Search
  • Follow NativePlanet
Share
» »Haunted Places: ಇವು ಅತ್ಯಂತ ಭಯಾನಕ ಸ್ಥಳಗಳು…ಇಲ್ಲಿ ಗುರುವಾರದಂದು ಮೇಣದಬತ್ತಿಗಳು ಉರಿಯುತ್ತವೆ!

Haunted Places: ಇವು ಅತ್ಯಂತ ಭಯಾನಕ ಸ್ಥಳಗಳು…ಇಲ್ಲಿ ಗುರುವಾರದಂದು ಮೇಣದಬತ್ತಿಗಳು ಉರಿಯುತ್ತವೆ!

Haunted Places Delhi: ನಿಮಗೆ ಭಯಾನಕ ಕಥೆಗಳು ಮತ್ತು ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿದ್ದರೆ ದೇಶದ ರಾಜಧಾನಿ ದೆಹಲಿಯ ಈ ಐದು ಹಾಂಟೆಡ್‌ ಸ್ಥಳಗಳು ಅಂದರೆ ಭೂತಗಳು ಇರುವ ಸ್ಥಳಗಳ ಬಗ್ಗೆ ನೀವು ತಿಳಿದುಕೊಳ್ಳಬಹುದು. ಧೈರ್ಯ ಇದ್ದವರು ಮಾತ್ರ ಇಲ್ಲಿ ಹೆಜ್ಜೆ ಹಾಕಿ ಎನ್ನುತ್ತಾರೆ ತಾಣಗಳನ್ನು ಬಲ್ಲವರು. ಹಾಗಾದರೆ ಬನ್ನಿ ದೆಹಲಿಯ ಆ ಭಯಾನಕ ಮತ್ತು ನಿಗೂಢ ಸ್ಥಳಗಳ ಬಗ್ಗೆ ತಿಳಿದುಕೊಳ್ಳಲು ನೀವು ಬಯಸಿದರೆ, ಈ ಸುದ್ದಿ ನಿಮಗಾಗಿ...

ಭಾರತದ ರಾಜಧಾನಿ ದೆಹಲಿಗೆ ತೆರಳಿದಾಗ ಭೇಟಿ ನೀಡಲು ಹಲವಾರು ಸುಂದರವಾದ ಸ್ಥಳಗಳಿವೆ ಅಲ್ಲವೇ. ಆದರೆ ಭಯಾನಕ ರಹಸ್ಯಗಳಿಂದ ತುಂಬಿರುವ ಅನೇಕ ಸ್ಥಳಗಳೂ ಇಲ್ಲಿವೆ. ನೀವು ನಿರ್ಭೀತರು ಮತ್ತು ಧೈರ್ಯಶಾಲಿಯಾಗಿದ್ದರೆ ಮಾತ್ರ ಈ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ನಿಮ್ಮ ಧೈರ್ಯವನ್ನು ಒಮ್ಮೆ ಚೆಕ್‌ ಮಾಡಿಕೊಳ್ಳಬಹುದು.

