ಗುಹೆಗಳೆಂದರೆ ಅತ್ಯಂತ ಸುಂದರ ಹಾಗೂ ಕೂತುಹಾಲವಾದುದು. ಗುಹೆ ಎಂದರೆ ಸಾಮಾನ್ಯವಾಗಿ ಯುವ ಜನತೆಗೆ ಬಲು ಇಷ್ಟ. ಹಾಗಾದರೆ ಗುಹಾ ದೇವಾಲಯದಲ್ಲಿ ಪರಮಶಿವನು ಲಿಂಗ ಸ್ವರೂಪಿಯಾಗಿ ನೆಲೆಸಿದ್ದಾನೆ. ಆ ಮಾಹಿಮಾನ್ವೀತ ದೇವಾಲಯದ ಬಗ್ಗೆ ಪುರಾಣಗಳಲ್ಲಿ ಹಲವಾರು ಉಲ್ಲೇಖವಿದೆ.
ಉತ್ತರಾಖಂಡನಲ್ಲಿ ಒಂದು ಪ್ರದೇಶದಲ್ಲಿ ಅದ್ಭುತವಾದ ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಈ ಪ್ರದೇಶದಲ್ಲಿ ಹಲವಾರು ದೇವಾಲಯಗಳಿವೆ. ಅಲ್ಲಿರುವ ಪರ್ವತಗಳಲ್ಲಿ ವಿಚಿತ್ರವಾದ ಗುಹೆಗಳೂ ಕೂಡ ಇವೆ. ಇಲ್ಲಿನ ಅತ್ಯಂತ ಅದ್ಭುತವಾದ ಗುಹೆಯಲ್ಲಿನ ವಿಶೇಷವೆನೆಂದರೆ ಅದು ಪಾತಾಳ ಭುವನೇಶ್ವರ ದೇವಾಲಯ.
ಆ ಗುಹೆಯಲ್ಲಿ ಹಲವಾರು ದೇವತಾ ಮೂರ್ತಿಗಳಿವೆ. ಈ ದೇವಾಲಯವನ್ನು ಭುವನೇಶ್ವರ ದೇವಾಲಯವೆಂದು ಖ್ಯಾತಿಯನ್ನು ಪಡೆದಿದೆ.ಈ ಗುಹಾ ದೇವಾಲಯದಲ್ಲಿ ಇನ್ನೂ ಹಲವಾರು ಗುಹೆಗಳಿವೆ. ಈ ಗುಹೆಯ ಪ್ರವೇಶವು ಅತ್ಯಂತ ಕಠಿಣವಾಗಿದೆ.
ಪ್ರಸ್ತುತ ಲೇಖನದಲ್ಲಿ ಈ ಗುಹಾ ದೇವಾಲಯದಲ್ಲಿ ನೆಲೆಸಿರುವ ಪಾತಾಳ ಭುವನೇಶ್ವರ ಸ್ವಾಮಿಯ ಬಗ್ಗೆ ತಿಳಿಯೋಣ.

ಎಲ್ಲಿದೆ?
ಉತ್ತರಖಂಡ ರಾಜ್ಯದ ಪಿತೋರ್‍ಘರ್ ಜಿಲ್ಲೆಯ ಗಂಗೋಳಿಹಾಟ್ನಿ ಯಿಂದ ಸುಮಾರು 14 ಕಿ,ಮೀ ದೂರದಲ್ಲಿರುವ ಒಂದು ಸಣ್ಣದಾದ ಗುಹೆಯಲ್ಲಿದೆ.

ಪ್ರಪಂಚ
ಇಡೀ ಪ್ರಪಂಚದಲ್ಲಿ ಒಟ್ಟು 7 ಭೂಗರ್ಭ ಅದ್ಭುತಗಳಿವೆ. ಅವುಗಳಲ್ಲಿ ಈ ಪಾತಾಳ ಭುವನೇಶ್ವರ ಕೂಡ ಒಂದಾಗಿದೆ.

ದಟ್ಟವಾದ ಅಡವಿ
ಪಾತಾಳ ದೇವಾಲಯವು ಓಕ್ ಮತ್ತು ದೇವದಾರು ಮರಗಳ ದಟ್ಟವಾದ ಅಡವಿಗಳಲ್ಲಿ ಈ ಮಾಹಿಮಾನ್ವೀತ ದೇವಾಲಯವಿದೆ.

