Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಅಸನಂಗ್ರೆ

ಅಸನಂಗ್ರೆ, ವೆಸ್ಟ್ ಗಾರೊ ಹಿಲ್ಸ್

1

ಅಸನಂಗ್ರೆಯು ಗರೊ ಹಳ್ಳಿಗಳ ಗ್ರಾಮೀಣ ಸೊಗಡನ್ನು ಪರಿಪೂರ್ಣವಾಗಿ ನಿಮಗೆ ತೆರೆದಿಡುವ ಹಳ್ಳಿಯಾಗಿದೆ. ಇದು ವಿಲಿಯಂ ನಗರ್- ಟುರ ಹೆದ್ದಾರಿಯಲ್ಲಿ ಕಂಡು ಬರುತ್ತದೆ. ಇದು ಗರೊ ಬೆಟ್ಟಗಳಲ್ಲಿರುವ ಅತಿ ದೊಡ್ಡ ಹಳ್ಳಿಯಾಗಿದೆ. ಅಸನಂಗ್ರೆಯು ರೊಂಗ್‍ಗ್ರಮ್ ಮತ್ತು ಗ್ರಾಮೀಣ ಅಭಿವೃದ್ಧಿ ಇಲಾಖೆಯ ಮುಖ್ಯ ಕಚೇರಿಗಳನ್ನು ಹೊಂದಿರುವ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಅಸನಂಗ್ರೆ ಹಳ್ಳಿಯು ಗರೊ ಬೆಟ್ಟಗಳ ಸಾಮಾಜಿಕ ನೋಟದ ಸಂಕೇತದಂತೆ ನಿಂತಿದೆ.

ಇಲ್ಲಿನ ಸರಳವಾದ ತೆಂಗಿನ ಗರಿಯ ಮಾಡಿನ ಮನೆಗಳು, ಸರಳವಾದ ಪೀಠೋಪಕರಣಗಳು ಮತ್ತು ಪಾತ್ರೆ ಪಗಡಿಗಳು ಹಾಗು ಅತ್ಯಂತ ಸರಳವಾದ ಜೀವನಶೈಲಿಯು ನೋಡುಗರನ್ನು ಸೆಳೆಯುತ್ತವೆ. ಅಸನಂಗ್ರೆಯು " ಪ್ರಕೃತಿಯೊಂದಿಗೆ ಜೀವನ" ಎಂಬ ಪರಿಕಲ್ಪನೆಗೆ ಸಮರ್ಥ ಉದಾಹರಣೆಯಾಗಿದೆ. ಈ ಹಳ್ಳಿಯು ಮೀನುಗಾರಿಕೆಯ ಕೊಳಗಳನ್ನು ಯಥೇಚ್ಛವಾಗಿ ಹೊಂದಿದೆ. ಅಲ್ಲದೆ ಸಣ್ಣ ಮಟ್ಟದ ಹಣ್ಣು ಮತ್ತು ತರಕಾರಿ ತೋಟಗಳನ್ನು ಸಹ ಇಲ್ಲಿ ನಾವು ನೋಡಬಹುದು.

ಇಲ್ಲಿ ವಂಗಲ ನೃತ್ಯೋತ್ಸವವೆಂಬ ಕಾರ್ಯಕ್ರಮವನ್ನು ನಡೆಸಲಾಗುತ್ತದೆ. ಈ ಉತ್ಸವವು ಗರೊಗಳ ಪ್ರಸಿದ್ಧ ಹಬ್ಬವಾಗಿದೆ. ಇದನ್ನು ಮೇಘಾಲಯ ರಾಜ್ಯದಲ್ಲಿ ಎಲ್ಲೆಡೆ ಆಚರಿಸಲಾಗುತ್ತದೆ.ಇದಕ್ಕಾಗಿ ಸರ್ಕಾರಿ ರಜೆಯನ್ನು ಸಹ ಇಲ್ಲಿ ಘೋಷಿಸಲಾಗುತ್ತದೆ. ಈ ಹಳ್ಳಿಯು ಬಾಂಗ್ಲಾದೇಶ್ ಮತ್ತು ಇತರ ದೇಶಗಳು ಕೂಡುವ ಸ್ಥಳಗಳನ್ನು ಹೊಂದಿದೆ. ಈ ಸ್ಥಳಗಳನ್ನು " ಬಾರ್ಡರ್ ಹಾಟ್ಸ್" ಎಂದು ಕರೆಯಲಾಗುತ್ತದೆ.

ಅಸನಂಗ್ರೆ ಹಳ್ಳಿಗೆ ತಲುಪಲು ಶಿಲ್ಲಾಂಗ್‍ನಿಂದ ಎಮ್‍ಟಿಸಿ ಬಸ್‍ಗಳ ಮೂಲಕ  ತಲುಪಬಹುದು. ಇದಕ್ಕಾಗಿ ನೀವು ವಿಲಿಯಂನಗರ್- ಟುರ ಹೆದ್ದಾರಿ ಜಂಕ್ಷನ್‍ನಲ್ಲಿ ಇಳಿದು ಹೋಗಬೇಕು.

One Way
Return
From (Departure City)
To (Destination City)
Depart On
24 Jul,Fri
Return On
25 Jul,Sat
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
24 Jul,Fri
Check Out
25 Jul,Sat
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
24 Jul,Fri
Return On
25 Jul,Sat