• Follow NativePlanet
Share
» »ಗ್ರಹಿಕೆಗೂ ನಿಲುಕದ ಭಾರತದ ಅಗ್ರ 5 ಪರ್ವತ ಶ್ರೇಣಿಗಳು

ಗ್ರಹಿಕೆಗೂ ನಿಲುಕದ ಭಾರತದ ಅಗ್ರ 5 ಪರ್ವತ ಶ್ರೇಣಿಗಳು

Posted By: Manjula Balaraj Tantry

ಪ್ರಕೃತಿಯ ಒಂದು ಭಾಗವಾಗಿರುವ ಈ ಪರ್ವತ ಶ್ರೇಣಿಗಳು ಪ್ರಕೃತಿಯ ಬೆಳವಣಿಗೆ ಮತ್ತು ವಿಶ್ವದ ಅನೇಕ ಪ್ರಬೇಧಗಳ ವಿಕಾಸಕ್ಕೆ ಸಮನಾಗಿ ಕೊಡುಗೆ ನೀಡುತ್ತವೆ. ಇವು ಯಾವಾಗಲೂ ದೇಶದಲ್ಲಿ ಹೇರಳವಾಗಿರುವ ಜೀವವೈವಿಧ್ಯದ ಹಿಂದೆ ಇರುತ್ತವೆ. ಸಾವಿರಾರು ವರ್ಷಗಳಿಂದ ಭದ್ರವಾಗಿ ನೆಲೆ ನಿಂತಿರುವ ಇಂತಹ ಅತೀ ದೊಡ್ಡ ಹಾಗೂ ಅತ್ಯಂತ ಎತ್ತರವಾದ ಪರ್ವತ ಶ್ರೇಣಿಗಳಿಗೆ ಭೇಟಿ ಕೊಡುವ ಬಗ್ಗೆ ಯೋಚಿಸುತ್ತಿರುವಿರಾ?

ಇಲ್ಲವಾದಲ್ಲಿ, ಇಲ್ಲಿ ನಿಮಗೆ ಭಾರತದ ಇಂತಹ ಬೃಹತ್ ಪರ್ವತ ಶೇಣಿಗಳ ಬಗ್ಗೆ ತಿಳಿಯುವ ಎಲ್ಲಾ ಅವಕಾಶವಿದೆ. ಇದು ಭಾರತದ ಕೆಲವು ಅಭಿವೃದ್ದಿ ಹೊಂದಿದ ಸಸ್ಯವರ್ಗ ಮತ್ತು ರಾಜ್ಯದ ಅಭಿವೃದ್ದಿಯನ್ನು ಪ್ರತಿಬಿಂಬಿಸುತ್ತದೆ. ಈ ಎಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಪರ್ವತ ಶ್ರೇಣಿಗಳಿರುವ ಸ್ಥಳಕ್ಕೆ ಭೇಟಿ ಕೊಡುವ ಬಗ್ಗೆ ಪ್ರವಾಸವನ್ನು ಯೋಜಿಸಿ

1) ಹಿಮಾಲಯ ಪರ್ವತ ಶ್ರೇಣಿ

1) ಹಿಮಾಲಯ ಪರ್ವತ ಶ್ರೇಣಿ

ಹಿಮಾಲಯವು ನೇಪಾಳ, ಭಾರತ, ಭೂತಾನ್, ಚೀನಾ ಮತ್ತು ಪಾಕಿಸ್ತಾನದ ದೇಶಗಳಾದ್ಯಂತ ಏಷ್ಯಾದಲ್ಲಿ ಗಡಿರೇಖೆಯ ವ್ಯಾಪ್ತಿಯಲ್ಲಿ ಹರಡಿದೆ. ಉಪವಿಭಾಗದ ಭೂ ವೈಜ್ಞಾನಿಕ ಪ್ರಕ್ರಿಯೆಯ ಪರಿಣಾಮದಡಿಯಲ್ಲಿ ಸಂಚಿತ ಮತ್ತು ಮೆಟಾಮಾರ್ಫಿಕ್ ಶಿಲೆಗಳ ಬೆಳವಣಿಗೆಯಿಂದ ಹಿಮಾಲಯ ವ್ಯಾಪ್ತಿಯು ರೂಪುಗೊಂಡಿದೆ ಎನ್ನಲಾಗುತ್ತದೆ.

