Search
  • Follow NativePlanet
Share
ಮುಖಪುಟ » ಸ್ಥಳಗಳು » ನೊಯ್ಡಾ » ಹವಾಮಾನ

ನೊಯ್ಡಾ ಹವಾಮಾನ

ನೊಯ್ಡಾ ವ್ಯಸ್ತ ಐಟಿ ಕೇಂದ್ರವಾಗಿದ್ದು, ಭಾರತೀಯರು ಹಾಗೂ ವಿದೇಶಗರಿಂದ ವರ್ಷವಿಡೀ ಇಲ್ಲಿ ಜನಜಂಗುಳಿಯಿರುತ್ತದೆ. ವಾಸ್ತವ್ಯ ಹಾಗೂ ಊಟಕ್ಕೆ ಇಲ್ಲಿ ಅತ್ಯುತ್ತಮವಾಗಿ ಮೂಲಭೂತ ಸೌಕರ್ಯಗಳಿವೆ. ಪ್ರವಾಸಿಗರು ನವಂಬರ್ ನಿಂದ ಎಪ್ರಿಲ್ ನಡುವೆ ಇಲ್ಲಿಗೆ ಭೇಟಿ ನೀಡಬಹುದು. ಈ ವೇಳೆ ಹವಾಮಾನ ತಂಪು ಹಾಗೂ ಹಿತಕರವಾಗಿರುತ್ತದೆ.

ಬೇಸಿಗೆಗಾಲ

ಮಾರ್ಚ್ ನಿಂದ ಮೇ ತನಕ ಬೇಸಿಗೆ ಕಾಲವಿರುತ್ತದೆ. ಈ ವೇಳೆ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ನಿಂದ 40 ಡಿಗ್ರಿ ಸೆಲ್ಸಿಯಸ್ ತನಕ ಏರಿಕೆಯಾಗುತ್ತದೆ. ಮೇ ತಿಂಗಳು ಋತುವಿನ ಅತ್ಯಂತ ಹೆಚ್ಚು ಉಷ್ಣಾಂಶವಿರುವ ತಿಂಗಳು.

ಮಳೆಗಾಲ

ಜೂನ್ ನಿಂದ ಸಪ್ಟೆಂಬರ್ ತನಕ ಮಳೆಗಾಲವಿರುತ್ತದೆ. ಈ ಕಾಲದಲ್ಲಿ ಹವಾಮಾನ ತೇವ ಹಾಗೂ ಆರ್ದ್ರವಾಗಿರುತ್ತದೆ.

ಚಳಿಗಾಲ

ಡಿಸೆಂಬರ್ ನಿಂದ ಫೆಬ್ರವರಿ ತನಕ ಚಳಿಗಾಲವಿರುತ್ತದೆ. ಈ ಸಮಯದಲ್ಲಿ ತಾಪಮಾನ 7 ಡಿಗ್ರಿ ಸೆಲ್ಸಿಯಸ್ ನಿಂದ 22 ಡಿಗ್ರಿ ಸೆಲ್ಸಿಯಸ್ ತನಕವಿರುತ್ತದೆ.