ಖಂಬಾ ಬಾಬಾ ಎಂಬ ಸಾಲುಗಂಬಗಳ ಈ ಸ್ಥೂಪವು ವಿದಿಶಾದ ರೈಲ್ವೇ ನಿಲ್ದಾಣದಿಂದ 4 ಕಿಮೀ ದೂರದಲ್ಲಿದೆ. ಇದು ಏಕಶಿಲಾ ಖಂಬಗಳು. ಇದರ ಮೇಲೆ ಶಾಸನವಿದ್ದು ಅದರಲ್ಲಿ ಇದು ದೇವರ ದೇವ ವಸುದೇವನಿಗಾಗಿ ಹೆಲಿಯೊಡೊರಸ್ನಿಂದ ನಿರ್ಮಾಣವಾಗಿದೆ ಎಂದು ಬರೆದಿದೆ. ಹೆಲಿಯೊಡೊರಸ್ ವೈಷ್ಣವ ಪಂಥಕ್ಕೆ ಮತಾಂತರಗೊಂಡ ಮೊದಲನೇ ವಿದೇಶಿ ವ್ಯಕ್ತಿ. ಗ್ರೀಕ್ ದೊರೆ ಆಂಟಿಲಸಿಡಾಸ್ ಡಿಯೊನ್ನ ಮಗ ಹೆಲಿಯೊಡೊರಸ್ನನ್ನು ರಾಯಭಾರಿಯಾಗಿ ವಿದಿಶಾದ ಆಸ್ಥಾನ ಸುಂಗಾಗೆ ಕಳಿಸುತ್ತಾನೆ. ಈ ವಿಷಯ ಕೂಡ ಶಾಸನದಲ್ಲಿ ಪ್ರಸ್ತಾಪವಾಗಿದೆ.
ಈ ಖಂಬವು ಬೊಯಿಸ್ ಮತ್ತು ದಿಮಾರ್ಗಳ ಪ್ರದೇಶದಲ್ಲಿ ಪೂಜನೀಯವಾದದ್ದು ಎಂದು ಭಾವಿಸಲಾಗುತ್ತದೆ. ಈ ಖಂಬದ ಮೇಲೆ ಗರುಡನ ಶಿಲ್ಪವಿದೆ. ತಿಳಿ ಕಂದು ಬಣ್ಣದ ಖಂಬದಲ್ಲಿ ಮೂರು ಭಾಗಗಳಿವೆ: ಮೊದಲ ಭಾಗದಲ್ಲಿ ಒಂದು ದಂಡ, ಒಂದು ಘಂಟೆ ಮತ್ತು ಗರುಡನ ಶಿಲ್ಪವಿದೆ.


Click it and Unblock the Notifications