Search
  • Follow NativePlanet
Share
» »ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ಈ ಜಲಪಾತದ ನೀರು ಪಾಪಿಗಳ ಮೈ ಮೇಲೆ ಬೀಳೋದಿಲ್ಲವಂತೆ !

ನೀವು ಸಾಕಷ್ಟು ಜಲಪಾತಗಳನ್ನು ನೋಡಿರುವಿರಿ , ಕೇಳಿರುವಿರಿ. ಕೆಲವು ಜಲಪಾತಗಳು ಎತ್ತರಕ್ಕೆ ಪ್ರಸಿದ್ಧವಾಗಿದ್ದರೆ, ಇನ್ನೂ ಕೆಲವು ತನ್ನ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಇನ್ನೂ ಕೆಲವು ಜಲಪಾತಗಳು ತನ್ನ ಔಷಧೀಯಗುಣಗಳಿಂದ ವಿಶೇಷವಾಗಿದೆ. ಇಂದು ನಾವು ಒಂದು ವಿಶೇಷ ಜಲಪಾತದ ಬಗ್ಗೆ ತಿಳಿಸಲಿದ್ದೇವೆ. ಅದೇನೆಂದರೆ ಇಲ್ಲಿನ ಜಲಪಾತದ ನೀರು ಎಲ್ಲರ ಮೇಲೂ ಬೀಳೋದಿಲ್ಲವಂತೆ .

ವಸುಧಾರ ಫಾಲ್ಸ್‌

ವಸುಧಾರ ಫಾಲ್ಸ್‌

PC:Gouravmsh

ಹೌದು ಈ ಜಲಪಾತ ಎಲ್ಲಾ ಜಲಪಾತದಂತೆ ಅಲ್ಲ. ಇದು ಎಲ್ಲಾ ಮನುಷ್ಯರ ಮೇಲೆ ಬೇಳೋದಿಲ್ಲವಂತೆ. ಈ ವಿಶೇಷ ಜಲಪಾತವೇ ವಸುಧಾರ ಫಾಲ್ಸ್‌. ಇತರ ಫಾಲ್ಸ್‌ಗಳಂತೆ ಇದು ಕೂಡಾ ಮೇಲಿನಿಂದ ಕೆಳಕ್ಕೆ ಧುಮ್ಮುಕ್ಕುತ್ತದೆ. ಆದರೆ ಇದರ ನೀರು ಅಲ್ಲಿಗೆ ಬರುವ ಪ್ರತಿಯೊಬ್ಬರ ಮೇಲೂ ಬೀಳೋದಿಲ್ಲವಂತೆ.

ಪಾಪಿಗಳ ಮೇಲೆ ಬೀಳೋದಿಲ್ಲ

ಪಾಪಿಗಳ ಮೇಲೆ ಬೀಳೋದಿಲ್ಲ

PC: Bodhisattwa

ಯಾರು ಪೂಣ್ಯವಂತರೋ ಅವರ ಮೇಲಷ್ಟೇ ನೀರು ಬೀಳುತ್ತದೆ. ಪಾಪಿಗಳ ಮೇಲೆ ಬೀಳೋದಿಲ್ಲವಂತೆ. ಒಂದು ವೇಳೆ ನೀವು ಪಾಪಿಗಳಾಗಿದ್ದರೆ ವಸುಧಾರ ಫಾಲ್ಸ್‌ ನಿಮ್ಮ ಮೈಯನ್ನು ಮುಟ್ಟೋದೂ ಇಲ್ಲವಂತೆ.

 400 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ

400 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ

PC:Bhawna Dey

ಸುಮಾರು 400 ಫೀಟ್ ಎತ್ತರದಿಂದ ಧುಮ್ಮುಕ್ಕುತ್ತದೆ. ಪಂಚ ಪಾಂಡವರ ಸಹದೇವ್ ತನ್ನ ಪ್ರಾಣ ತ್ಯಾಗ ಮಾಡಿದ ಸ್ಥಳ ಹಾಗೂ ಅರ್ಜುನ್ ಗಾಂಡಿವ್ಯ ತ್ಯಾಗ ಮಾಡಿದ ಸ್ಥಳ ಇದಾಗಿದೆ ಎನ್ನಲಾಗುತ್ತದೆ.