malchamahal

ಮಲ್ಚ ಮಹಲ್

ದೆಹಲಿಯ ದಕ್ಷಿಣದಲ್ಲಿ ಭಯಾನಕ ಕೋಟೆಯಿದೆ, ಅದರ ಹೆಸರು ಮಲ್ಚ ಮಹಲ್. ಈ ಅರಮನೆಯಲ್ಲಿ ರಾಜಕುಮಾರಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದಳು, ನಂತರ ಅದು ಪಾಳುಬಿದ್ದಿದೆ. ಹೌದು, ಬೇಗಂ ವಿಲಾಯತ್ ಮಹಲ್ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎನ್ನಲಾಗಿದೆ. ಬೇಗಂ ಅವರ ಅಂತಿಮ ಸಂಸ್ಕಾರವನ್ನು ಸರಿಯಾಗಿ ನಡೆಸದ ಕಾರಣ, ಆಕೆಯ ಆತ್ಮ ಇನ್ನೂ ಇಲ್ಲಿ ಅಲೆದಾಡುತ್ತಿದೆ ಎಂದು ಜನರು ನಂಬುತ್ತಾರೆ. ಇಲ್ಲಿನ ನಿರ್ಜನ ರಸ್ತೆ, ಗಿಡಗಂಟಿಗಳು ಮತ್ತು ದೊಡ್ಡ ಮರಗಳು ತುಂಬಾ ಭಯಾನಕವಾಗಿದೆ. ಈ ಅರಮನೆಯನ್ನು ತಲುಪಲು ಸುಮಾರು ಒಂದು ಕಿಲೋಮೀಟರ್ ನಡೆಯಬೇಕು. ನಂತರ ಮೆಟ್ಟಿಲುಗಳ ಸಹಾಯದಿಂದ ಏರಬೇಕು. ಸ್ವಲ್ಪ ಮುಂದೆ ನಡೆದರೂ ಹಿಂತಿರುಗುವ ದಾರಿ ಕಾಣುವುದಿಲ್ಲ. ಏಕೆಂದರೆ ಅದರ ವಿನ್ಯಾಸವೇ ಹಾಗಿದೆ. ಅರಮನೆಯ ಸುತ್ತಲೂ ಭಯಾನಕ ಶಬ್ದಗಳನ್ನು ಕೇಳಿದ ನಂತರ ಯಾರಿಗಾದರೂ ಗೂಸ್ಬಂಪ್ ಬರದೆ ಇರಲಾರದು.

ದೆಹಲಿ ಕಂಟೋನ್ಮೆಂಟ್

ದೆಹಲಿಯು ಸ್ಮಾರ್ಟ್ ಸಿಟಿ. ಆದರೆ ಇಲ್ಲಿನ ಕಂಟೋನ್ಮೆಂಟ್ ಅತ್ಯಂತ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಮಾಹಿತಿಯ ಪ್ರಕಾರ, ಅಲೌಕಿಕ ಶಕ್ತಿಯಿಂದ ಇಲ್ಲಿ ಅನೇಕ ಘಟನೆಗಳು ಸಂಭವಿಸಿವೆ. ಬಿಳಿ ಸೀರೆಯುಟ್ಟ ಮಹಿಳೆ ಇಲ್ಲಿ ವಾಸಿಸುತ್ತಾಳೆ ಎಂದು ಜನರು ನಂಬುತ್ತಾರೆ. ಇಲ್ಲಿಗೆ ಭೇಟಿ ನೀಡುವ ಜನರ ಪ್ರಕಾರ, ಬಿಳಿ ಸೀರೆಯುಟ್ಟ ಮಹಿಳೆ ರಾತ್ರಿ ವೇಳೆ ಕಾಣಿಸಿಕೊಂಡು ಕಣ್ಮರೆಯಾಗುತ್ತಾಳೆ. ಅಷ್ಟೇ ಅಲ್ಲ ಚಾಲಕರ ಬಳಿಯೂ ಲಿಫ್ಟ್ ಕೇಳುತ್ತಾಳೆ ಎನ್ನಲಾಗಿದೆ. ಈ ರಸ್ತೆಯನ್ನು ದೆವ್ವದ ರಸ್ತೆ ಎಂದು ಹೇಳಲಾಗುತ್ತದೆ. ಆದಾಗ್ಯೂ, ಇವು ಕೇವಲ ಕಿವಿಮಾತುಗಳಾಗಿವೆ.

koonidharwaza

ಖೂನಿ ದರ್ವಾಜಾ

ದೆಹಲಿಯ ಖೂನಿ ದರ್ವಾಜಾ ಕೂಡ ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಮಾಹಿತಿಯ ಪ್ರಕಾರ, ಜನರು ಕಿರುಚುವ ಮತ್ತು ಅಳುವ ಶಬ್ದಗಳು ಇಲ್ಲಿಂದ ಕೇಳಿ ಬರುತ್ತವೆ. ದೆಹಲಿಯ ಬಹದ್ದೂರ್ ಷಾ ಜಾಫರ್ ಮಾರ್ಗದಲ್ಲಿರುವ ಲಾಲ್ ದರ್ವಾಜಾವನ್ನು ಖೂನಿ ದರ್ವಾಜಾ ಎಂದು ಸಹ ಕರೆಯಲಾಗುತ್ತದೆ. ಈ ಬಾಗಿಲು ಅನೇಕ ಜನರ ಸಾವಿಗೆ ಸಾಕ್ಷಿಯಾಗಿದೆ. ಇಲ್ಲಿ ಬ್ರಿಟಿಷರು ಮೊಘಲ್ ಸುಲ್ತಾನರ ಮೂವರು ರಾಜಕುಮಾರರನ್ನು ಹೊಡೆದುರುಳಿಸಿದರು. ಕೆಲವರು ಇದನ್ನು ಭೂತದ ಬಾಗಿಲು ಎಂದೂ ಪರಿಗಣಿಸುತ್ತಾರೆ. ಈ ರಕ್ತಸಿಕ್ತ ಬಾಗಿಲಿಗೆ ಸಂಬಂಧಿಸಿದಂತೆ ಇನ್ನೂ ಕೆಲವು ಕಥೆಗಳಿವೆ.

