ವಟ ವೃಕ್ಷ ಅಥವಾ ಧ್ಯಾನದ ಮರವೊಂದು ಆಲದ ಮರವಾಗಿದ್ದು ಆಶ್ರಮದೊಳಗೆ ಇದನ್ನು ಸಾಯಿಬಾಬಾರೇ ನೆಟ್ಟಿದ್ದು. ಆಶ್ರಮದೊಳಗೆ ಧ್ಯಾನ ಮಾಡುವವರಿಗೆ ಈ ಮರ ಉತ್ಸಾಹದ ಚಿಲುಮೆಯನ್ನೇ ತುಂಬುತ್ತದೆ. ಮರದ ತಳಭಾಗದಲ್ಲಿ ಭಾರವಾದ ಲೋಹದ ಹಲಗೆಯನ್ನು ಕೂರಿಸಲಾಗಿದೆ. ಇದು ಧ್ಯಾನದ ವಲಯವೆಂದೇ ಗುರುತಿಸಲ್ಪಡುತ್ತದೆ. ಈ ಪ್ರದೇಶದಲ್ಲಿ ಪುರುಷ ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸೂರ್ಯಾಸ್ತದ ನಂತರ ಮತ್ತು ಸೂರ್ಯೋದಯದ ಮುಂಚೆ ಮಹಿಳೆಯರಿಗೆ ಇಲ್ಲಿ ಪ್ರವೇಶವಿಲ್ಲ.