» »ಈ ದೇವಾಲಯಕ್ಕೆ ಹೋಗಬೇಕಾದರೆ ಪ್ರಾಣದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ.....

ಈ ದೇವಾಲಯಕ್ಕೆ ಹೋಗಬೇಕಾದರೆ ಪ್ರಾಣದ ಮೇಲೆ ಆಸೆ ಬಿಟ್ಟು ಬಿಡಬೇಕು ಅಷ್ಟೇ.....

Written By:

ದೇವಾಲಯವೆಂದರೆ ದಿನನಿತ್ಯ ಪೂಜೆ, ಪುನಸ್ಕಾರ, ನೈವೇಧ್ಯ ಇವೆಲ್ಲಾ ದಿನವೂ ಮಾಮೂಲಿಯೇ! ಆದರೆ ಒಂದು ದೇವಾಲಯದಲ್ಲಿ ವರ್ಷಕ್ಕೆ ಕೇವಲ 5 ದಿನ ಮಾತ್ರ ತೆರದಿರುತ್ತದೆ. ಆ ದೇವಾಲಯ ಯಾವುದಪ್ಪ ಎಂದು ಆಶ್ಚರ್ಯ ಪಡುತ್ತಿದ್ದೀರಾ?. ಇದು ನಿಜ ಆ 5 ದಿನಗಳು ಮಾತ್ರ ಪೂಜೆಗಳನ್ನು ನೇರವೇರಿಸಿ ಮತ್ತೇ ದೇವಾಲಯದ ದ್ವಾರವನ್ನು ಮುಚ್ಚಿ ಬಿಡುತ್ತಾರೆ. ಮತ್ತೆ ತೆರೆಯುವುದು ವರ್ಷಕ್ಕೆ ಒಮ್ಮೆಯೇ.

ಏಕೆಂದರೆ ಈ ದೇವಾಲಯಕ್ಕೆ ತೆರಳುವುದೆಂದರೆ ಮಾಮೂಲಿ ವಿಷಯವಲ್ಲ. ಅಲ್ಲಿ ಹೋಗಬೇಕಾದರೆ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಹೋಗಬೇಕಾಗಿದೆ. ಹೆಜ್ಜೆ ಹೆಜ್ಜೆಗೆ ಸಂಕಷ್ಟವೇ. ಒಂದು ಸಾಹಸಮಯವಾದ ಯಾತ್ರೆ ಎನ್ನಬಹುದಾಗಿದೆ. ಇಲ್ಲಿನ ದೇವಾಲಯಕ್ಕೆ ಹೋಗಬೇಕಾದರೆ ಭಕ್ತಿಯೇ ಅಲ್ಲ ಧೈರ್ಯವೂ ಕೂಡ ಇರಬೇಕು.

ಹಾಗಾದರೆ ಆ ದೇವಾಲಯ ಯಾವುದು? ಆ ದೇವಾಲಯ ಇರುವುದಾದರು ಎಲ್ಲಿ? ಏಕೆ ಆ ದೇವಾಲಯಕ್ಕೆ ಹೋಗಲು ಅಷ್ಟು ಕಷ್ಟ ಎಂದು ಯೋಚಿಸುತ್ತಿದ್ದೀರಾ?
ಹಾಗಾರೆ ಓದಿ. ಆಂಧ್ರ ಪ್ರದೇಶದಲ್ಲಿನ ಆ ದೇವಾಲಯದ ಹೆಸರು ಸಲೇಶ್ವರ ಶ್ರೀಶೈಲ ಕ್ಷೇತ್ರದ ಸಮೀಪದಲ್ಲಿನ ಒಂದು ಯಾತ್ರ ಸ್ಥಳ.

ಪ್ರಸ್ತುತ ಲೇಖನದ ಮೂಲಕ ಆ ಕಷ್ಟಕರವಾದ ದೇವಾಲಯದ ಬಗ್ಗೆ ತಿಳಿಯೋಣ.

ಹೇಗೆ ಸಾಗಬೇಕು?

ಹೇಗೆ ಸಾಗಬೇಕು?