ಮೌಂಟ್ ಎವರೆಸ್ಟ್ ನಂತಹ ವಿಶ್ವದ ಹಲವು ಉನ್ನತ ಶಿಖರಗಳು ಮಾತ್ರವಲ್ಲದೆ, ಹಿಮಾಲಯ ಪರ್ವತ ಶ್ರೇಣಿಯು ಹಲವಾರು ಹಿಮ ನದಿಗಳು, ಮತ್ತು ಹಾದಿಗಳು ಮತ್ತು ಬೆಟ್ಟಗಳಿಗೆ ತವರಾಗಿದೆ ಮತ್ತು ಗಂಗಾ ಮತ್ತು ಬ್ರಹ್ಮಪುತ್ರ ಮುಂತಾದ ವಿಶ್ವದ ಪ್ರಮುಖ ನದಿಗಳ ಮೂಲವಾಗಿದೆ.

ಹಿಮಾಲಯದ ಶ್ರೇಣಿಯ ಸೌಂದರ್ಯವು ಅದರ ಪ್ರಶಾಂತ ವಾತಾವರಣ ಮತ್ತು ಶಾಂತಿಯುತ ಶಿಖರಗಳಲ್ಲಿದೆ. ಆದುದರಿಂದ ಇದನ್ನು ದೇವರ ವಾಸಸ್ಥಾನವೆಂದು ಕೂಡ ಕರೆಯಲಾಗುತ್ತದೆ. ಇದರಿಂದಾಗಿ ಹಿಮಾಲಯವು ಬೌದ್ದರ ಮತ್ತು ಹಿಂದೂ ಧರ್ಮದವರಿಗೆ ಪವಿತ್ರ ಸ್ಥಾನವೆಂದು ಪರಿಗಣಿಸಲಾಗುತ್ತದೆ. ಹಿಮಾಲಯ ಶ್ರೇಣಿಯ ಗುಪ್ತ ಮೂಲೆಗಳನ್ನು ಅನ್ವೇಷಿಸುವ ಮತ್ತು ಅದರ ಮೂಲ ಸೌಂದರ್ಯವನ್ನು ಕಂಡು ಹಿಡಿದರೆ ಹೇಗಿರುತ್ತದೆ.?

2) ಕಾರಕೋರಂ ರೇಂಜ್

2) ಕಾರಕೋರಂ ರೇಂಜ್

ಕಾರಕೋರಂ ಪರ್ವತ ಶ್ರೇಣಿಯು ಭಾರತದ ಅತ್ಯಂತ ದೊಡ್ಡ ಪರ್ವತ ಶ್ರೇಣಿಗಳಲ್ಲೊಂದಾಗಿದ್ದು ಇದು ಪಾಕಿಸ್ಥಾನ ಮತ್ತು ಚೈನಾ ದೇಶಗಳ ಗಡಿಗಳಲ್ಲಿ ಹರಡಿಕೊಂಡಿದೆ. ಈ ಪರ್ವತಶ್ರೇಣಿಯು ಅನೇಕ ಇನ್ನಿತರ ಶಿಖರಗಳ ನೆಲೆಯಾಗಿದೆ ಮತ್ತು ಮೌಂಟ್ ಎವರೆಸ್ಟ್ ನಂತರದ ಎರಡನೆ ಅತ್ಯುನ್ನತ ಶಿಖರ ಮತ್ತು ದೊಡ್ಡ ಹಿಮನದಿಯಾದ ಕೆ2 ಅನ್ನು ಒಳಗೊಂಡಿದೆ. ನೀವು ತಂಪಾದ ವಾತಾವರಣ ಮತ್ತು ಭವ್ಯವಾದ ಸೌಂದರ್ಯವನ್ನು ಆಸ್ವಾದಿಸಲು ಬಯಸಿದರೆ ಕಾರಕೋರಂ ಇಷ್ಟ ಪಡುವ ಸ್ಥಳವಾಗಿದೆ.

ಈ ಪರ್ವತ ಶ್ರೇಣಿಯು ಅನೇಕ ಹಿಮ ನದಿಗಳಿಗೆ ದಾರಿ ಮಾಡಿಕೊಡುವುದಲ್ಲದೆ ಇದು ಜಗತ್ತಿನ ಅತ್ಯಂತ ಹೆಚ್ಚು ಹಿಮನದಿಗಳನ್ನು ಒಳಗೊಂಡ ಭಾಗವೆನಿಸಿದೆ. ಇಲ್ಲಿಯ ಬಿಳಿ ಹಿಮದ ಅಚ್ಚರಿಯ ಮೋಡಿಯನ್ನು ಮತ್ತು ಎತ್ತರದ ಶಿಖರಗಳು ಮತ್ತು ಎಲ್ಲಾ ಕಡೆ ಹರಡಿರುವ ಹರಿಯುವ ಹಿಮನದಿಗಳ ಸೌಂದರ್ಯವನ್ನು ಸೆರೆಹಿಡಿದರೆ ಹೇಗಿರಬಹುದು?

