ಅಸ್ತಮಾ ಕೂಡ ಗಂಭೀರ ಕಾಯಿಲೆಯಾಗಿದೆ. ಅನೇಕ ಬಾರಿ ರೋಗಿಯು ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆಯದಿದ್ದರೆ, ಅವನ ಪ್ರಾಣವೂ ಹೋಗಬಹುದು. ಅಸ್ತಮಾ ದೀರ್ಘಕಾಲದ ಉರಿಯೂತದ ಕಾಯಿಲೆಯಾಗಿದ್ದು, ಅದು ಶ್ವಾಸಕೋಶದ ಶ್ವಾಸನಾಳದ ಮೇಲೆ ಪರಿಣಾಮ ಬೀರುತ್ತದೆ. ಅಂದಹಾಗೆ ಅಸ್ತಮಾ ರೋಗಿಗಳ ಪೈಕಿ ಕೆಲವರು ಪರ್ವತ ಪ್ರದೇಶಗಳಲ್ಲಿ ವಿಹಾರ ಮಾಡುವುದಾಗಲಿ, ಆನಂದಿಸಲು ಸಾಧ್ಯವಾಗುವುದಿಲ್ಲ.
ಹೌದು, ಅಸ್ತಮಾ ಇರುವವರಿಗೆ ಎತ್ತರದ ಪ್ರದೇಶಗಳಿಗೆ ಪ್ರಯಾಣಿಸುವುದು ಕಷ್ಟವಾಗಬಹುದು. ನೀವು ತೀವ್ರವಾದ ಅಸ್ತಮಾವನ್ನು ಹೊಂದಿದ್ದರೆ ಈ ಕೆಳಗೆ ಪಟ್ಟಿ ಮಾಡಲಾಗಿರುವ ಸ್ಥಳಗಳಿಂದ ದೂರವಿರುವುದು ಒಳ್ಳೆಯದು. ಅದಕ್ಕೂ ಮುನ್ನ ಪ್ರವಾಸ ಹಮ್ಮಿಕೊಳ್ಳುವ ಅಸ್ತಮಾ ರೋಗಿಗಳು ಅನುಸರಿಸಬೇಕಾದ ಕೆಲವು ಸಲಹೆಗಳನ್ನು ಕೊಡಲಾಗಿದೆ.

ಪ್ರವಾಸಕ್ಕೆ ತೆರಳುವ ಮುನ್ನ…
*ಪ್ರವಾಸ ಹಮ್ಮಿಕೊಂಡಿರುವ ಅಸ್ತಮಾ ರೋಗಿಗಳು ಅತ್ಯಂತ ಎತ್ತರದ ಪ್ರದೇಶಗಳಲ್ಲಿ ನಿಧಾನವಾಗಿ ನಡೆಯುವ ಮೂಲಕ ನಿಮ್ಮ ದೇಹಕ್ಕೆ ಹೊಂದಿಕೊಳ್ಳಲು ಸಮಯವನ್ನು ನೀಡಿ.
*ನಿಮ್ಮ ಇನ್ಹೇಲರ್‌ಗಳನ್ನು ಯಾವಾಗಲೂ ನಿಮ್ಮೊಂದಿಗೆ ಇಟ್ಟುಕೊಳ್ಳಿ. ಅವುಗಳನ್ನು ತೆಗೆದುಕೊಂಡು ಹೋಗುವುದನ್ನು ಎಂದಿಗೂ ಮರೆಯಬೇಡಿ. ನೀವು ಪ್ರವಾಸದ ಮೊದಲು, ನಿಮ್ಮ ವೈದ್ಯರೊಂದಿಗೆ ಮಾತನಾಡಿ, ಅಪಾಯಿಂಟ್ಮೆಂಟ್ ತೆಗೆದುಕೊಳ್ಳಿ.
*ಸಮಸ್ಯೆಯ ಕುರಿತು ಮಾತನಾಡಿ, ಸಲಹೆಯನ್ನು ಪಡೆಯಿರಿ ಇದರಿಂದ ನೀವು ಮುಂಜಾಗ್ರತೆ ವಹಿಸಬಹುದು.
