ನಮಗೆಲ್ಲ ತಿಳಿದಿರುವಂತೆ ಭಾರತ ದೇಶವೂ ಕೂಡ ವಿಶ್ವ ಭೂಪಟದಲ್ಲಿ ತನ್ನದೆ ಆದ ಗಮನಾರ್ಹ ಸ್ಥಾನ ಪಡೆದಿರುವುದಲ್ಲದೆ, ಪ್ರವಾಸೋದ್ಯಮದ ದೃಷ್ಟಿಯಿಂದಲೂ ಸಹ ಅಂತಾರಾಷ್ಟ್ರೀಯ ಖ್ಯಾತಿ ಪಡೆದ ರಾಷ್ಟ್ರವಾಗಿದೆ. ನೇಪಾಲ, ಶ್ರೀಲಂಕಾಗಳಂತಹ ನೆರೆ ಹೊರೆಯ ರಾಷ್ಟ್ರಗಳಲ್ಲದೆ ಯುರೋಪ್, ಅಮೇರಿಕಾ, ಆಫ್ರಿಕಾಗಳಂತಹ ಖಂಡಗಳಿಂದಲೂ ಸಹ ಸಾಕಷ್ಟು ಜನ ಪ್ರವಾಸಿಗರು ಭಾರತದೆಡೆ ಆಕರ್ಷಿತರಾಗಿ ಬರುತ್ತಾರೆ.
ಹೌದು ನಮ್ಮ ದೇಶದ ಮಹಿಮೆಯೆ ಹಾಗೆ...ವಿವಿಧ ಸಂಸ್ಕೃತಿ ಸಂಪ್ರದಾಯಗಳು, ಸಾಕಷ್ಟು ಭಾಷೆಗಳು, ವೈವಿಧ್ಯಮಯ ನೃತ್ಯ ಕಲೆಗಳು, ಪ್ರಾಚೀನ ಶ್ರೀಮಂತಿಕೆ, ಅದ್ಭುತವಾದ ಸ್ಮಾರಕಗಳು, ಪುರಾತನ ಕಾಲದಲ್ಲೆ ಪ್ರವರ್ಧಮಾನದಲ್ಲಿದ್ದ ಶೈಕ್ಷಣಿಕ ವಿದ್ಯಾ ಕೇಂದ್ರಗಳು, ಅಷ್ಟೆ ಏಕೆ ಮೊಟ್ಟ ಮೊದಲ ನಾಗರೀಕತೆಯ ಹರಪ್ಪಾ ಮೊಹಂಜೋದಾರೊದಂತಹ ಸ್ಥಳಗಳು ಹೀಗೆ ವಿವಿಧ ಆಯಾಮಗಳಿದ್ದರೂ ಸಹ ವೈವಿಧ್ಯತೆಯಲ್ಲಿ ಏಕತೆ ಎಂಬಂತೆ, ಎಲ್ಲರೂ ಸೇರಿ ಒಟ್ಟಾಗಿ ನೆಲೆಸಿ ವಾಸಿಸುತ್ತಿರುವುದರಿಂದ ಭಾರತ ವಿಶೇಷವಾಗಿಯೂ, ಅನನ್ಯವಾಗಿಯೂ ಕಾಣುತ್ತದೆ.
ಭಾರತೀಯ ಪ್ರವಾಸೋದ್ಯಮದ ಇಲಾಖೆಯ ಪ್ರಕಾರ, ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ದೇಶೀಯ ಹಾಗೂ ವಿದೇಶಿ ಪ್ರವಾಸಿಗರ ಸಂಖ್ಯೆಯೆ ಭಾರತದ ಕುರಿತು ಪ್ರವಾಸಿಗರಲ್ಲಿ ಹೆಚ್ಚುತ್ತಿರುವ ಆಕರ್ಷಣೆಗೆ ಗುರುತರವಾದ ಸಾಕ್ಷಿಯಾಗಿದೆ ಎಂದು ಹೇಳಬಹುದು. ಹಾಗಾದರೆ 2012-13 ರ ಸಮಯದಲ್ಲಿ ಯಾವೇಲ್ಲ ರಾಜ್ಯಗಳು ಹೆಚ್ಚಾಗಿ ಪ್ರವಾಸಿಗರನ್ನು (ಕೇವಲ ದೇಶೀಯ ಪ್ರವಾಸಿಗರು) ತನ್ನತ್ತ ಸೆಳೆದಿವೆ ಎಂದು ತಿಳಿಯಬೇಕೇ? ಹಾಗಾದರೆ ಈ ಲೇಖನವನ್ನು ಓದಿ. ಈ ಲೇಖನವು ಮೊದಲ ಹತ್ತು ಅತ್ಯುತ್ತಮ ಪ್ರವಾಸಿ ರಾಜ್ಯಗಳ ಕುರಿತು ತಿಳಿಸುತ್ತದೆ.
ಕೃಪೆ : ಪ್ರವಾಸೋದ್ಯಮ ಇಲಾಖೆ, ಭಾರತ