3) ಪುರ್ವಾಂಚಾಲ್ ಪರ್ವತ ಶ್ರೇಣಿ

3) ಪುರ್ವಾಂಚಾಲ್ ಪರ್ವತ ಶ್ರೇಣಿ

ಭಾರತದ ಈಶಾನ್ಯ ಭಾಗದಲ್ಲಿ ಸುಂದರವಾಗಿ ಹರಡಿರುವ ಪೂರ್ವಾಂಚಲ್ ಪರ್ವತ ಶ್ರೇಣಿಯನ್ನು ಹಿಮಾಲಯ ಪರ್ವತದ ಉಪ -ಪರ್ವತ ಶ್ರೇಣಿಗಳು ಎಂದು ಪರಿಗಣಿಸಲಾಗುತ್ತದೆ. ಮೇಘಾಲಯದಿಂದ ಅರುಣಾಚಲ ಪ್ರದೇಶದವರೆಗೆ ಮತ್ತು ನಾಗಾಲ್ಯಾಂಡ್ ನಿಂದ ಮಿಜೋರಾಂ ವರೆಗೆ ಇದು ಭಾರತದ ಈಶಾನ್ಯ ಮತ್ತು ಪೂರ್ವ ಭಾಗಗಳಲ್ಲಿ ಹರಡಿಕೊಂಡಿದೆ. ಪೂರ್ವಾಂಚಲ್ ಶ್ರೇಣಿಯು ಸಾಮಾನ್ಯವಾಗಿ ಭೂವೈಜ್ಞಾನಿಕವಾಗಿ ರೂಪುಗೊಂಡಿದ್ದು ಸಂಚಿತ ಶಿಲೆಗಳು , ಶ್ರೀಮಂತ ಕಾಡುಗಳು ಮತ್ತು ಸಮೃದ್ದ ಬಯಲುಗಳನ್ನು ಹೊಂದಿದೆ.

ಇದು ಪೂರ್ವ ಭಾರತದ ಒಂದು ಶ್ರೀಮಂತ ಭಾಗವಾಗಿದ್ದು ಈ ಪರ್ವತ ಶ್ರೇಣಿಯು ಅನೇಕ ಜಾತಿಯ ಪ್ರಾಣಿಗಳಿಗೆ ನೆಲೆಯಾಗಿದೆ. ಈ ಪೂರ್ವಾಂಚಲ ಶ್ರೇಣಿಗಳಿಗೆ ಪ್ರಯಾಣ ಮಾಡುವುದು ಮತ್ತು ಪ್ರಕೃತಿ ಸೌಂದರ್ಯದ ಅದ್ಬುತಗಳನ್ನು ಸವಿಯುವುದು ಹೇಗಿರುತ್ತದೆ?

4) ಪಶ್ಚಿಮ ಘಟ್ಟಗಳು

4) ಪಶ್ಚಿಮ ಘಟ್ಟಗಳು

ಇದು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳಲ್ಲೊಂದಾಗಿದ್ದು ಇದು ಅನೇಕ ಉದ್ಯಾನವನಗಳು, ವನ್ಯಜೀವಿಧಾಮಗಳು ಮತ್ತು ಅಭಯಾರಣ್ಯಗಳನ್ನು ಒಳಗೊಂಡಿದೆ. ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟಗಳು ಎಂದೂ ಕರೆಯಲಾಗುತ್ತದೆ ಮತ್ತು ಇದು ಜೀವವೈವಿಧ್ಯತೆಗಳನ್ನೊಳಗೊಂಡ ವಿಶ್ವದ ಪ್ರಮುಖ ಎಂಟು ತಾಣಗಳಲ್ಲೊಂದಾಗಿದೆ. ಗುಜರಾತಿನ ಅತೀ ದಕ್ಷಿಣ ಭಾಗದಿಂದ ಪ್ರಾರಂಭವಾಗುತ್ತದೆ ಮತ್ತು ಮಹಾರಾಷ್ಟ್ರ ಗೋವಾ ಕೇರಳ ಮತ್ತು ಕರ್ನಾಟಕಗಳ ಮೂಲಕ ಹಾದು ಹೋಗುತ್ತದೆ. ಇದರ 1600 ಕಿ.ಮೀ ದೂರದ ಪ್ರಯಾಣವು ತಮಿಳುನಾಡಿನ ದಕ್ಷಿಣಭಾಗದ ಸ್ವಾಮಿತೊಪ್ಪೆಯಲ್ಲಿ ಕೊನೆಯಾಗುತ್ತದೆ.

