ಪುಟ್ಟಪರ್ತಿ: ಸತ್ಯ ಸಾಯಿಬಾಬಾ ನಿವಾಸ

ಪುಟ್ಟಪರ್ತಿ - ಇದು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಪುಟ್ಟ ಪಟ್ಟಣ. ಆಧ್ಯಾತ್ಮಿಕ ಗುರು ಸತ್ಯ ಸಾಯಿಬಾಬಾ ಇಲ್ಲಿ ನೆಲೆಸಿದ ಮೇಲೆ ಪುಟ್ಟಪರ್ತಿ ಯಾತ್ರಾರ್ಥಿಗಳ ಪಾಲಿಗೆ ಪವಿತ್ರಸ್ಥಳವಾಗಿದೆ. ಚಿತ್ರಾವತಿ ನದಿ ದಂಡೆಯ ಮೇಲಿರುವ ಪುಟ್ಟಪರ್ತಿಯು 475 ಮೀಟರ್ ಗಳಷ್ಟು ಎತ್ತರದಲ್ಲಿ ನೆಲೆಸಿದೆ. ಪುಟ್ಟಪರ್ತಿಯ ಇತಿಹಾಸ ಶ್ರೀ ಸತ್ಯ ಸಾಯಿ ಬಾಬಾರ ಹುಟ್ಟು ಮತ್ತು ಜೀವನದೊಂದಿಗೆ ಸುತ್ತುತ್ತದೆ.

ಮೂಲತಃ ಪುಟ್ಟಪರ್ತಿ ಕೃಷಿಪ್ರಧಾನ ಹಳ್ಳಿಯಾಗಿದ್ದು ಗೊಲ್ಲಪಳ್ಳಿ ಎಂದೇ ಗುರುತಿಸಿಕೊಂಡಿತ್ತು. ಇದರರ್ಥ ಗೋವಿನ ಮನೆ ಎಂದು. ಶ್ರೀ ಪೆದ್ದ ವೆಂಕಪ್ಪ ಮತ್ತು ಶ್ರೀಮತಿ ಈಶ್ವರಮ್ಮ ದಂಪತಿಗಳಿಗೆ ಮಗನಾಗಿ ಸತ್ಯನಾರಾಯಣರಾಜು ಹುಟ್ಟಿದ್ದು ನವೆಂಬರ್ 23, 1926 ರಲ್ಲಿ. ಹಲವಾರು ಘಟನೆಗಳ ಮೂಲಕ ಈ ಬಾಲಕನಲ್ಲಿ ಹೊರಹೊಮ್ಮಿದ ಅಲೌಕಿಕ ಶಕ್ತಿಗಳನ್ನು ನೋಡಿ ಇವನು ಶಿರ್ಡಿ ಸಾಯಿಬಾಬಾರ ಪುನರ್ಜನ್ಮವೆಂದೇ ನಂಬಿದ ಜನ ಇವರನ್ನು ಸತ್ಯ ಸಾಯಿ ಬಾಬಾ ಎಂದು ಕರೆದರು.

ಎಲ್ಲವನ್ನೂ ಕೊಡತಕ್ಕ ಇವರನ್ನು ಜನ ಹಿಂಬಾಲಿಸತೊಡಗಿದರು ಮತ್ತು ಸತ್ಯಸಾಯಿಬಾಬಾರನ್ನು ಆಧ್ಯಾತ್ಮಿಕ ನಾಯಕನೆಂದೇ ನಂಬಿದರು. ಇವರು ನೀಡುತ್ತಿದ್ದ ಶಿಕ್ಷಣ ಪ್ರಪಂಚದಾದ್ಯಂತ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು ಮತ್ತು ಇವರು ನೀಡುತ್ತಿದ್ದ ಶಿಕ್ಷಣಗಳು ಶಾಂತಿ, ಸತ್ಯ, ಪ್ರೀತಿ, ಪ್ರಾಮಾಣಿಕತೆ ಮತ್ತು ಅಹಿಂಸೆಯ ಮಾರ್ಗದಲ್ಲಿಯೇ ಸಾಗಿದವು. ಚಿಕ್ಕ ಹಳ್ಳಿಯೊಂದು ಪ್ರಪಂಚವೇ ಪ್ರೀತಿಸುವ ಪಟ್ಟಣವಾಯಿತು.

1950 ರಲ್ಲಿ ಪ್ರಶಾಂತಿ ನಿಲಯ ಸ್ಥಾಪನೆಗೊಂಡು, ಈ ಆಶ್ರಮದಿಂದಾಗಿ ಈ ಹಳ್ಳಿ ಪ್ರಾಪಂಚಿಕ ನಗರವಾಗಿ ಬದಲಾಯಿತು. ಇದೀಗ ಇಲ್ಲಿ ಹಲವು ರೀತಿಯ ವ್ಯವಸ್ಥೆಗಳಾದ ವಿಮಾನನಿಲ್ದಾಣ, ರೈಲ್ವೇ ನಿಲ್ದಾಣ, ಸುಪರ್ ಸ್ಪೇಷಾಲಿಟಿ ಆಸ್ಪತ್ರೆ ಮತ್ತು ಹಲವಾರು ಶಿಕ್ಷಣ ಸಂಸ್ಥೆಗಳು ತಲೆ ಎತ್ತಿ ನಿಂತಿವೆ.

