಬಹುದು. ಈ ಕುಟೀರಗಳಲ್ಲಿ ಸರಳವಾದ ಮರದ ಪೀಠೋಪಕರಣಗಳು, ಮರದ ನೆಲಹಾಸನ್ನು ಹೊಂದಿರುವ ಶೌಚಾಲಯಗಳು ಮತ್ತು ಸರಳವಾದ ಊಟ ನೀಡಲಾಗುವುದು. ಸ್ಥಳೀಯ ಗರೊ ಖಾದ್ಯಗಳನ್ನು ಸಹ ಪ್ರವಾಸಿಗರ ಕೋರಿಕೆಯ ಮೇರೆಗೆ ಪೂರೈಸಲಾಗುವುದು.

ದರಿಬೊಕ್‍ಗ್ರೆ ಗ್ರಾಮೀಣ ಪ್ರವಾಸೋದ್ಯಮದ ಆತೀಥ್ಯವನ್ನು ಸವಿಯುವುದರ ಜೊತೆಗೆ ಪ್ರವಾಸಿಗರು ಪ್ರಕೃತಿ ನಡಿಗೆ, ಪಕ್ಷಿ ವೀಕ್ಷಣೆ ಮತ್ತು ಚಾರಣದಂತಹ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬಹುದು. ಟುರದಿಂದ ದರಿಬೊಕ್‍ಗ್ರೆಗೆ ಬಸ್ ಬುಕ್ ಮಾಡಿಕೊಂಡು ಬರುವುದು ಉತ್ತಮ.

One Way
Return
From (Departure City)
To (Destination City)
Depart On
25 Jul,Sat
Return On
26 Jul,Sun
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
25 Jul,Sat
Check Out
26 Jul,Sun
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
25 Jul,Sat
Return On
26 Jul,Sun