ಸಂದಲವಾಲ ಕಟ್ಟಡವನ್ನು 1925 ರಲ್ಲಿ ಕಟ್ಟಲಾಗಿದೆ. ಈ ಕಟ್ಟಡವನ್ನು ಫಿದಾ ಹುಸೇನ್ ಅಬ್ದುಲ್ ಹುಸೇನ್ ಸಂದಲವಾಲ ನಿರ್ಮಿಸಿದರು. ಪ್ರಾಚೀನ ಭಾರತೀಯ ವಾಸ್ತುಶಿಲ್ಪದ ಪರಂಪರೆಯನ್ನು ಹೊಂದಿರುವ ಇಂತಹ ಕಟ್ಟಡ ಇಂದು ಎಲ್ಲಿಯು ಇಲ್ಲವೆಂದು ಹೇಳಲಾಗುತ್ತದೆ. ಉಜ್ಜಯಿನಿ ಮತ್ತು ಜೈಪುರದ ಕುಶಲಕರ್ಮಿಗಳು ಈ ಪ್ರಸಿದ್ಧ ಕಟ್ಟಡ ನಿರ್ಮಿಸುವ ಸಲುವಾಗಿ ತುಂಬಾ ಕಠಿಣ ಕೆಲಸವನ್ನು ಮಾಡಿದ್ದಾರೆ. ಒಮ್ಮೆ ಈ ಕಟ್ಟಡವನ್ನು ನೋಡಿದರೆ ಹಳೆಯ ನೆನಪುಗಳು ಮರುಕಳಿಸುತ್ತವೆ!
ಈ ಕಟ್ಟಡ ಸಂಪೂರ್ಣ ಉಜ್ಜಯಿನಿ ನಗರದಲ್ಲಿ ಶ್ರೇಷ್ಠ ವಾಸ್ತುಶಿಲ್ಪೀಯ ಮೇರುಕೃತಿಗಳು ಎನಿಸಿಕೊಂಡಿದೆ ಮತ್ತು ಉಜ್ಜಯಿನಿಯಲ್ಲಿ ಆರ್.ಪಿ ಭಾರ್ಗವ ಮಾರ್ಗಕ್ಕೆ ಭೇಟಿ ನೀಡಿದರೆ ಈ ಕಟ್ಟಡದ ಒಂದು ಅದ್ಭತ ನೋಟವನ್ನು ಪಡೆಯಬಹುದು. ಈಗ ಈ ಕಟ್ಟಡವನ್ನು ಉಜ್ಜಯಿನಿಯ ಪುರಸಭೆ ಮತ್ತು ಮಧ್ಯ ಪ್ರದೇಶದ ರಾಜ್ಯ ಸರ್ಕಾರ ನೋಡಿಕೊಳ್ಳುತ್ತಾರೆ. ಕಟ್ಟಡದ ಒಳಾಂಗಣಕ್ಕೆ ಭೇಟಿ ನೀಡಿದರೆ ಕಟ್ಟಡ ಅರಮನೆಯಂತೆ ಭಾಸವಾಗುತ್ತದೆ. ಫಿದಾ ಹುಸೇನ್ ಸಂದಲವಾಲ ವಂಶಸ್ಥರು ಪ್ರಸ್ತುತ ಸಮಯದಲ್ಲಿ ಈ ಕಟ್ಟಡದಲ್ಲಿ ವಾಸಿಸುತ್ತಾರೆ.


Click it and Unblock the Notifications