ದೇವಾಲಯದ ವಿವರ
ಈ ದೇವಾಲಯವು ಸುಮಾರು 160 ಮೀಟರ್ ಉದ್ದ ಹಾಗೂ 90 ಮೀಟರ್ ಅಳವನ್ನು ಹೊಂದಿದೆ.

ಲಿಂಗ
ಈ ಸುಂದರವಾದ ಪಾತಾಳ ಭುವನೇಶ್ವರ ದೇವಾಲಯದಲ್ಲಿ ಪರಮಶಿವನು ಲಿಂಗ ಸ್ವರೂಪಿಯಾಗಿ ಈ ಗುಹೆಯ ಒಳಗೆ ನೆಲೆಸಿದ್ದಾನೆ.

ದೇವತೆಗಳ ಮೂರ್ತಿ
ಈ ಗುಹಾ ದೇವಾಲಯದಲ್ಲಿ ಹಲವಾರು ದೇವತೆಗಳ ಮೂರ್ತಿಗಳನ್ನು ಕಾಣಬಹುದಾಗಿದೆ. ಇಲ್ಲಿನ ದೇವತೆಗಳ ರೂಪವನ್ನು ಯಾರೂ ಕೂಡ ಕೆತ್ತಿರುವುದಂತೂ ಅಲ್ಲ ಬದಲಾಗಿ ಸಹಜವಾಗಿ ಇರುವುದು ಎನ್ನುತ್ತಾರೆ.

ಸೂರ್ಯವಂಶ
ತ್ರೇತಾಯುಗಕ್ಕೆ ಸೇರಿದ ಸೂರ್ಯವಂಶ ರಾಜ ಋತು ಪರ್ಣನು ಈ ಗುಹಾ ದೇವಾಲಯವನ್ನು ಮೊಟ್ಟ ಮೊದಲ ಬಾರಿಗೆ ಕಂಡನಂತೆ. ಸ್ಕಾಂದ ಪುರಾಣದ ಮಾನಸ ಖಂಡದಲ್ಲಿ ಈ ಗುಹೆಯ ಬಗ್ಗೆ ಪ್ರಾಸ್ತಾವನೆ ಇದೆ.

ದ್ವಾಪರ ಯುಗ
ದ್ವಾಪರ ಯುಗದಲ್ಲಿ ಪಾಂಡವರು ಈ ಗುಹೆಯನ್ನು ಕಂಡರು ಎಂದು ಹಾಗೂ ಕಲಿಯುಗದಲ್ಲಿ ಆದಿ ಶಂಕರಾಚಾರ್ಯ ಕಂಡು ಹಿಡಿದರು ಎಂದು ಹೇಳಲಾಗುತ್ತದೆ.

ಸುರಂಗ
ಈ ಪಾತಾಳ ಭುವನೇಶ್ವರನ ದರ್ಶನ ಪಡೆಯಲು ಸುರಂಗ ಮಾರ್ಗದ ಮೂಲಕ ತೆರಳಬೇಕು. ನಮ್ಮ ಇಷ್ಟಾರ್ಥಗಳನ್ನು ಪಾತಾಳ ಭುವನೇಶ್ವರನು ನೇರವೇರಿಸುತ್ತಾನೆ. ಹಾಗೆಯೇ ಪಾತಾಳ ಭುವನೇಶ್ವರನು ಅತ್ಯಂತ ಶಕ್ತಿವಂತನು ಎಂದು ನಂಬಲಾಗಿದೆ.

ಇತರ ದೇವತಾ ಮೂರ್ತಿಗಳು
ಕೇದರನಾಥ ಮೂರ್ತಿ, ಗಣಪತಿ, ಸರ್ಪ, ಭುವನೇಶ್ವರಿ ಮೂರ್ತಿಗಳು ಇನ್ನೂ ಹಲವಾರು ದೇವತಾ ಮೂರ್ತಿಗಳಿವೆ.

