Search
  • Follow NativePlanet
Share
ಮುಖಪುಟ » ಸ್ಥಳಗಳು » ವೆಸ್ಟ್ ಗಾರೊ ಹಿಲ್ಸ್ » ಆಕರ್ಷಣೆಗಳು » ಅರ್ಬೆಲ್ಲ ಶೃಂಗ

ಅರ್ಬೆಲ್ಲ ಶೃಂಗ, ವೆಸ್ಟ್ ಗಾರೊ ಹಿಲ್ಸ್

1

ಅರ್ಬೆಲ್ಲ ಶೃಂಗವು ಸಮುದ್ರ ಮಟ್ಟದಿಂದ 999 ಮೀಟರ್ ಎತ್ತರದಲ್ಲಿ ನೆಲೆಗೊಂಡಿದೆ. ಈ ಶೃಂಗವು ಅರ್ಬೆಲ್ಲ ಪರ್ವತ ಶ್ರೇಣಿ ಎಂದು ಕರೆಯಲ್ಪಡುವ ಪರ್ವತ ಶ್ರೇಣಿಯಲ್ಲಿ ನೆಲೆಗೊಂಡಿದೆ. ಈ ಶೃಂಗವು ಟುರದ ಆಗ್ನೇಯ ಗಡಿಯಲ್ಲಿರುವ ಅಸನಂಗ್ರೆ ಹಳ್ಳಿಯ ಬಳಿಯ ಗುವಹಾಟಿ - ಟುರ ಹೆದ್ದಾರಿಯಲ್ಲಿ ಕಂಡುಬರುತ್ತದೆ.

ಗರೊ ಬೆಟ್ಟಗಳು ತಮ್ಮದೇ ಆದ ವಿಶಿಷ್ಟವಾದ ಸಸ್ಯ ಮತ್ತು ಪ್ರಾಣಿ ಸಂಪತ್ತಿಗೆ ಹೆಸರುವಾಸಿಯಾಗಿವೆ. ಅದರಲ್ಲಿ ಕಂಡು ಬರುವ ಅರ್ಬೆಲ ಪರ್ವತ ಶ್ರೇಣಿಯು ಸಹ ಇದಕ್ಕೆ ಹೊರತೇನಲ್ಲ. ಅರ್ಬೆಲ ಶೃಂಗವು ಹಚ್ಚ ಹಸಿರಾದ ಮರಗಳು, ಆರ್ಕಿಡ್‍ಗಳು ಮತ್ತು ಪೊದೆಗಳಿಂದ ಕೂಡಿದೆ. ಇದರ ಜೊತೆಗೆ ಪ್ರವಾಸಿಗರು ವೈವಿಧ್ಯಮಯವಾದ ಪಕ್ಷಿಗಳನ್ನು ಮತ್ತು ಪೀಸೆಂಟ್ (ನವಿಲು ಜಾತಿಯ ಪಕ್ಷಿಗಳು)ಗಳನ್ನು ಕಾಣಬಹುದು.

ಈ ಪರ್ವತದ ಶೃಂಗಕ್ಕೆ ಸಾಗುವ ಹಾದಿಯು ಸಾಹಸಿಗರನ್ನು ಕೈಬೀಸಿ ಕರೆಯುತ್ತದೆ. ಇದರ ಇಕ್ಕೆಲಗಳಲ್ಲಿರುವ ದಟ್ಟ ಕಾಡು ಮತ್ತು ಶೃಂಗದಿಂದ ಕಾಣುವ ನೋಟ ನೋಡುಗರ ಮೈಮನ ಪುಳಕಗೊಳ್ಳುವಂತೆ ಮಾಡುತ್ತದೆ. ಒಂದರ ಮೇಲೆ ಒಂದು ಕುಳಿತಂತೆ ಕಾಣುವ ಪರ್ವತಗಳು ದಿಗಂತದವರೆಗೆ ಚಾಚಿಕೊಂಡಂತೆ ಕಾಣುತ್ತವೆ. ಕ್ಷಿತಿಜದಲ್ಲಿ ನೀಲಿಯಾಗಿ ಕಾಣುವ ಬೆಟ್ಟಗಳ ನೋಟವು ಎಂತಹವರಲ್ಲಿಯು ಖುಷಿಯನ್ನುಂಟು ಮಾಡುತ್ತದೆ.

ಬ್ರಿಟೀಷ್ ವಸಾಹತು ಶಾಹಿ ಕಾಲದಲ್ಲಿ ಈ ಶಿಖರದ ತುದಿಯಲ್ಲಿ ಒಂದು ಅತಿಥಿ ಗೃಹವನ್ನು ನಿರ್ಮಾಣ ಮಾಡಲಾಯಿತು. ಅದು ಇಂದಿಗು ಇಲ್ಲಿಗೆ ಆಗಮಿಸುವ ಅತಿಥಿಗಳಿಗೆ ಸೇವೆಯನ್ನು ಸಲ್ಲಿಸುತ್ತಿದೆ. ಸಾಹಸ ಮನೋಭಾವವನ್ನು ಹೊಂದಿರುವುವರು ಈ ಪರ್ವತದ ಶೃಂಗಕ್ಕೆ ಸಾಗುವ 40 ಕಿ.ಮೀ ಚಾರಣದ ಮೂಲಕ ಪರ್ವತಾರೋಹಣ ಮಾಡಬಹುದು. ಶಿಲ್ಲಾಂಗ್, ಗುವಹಾಟಿ, ಮತ್ತು ವಿಲಿಯಂ ನಗರಗಳಿಂದ ಇಲ್ಲಿಗೆ ಬಸ್ಸುಗಳು ಪ್ರತಿದಿನವು ಬಂದು ಹೋಗುತ್ತಿರುತ್ತವೆ.

One Way
Return
From (Departure City)
To (Destination City)
Depart On
11 Mar,Wed
Return On
12 Mar,Thu
Travellers
1 Traveller(s)

Add Passenger

  • Adults(12+ YEARS)
    1
  • Childrens(2-12 YEARS)
    0
  • Infants(0-2 YEARS)
    0
Cabin Class
Economy

Choose a class

  • Economy
  • Business Class
  • Premium Economy
Check In
11 Mar,Wed
Check Out
12 Mar,Thu
Guests and Rooms
1 Person, 1 Room
Room 1
  • Guests
    2
Pickup Location
Drop Location
Depart On
11 Mar,Wed
Return On
12 Mar,Thu