ಪಶ್ಚಿಮ ಘಟ್ಟಗಳ ದಟ್ಟವಾದ ಕಾಡುಗಳು ಮತ್ತು ಕಣಿವೆಗಳು ಶ್ರೀಮಂತವಾದ ಸಸ್ಯಗಳು ಮತ್ತು ಪ್ರಾಣಿ ಜೀವ ವೈವಿಧ್ಯಗಳನ್ನು ಹೊಂದಿದ್ದು ಸಾವಿರಾರು ಜಾತಿಯ ಸಸ್ಯಗಳು ಮತ್ತು ಪ್ರಾಣಿಗಳಿಗೆ ನೆಲೆಯಾಗಿದೆ. ಇಲ್ಲಿಯ ಪ್ರಕೃತಿಯಲ್ಲಿ ಅನೇಕ ಸಂಶೋಧನೆಗೆ ಒಳಗಾಗದ ಮತ್ತು ಅಳಿವಂಚಿನಲ್ಲಿರುವ ತಳಿಗಳಿಗೆ ನೆಲೆಯಾಗಿದೆ.

ಭಾರತದ ಪಶ್ಚಿಮ ಕರಾವಳಿಗೆ ಸಮಾನಾಂತರವಾಗಿ ಇರುವ ಪಶ್ಚಿಮ ಘಟ್ಟಗಳು ತಮ್ಮ ಹಾಳುಕೆಡವದ ಸೌಂದರ್ಯತೆ ಮತ್ತು ಇನ್ನೂ ಪತ್ತೆಯಾಗದ ಕೆಲವು ತಳಿಗಳಿಂದಾಗಿ ಪ್ರಮುಖ ಪ್ರವಾಸಿ ಕೇಂದ್ರವಾಗಿ ಕೆಲವು ದಶಕಗಳಿಂದ ಮಾರ್ಪಟ್ಟಿದೆ.

5) ಅರಾವಳಿ ಶ್ರೇಣಿ

5) ಅರಾವಳಿ ಶ್ರೇಣಿ

PC- Nataraja

ಅರಾವಳಿ ಶ್ರೇಣಿಯು ಭಾರತದ ಅತೀ ಶ್ರೀಮಂತವಾದ ಪರ್ವತ ಶ್ರೇಣಿಗಳಲ್ಲೊಂದಾಗಿದೆ. ಇದು ಅನೇಕ ಜಾತಿಯ ಸಸ್ಯಗಳನ್ನು ಹೊಂದಿದ್ದು ಇದು ಸುಮಾರು 700 ಕಿ.ಮೀ ಪ್ರದೇಶಗಳಲ್ಲಿ ಹರಡಿದೆ. ಇದು ಉತ್ತರ ಭಾರತದ ದೆಹಲಿಯಿಂದ ಪ್ರಾರಂಭವಾಗಿ ಪಶ್ಚಿಮ ಭಾರತದ ಗುಜರಾತ್ ನಲ್ಲಿ ಕೊನೆಯಾಗುತ್ತದೆ. ಅರಾವಳಿ ಪರ್ವತ ಶ್ರೇಣಿಯು ಭಾರತದ ಒಂದು ಅತ್ಯಂತ ಹಳೆಯದಾದ ಶ್ರೇಣಿಯಾಗಿದ್ದು, ಇದು ಭಾರತದ ಫಲಕವು ಯುರೇಷಿಯಾದ ಫಲಕದೊಂದಿಗೆ ಪ್ರತ್ಯೇಕ ಗೊಂಡ ಕಾಲದ ಇತಿಹಾಸವನ್ನು ಹೊಂದಿದೆ.

ಅರಾವಳಿ ಶ್ರೇಣಿಯು ಅನೇಕ ಗಣಿಗಾರಿಕೆಯ ತಾಣಗಳಿಗೆ ನೆಲೆಯಾಗಿದೆ ಮತ್ತು ಇದನ್ನುಒಂದು ಅತೀ ಶ್ರೀಮಂತವಾದ ಮತ್ತು ಎತ್ತರದ ಶಿಖರಗಳ ಶ್ರೇಣಿ ಎಂದು ನಂಬಲಾಗಿದೆ. ಈ ತಾಣವು ನೀರಿನ ಕ್ಯಾಸ್ಕೇಡ್ ಗಳು, ಆಳವಾದ ಕಣಿವೆಗಳು, ಮತ್ತು ದಟ್ಟವಾದ ಸಸ್ಯ ಸಂಪತ್ತನ್ನು ಹೊಂದಿದೆ. ಈ ಪರ್ವತ ಶ್ರೇಣಿಗಳ ಅಚ್ಚರಿಗಳು ಮತ್ತು ಪ್ರತೀ ಹೆಜ್ಜೆಗೂ ನೈಸರ್ಗಿಕ ಸೌಂದರ್ಯತೆಯಲ್ಲಿ ತುಂಬಿರುವ ಈ ಪ್ರದೇಶಗಳಲ್ಲಿ ಕಳೆದು ಹೋಗುವುದು ಹೇಗಿರಬಹುದು?

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