Search
  • Follow NativePlanet
Share
» »ಈ ನದಿಯಲ್ಲಿ ಅಡಗಿದೆ ಕೋಟ್ಯಾಂತರ ಬೆಲೆಬಾಳುವ ಸಂಪತ್ತು

ಈ ನದಿಯಲ್ಲಿ ಅಡಗಿದೆ ಕೋಟ್ಯಾಂತರ ಬೆಲೆಬಾಳುವ ಸಂಪತ್ತು

ಹಿಮಾಲಯವನ್ನು ತನ್ನ ಪೌರಾಣಿಕ ಮಹತ್ವಗಳ ಜೊತೆಗೆ ರಹಸ್ಯಗಳಿಗೂ ಹೆಸರುವಾಸಿಯಾಗಿದೆ. ಇಲ್ಲಿನ ಕೆಲವು ಸ್ಥಳಗಳು ಮಹಾಭಾರತ ಕಾಲದಿಂದಲೂ ವರ್ಣಿಸಲಾಗಿದೆ. ಅವುಗಳಲ್ಲಿ ಕೆಲವು ಸ್ಥಳಗಳು ಇಂದಿಗೂ ನಮ್ಮ ಮುಂದೆ ರಹಸ್ಯವಾಗಿಯೇ ಉಳಿದಿದೆ. ಅಂತಹ ಸ್ಥಳಗಳಲ್ಲಿ ಒಂದು ಸ್ಥಳವಿದೆ ಅಲ್ಲಿ ಕೋಟಿಗಟ್ಟಲೆ ಸಂಪತ್ತು ಭೂಮಿಯ ಒಳಗೆ ಇದೆ ಎನ್ನಲಾಗುತ್ತಿದೆ. ಆದರೆ ಅದರ ಬಗ್ಗೆ ಇಂದಿಗೂ ಯಾರೂ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ. ಆ ಸ್ಥಳ ಯಾವುದು ಅದರ ಕೆಲವು ಮಾಹಿತಿ ಇಲ್ಲಿದೆ.

ಬೆಟ್ಟಗಳ ನಡುವೆ ಇದೆ ಕಮರೂನಾಗ್ ಸರೋವರ

ಬೆಟ್ಟಗಳ ನಡುವೆ ಇದೆ ಕಮರೂನಾಗ್ ಸರೋವರ

ಕಮರೂನಾಗ್ ಸರೋವರವು ಹಿಮಾಲಯದ ಬೆಟ್ಟಗಳ ನಡುವೆ ಇದೆ. ಈ ನದಿಗೆ ಕಣಿವೆಯ ದೇವತೆ ಕಮರೂನಾಗ್ ಹೆಸರನ್ನೇ ಇಡಲಾಗಿದೆ. ಪ್ರತಿವರ್ಷ 14-15 ಜೂನ್‌ರಂಂದು ಬಾಬಾ ಕಮರೂನಾಗ್ ದರ್ಶನ ನೀಡುತ್ತಾರೆ ಎನ್ನುವ ಧಾರ್ಮಿಕ ನಂಬಿಕೆ ಇಲ್ಲಿನ ಜನರಲ್ಲಿದೆ. ಬಾಬಾ ಕಮರೂನಾಗ್‌ರಲ್ಲಿ ಹೆಚ್ಚಿನ ಶಕ್ತಿ ಇದೆ. ಅವರು ಭಕ್ತರ ಎಲ್ಲಾ ಮನೋಕಾಮನೆಗಳನ್ನು ಈಡೇರಿಸುತ್ತಾರೆ ಎನ್ನಲಾಗುತ್ತದೆ. ಬಾಬಾರ ದರ್ಶನಕ್ಕಾಗಿ ಭಕ್ತರು ಕಮರೂನಾಗ್‌ಗೆ ಪಾದಯಾತ್ರೆ ಮೂಲಕ ಧಾವಿಸುತ್ತಾರೆ.