ಬದ್ರಿನಾಥ್‌ಗೆ ಸಮೀಪದಲ್ಲಿದೆ

ಬದ್ರಿನಾಥ್‌ಗೆ ಸಮೀಪದಲ್ಲಿದೆ

PC: Bodhisattwa

ಬದ್ರಿನಾಥ್‌ನಿಂದ 8 ಕಿ.ಮೀ ದೂರದಲ್ಲಿದೆ. ಬದ್ರಿನಾಥ ಯಾತ್ರೆಗೆ ಹೋಗುವವರು ಈ ಜಲಪಾತವನ್ನು ಭೇಟಿ ನೀಡಿಯೇ ಮುಂದೆ ಸಾಗುತ್ತಾರೆ. ಇಷ್ಟು ದೂರದಿಂದ ಬೀಳುವ ನೀರು ಮುತ್ತಿನಂತೆ ಕಾಣುತ್ತದೆ. ಬರೀ ದೇಶದಲ್ಲಷ್ಟೇ ಅಲ್ಲ ವಿದೇಶದಲ್ಲೂ ಈ ಫಾಲ್ಸ್‌ನ ಚರ್ಚೆ ಇದೆ.

ರೋಗಗಳಿಂದ ಮುಕ್ತಿ

ರೋಗಗಳಿಂದ ಮುಕ್ತಿ

PC: Rdpatel94

ಈ ಜಲಪಾತದ ರಸ್ತೆಯಲ್ಲಿ ಅನೇಕ ಆಯುರ್ವೇದಿಕ್ ಗಿಡಮೂಲಿಕೆಗಳಿವೆ. ಹಾಗಾಗಿ ಈ ಜಲಪಾತದ ಒಂದು ಹನಿಯೂ ನಿಮ್ಮ ಮೇಲೆ ಬಿದ್ದರೆ ನೀವು ರೋಗಗಳಿಂದ ಮುಕ್ತರಾಗುತ್ತೀರಿ ಎನ್ನಲಾಗುತ್ತದೆ. ಆದ್ದರಿಂದ ಬಹಳಷ್ಟು ಜನರು ಈ ಪಾಲ್ಸ್‌ಗೆ ಭೇಟಿ ನೀಡುತ್ತಾರೆ.

ಟ್ರಕ್ಕಿಂಗ್‌

ಟ್ರಕ್ಕಿಂಗ್‌

PC: Gouravmsh

ವಸುಧಾರ ಫಾಲ್ಸ್‌ಗೆ ಟ್ರಕ್ಕಿಂಗ್ ಹೋಗಬಹುದು. ಮನದಿಂದ ವಸುಧಾರಗೆ 2 ಗಂಟೆಯ ಟ್ರಕ್ಕಿಂಗ್ ಹಿಡಿಯುತ್ತದೆ. ಅಲ್ಲ ದಾರಿಮಧ್ಯೆ ಕುಡಿಯಲು, ತಿನ್ನಲು ಏನೂ ಸಿಗೋದಿಲ್ಲ. ಹಾಗಾಗಿ ಕುಡಿಯುವ ನೀರು ಹಾಗೂ ಸ್ನಾಕ್ಸ್‌ನ್ನು ತರುವುದು ಒಳ್ಳೆಯದು. ಲಕ್ಷಿ ವನ ಕಾಡಿನ ಮೂಲಕ ಟ್ರಕ್ಕಿಂಗ್ ಹೋಗಬೇಕು. ನೀವು ಮುಂಜಾನೆಯೇ ಟ್ರಕ್ಕಿಂಗ್ ಆರಂಭಿಸಿದರೆ ಸಂಜೆ ಹೊತ್ತಿಗೆ ಮರಳಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+