ಬಜಾರುಗಳು ಪಶ್ಚಿಮ ಗರೊ ಬೆಟ್ಟಗಳಲ್ಲಿ ಇರುವ ಅತ್ಯಂತ ಪ್ರಸಿದ್ಧವಾದ ಸ್ಥಳಗಳಾಗಿವೆ. ಇವು ನಮ್ಮಲ್ಲಿನ ಸಂತೆಯ ಮಾದರಿಯ ಮಾರುಕಟ್ಟೆಗಳಾಗಿವೆ. ಇಲ್ಲಿ ನೀವು ಸ್ಥಳೀಯ ಜನರ ಜೀವನ ಶೈಲಿ ಮತ್ತು ಸೊಗಡನ್ನು ಆಸ್ವಾದಿಸಬಹುದು. ಈ ಬಜಾರುಗಳು ಈ ಪ್ರಾಂತ್ಯದ ವಿವಿಧ ಹಳ್ಳಿಗಳಲ್ಲಿ ನೆಲೆಗೊಂಡಿವೆ. ಈ ಬಜಾರುಗಳು ವಾರದ ವಿವಿಧ ದಿನಗಳಲ್ಲಿ ತೆರೆಯಲ್ಪಟ್ಟಿರುತ್ತವೆ. ಇಲ್ಲಿ ನೀವು ಕೈಮಗ್ಗದ ಉತ್ಪನ್ನಗಳನ್ನು, ಸ್ಥಳೀಯ ಕರ ಕುಶಲ ವಸ್ತುಗಳನ್ನು, ತರಕಾರಿಗಳನ್ನು ಮತ್ತು ವಿವಿಧ ಬಗೆಯ ಗರೊ ಖಾದ್ಯಗಳನ್ನು ಖರೀದಿಸಬಹುದು.
ಗರೊಗಳು ಅಲೆಮಾರಿ ಕೃಷಿಯನ್ನು ಅಳವಡಿಸಿಕೊಂಡಿರುತ್ತಾರೆ. ಈ ಬಜಾರುಗಳು ಅವರು ತಮ್ಮ ಉತ್ಪನ್ನಗಳನ್ನು ಮಾರಲು ಮತ್ತು ಕೊಳ್ಳಲು ಬಳಸುವ ಸ್ಥಳಗಳಾಗಿವೆ. ವಾರಾನುಗಟ್ಟಲೆ ನಡೆದುಕೊಂಡು ಬಂದು ಇವುಗಳನ್ನು ಇಲ್ಲಿ ಮಾರುತ್ತಾರೆ. ಕೆಲವು ಪ್ರಸಿದ್ಧ ಬಜಾರುಗಳ ದಿನಗಳು ಹೀಗಿವೆ;- ಗರೊಬಧ ಬಜಾರ್ - ಮಂಗಳವಾರ, ರೊಂಗ್ರಮ್ ಬಜಾರ್- ಶುಕ್ರವಾರ, ಜೆಂಗಿಯಲ್ ಬಜಾರ್ - ಗುರುವಾರ, ನಜಿಂಗ್ ಬಜಾರ್ - ಶನಿವಾರ, ಖೆರಪರ ಬಜಾರ್- ಬುಧವಾರ, ರೊಂಗ್‍ಸಕ್ ಬಜಾರ್- ಮಂಗಳವಾರ, ಬಡಡಮ್ ಬಜಾರ್- ಸೋಮವಾರಗಳಂದು ನಡೆಯುತ್ತದೆ. ಈ ಬಜಾರುಗಳಿಗೆ ಭೇಟಿ ನೀಡಲು ಟುರದಿಂದ ಸ್ಥಳೀಯ ಟ್ಯಾಕ್ಸಿಯ ಮೂಲಕ ಹೋಗುವುದು ಉತ್ತಮ.


Click it and Unblock the Notifications