ಹತ್ತಿರದ ಆಕರ್ಷಣೆಗಳು

ಈ ಹಳ್ಳಿಯಲ್ಲಿ ಹತ್ತಿರದಲ್ಲಿರುವ ಇತರ ಆಕರ್ಷಣೆಗಳೆಂದರೆ, ಮಸೀದಿ, ಹನುಮಾನ್ ದೇವಸ್ಥಾನ ಮತ್ತು ಸತ್ಯ ಸಾಯಿಬಾಬಾರ ಅಜ್ಜ ದಿವಂಗತ ಕೊಂಡಮರಾಜು ಕಟ್ಟಿಸಿದ ಸತ್ಯಭಾಮಾ ಮಂದಿರ. ಇನ್ನೊಂದು ಸತ್ಯಭಾಮಾ ಮಂದಿರವನ್ನು ಇತ್ತೀಚೆಗೆ ಸತ್ಯಸಾಯಿಬಾಬಾರ ಹಿರಿಯ ಸಹೋದರ ಶೇಷಮರಾಜು ಬೆಂಗಳೂರು ಮಾರ್ಗದಲ್ಲಿ ಕಟ್ಟಿಸಿದ್ದಾರೆ. ಇದರ ಹೊರತಾಗಿ ಸತ್ಯ ಸಾಯಿ ಬಾಬಾ ಹುಟ್ಟಿದ ಸ್ಥಳದಲ್ಲಿ ಶಿವನ ದೇವಸ್ಥಾನವನ್ನೂ ಕಟ್ಟಲಾಗಿದೆ. ಇನ್ನೊಂದು ಪ್ರಶಸ್ತವಾದ ಸ್ಥಳವೆಂದರೆ ಚಿತ್ರಾವತಿ ನದಿ ದಂಡೆಯ ಮೇಲಿರುವ ಹಾರೈಸುವ ಮರ. ಧ್ಯಾನಿಸುವ ಮರ ವಿಶ್ವವಿದ್ಯಾಲಯದ ಕಡೆಗಿರುವ ಬೆಟ್ಟಗಳ ಸಾಲಿನಲ್ಲಿರುವುದೂ ಕೂಡ ಪ್ರಶಸ್ತವಾಗಿದೆ. ಇತ್ತೀಚೆಗೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸಂಸ್ಥೆಗಳೂ ಕೂಡ ಪ್ರಮುಖ ಸ್ಥಳಗಳಾಗಿ ಹೊರಹೊಮ್ಮಿವೆ. ಈ ಪಟ್ಟಣದ ಸುತ್ತಮುತ್ತಲಿರುವ ಹಳ್ಳಿಗಳನ್ನು ಆಟೋ ರಿಕ್ಷಾದಲ್ಲಿ ಬಾಡಿಗೆ ನೀಡಿ ಸಂಚರಿಸಿ ಭಾರತೀಯ ಹಳ್ಳಿಗಳ ಚಿತ್ರಣವನ್ನು ಸಾಕ್ಷೀಕರಿಸಿಕೊಳ್ಳಬಹುದು.

ಸಂಪರ್ಕ ಮತ್ತು ಹವಾಮಾನ

ಪುಟ್ಟಪರ್ತಿಗೆ ಪ್ರಯಾಣಿಸುವುದೆಂದರೆ, ಆಶ್ರಮವನ್ನು ಸ್ಥಾಪಿಸಿದ್ದಕ್ಕೆ ಕೃತಜ್ನತೆಗಳನ್ನು ಅರ್ಪಿಸಲು ತೆರಳಿದಂತೆ. ಇಂದು ಆಶ್ರಮದಿಂದ 4 ಕಿಲೋ ಮೀಟರ್ ದೂರದಲ್ಲಿ ಸತ್ಯ ಸಾಯಿ ಬಾಬಾ ವಿಮಾನ ನಿಲ್ದಾಣವಿದೆ. ವಿಮಾನ ನಿಲ್ದಾಣ ಪ್ರಮುಖ ನಗರಗಳಾದ ಚೆನ್ನೈ ಮತ್ತು ಮುಂಬೈಗಳನ್ನು ಸಂಪರ್ಕಿಸುತ್ತದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪುಟ್ಟಪರ್ತಿಗೆ ಕೇವಲ 250 ಕಿಲೋ ಮೀಟರ್ ದೂರದಲ್ಲಿದೆ. ಪುಟ್ಟಪರ್ತಿಗೆ ಭೇಟಿ ನೀಡಲು ವರ್ಷದಲ್ಲಿ ಉತ್ತಮವಾದ ಸಮಯವೆಂದರೆ ಸೆಪ್ಟೆಂಬರ್ ನಿಂದ ಅಕ್ಟೋಬರ್ ತಿಂಗಳು. ಮಾರ್ಚ್ ನಿಂದ ಜೂನ್ ತಿಂಗಳವರೆಗಿನ ಬೇಸಿಗೆ ಅತಿಯಾದ ಉಷ್ಣತೆ ಹೊಂದಿರುತ್ತದೆ ಮತ್ತು ಅಹಿತಕರವಾಗಿರುತ್ತದೆ. ಅಂತರಂಗದ ಶಾಂತಿಯನ್ನು ಹುಡುಕುವವರಿಗೆ ಮತ್ತು ಆಧ್ಯಾತ್ಮ ಹಾಗೂ ಧಾರ್ಮಿಕ ಸಂಪರ್ಕದಲ್ಲಿರಲು ಬಯಸುವವರಿಗೆ ಪುಟ್ಟಪರ್ತಿ ಸೂಕ್ತವಾದ ಸ್ಥಳ.

Please Wait while comments are loading...