Search
  • Follow NativePlanet
Share
» »ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ಶಿವನಿಗೆ ಮೀನಿನ ಸಾರನ್ನು ನೈವೇದ್ಯವಾಗಿ ನೀಡುವ ಆಶ್ಚರ್ಯಕರವಾದ ದೇವಾಲಯ ಎಲ್ಲಿದೆ ಗೊತ್ತ?

ನಾವು ಸಾಮಾನ್ಯವಾಗಿ ದೇವರಿಗೆ ಕೆಲವು ಹಣ್ಣುಗಳು, ಕೊಬ್ಬರಿಕಾಯಿಗಳು, ಇನ್ನು ಕೆಲವರು ಸಿಹಿ ತಿನಿಸುಗಳು ಹೀಗೆ ತಮಗೆ ಇಷ್ಟವಾದ ಬಗೆ ಬಗೆಯ ಆಹಾರಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಅವರ ಪದ್ಧತಿಗಳು ಹಾಗು ರೂಢಿಗಳ ಹಾಗೆ ಪ್ರಸಾದವಾಗಿ ದೇವರಿಗೆ ನೈವ

ನಾವು ಸಾಮಾನ್ಯವಾಗಿ ದೇವರಿಗೆ ಕೆಲವು ಹಣ್ಣುಗಳು, ಕೊಬ್ಬರಿಕಾಯಿಗಳು, ಇನ್ನು ಕೆಲವರು ಸಿಹಿ ತಿನಿಸುಗಳು ಹೀಗೆ ತಮಗೆ ಇಷ್ಟವಾದ ಬಗೆ ಬಗೆಯ ಆಹಾರಗಳನ್ನು ದೇವರಿಗೆ ಸಮರ್ಪಿಸುತ್ತಾರೆ. ಅವರ ಪದ್ಧತಿಗಳು ಹಾಗು ರೂಢಿಗಳ ಹಾಗೆ ಪ್ರಸಾದವಾಗಿ ದೇವರಿಗೆ ನೈವೇದ್ಯವನ್ನು ಇಟ್ಟು ಭಕ್ತಿಯಿಂದ ಆರಾಧಿಸುತ್ತಾರೆ.