ಆಂಧ್ರ ಪ್ರದೇಶದ ಶ್ರೀ ಶೈಲದಿಂದ ಸುಮಾರು 40 ಕಿ,ಮೀ ದೂರದಲ್ಲಿ ಇದೆ ಸಲೇಶ್ವರ. ಅಲ್ಲಿನ ದಟ್ಟವಾದ ಅರಣ್ಯದಲ್ಲಿ ಸುಮಾರು 25 ಕಿ,ಮೀ ದೂರ ಪ್ರಯಾಣ ಮಾಡಬೇಕು. ಇದರಲ್ಲಿ 20 ಕಿ,ಮೀ ವಾಹನ ಪ್ರಯಾಣವಾಗುತ್ತದೆ. ಇನ್ನು ಉಳಿದ 5 ಕಿ,ಮೀ ದೂರ ಕಾಲ್‍ನಡಿಗೆ ಯಿಂದಲೇ ಸಾಗಬೇಕು.

ಪರಮಶಿವನು

ಪರಮಶಿವನು

ಇಲ್ಲಿ ಪರಮಶಿವನು ಲಿಂಗ ಸ್ವರೂಪಿಯಾಗಿ ದರ್ಶನವನ್ನು ನೀಡುತ್ತಾನೆ. ಪರಮಶಿವನು ಒಂದು ಗುಹೆಯಲ್ಲಿ ನೆಲೆಸಿದ್ದಾನೆ. ವರ್ಷಕ್ಕೆ ಕೇವಲ 5 ದಿನ ಮಾತ್ರವೇ ಈ ಅರಣ್ಯದಲ್ಲಿ ಅನುಮತಿಯನ್ನು ನೀಡುತ್ತಾರೆ. ಇಲ್ಲಿನ ಜಲಪಾತಕ್ಕೆ ಎಲ್ಲರೂ ಮಂತ್ರಮುಗ್ಧರಾಗುತ್ತಾರೆ.

PC: Avinash Kantamaneni


ಪ್ರಕೃತಿ ರಮಣೀಯತೆ

ಪ್ರಕೃತಿ ರಮಣೀಯತೆ

ಈ ಪ್ರದೇಶವು ಅತ್ಯಂತ ಸುಂದರವಾದ ಹಾಗೂ ಪ್ರಕೃತಿ ರಮಣೀಯದಿಂದ ಕಂಗೊಳಿಸುತ್ತಿರುವ ಪ್ರದೇಶ. ಚಾರಿತ್ರಿಕ ಹಿನ್ನೆಲೆಯನ್ನು ಹೊಂದಿರುವ ಪ್ರದೇಶ ಇದಾಗಿದೆ.

ಇದೊಂದು ಆಧ್ಯಾತ್ಮಿಕ ಪ್ರದೇಶವಾಗಿ ಪ್ರಸಿದ್ಧಿಯನ್ನು ಪಡೆದಿದೆ. ಇಲ್ಲಿ ಪ್ರತಿ 2 ವರ್ಷಗಳಿಗೆ ಒಮ್ಮೆ ಜಾತ್ರೆ ನಡೆಯುತ್ತದೆ. ಆ ಜಾತ್ರೆಯು ಯುಗಾದಿ ಹಬ್ಬ ಮುಗಿದ ನಂತರ ಮೊದಲ ಪೌಣಮಿಯಂದು ನಡೆಯುತ್ತದೆ.

PC:Avinash Kantamaneni

ಅರಣ್ಯದ ವೈಭವ

ಅರಣ್ಯದ ವೈಭವ

ದಟ್ಟವಾದ ಅರಣ್ಯ. ಎತ್ತರವಾದ ಪರ್ವತಗಳು, ಹಾಲಿನಂತೆ ಧುಮಕುತ್ತಿರುವ ಜಲಪಾತಗಳು, ಪ್ರಕೃತಿ ರಮಣೀಯತೆಯ ದೃಶ್ಯ, ಅಲ್ಲಿನ ಪ್ರತಿ ಅಣು ಅಣುವು ಸ್ವರ್ಗ. ಆಧ್ಯಾತ್ಮಿಕದ ಜೊತೆ ಜೊತೆಗೆ ಪ್ರಕೃತಿ ಸೌಂದರ್ಯವನ್ನು ಅಸ್ವಾಧಿಸಬಹುದಾಗಿದೆ.

PC:Avinash Kantamaneni

ಜಾಗ್ರತೆ

ಜಾಗ್ರತೆ

ಅತ್ಯಂತ ಕಷ್ಟಕರವಾದ ಪ್ರಯಾಣ ಏರುವುದು ಇಳಿಯುವುದು ಇರುತ್ತದೆ. ದಾರಿಯಲ್ಲಿ ಹಲವಾರು ಗುಹೆಗಳು ದೊರೆಯುತ್ತವೆ. ಜಾಗ್ರತೆಯಿಂದ ಹೆಜ್ಜೆ ಹಾಕಬೇಕಾಗುತ್ತದೆ.