* ನೀವು ಸಾಗರೋತ್ತರ ಅಥವಾ ಅಂತರರಾಜ್ಯಕ್ಕೆ ಪ್ರಯಾಣಿಸುತ್ತಿದ್ದರೆ, ಪ್ರಯಾಣ ವಿಮೆಯನ್ನು ಪಡೆಯುವುದು ತುಂಬಾ ಒಳ್ಳೆಯದು.
* ಮಾಸ್ಕ್ ಧರಿಸಿ ಓಡಾಡುವುದರಿಂದ ಮಾಲಿನ್ಯ ಮಟ್ಟವನ್ನು ಹೊಂದಿರುವ ಪ್ರದೇಶಗಳಲ್ಲಿ ನಿಮಗೆ ಸಹಾಯವಾಗುತ್ತದೆ.

ಸಾಹಸಿ ಪ್ರಿಯರ ಭವ್ಯವಾದ ಸ್ಥಳ ‘ಸ್ಪಿಟಿ ವ್ಯಾಲಿ’
ಹಿಮಾಚಲ ಪ್ರದೇಶದಲ್ಲಿ ನೆಲೆಗೊಂಡಿರುವ ಸ್ಪಿಟಿ ಕಣಿವೆಯು ಸಮುದ್ರ ಮಟ್ಟದಿಂದ 12,500 ಅಡಿ ಎತ್ತರದಲ್ಲಿದೆ. ವರ್ಷದಲ್ಲಿ ಕೇವಲ 250 ದಿನಗಳು ಮಾತ್ರ ಇಲ್ಲಿ ಸೂರ್ಯನ ಬೆಳಕನ್ನು ನೋಡಬಹುದು. ಇದು ದೇಶದ ಅತ್ಯಂತ ತಂಪಾದ ಸ್ಥಳಗಳಲ್ಲಿ ಒಂದಾಗಿದೆ. ದಟ್ಟವಾಗಿ ಬೀಳುವ ಹಿಮದ ಕಾರಣದಿಂದಾಗಿ ವರ್ಷದಲ್ಲಿ ಸುಮಾರು 6 ತಿಂಗಳ ಕಾಲ ದೇಶದ ಉಳಿದ ಭಾಗಗಳ ಜೊತೆ ಸ್ಪಿಟಿ ತನ್ನ ಸಂಪರ್ಕ ಕಳೆದುಕೊಳ್ಳುತ್ತದೆ. ಬೇಸಿಗೆಯ ತಿಂಗಳುಗಳು ಮಾತ್ರ ಸ್ಪಿಟಿಯನ್ನು ಮೋಟಾರುಮಾರ್ಗದ ಮೂಲಕ ಹೋಗಿ ನೇರವಾಗಿ ಪ್ರವೇಶಿಸಬಹುದು. ಸ್ಪಿಟಿ ವ್ಯಾಲಿ ಶಾಂತತೆ ಬಯಸುವವರಿಗೆ, ಸಾಹಸಿ ಪ್ರಿಯರಿಗೆ ಒಂದು ಭವ್ಯವಾದ ಸ್ಥಳವಾಗಿದೆ.
ವಿಶೇಷವಾಗಿ ನೀವು ಅಸ್ತಮಾ ಹೊಂದಿದ್ದರೆ ನಿಮ್ಮ ದೇಹ ಒಗ್ಗಿಕೊಳ್ಳದ ಎತ್ತರದ ಸ್ಥಳದಲ್ಲಿ ಈ ಸುಂದರವಾದ ತಾಣವಿದೆ. ಗಾಳಿಯಲ್ಲಿ ಆಮ್ಲಜನಕದ ಅಂಶವು ವೇಗವಾಗಿ ಕಡಿಮೆಯಾಗುವುದರಿಂದ, ಅನೇಕ ಜನರು ಉಸಿರಾಟದ ತೊಂದರೆಗಳನ್ನು ಅನುಭವಿಸುತ್ತಾರೆ. ಆದ್ದರಿಂದ ಈ ಸಮಸ್ಯೆಗಳನ್ನು ಹೊಂದಿರುವ ಯಾರಾದರೂ ಮನಾಲಿಯಿಂದ ದೂರ ಪ್ರಯಾಣ ಮಾಡುವುದು ಸೂಕ್ತವಲ್ಲ.

