ಗ್ಯಾರಸ್ಪುರದಲ್ಲಿನ ಪುರಾತನ ದೇವಾಲಯಗಳಲ್ಲಿ ಬಜ್ರಾಮತ ದೇಗುಲ ಕೂಡ ಒಂದು. ಈ ದೇವಸ್ಥಾನದಲ್ಲಿ ಮೂರು ಗರ್ಭಗುಡಿಗಳಿವೆ. ಇವುಗಳಲ್ಲಿ ದಿಗಂಬರ ಜೈನನ ವಿಗ್ರಹವಿದೆ. ಇವುಗಳ ಕೆತ್ತನೆಯನ್ನು ನೋಡಿದರೆ ಇದು ಹಿಂದೂಗಳ ದೇವಾಲಯವಾಗಿತ್ತು ಮತ್ತು ನಂತರದಲ್ಲಿ ಇದನ್ನು ದಿಗಂಬರ ಪಂಥದ ಜೈನರು ಆಕ್ರಮಿಸಿಕೊಂಡರು ಎಂದು ತಿಳಿದುಬರುತ್ತದೆ. ಉತ್ತರದಲ್ಲಿರುವ ಗುಡಿ ಶಿವನದು ಮತ್ತು ಮಧ್ಯದ ಗುಡಿ ಬ್ರಹ್ಮನದು ಮತ್ತು ದಕ್ಷಿಣದ್ದು ವಿಷ್ಣುವಿನದು ಎಂದು ತಿಳಿಯಲಾಗಿದೆ. ಇದರ ಪ್ರವೇಶದ್ವಾರದಲ್ಲಿ ಸುಂದರ ಕೆತ್ತನೆಗಳಿದ್ದು ಇದು ಕ್ರಿಪೂ 10ನೇ ಶತಮಾನಕ್ಕೆ ಸೇರಿದ್ದಾಗಿದೆ. ದೇವಾಲಯಕ್ಕೆ ಶಿಖರ ಕೂಡ ಇದೆ. ಇದು ಭೇಟಿನೀಡಲೇಬೇಕಾದ ಪ್ರವಾಸಿ ಸ್ಥಳ.