PC:SDATTAREDDY

ಜಾಗ್ರತೆಯಾಗಿ ನಡೆಯಬೇಕು

ಜಾಗ್ರತೆಯಾಗಿ ನಡೆಯಬೇಕು

ಗುಡ್ಡದಿಂದ ನಡೆಯುವಾಗ ನೋಡಿಕೊಂಡು ನಡೆಯಬೇಕು. ಅಲ್ಲಿ ಜಾರುವ ಹಲವಾರು ಬಂಡೆಗಳಿರುತ್ತವೆ. ಅಪ್ಪಿ ತಪ್ಪಿ ಕಾಲು ಜಾರಿದರೆ ಕೈಲಾಸದ ಪಾದಕ್ಕೆ ಸೇರುವುದಂತು ಖಂಡಿತ.


PC:SDATTAREDDY

ನೀರು ಅತ್ಯಂತ ಸ್ವಚ್ಛ ಹಾಗೂ ತಂಪಾಗಿರುತ್ತದೆ.

ನೀರು ಅತ್ಯಂತ ಸ್ವಚ್ಛ ಹಾಗೂ ತಂಪಾಗಿರುತ್ತದೆ.

ಅಲ್ಲಿನ ದೃಶ್ಯ ಅತ್ಯಂತ ಸುಂದರವಾಗಿರುತ್ತದೆ. ಆಕಾಶದಿಂದ ಧುಮುಕುತ್ತಿರುವ ಜಲಪಾತದ ಹಾಗೆ ಕಾಣುತ್ತದೆ. ವಿಷೇಶವೆನೆಂದರೆ ಜನ ಸಂಚಾರವಿಲ್ಲದೇ ಇರುವುದರಿಂದ ಅಲ್ಲಿನ ನೀರು ಅತ್ಯಂತ ತಂಪಾಗಿ ಹಾಗೂ ಸ್ವಚ್ಛವಾಗಿರುತ್ತದೆ.


PC:SDATTAREDDY

ಲಿಂಗಮಯ್ಯ ಸ್ವಾಮಿ

ಲಿಂಗಮಯ್ಯ ಸ್ವಾಮಿ

ಪರ್ವತದ ಮೇಲೆ ಪೂರ್ವದಿಕ್ಕಿಗೆ 2 ಗುಹೆಗಳಿವೆ. ಅವು ಒಂದರ ಮೇಲೆ ಒಂದು ಇದೆ. ಮೇಲೆ ಇರುವ ಗುಹೆಗೆ ಮೊದಲು ಸೇರಿಕೊಳ್ಳಬಹುದು. ಅಲ್ಲಿಯೇ ಪ್ರಧಾನ ದೈವವಾದ ಲಿಂಗಮಯ್ಯ ಸ್ವಾಮಿಯ ಲಿಂಗವಿದೆ. ಇಲ್ಲಿನ ದೇವಾಲಯದ ಮುಂದೆ ವೀರಭಧ್ರ, ಗಂಗಮ್ಮ ವಿಗ್ರಹಗಳಿವೆ.

ಸಕಲೇಶರ ಜಾತ್ರೆ

ಸಕಲೇಶರ ಜಾತ್ರೆ

ಸಕಲೇಶ್ವರ ಜಾತ್ರೆಯು ವರ್ಷಕ್ಕೆ ಒಮ್ಮೆ ಚೈತ್ರ ಪೂರ್ಣಮಿಯಂದು ನಡೆಯುತ್ತದೆ. ಈ ಜಾತ್ರೆಯನ್ನು ಬೇಸಿಗೆ ಕಾಲದಲ್ಲಿ ನಡೆಯುತ್ತದೆ ಆಗ ಭಕ್ತರಿಗೆ ವಸತಿ ಸೌಕರ್ಯ ನಡೆಸಲಾಗುತ್ತದೆ ಎಂದು ಕೆಲವರು ಹೇಳುತ್ತಾರೆ.