4 ಪ್ರವೇಶ ದ್ವಾರಗಳಿವೆ
ಈ ಗುಹಾ ದೇವಾಲಯಕ್ಕೆ ಪ್ರವೇಶ ಪಡೆಯಲು 4 ಪ್ರವೇಶ ದ್ವಾರಗಳಿವೆ. ಅವುಗಳೆಂದರೆ ರಣ ದ್ವಾರ, ಪಾಪ ದ್ವಾರ, ಧರ್ಮದ್ವಾರ, ಮೋಕ್ಷ ದ್ವಾರ.

ರಾವಣ
ತ್ರೇತಯುಗದಲ್ಲಿ ರಾವಣಾಸುರ ಮರಣದ ನಂತರ ಪಾಪ ದ್ವಾರವು ಮುಚ್ಚಿ ಹೋಯಿತಂತೆ, ಮಾಹಾ ಭಾರತ ಯುದ್ಧದ ನಂತರ ರಣ ದ್ವಾರವು ಮುಚ್ಚಿ ಹೋಯಿತಂತೆ, ಪ್ರಸ್ತುತ ಮೋಕ್ಷ ದ್ವಾರ ಹಾಗೂ ಧರ್ಮದ್ವಾರ ಇವೆ. ಈ 2 ದ್ವಾರಗಳು ಮಾತ್ರ ತೆರೆದಿದೆಯಂತೆ.

ಜಲ
ಈ ಪರ್ವತದಲ್ಲಿ ಎಲ್ಲಿದಂಲೂ ಜಲವು ಉತ್ಪತ್ತಿಯಾಗುತ್ತದೆ ಹಾಗೂ ಅದು ಯಾವಾಗಲು ಚಿಮ್ಮೂತ್ತಾ ಇರುತ್ತದೆ. ಈ ಪವಿತ್ರವಾದ ಜಲವು ಯಾವುದೂ ರಹಸ್ಯಮಯವಾದ ಸ್ಥಳಕ್ಕೆ ಸೇರುತ್ತದೆ ಎಂದು ಕೆಲವು ಶಾಸ್ತ್ರಕಾರರು ತಿಳಿಸುತ್ತಾರೆ.

ಭೂಗರ್ಭ
ಈ ಪಾತಳ ಭೂವನೇಶ್ವರ ದೇವಾಲಯದ ಬಗ್ಗೆ ಹಲವಾರು ಉಲ್ಲೇಖಗಳು ಪುರಾಣಗಳಲ್ಲಿ ಇವೆ. ಹಾಗಾಗಿ ಈ ಪವಿತ್ರವಾದ ಗುಹಾ ದೇವಾಲಯವು ಹೆಚ್ಚು ಮಾಹಿಮಾನ್ವಿತವಾದುದಾಗಿದೆ.

ಆಧ್ಯಾತ್ಮಿಕ
ಯಾರಾದರೂ ಭಕ್ತಿ ಭಾವದಿಂದ ಧ್ಯಾನ ಮಾಡಲು ಹಾಗೂ ಆಧ್ಯಾತ್ಮಿಕತೆಯನ್ನು ಹೆಚ್ಚಾಗಿ ಇಷ್ಟ ಪಡುವವರು ಈ ಶ್ರೀ ಭೂವನೇಶ್ವರ ದೇವಾಲಯಕ್ಕೆ ಭೇಟಿ ನೀಡಬಹುದಾಗಿದೆ. ಹಾಗೆಯೇ ಈ ದೇವಾಲಯದ ಸುತ್ತ ಮುತ್ತ ಸರಾಯು, ರಾಮಗಂಗ, ಗುಪ್ತ ಗಂಗ ಹಲವಾರು ಪ್ರವಾಸಿ ತಾಣಗಳಿವೆ.

ವಿಮಾನ ಮಾರ್ಗದ ಮೂಲಕ
ಪಾತಾಳ ಭುವನೇಶ್ವರ ದೇವಾಲಯಕ್ಕೆ ತೆರಳಲು ಅತ್ಯಂತ ಸಮೀಪದ ವಿಮಾನ ನಿಲ್ದಾಣವೆಂದರೆ ಅದು ಪಾಂಟ್ ನಾಗರ ಇಲ್ಲಿಂದ ಈ ದೇವಾಲಯಕ್ಕೆ ಸುಮಾರು 244 ಕಿ,ಮೀ ದೂರದಲ್ಲಿದೆ.


Click it and Unblock the Notifications
