ಅಮರನಾಥ ಯಾತ್ರೆಯ ಪ್ರಾರಂಭದ ಸ್ಥಳ ‘ಪಹಲ್ಗಮ್’
"ಕುರುಬರ ಕಣಿವೆ" ಎಂದೂ ಕರೆಯಲ್ಪಡುವ, ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿರುವ ಪಹಲ್ಗಾಮ್ ಒಂದು ಸುಂದರವಾದ ಗಿರಿಧಾಮ ಮತ್ತು ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ. ಪಹಲ್ಗಾಮ್ ಅಮರನಾಥ ಯಾತ್ರೆಯ ಪ್ರಾರಂಭದ ಸ್ಥಳವಾಗಿ ಜನಪ್ರಿಯವಾಗಿದೆ. ಹೆಚ್ಚಿನ ಬೇಡಿಕೆಯಲ್ಲಿರುವ ಈ ಪ್ರವಾಸಿ ತಾಣ ಎಷ್ಟೇ ಸುಂದರವಾಗಿದ್ದರೂ, ಅಸ್ತಮಾ ರೋಗಿಗಳಿಗೆ ಈ ಎತ್ತರದ ಪ್ರದೇಶಕ್ಕೆ ಹೊಂದಿಕೊಳ್ಳಲು ಕಷ್ಟವಾಗುತ್ತದೆ. ಪ್ರಾರಂಭದ ಸ್ಥಳವನ್ನು ತಲುಪಲು ಸ್ವಲ್ಪ ನಡೆಯಬೇಕಾಗುತ್ತದೆ. ಅಂದರೆ 8,000 ಅಡಿ ಎತ್ತರದಲ್ಲಿರುವ ಮೊದಲ ಹಂತಕ್ಕೆ ಏರಬಹುದು.
ಆದರೆ 12,000 ಅಡಿ ಎತ್ತರವಿರುವ ಪಹಲ್ಗಮ್ ಏರುವುದು ನಾವಂದುಕೊಂಡಷ್ಟು ಸುಲಭವಲ್ಲ. ಕಾಶ್ಮೀರದ ಈ ಪ್ರಸಿದ್ಧ ಪ್ರವಾಸಿ ಸ್ಥಳವು ತನ್ನ ಸೊಂಪಾದ ಹುಲ್ಲುಗಾವಲುಗಳು, ಹಸಿರು ಕಾಡುಗಳು, ಆಕಾಶವನ್ನು ಚುಂಬಿಸುವ ಪರ್ವತಗಳು, ಸೇಬು ತೋಟಗಳು ಮತ್ತು ಅತ್ಯಂತ ಶಾಂತಿಯುತ ಪರಿಸರದಿಂದ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ.

