ಉಜ್ಜಯಿನಿಯ ಪವಿತ್ರ ನಗರದಲ್ಲಿ ಸಿದ್ಧಾವಟ್ಎಂಬ ಪವಿತ್ರ ತಾಣವಿದೆ. ಶಿಪ್ರಾ ನದಿ ಇಲ್ಲಿಯೇ ಹರಿದುಹೋಗುತ್ತದೆ. ಪ್ರಯಾಗ್‍ನ ಅಕ್ಷಯವಟ್ ತಾಣದಷ್ಟೆ ಪವಿತ್ರವಾಗಿರುವುದರಿಂದ ಇದು ಅತ್ಯಂತ ಹೆಸರುವಾಸಿಯಾಗಿದೆ. ಸಿದ್ಧವಟದ ಬಳಿ ಹರಿಯುವ ಶಿಪ್ರಾ ನದಿಯಲ್ಲಿ ಆಮೆಗಳು ಇರುವುದನ್ನು ಇಲ್ಲಿ ಬರುವ ಭಕ್ತರು ಕಾಣಬಹುದಾಗಿದೆ.
ಸಿದ್ಧವಟ್ ಅಂತಿಮ ಸಂಸ್ಕಾರದ ನಂತರ ಆಚರಿಸಲಾಗುವ ಧಾರ್ಮಿಕ ವಿಧಿ ವಿಧಾನಗಳ ಆಚರಣೆಗಳಿಗೆ ಪ್ರಸಿದ್ಧವಾಗಿದೆ. ಮಧ್ಯ ಪ್ರದೇಶದ ಜನರು ಇಲ್ಲಿ ವರ್ಷಪೂರ್ತಿ ಭೇಟಿ ನೀಡುತ್ತಲೇ ಇರುತ್ತಾರೆ. ಇದನ್ನು ಪುರಾಣಗಳಲ್ಲಿ ಪ್ರೇತ ಶಿಲಾ ತೀರ್ಥ ಎಂಬುದಾಗಿ ಗುರುತಿಸಲಾಗಿದೆ. ಇಲ್ಲಿ ದೇವಿ ಪಾರ್ವತಿ ತಪಸ್ಸನ್ನು ಆಚರಿಸಿದ್ದಳು ಎಂದು ಹೇಳಲಾಗಿದೆ.
ಆಸಕ್ತಿ ಭರಿತ ಇಲ್ಲಿನ ಒಂದು ಸ್ಥಳ ಪುರಾಣವೆನೆಂದರೆ, ಒಂದೊಮ್ಮೆ ಇಲ್ಲಿ ಆಲದ ಮರವೊಂದಿತ್ತು. ಅದನ್ನು ಕಡಿದು ಆ ಸ್ಥಳವನ್ನು ಕಬ್ಬಿಣದ ಹಾಳೆಯಿಂದ ಮುಚ್ಚಲಾಗಿತ್ತು. ಕ್ರಮೇಣ ಆ ಆಲದ ಮರದ ಬೇರುಗಳು ಚಿಗುರುತ್ತ ಕಬ್ಬಿಣದ ಹಾಳೆಯನ್ನೇ ಛೇದಿಸಿ ಬೆಳೆಯಲಾರಂಭಿಸಿತು. ಅಂದಿನಿಂದ ಈ ಸ್ಥಳವನ್ನು ಇಲ್ಲಿನ ಜನರು ಪವಿತ್ರವಾದ ಸ್ಥಳ ಎಂದು ನಂಬಲು ಆರಂಭಿಸಿದರು. ನಾಥ್ ಪಂಥದ ಭಕ್ತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ.


Click it and Unblock the Notifications