ಸೆಂಟ್ರಲ್ ರಿಸರ್ವ್ ಫಾರೆಸ್ಟ್‌

ಇದನ್ನು ಭುಲಿ ಭಟಿಯಾರಿ ಅರಮನೆ ಎಂದು ಸಹ ಕರೆಯಲಾಗುತ್ತದೆ. ಭುಲಿ ಭಟಿಯಾರಿ ಮಹಲ್ 14 ನೇ ಶತಮಾನದಲ್ಲಿ ತುಘಲಕ್ ರಾಜರಿಂದ ನಿರ್ಮಿಸಲ್ಪಟ್ಟ ವಸತಿಗೃಹವಾಗಿದೆ. ಈ ಸ್ಥಳಕ್ಕೆ ಹೇಗೆ ಹೆಸರು ಬಂತು ಎಂಬುದನ್ನು ವಿವರಿಸುವ ಹಲವಾರು ಕಥೆಗಳು ಅಂತರ್ಜಾಲದಲ್ಲಿವೆ. ಸ್ಥಳವು ಸೆಂಟ್ರಲ್ ರಿಡ್ಜ್ ಪ್ರದೇಶದ ಪಕ್ಕದಲ್ಲಿದೆ, ಮಾಹಿತಿ ಪ್ರಕಾರ ಇಲ್ಲಿ ಭಟಿಯಾರಿ ಜಾತಿಯ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ferozshahkotla

ಫಿರೋಜ್ ಶಾ ಕೋಟ್ಲಾ

ದೆಹಲಿಯಲ್ಲಿರುವ ಫಿರೋಜ್ ಶಾ ಕೋಟ್ಲಾ ಕೋಟೆಯು ಭಯಾನಕ ಸ್ಥಳಗಳಲ್ಲಿ ಒಂದಾಗಿದೆ. ಮಾಹಿತಿಯ ಪ್ರಕಾರ, ಗುರುವಾರ ಇಲ್ಲಿ ಮೇಣದಬತ್ತಿಗಳು ಉರಿಯುತ್ತವಂತೆ. ಫಿರೋಜ್ ಷಾ ತುಘಲಕ್ 1354 ರಲ್ಲಿ ಈ ಕೋಟೆಯನ್ನು ನಿರ್ಮಿಸಿದನು. ಇಂದು ಅದು ಅವಶೇಷಗಳಾಗಿ ಮಾರ್ಪಟ್ಟಿದೆ. ಇಲ್ಲಿ ಗುರುವಾರದಂದು ಮೇಣದ ಬತ್ತಿಗಳು ಮತ್ತು ಅಗರಬತ್ತಿಗಳು ಉರಿಯುವುದನ್ನು ಕಾಣಬಹುದು ಎಂದು ಜನರು ಹೇಳುತ್ತಾರೆ. ಜಿನ್‌ಗಳನ್ನು ಸಮಾಧಾನಪಡಿಸಲು ಆತ್ಮಗಳು ಇಲ್ಲಿ ಸೇರುತ್ತವೆ ಎಂದು ನಂಬಲಾಗಿದೆ. ಹೀಗಾಗಿ ಜನರು ಇಲ್ಲಿಗೆ ಹೋಗಲು ಭಯಪಡುತ್ತಾರೆ. ಇಲ್ಲಿ ಭೂತಿಯಾ ಹವೇಲಿ ಎಂದು ಕರೆಯಲ್ಪಡುವ ಒಂದು ಮಹಲೂ ಇದೆ.

More News

Read more about: delhi horror places
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+