ಜನಮೆಚ್ಚಿನ ಪ್ರವಾಸಿ ತಾಣ ‘ಲಡಾಖ್’
ಲಡಾಖ್, ಭಾರತದಲ್ಲಿ ಹೊಸದಾಗಿ ರಚಿಸಲಾದ ಕೇಂದ್ರಾಡಳಿತ ಪ್ರದೇಶವಾಗಿದೆ (ಹಿಂದೆ ಜಮ್ಮು ಮತ್ತು ಕಾಶ್ಮೀರದ ಭಾಗವಾಗಿತ್ತು). ಇಲ್ಲಿ ಪರ್ವತಗಳು, ಹಿಮ, ಆಲ್ಪೈನ್ ಹುಲ್ಲುಗಾವಲುಗಳು ಮತ್ತು ಸರೋವರಗಳನ್ನು ನೋಡುವುದು ನಿಜವಾಗಿಯೂ ಮೈಯೆಲ್ಲಾ ರೋಮಾಂಚನಗೊಳ್ಳುತ್ತದೆ. ಲಡಾಖ್ ಪ್ರಕೃತಿ ಪ್ರಿಯರಿಗೆ ಮತ್ತು ಸಾಹಸಿಗಳಿಗೆ ಹೇಳಿ ಮಾಡಿಸಿದ ಸ್ಥಳ. ಲಡಾಕ್ ಕೂಡ ಜನಮೆಚ್ಚಿನ ಪ್ರವಾಸಿ ತಾಣವಾಗಿದ್ದು, ಕಣಿವೆಗಳು, ಪರ್ವತಗಳು, ಅಂಕುಡೊಂಕಾದ ರಸ್ತೆಗಳು ಮತ್ತು ಅಭಿವೃದ್ಧಿ ಹೊಂದುತ್ತಿರುವ ಸಾಂಸ್ಕೃತಿಕ ಜೀವನದಿಂದ ಈ ಪ್ರದೇಶದ ಮತ್ತಷ್ಟು ಸುಂದರವಾಗಿ ಕಂಗೊಳಿಸುತ್ತದೆ.
ಆದರೆ ಲಡಾಖ್‌ನ ರಸ್ತೆಗಳು ಧೂಳಿನಿಂದಾಗಿ ಅಸ್ತಮಾ ರೋಗಿಗಳಿಗೆ ಸಮಸ್ಯೆಯಾಗಬಹುದು. ಆದ್ದರಿಂದ ಅಸ್ತಮಾ ರೋಗಿಗಳೂ ಸಹ ಶೀತದಲ್ಲಿ ಇಂತಹ ಎತ್ತರದ ಪ್ರದೇಶಕ್ಕೆ ಏರುವುದನ್ನು ತಪ್ಪಿಸಬೇಕು. ಕ್ಲೈಂಬಿಂಗ್ ನಂತಹ ಚಟುವಟಿಕೆಗಳು ಆರೋಗ್ಯವನ್ನು ಮತ್ತಷ್ಟು ಹದಗೆಡಿಸಬಹುದು. ಏಕೆಂದರೆ ಶೀತದ ವಾತವರಣವು ಅಸ್ತಮಾ ದಾಳಿ ಮಾಡಲು ಸುಲಭ ಮಾಡಿಕೊಟ್ಟಂತಾಗುತ್ತದೆ.

'ಬೆಟ್ಟಗಳ ರಾಣಿ' ಡಾರ್ಜಿಲಿಂಗ್
ಪಚ್ಚೆ ಹಸಿರು ಚಹಾದ ತೋಟಗಳಿಂದ ಹೊದಿಕೆಯಾಗಿರುವ ಡಾರ್ಜಿಲಿಂಗ್ ಭಾರತದ ಪಶ್ಚಿಮ ಬಂಗಾಳದ ಒಂದು ಸುಂದರವಾದ ಪಟ್ಟಣವಾಗಿದೆ. 'ಬೆಟ್ಟಗಳ ರಾಣಿ' ಎಂದೂ ಕರೆಯಲ್ಪಡುವ ಡಾರ್ಜಿಲಿಂಗ್'ನಿಂದ ಪ್ರಪಂಚದ ಮೂರನೇ ಅತಿ ಎತ್ತರದ ಶಿಖರವಾದ ಕಾಂಚನಗಂಗಾ (ಕಾಂಚನಜುಂಗಾ ಎಂದು ಉಚ್ಚರಿಸಲಾಗುತ್ತದೆ ) ಇಲ್ಲಿಂದ ಗೋಚರಿಸುತ್ತದೆ.