ಪುರಾಣ ಕಥೆಯ ಆಧಾರವಾಗಿ ಶ್ರೀ ಕಾಳಹಸ್ತಿಯಲ್ಲಿ ಕಣ್ಣಪ್ಪ ಎಂಬ ಭಕ್ತನು ಶಿವನಿಗೆ ಆ ಕಾಲದಲ್ಲಿ ಅರಣ್ಯದಲ್ಲಿ ದೊರೆತ ಪ್ರಾಣಿಯ ಮಾಂಸವನ್ನು ಪ್ರಸಾದವಾಗಿ ಸರ್ಮಪಿಸುತ್ತಿದ್ದನು. ಇದು ಸಾಮಾನ್ಯವಾಗಿ ನಮಗೆ ತಿಳಿದಿರುವ ಸಂಗತಿಯೇ. ಆದರೆ ಈ ದೇವಾಲಯದಲ್ಲಿ ವಿಭಿನ್ನವಾಗಿ ಮೀನಿನ ಸಾರನು ನೈವೇದ್ಯವಾಗಿ ಶಿವನಿಗೆ ಅರ್ಪಣೆ ಮಾಡುತ್ತಾರಂತೆ. ಹಾಗಾದರೆ ಆ ದೇವಾಲಯ ಯಾವುದು ಎಂದು ಯೋಚಿಸುತ್ತಿದ್ದೀರಾ?... ಲೇಖನದ ಮೂಲಕ ತಿಳಿಯಿರಿ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಆದರೆ ಮಹಾ ಶಿವನು ಭಕ್ತಿಯಿಂದ ನೀಡಿದ ಯಾವುದೇ ನೈವೇದ್ಯವನ್ನು ಸಹ ಅರ್ಪಿಸಿಕೊಳ್ಳುವ ಭಗವಂತ. ಆದರೆ ಆ ದಿನಗಳಲ್ಲಿಯೇ ಮಹಾ ಭಕ್ತನಾದ ಕಣ್ಣಪ್ಪ ಮಾಂಸ ಆಹಾರವನ್ನು ದೇವರಿಗೆ ನೈವೇದ್ಯವಾಗಿ ಅರ್ಪಣೆ ಮಾಡುತ್ತಿದ್ದನು ಎಂಬ ಮಾತು ಕೇಳಿದರೆನೆ ಆಶ್ಚರ್ಯವಾಗುತ್ತದೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಈ ದಿನಗಳಲ್ಲಿಯೂ ಕೂಡ ವಿಜಯನಗರ ಎಂಬ ಜಿಲ್ಲೆಯ ಕೊಮರಾಡು ಮಂಡಲದಲ್ಲಿ ಒಂದು ಮಾಹಿಮಾನ್ವಿತವಾದ ಸಂಗಮೇಶ್ವರ ದೇವಾಲಯವಿದೆ. ಆ ಗ್ರಾಮದ ಜನರು ಮಹಾ ಶಿವರಾತ್ರಿಯ ಹಬ್ಬದಂದು ವಿಜೃಂಬಣೆಯಿಂದ ಜಾತ್ರೆಯನ್ನು ನಡೆಸುತ್ತಾರೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಶಿವರಾತ್ರಿಯ ದಿನದಂದು ಜಾತ್ರೆ ಮಾಡುವುದು ಸಾಮಾನ್ಯವಾದ ವಿಚಾರವೇ. ಆದರೆ ಇಲ್ಲಿ ಗುಂಪ ಸಂಗಮೇಶ್ವರ ದೇವಾಲಯದಲ್ಲಿ ನೆಲೆಸಿರುವ ಈಶ್ವರನಿಗೆ ಮಾತ್ರ ಮೀನಿನ ಸಾರನ್ನು ನೈವೇದ್ಯವಾಗಿ ಸಮರ್ಪಿಸುತ್ತಾರಂತೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಇದು ಈ ದೇವಾಲಯದ ವಿಶೇಷ. ಆ ಗ್ರಾಮದ ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ ಅತ್ಯಂತ ಪ್ರಸಿದ್ಧವಾದ ದೇವಾಲಯವಾಗಿದೆ. ಸಾಮಾನ್ಯವಾಗಿ ಹಬ್ಬ ಹರಿದಿನಗಳ ಸಮಯದಲ್ಲಿ ನಾವು ಸಿಹಿ ತಿನಿಸುಗಳನ್ನು ತಯಾರಿಸುತ್ತೇವೆ. ಆದರೆ ಈ ದೇವಾಲಯದಲ್ಲಿ ಮಾತ್ರ ಮಾಂಸ ಆಹಾರಗಳನ್ನು ಪ್ರಸಾದವಾಗಿ ನೀಡುತ್ತಾರೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಈ ದೇವಾಲಯದಲ್ಲಿ ಶಿವನಿಗೆ ಪ್ರತಿ ವರ್ಷ ನೇಮ, ನಿಷ್ಠೆಯಿಂದ ಮೂರು ದಿನಗಳ ಕಾಲ ಮಹಾ ಶಿವರಾತ್ರಿಯ ಉತ್ಸವಗಳು ನಡೆಯುತ್ತಾರೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಅಲ್ಲಿ ಪ್ರಸಾದವಾಗಿ ವಿಧ ವಿಧವಾದ ಹಣ್ಣುಗಳು, ಹೂವುಗಳನ್ನು ಪ್ರಸಾದಗಳ ಜೊತೆಗೆ ಮೀನಿನ ಸಾರು ಕೂಡ ಶಿವನಿಗೆ ನೈವೇದ್ಯವಾಗಿ ಅರ್ಪಿಸುತ್ತಾರೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಈ ಆಚಾರವು ಇತ್ತೀಚಿನದ್ದು ಅಲ್ಲವಂತೆ. ಬದಲಾಗಿ ಕೆಲವು ದಶಕಗಳ ಹಿಂದಿನಿಂದಲೂ ಪ್ರಜೆಗಳು ಈ ವಿಧವಾಗಿಯೇ ಮಾಂಸ ಆಹಾರ ನೈವೇದ್ಯವಾಗಿ ಅರ್ಪಿಸುವ ಪದ್ಧತಿಯನ್ನು ಅನುಸರಿಸಿ ಬರುತ್ತಿದ್ದಾರೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಈ ವಿಧವಾಗಿ ಮೀನಿನ ಸಾರನ್ನು ದೇವರಿಗೆ ಸಮರ್ಪಿಸುವುದರಿಂದ ಹಲವಾರು ಮಂದಿಗಳಿಗೆ ಅವರು ಬೇಡಿಕೊಳ್ಳುವ ಕೋರಿಕೆಗಳು ನೆರವೇರುತ್ತದೆ ಎಂತೆ ಎಂದು ಪ್ರಜೆಗಳ ನಂಬಿಕೆಯಾಗಿದೆ.

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಗುಂಪ ಸಂಗಮೇಶ್ವರ ಸ್ವಾಮಿ ದೇವಾಲಯ

ಕೆಲವು ಶತಮಾನಗಳಿಂದಲೂ ಆ ಗ್ರಾಮದ ಜನರು ತಮ್ಮ ಪೂರ್ವಿಕರಿಂದ ಅನುಸರಿಸುತ್ತಿರುವ ಈ ಆಚಾರವನ್ನು ಇಂದಿಗೂ ಕೂಡ ಆ ಪದ್ಧತಿಯನ್ನು ತಪ್ಪದೇ ಆಚರಿಸುತ್ತಿದ್ದಾರಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X