Search
  • Follow NativePlanet
Share
» »ಮಕ್ಕಳಿಗೆ ಚಿಟ್ಟೆಯ ಬಣ್ಣದ ಲೋಕ

ಮಕ್ಕಳಿಗೆ ಚಿಟ್ಟೆಯ ಬಣ್ಣದ ಲೋಕ

By Divya

ಕೆಲಸಕ್ಕೆ ಹೋಗೋ ತಂದೆತಾಯಿಗಳು ವಾರದ ರಜೆಯಲ್ಲಾದರೂ ಮಕ್ಕಳೊಂದಿಗೆ ಕಾಲಕಳಿಯಬೇಕೆಂದು ಬಯಸುತ್ತಾರೆ. ಅದೇ ಮಕ್ಕಳು ರಜೆಯಲ್ಲೆಲ್ಲಾದರೂ ಪಟ್ಟಿ-ಪುಸ್ತಕದಿಂದ ದೂರ ಇದ್ದು, ಆಟ ಆಡೋಣ ಎಂದು ಬಯಸುತ್ತಾರೆ. ಇಂತಹ ಇಂಗಿತವನ್ನು ಪೂರೈಸಿಕೊಳ್ಳುವುದಕ್ಕೆ ಸರಿಯಾದ ಜಾಗ ಅಂದ್ರೆ ಬನ್ನೇರುಘಟ್ಟ ಬಟರ್ ಫ್ಲೈ ಪಾರ್ಕ್. ವಿಶಾಲವಾದ ಜಾಗ, ಚಿಟ್ಟೆಗಳ ಕಲರವ, ಪ್ರಾಣಿಗಳ ವೀಕ್ಷಣೆ ಆಟದ ಜೊತೆಗೆ ಪಾಠದ ರೂಪದಲ್ಲಿ ಎಲ್ಲವೂ ನಿಮ್ಮ ಮಕ್ಕಳಿಗೆ ಸಿಕ್ಕಿದಂತಾಗುತ್ತದೆ.

butterfly park bangalore

PC: wikipedia.org

ಬಟರ್ ಫ್ಲೈ ಪಾರ್ಕ್
ಈ ಪಾರ್ಕ್‍ಅನ್ನು ಚಿಟ್ಟೆಗಳ ಸಂರಕ್ಷಣಾ ಸ್ಥಳ ಎಂತಲೂ ಕರೆಯುತ್ತಾರೆ. ಪಾಲಿಕಾರ್ಬೋನೇಟ್ ಮೇಲ್ಛಾವಣಿಯನ್ನು ಹೊಂದಿದೆ. 10,000 ಸ್ಕ್ವಾರ್ ಫೀಟ್ ವಿಸ್ತಾರದಲ್ಲಿ ಇರುವ ಈ ಪಾರ್ಕ್ ಗೋಳಾಕೃತಿಯಲ್ಲಿ ಸುತ್ತುವರಿದಿದೆ. ಇಲ್ಲಿ ಸುಮಾರು 20 ತಳಿಗಳ ಚಿಟ್ಟೆಗಳನ್ನು ನೋಡಬಹುದು. ಚಿಟ್ಟೆಗಳ ವಾಸಕ್ಕೆ ಬೇಕಾದಂತಹ ಪರಿಸರವನ್ನೇ ನಿರ್ಮಿಸಲಾಗಿದೆ. ಉಷ್ಣತೆಯ ಮಟ್ಟ ಸಮನಾಗಿರುವಂತೆ ಮಾಡಲಾಗಿದೆ.

