ವಿಲ್ಲಾಪಕ್ಕಂ ವೆಲ್ಲೂರಿನ ಒಂದು ಪಂಚಾಯತ್ ಪಟ್ಟಣವಾಗಿದೆ. ಇಲ್ಲಿನ ಸಾಕ್ಷರತಾ ಪ್ರಮಾಣ 68 % ಆಗಿದ್ದು ಇದು ರಾಷ್ಟ್ರೀಯ ಸಾಕ್ಷರತಾ ಮಟ್ಟಕ್ಕಿಂತ ಹೆಚ್ಚಾಗಿದೆ. ವಿಲ್ಲಾಪಕ್ಕಂ ವೆಲ್ಲೂರ್ ಜಿಲ್ಲೆಯ ಆರ್ಕೋಟ್ ನ ದಕ್ಷಿಣಕ್ಕೆ ಇದೆ.
ವಿಲ್ಲಾಪಕ್ಕಂ ಆಗ್ನೇಯ ಭಾಗಕ್ಕೆ 25 ಕಿ.ಮೀ ದೂರದಲ್ಲಿದೆ. ಈ ಬೆಟ್ಟಗಳಿಂದ ಕೂಡಿದ ಪ್ರದೇಶವನ್ನು ಸಾಮಾನ್ಯವಾಗಿ ಪಂಚ ಪಾಂಡವ ಮಲೈ ಎಂದು ಕರೆಯಲಾಗುತ್ತದೆ. ಇದು ಮಧ್ಯಕಾಲೀನ ಯುಗದಲ್ಲಿ ಜೈನ ಪಂಥದ ಬೆಳೆಯುತ್ತಿರುವ ಕೇಂದ್ರವಾಗಿತ್ತು. ಇದಕ್ಕೆ ಸಾಕ್ಷಿ ಇಲ್ಲಿನ ಕಲ್ಲಿನಿಂದ ಕೆತ್ತಲಾದ ವಿಲ್ಲಾಪಕ್ಕಂ ದೇವಾಲಯವಾಗಿದೆ. ಇದು ಬೆಟ್ಟದ ಪೂರ್ವ ಭಾಗಕ್ಕೆ ಕೆತ್ತಲಾಗಿದೆ. ಇಲ್ಲಿ ಜೈನ ಧರ್ಮದ ಬಗೆಗಿನ ಹಲವು ಕೆತ್ತನೆಗಳಿವೆ ಹಾಗೂ ಶಾಸನಗಳಿವೆ. ಇವುಗಳೆಲ್ಲವೂ ಮೇಲೆ ಹೇಳಿದ ಮಾತಿಗೆ ಪೂರಕವಾಗಿವೆ.


Click it and Unblock the Notifications