Search
  • Follow NativePlanet
Share
ಮುಖಪುಟ » ಸ್ಥಳಗಳು » ಪಹಲ್ಗಾಂ » ಹವಾಮಾನ

ಪಹಲ್ಗಾಂ ಹವಾಮಾನ

ಪಹಲ್ಗಾಂನಲ್ಲಿ ಬೇಸಿಗಯಲ್ಲಿ ಅತ್ಯುತ್ತಮವಾದ ಹವಾಮಾನವಿರುತ್ತದೆ. ಹಾಗಾಗಿ ಇದು ಇಲ್ಲಿಗೆ ಭೇಟಿಕೊಡಲು ಅತ್ಯುತ್ತಮವಾದ ಸಮಯವಾಗಿರುತ್ತದೆ. ಚಳಿಗಾಲದಲ್ಲಿ ಇಲ್ಲಿನ ಇಡೀ ಪ್ರಾಂತ್ಯವೆ ಹಿಮದಲ್ಲಿ ಮುಚ್ಚಿ ಹೋಗುತ್ತದೆ. ಇದು ಸಹ ಪ್ರವಾಸಿಗರನ್ನು ತನ್ನತ್ತ ಆಕರ್ಷಿಸುತ್ತದೆ.  ಹಿಮದಿಂದ ಕೂಡಿದ ಇಲ್ಲಿನ ಸೌಂದರ್ಯವನ್ನು ನೋಡಿಯೇ ಸವಿಯಬೇಕು.

ಬೇಸಿಗೆಗಾಲ

(ಮಾರ್ಚ್ ನಿಂದ ಜೂನ್): ಪಹಲ್ಗಾಂನಲ್ಲಿ ಬೇಸಿಗೆಯು ಮಾರ್ಚ್ ನಿಂದ ಜೂನ್‍ವರೆಗೆ ಇರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಇಲ್ಲಿನ ಸುತ್ತ ಮುತ್ತಲ ಪ್ರದೇಶದ ಸೌಂದರ್ಯವನ್ನು ಸವಿಯಬಹುದು. ಈ ಕಾಲದಲ್ಲಿ ಇಲ್ಲಿನ ಉಷ್ಣಾಂಶವು 12° ಯಿಂದ 22° ಸೆಲ್ಶಿಯಸ್ ಇರುತ್ತದೆ. ಅಲ್ಲದೆ ಈ ಸಮಯದಲ್ಲಿ ಇಲ್ಲಿ ಆಲಿಕಲ್ಲಿನ ಮಳೆಯಾಗುತ್ತದೆ.

ಮಳೆಗಾಲ

(ಜುಲೈನಿಂದ ಅಕ್ಟೋಬರ್): ಮಳೆಗಾಲವು ಇಲ್ಲಿ ಜುಲೈನಿಂದ ಅಕ್ಟೋಬರ್ ವರೆಗೆ ಇರುತ್ತದೆ. ಈ ಸಮಯದಲ್ಲಿ ಪಹಲ್ಗಾಂನಲ್ಲಿ ಆರ್ದ್ರತೆಯು ಅತ್ಯಧಿಕವಾಗಿರುತ್ತದೆ. ಹಾಗಾಗಿ ಇಲ್ಲಿಗೆ ಭೇಟಿ ನೀಡಲು ಇದು ಸೂಕ್ತ ಸಮಯವಲ್ಲ.

ಚಳಿಗಾಲ

(ನವೆಂಬರ್ ನಿಂದ ಫೆಬ್ರವರಿ): ಈ ಕಾಲದಲ್ಲಿ ಇಲ್ಲಿನ ಇಡೀ ಪ್ರಾಂತ್ಯವೆ ಹಿಮದಿಂದ ಆವೃತವಾಗಿ ಬಿಡುತ್ತದೆ. ಅಲ್ಲದೆ ಇಲ್ಲಿನ ಉಷ್ಣಾಂಶವು ಶೂನ್ಯಕ್ಕಿಂತ ಕಡಿಮೆಯಿರುತ್ತದೆ. ಪ್ರವಾಸಿಗರು ಈ ಸಮಯದಲ್ಲಿ ಹಿಮಚ್ಛಾಧಿತವಾದ ಪರ್ವತಗಳು ಮತ್ತು ಭೂಭಾಗವನ್ನು ನೋಡಿ ಆನಂದಿಸಬಹುದು.