ಮೊದಲ ಹತ್ತು ರಾಜ್ಯಗಳು:
ದೇಶೀಯ ಪ್ರವಾಸಿಗರು ಹೆಚ್ಚಾಗಿ ಭೇಟಿ ನೀಡಲ್ಪಟ್ಟ ಹತ್ತನೇಯ ಕ್ರಮಾಂಕದಲ್ಲಿರುವ ರಾಜ್ಯವೆಂದರೆ ಛತ್ತೀಸಗಡ್. ಹಿಂದಿನ ವರ್ಷದಲ್ಲಿ ಮೊದಲ ಹತ್ತು ಸ್ಥಳಗಳಲ್ಲಿಯೂ ಇರದ ಈ ರಾಜ್ಯದ ಪ್ರವಾಸೋದ್ಯಮವು 2013 ರಲ್ಲಿ 22.8% ಗಳಷ್ಟು ಬೆಳೆದು ಹತ್ತನೇಯ ಕ್ರಮಾಂಕ ಪಡೆದಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ ಒಂಭತ್ತನೇಯ ಕ್ರಮಾಂಕದಲ್ಲಿದೆ ಪಶ್ಚಿಮ ಬಂಗಾಳ. ಶೇಕಡ 25.5 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 8 ನೇಯ ಕ್ರಮಾಂಕದಲ್ಲಿದೆ ಗುಜರಾತ್. ಶೇಕಡ 27.4 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.
ಚಿತ್ರಕೃಪೆ : JJaimin

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 7 ನೇಯ ಕ್ರಮಾಂಕದಲ್ಲಿದೆ ರಾಜಸ್ಥಾನ. ಶೇಕಡ 30.3 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 6 ನೇಯ ಕ್ರಮಾಂಕದಲ್ಲಿದೆ ಮಧ್ಯ ಪ್ರದೇಶ. ಶೇಕಡ 63.1 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 5 ನೇಯ ಕ್ರಮಾಂಕದಲ್ಲಿದೆ ಮಹಾರಾಷ್ಟ್ರ. ಶೇಕಡ 82.7 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 4 ನೇಯ ಕ್ರಮಾಂಕದಲ್ಲಿದೆ ಕರ್ನಾಟಕ. ಶೇಕಡ 98 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 3 ನೇಯ ಕ್ರಮಾಂಕದಲ್ಲಿದೆ ಆಂಧ್ರ ಪ್ರದೇಶ (ಆದರೆ ಪ್ರಸ್ತುತ ಈ ರಾಜ್ಯವು ಇಬ್ಭಾಗಗೊಂಡಿದೆ). ಶೇಕಡ 152.1 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ 2 ನೇಯ ಕ್ರಮಾಂಕದಲ್ಲಿದೆ ಉತ್ತರ ಪ್ರದೇಶ. ಶೇಕಡ 226.5 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.

ಮೊದಲ ಹತ್ತು ರಾಜ್ಯಗಳು:
ಈ ಪಟ್ಟಿಯಲ್ಲಿ ಮೊದಲನೇಯ ಕ್ರಮಾಂಕದಲ್ಲಿದೆ ತಮಿಳುನಾಡು. ಶೇಕಡ 244.2 ರಷ್ಟು ಪ್ರವಾಸೋದ್ಯಮದಲ್ಲಿ ಬೆಳವಣಿಗೆಯನ್ನು ಕಂಡಿದೆ. ಇನ್ನು ಈ ರಾಜ್ಯದಲ್ಲಿರುವ ಪ್ರವಾಸಿ ಸ್ಥಳಗಳ ಕುರಿತು ತಿಳಿಯಬೇಕೆ? ಇಲ್ಲಿ ಕ್ಲಿಕ್ ಮಾಡಿ.


Click it and Unblock the Notifications


