ನದಿಯಲ್ಲಿದೆ ಕೋಟ್ಯಾಂತರ ರೂ. ಸಂಪತ್ತು

ನದಿಯಲ್ಲಿದೆ ಕೋಟ್ಯಾಂತರ ರೂ. ಸಂಪತ್ತು


ಕಠಿಣ ಬೆಟ್ಟದ ರಸ್ತೆಗಳನ್ನು ದಾಟಿ ಭಕ್ತರು ಈ ಮಂದಿರ ದರ್ಶನಕ್ಕಾಗಿ ಬರುತ್ತಾರೆ. ಈ ಮಂದಿರ ಮುಂದೆ ಒಂದು ನದಿ ಇದೆ ಅದನ್ನು ಕಮರೂನಾಗ್ ನದಿ ಎಂದೇ ಕರೆಯಲಾಗುತ್ತದೆ. ಇಲ್ಲಿ ಭಕ್ತರು ಚಿನ್ನ ಬೆಳ್ಳಿಯ ಆಭತಣಗಳನ್ನು ನದಿಗೆ ಎಸೆಯುತ್ತಾರೆ. ಬಹಳ ಹಿಂದಿನಿಂದಲೂ ನಡೆಯುತ್ತಾ ಬಂದಿರುವ ಈ ಸಂಪ್ರದಾಯದಿಂದಾಗಿ ಇದೀಗ ಈ ನದಿಯಲ್ಲಿ ಕೋಟ್ಯಾಂತರ ಬೆಲೆಬಾಳುವ ಸಂಪತ್ತು ಶೇಖರಣೆಯಾಗಿದೆ. ಈ ನದಿ ಪಾತಾಳದ ವರೆಗೂ ತಲುಪುತ್ತದೆ ಎನ್ನಲಾಗುತ್ತದೆ. ಈ ನದಿಯಲ್ಲಿ ದೇವಿ ದೇವತೆಯರ ಸಂಪತ್ತು ಕೂಡಾ ಅಡಗಿದೆ ಎನ್ನಲಾಗುತ್ತದೆ.

ಮಹಾಭಾರತದಲ್ಲೂ ಇದೆ ಕಮರೂನಾಗ್ ಉಲ್ಲೇಖ

ಮಹಾಭಾರತದಲ್ಲೂ ಇದೆ ಕಮರೂನಾಗ್ ಉಲ್ಲೇಖ

PC- Dhiman.ashishpro

ಕಮರೂನಾಗ್‌ರ ಉಲ್ಲೇಖ ಮಹಾಭಾರತದಲ್ಲೂ ಕಾಣಸಿಗುತ್ತದೆ. ಪೌರಾಣಿಕ ಸಾಕ್ಷ್ಯಗಳ ಪ್ರಕಾರ ಕಮರೂನಾಗ್ ಎಲ್ಲರಿಗಿಂತಲೂ ಬಲಶಾಲಿಯಾದ ಯೋಧನಾಗಿದ್ದ. ಆದರೆ ಕೃಷ್ಣನ ಮುಂದೆ ಈತನಿಗೆ ಶರಣಾಗಲೇ ಬೇಕಾಯಿತು. ಮಹಾಭಾರತ ಯುದ್ಧಕ್ಕೂ ಮುಂಚೆ ಈ ಯುದ್ಧದಲ್ಲಿ ಯಾರು ಸೋಲುವ ಸ್ಥಿತಿಯಲ್ಲಿರುತ್ತಾರೋ ನಾನು ಅವರಿಗೆ ಬೆಂಬಲವನ್ನು ಸೂಚಿಸುತ್ತೇನೆ ಎಂದು ಕಮರೂನಾಗ್ ಹೇಳಿದ್ದಂತೆ.