butterfly park bangalore

PC: wikipedia.org

ಪಾರ್ಕಿನ ಒಳಗೆ
ಚಿಟ್ಟೆಗಳಿಗೆ ಬೇಕಾದ ಆಹಾರ ಒದಗಿಸುವ ವ್ಯವಸ್ಥೆ, ಕೃತಕವಾಗಿ ನಿರ್ಮಿಸಿರುವ ಒಂದು ಪುಟ್ಟ ಹೊಳೆ, ಹೋ ಗಿಡಗಳ ಪೊದೆಗಳೂ ಇವೆ. ಅಲ್ಲಿರುವ ಸಂರಕ್ಷಣಾ ಸ್ಥಳದ ಎರಡನೇ ಮತ್ತು ಮೂರನೇ ಮನೆ ಒಳಗೆ ಚಿಕ್ಕದಾದ ಥಿಯೇಟರ್, ಅದರಲ್ಲಿ ಹಲವು ಜಾತಿಯ ಚಿಟ್ಟೆಗಳ ಬಗ್ಗೆ ಪ್ರಸಾರ ಮಾಡಲಾಗುತ್ತದೆ. ಅಲ್ಲದೆ ಗೋಡೆಯ ಸುತ್ತಲೂ ವಿವಿಧ ಚಿಟ್ಟೆ ಹಾಗೂ ಸಸ್ಯಗಳ ಬಗ್ಗೆ ಸೂಕ್ತ ಮಾಹಿತಿ ಫಲಕಗಳನ್ನು ಹಾಕಲಾಗಿದೆ. ಒಟ್ಟಿನಲ್ಲಿ ಮಕ್ಕಳಿಗಷ್ಟೇ ಅಲ್ಲ ದೊಡ್ಡವರೂ ಸಹ ಚಿಟ್ಟೆಗಳ ಬಣ್ಣದ ಪ್ರಪಂಚದ ಬಗ್ಗೆ ತಿಳಿದುಕೊಳ್ಳಬಹುದು.

butterfly park bangalore

PC: wikipedia.org

ಇದನ್ನೂ ನೋಡಬಹುದು
ಬಟರ್ ಫ್ಲೈ ಪಾರ್ಕಿಗೆ ಹೋಗುವ ಮೊದಲೇ ಬನ್ನೇರುಘಟ್ಟ ಮೃಗಾಲಯವು ಸಿಗುತ್ತದೆ. ವಿವಿಧ ಬಗೆಯ ಪಕ್ಷಿ, ಪ್ರಾಣಿ ಹಾಗೂ ಸಸ್ತನಿಗಳನ್ನು ನೋಡಬಹುದು. ಅಲ್ಲದೆ ಸಫಾರಿಗೆ ಹೋಗಲೂ ಸಹ ಅವಕಾಶವಿದೆ. ಆದರೆ ಕೆಲವು ದಿನಗಳಿಗೆ ಅನ್ವಯಿಸುವಂತೆ ಪ್ರವೇಶ ಶುಲ್ಕಗಳನ್ನು ನಿಗದಿಪಡಿಸಲಾಗಿರುತ್ತದೆ. ಪಾರ್ಕ್‍ನ ಸುತ್ತಲೂ ಮಕ್ಕಳಿಗೆ ಆಡಲು ಜಾರುವ ಬಂಡಿ, ಜೋಕಾಲಿ, ಕುಣಿಯುವ ಕುದುರೆ, ಹಸಿರು ವನಗಳೆಲ್ಲವೂ ಇವೆ.

butterfly park bangalore

PC: wikipedia.org

ಪಾರ್ಕ್‍ನ ಮಾಹಿತಿ
ಬೆಳಗ್ಗೆ 9 ರಿಂದ ಸಂಜೆ 5 ಘಂ.ವರೆಗೆ ಪಾರ್ಕ್ ಒಳಗೆ ಪ್ರವೇಶಿಸಬಹುದು. ಮಂಗಳವಾರ ವಾರದ ರಜೆ. ಇಲ್ಲಿಗೆ ಬರಲು ಮೆಜೆಸ್ಟಿಕ್, ಶಿವಾಜಿನಗರ, ಬ್ರೀಗೇಡ್ ರಸ್ತೆಯಿಂದ ನೇರವಾಗಿ ಬರಲು ಬಸ್ ವ್ಯವಸ್ಥೆ ಇದೆ.

Read more about: bangalore
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X