ನೀವು ಶಿಖರದ ವಿಹಂಗಮ ನೋಟವನ್ನು ಆನಂದಿಸಬಹುದು. ಈ ಸುಂದರವಾದ ಪಟ್ಟಣದಲ್ಲಿರುವ ಎತ್ತರದ ಪ್ರದೇಶಗಳು ಆಮ್ಲಜನಕದ ಮಟ್ಟದಲ್ಲಿ ಇಳಿಕೆಗೆ ಕಾರಣವಾಗುತ್ತವೆ. ನೀವು ಪರ್ವತಗಳನ್ನು ಏರುತ್ತಿದ್ದಂತೆ, ಗಾಳಿಯು ತೆಳುವಾಗುತ್ತದೆ. ಆಗ ಉಸಿರಾಡಲು ಕಷ್ಟವಾಗುತ್ತದೆ. ಅಸ್ತಮಾದಂತಹ ಉಸಿರಾಟದ ಸಮಸ್ಯೆ ಹೊಂದಿರುವ ರೋಗಿಗಳು ಕಾಂಚನಗಂಗಾ ಬೇಸ್ ಕ್ಯಾಂಪ್ ಟ್ರೆಕ್ ಗೆ ಹೋಗುವ ಮುನ್ನ ವೈದ್ಯರ ಸಲಹೆ ಪಡೆಯಬೇಕು.

ಪ್ರವಾಸಿಗರು ಹೆಚ್ಚು ಪ್ರೀತಿಸುವ ತಾಣ ‘ಸಿಕ್ಕಿಂ’
ಈಶಾನ್ಯ ಪ್ರದೇಶದಲ್ಲಿ ನೆಲೆಗೊಂಡಿರುವ ಸಿಕ್ಕಿಂ ಭಾರತದ ಅತ್ಯಂತ ಚಿಕ್ಕ ರಾಜ್ಯವಾಗಿದೆ. ಸಿಕ್ಕಿಂ ನಿಜವಾಗಿಯೂ ಜನರು ಹೆಚ್ಚು ಪ್ರೀತಿಸುವ ತಾಣವಾಗಿದೆ. ಹೊರಾಂಗಣವನ್ನು ಇಷ್ಟಪಡುವ ಪ್ರವಾಸಿಗರು ಈ ಚಿಕ್ಕ ರಾಜ್ಯಕ್ಕೆ, ಇದರ ಅದ್ಭುತವಾದ ನೈಸರ್ಗಿಕ ಸೌಂದರ್ಯಕ್ಕೆ ಮನಸೋಲುತ್ತಾರೆ. ನಿಮಗೆ ತೀವ್ರವಾದ ಅಸ್ತಮಾ ಇದ್ದರೆ ಉತ್ತರ ಸಿಕ್ಕಿಂನಿಂದ ದೂರವಿರುವುದು ಒಳ್ಳೆಯದು. ಇದು ಭಾರತದಲ್ಲಿ ಪಟ್ಟಣಗಳಿಂದ ಅತ್ಯಂತ ದೂರವಿರುವ ಪ್ರದೇಶಗಳಲ್ಲಿ ಒಂದಾಗಿದೆ.
ಒಂದು ವೇಳೆ ವೈದ್ಯಕೀಯ ಸಮಸ್ಯೆ ಉದ್ಭವಿಸಿದರೆ, ತಕ್ಷಣ ತುರ್ತು ಸೇವೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ನೀವು ಹೈಕಿಂಗ್ ಅಥವಾ ಸ್ಕೂಬಾ ಡೈವಿಂಗ್‌ನಂತಹ ನಿರ್ದಿಷ್ಟ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಬಯಸಿದರೆ ಎಚ್ಚರಿಕೆಯಿಂದ ಇರಬೇಕು. ಸಿಕ್ಕಿಂಗೆ ಬಂದರೆ ಭೇಟಿ ನೀಡಲು ಅನೇಕ ಆಕರ್ಷಣೆಗಳಿವೆ. ವಿಶ್ವದ ಮೂರನೇ ಅತಿ ಎತ್ತರದ ಶಿಖರ ಕಾಂಚನಜುಂಗಾ ನಿಮಗೆ ಇಲ್ಲಿಂದ ಎಲ್ಲಿಂದಲಾದರೂ ಗೋಚರಿಸುತ್ತದೆ.


Click it and Unblock the Notifications


