ಕಮರೂನಾಗ್ ತಲೆ ಕೇಳಿದ ಕೃಷ್ಣ

ಕಮರೂನಾಗ್ ತಲೆ ಕೇಳಿದ ಕೃಷ್ಣ

ಇದೇ ಸಂದರ್ಭದಲ್ಲಿ ಒಂದು ನೀತಿಯ ಅಡಿಯಲ್ಲಿ ಕೃಷ್ಣ , ಕಮರೂನ್‌ರ ತಲೆಯನ್ನೇ ಕೇಳಿದನಂತೆ. ಒಂದು ವೇಳೆ ಕಮರೂನಾಗ್ ಕೌರವರ ಬೆಂಬಲಕ್ಕೆ ನಿಂತಿದ್ದರೆ ಯುದ್ಧದಲ್ಲಿ ಪಾಂಡವರು ಜಯಶಾಲಿಗಳಾಗಲಾರರು ಆ ಕಾರಣಕ್ಕೆ ಕೃಷ್ಣ ಕಮರೂನಾಗ್‌ರ ತಲೆಯನ್ನೇ ಕೇಳಿದ ಎಂದು ಕಥೆಯೊಂದು ಹೇಳುತ್ತದೆ.

ತಲೆಗೂ ಇತ್ತು ತಾಕತ್ತು

ತಲೆಗೂ ಇತ್ತು ತಾಕತ್ತು

ಕೃಷ್ಣ ಕಮರೂನಾಗ್‌ರ ತಲೆಯನ್ನು ಎತ್ತರದ ಬೆಟ್ಟವೊಂದರ ಮೇಲೆ ಇರಿಸಿದ. ಆ ತಲೆ ಯಾವ ಕಡೆ ವಾಲುತ್ತದೋ ಆ ಸೇನೆ ಯುದ್ಧದಲ್ಲಿ ಗೆಲ್ಲುತ್ತಿತ್ತು. ಕಮರೂನಾಗ್‌ನ ತುಂಡರಿಸಿದ ತಲೆಯಲ್ಲೂ ಅಷ್ಟೊಂದು ಶಕ್ತಿ ಇತ್ತು ಎನ್ನಲಾಗುತ್ತದೆ.

ದೇವಿಯರ ಸಂಪತ್ತೂ ಇದೆಯಂತೆ

ದೇವಿಯರ ಸಂಪತ್ತೂ ಇದೆಯಂತೆ


ಈ ನದಿ ಪಾತಾಳದ ವರೆಗೂ ತಲುಪುತ್ತದೆ ಎನ್ನಲಾಗುತ್ತದೆ. ಭಕ್ತರು ಎಸೆದಿರುವ ಚಿನ್ನಾಭರಣಗಳ ಜೊತೆಗೆ, ಈ ನದಿಯಲ್ಲಿ ದೇವಿ ದೇವತೆಯರ ಸಂಪತ್ತು ಕೂಡಾ ಅಡಗಿದೆ ಎನ್ನಲಾಗುತ್ತದೆ.

 ಹೋಗುವುದು ಹೇಗೆ?

ಹೋಗುವುದು ಹೇಗೆ?

ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯಲ್ಲಿದೆ ಕಮರೂನಾಗ್ ನದಿ. ಇಲ್ಲಿಗೆ ಹೋಗಲು ನೇರವಾದ ರಸ್ತೆ ಇಲ್ಲ.ಮಂಡಿ ಯಿಂದ ರೋಹಾಂಡವರೆಗೆ ರಸ್ತೆಮಾರ್ಗದ ಮೂಲಕ ಹೋಗಬಹುದು. ನಂತರ ಸುಮಾರು 8 ಕಿ.ಮೀ ಬೆಟ್ಟ ಹತ್ತಬೇಕಾಗುತ್ತದೆ.ಇಲ್ಲಿಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಕುಲ್ಲೂ ಏರ್‌ಪೋರ್ಟ್. ಅಥವಾ ಜೋಗೀಂದರ್ ನಗರ್ ರೈಲ್ವೆ ಸ್ಟೇಶನ್‌ನಿಂದಲೂ ಹೋಗಬಹುದು.

More News

Read more about: himalaya lake himachal pradesh
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+