ಶಿಥಿಲಾವಸ್ಥ

ಶಿಥಿಲಾವಸ್ಥ

10 ಕಿ,ಮೀ ಕ್ರಮಿಸಿದ ನಂತರ ಶಿಥಿಲಗೊಂಡ ಭವನಗಳು ಕಾಣಿಸುತ್ತವೆ. ನಿಜಾಂ ರಾಜ ಅಲ್ಲಿನ ಸುಂದರವಾದ ಪ್ರಕೃತಿಯನ್ನು ಕಂಡು 100 ವರ್ಷಗಳ ಹಿಂದೆಯೇ ಬೇಸಿಗೆಯ ಮನೆ ನಿರ್ಮಾಣ ಮಾಡಿದ್ದನಂತೆ.

ಹುಲಿಗಳು

ಹುಲಿಗಳು

ಈ ಸುಂದರವಾದ ಪ್ರದೇಶಗಳಲ್ಲಿ ಹುಲಿಗಳು ಹೆಚ್ಚಾಗಿ ತಿರುಗುತ್ತಾ ಇರುತ್ತಾ ಇದ್ದುದ್ದರಿಂದ 1973 ರಲ್ಲಿ ಕೇಂದ್ರ ಸರ್ಕಾರವು ಟೈಗರ್ ಪ್ರಾಜೆಕ್ಟ್ ಏರ್ಪಡಿಸಿದರು.

PC:FLICKER

ಚರಿತ್ರಕಾರರು

ಚರಿತ್ರಕಾರರು

ಸಲೇಶ್ವರ ದೇವಾಲಯವನ್ನು 6 ನೇ ಶತಮಾನದಲ್ಲಿ ನಿರ್ಮಿಸಿದರು ಎಂದು ಕೆಲವು ಚರಿತ್ರಕಾರರು ಹೇಳುತ್ತಾರೆ. 17ನೇ ಶತಮಾನದಲ್ಲಿ ಛತ್ರಪತಿ ಶಿವಾಜಿ ಸಲೇಶ್ವರ ಕ್ಷೇತ್ರದಲ್ಲಿ ಕೆಲವು ದಿನಗಳ ಕಾಲ ಈ ಅರಣ್ಯದಲ್ಲಿ ಇದ್ದನಂತೆ.

ನಿಜಾಂ

ನಿಜಾಂ

100 ವರ್ಷಗಳ ಹಿಂದೆ ಅಲ್ಲಿ ಒಂದು ಬೇಸಿಗೆಯ ಮನೆಯನ್ನು ನಿಜಾಂ ರಾಜ ನಿರ್ಮಿಸಿದನಂತೆ. ಅದು ಇಂದು ಶಥಿಲಾವಸ್ಥೆಯಲ್ಲಿದೆ. ಈ ಪ್ರದೇಶವನ್ನು ಪರಹಾಬಾದ್ ಎಂದು ಕರೆಯುತ್ತಾರೆ. ಅಂದರೆ ಸುಂದರವಾದ ಪ್ರದೇಶ ಎಂಬ ಅರ್ಥ.

ಹೈದ್ರಾಬಾದ್‍ನಿಂದ ಶ್ರೀ ಶೈಲಕ್ಕೆ ತಲುಪುವ ಮಾರ್ಗ

ಹೈದ್ರಾಬಾದ್‍ನಿಂದ ಶ್ರೀ ಶೈಲಕ್ಕೆ ತಲುಪುವ ಮಾರ್ಗ

ಬೆಂಗಳೂರಿನಿಂದ ಹೈದ್ರಾಬಾದ್‍ಗೆ ಹಲವಾರು ರೈಲ್ವೆ ಹಾಗೂ ಬಸ್‍ಗಳ ಸೌಕರ್ಯವಿದೆ. ಅಲ್ಲಿಂದ ಶ್ರೀಶೈಲಕ್ಕೆ ತೆರಳುವ ಮಾರ್ಗ ಸುಮಾರು 150 ಕಿ,ಮೀ ದೂರದಲ್ಲಿನ ಪರಹಾಬಾದ್ ಗೇಟ್. ಅಲ್ಲಿಂದ ಸುಮಾರು 32 ಕಿ,ಮಿ ದೂರದಲ್ಲಿ ದಟ್ಟವಾದ ಅರಣ್ಯದ ಪ್ರವೇಶ ಪಡೆಯಬೇಕಾದರೆ ಅರಣ್ಯ ಅಧಿಕಾರಿಗಳ ಅನುಮತಿ ಪಡೆಯಬೇಕು ಅಷ್ಟೇ.


PC:GOOGLE MAP