ಜೀವನದಲ್ಲಿ ಯಾವುದೇ ಕಷ್ಟ ಕಾರ್ಪಣ್ಯಗಳೇ ಬರಲಿ, ಸುಖ, ಸಂತೋಷಗಳೇ ಬರಲಿ ಜನರು ಮೊದಲಿಗೆ ನೆನೆಯುವುದು ದೇವರನ್ನು. ಇಂದು ನಾವು ನಿಮಗೆ ತಿಳಿಸಹೊರಟಿರುವ ದೇವಾಲಯಗಳ ಮಹಿಮೆ ಗ್ರಂಥಗಳಲ್ಲೂ ಉಲ್ಲೇಖವಿದೆ. ಈ ಮಂದಿರಗಳೆಲ್ಲವೂ ಚಮತ್ಕಾರಿ ಮಂದಿರಗಳಾಗಿದ್ದು. ಆ ಮಂದಿರಗಳ ದರ್ಶನದಿಂದ ನಿಮ್ಮ ಬೇಡಿಕೆಗಳೆಲ್ಲಾ ಈಡೇರುತ್ತವೆ ಎನ್ನಲಾಗುತ್ತದೆ.

ಕಸರ್ ದೇವಿ ಮಂದಿರ
ಉತ್ತರಖಂಡದ ಅಲ್ಪಮೋಡದಿಂದ ಸುಮಾರು 10 ಕಿ.ಮೀ ದೂರದಲ್ಲಿ ಕಸರ್ ದೇವಿ ಮಂದಿರವಿದೆ. ಇಲ್ಲಿ ಜಾಗೃತ ದೇವಿ ಶಕ್ತಿ ಇದೆ ಎನ್ನಲಾಗುತ್ತದೆ. ದುರ್ಗೆಯ ಈ ಮಂದಿರದಲ್ಲಿ ದಿವ್ಯ ಶಕ್ತಿ ಇದೆ. ಇಲ್ಲಿ ಬರುವ ಭಕ್ತರು ಯಾವುದೇ ತೊಂದರೆಯಿಲ್ಲದೆ ನೂರಾರು ಮೆಟ್ಟಿಲುಗಳನ್ನು ಹತ್ತುತ್ತಾರೆ, ಪೌರಾಣಿಕ ಕಥೆಗಳ ಪ್ರಕಾರ ದುರ್ಗೆಯು ಇದೇ ಸ್ಥಳದಲ್ಲಿ ಇಬ್ಬರು ರಾಕ್ಷಸರನ್ನು ಸಂವರಿಸಲು ಕಾತ್ಯಾಯೀನಿ ಅವತಾರ ಎತ್ತಿದ್ದಳು ಎನ್ನಲಾಗುತ್ತದೆ.

ಜಗನ್ನಾಥ್ ಪುರಿ ಮಂದಿರ
ಪುರಿಯಲ್ಲಿರುವ ಶ್ರೀ ಜಗನ್ನಾಥ ಮಂದಿರ ಜಗನ್ನಾಥ ದೇವರಿಗೆ ಸಮರ್ಪಿತವಾಗಿದೆ. ಪವಿತ್ರ ಚಾರ್‌ಧಾಮ್ ಯಾತ್ರೆಯಲ್ಲಿ ಇದೂ ಕೂಡಾ ಒಂದು. ಪುರಾಣದಲ್ಲಿ ಜಗನ್ನಾಥ ಪುರಿಯನ್ನು ಭೂಮಿಯಲ್ಲಿನ ವೈಕುಂಠ ಎನ್ನಲಾಗುತ್ತದೆ. ವಿಷ್ಣು ಪುರುಷೋತ್ತಮ ನೀಲ ಮಾಧವನ ಅವತಾರ ಎತ್ತಿದ್ದರು. ಹಾಗೂ ಇಲ್ಲಿ ಸಬರ ಜನಜಾತಿಯ ಪರಮ ಪೂಜ್ಯ ದೇವತೆಯಾಗಿ ಉಳಿದುಕೊಂಡರು. ಹಾಗಾಗಿ ಇಲ್ಲಿನ ಜಗನ್ನಾಥನ ರೂಪ ಕಬಿಲಾಯಿ ದೇವತೆಗಳಂತೆ ಇದೆ. ಜಗನ್ನಾಥ ಮಂದಿರದ ಮಹಿಮೆ ಬರೀ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಇದೆ.

ಮಹಾಕಾಳಿ ಶಕ್ತಿ ಪೀಠ
ಗುಜರಾತ್‌ನ ಪಾವಗಡದಲ್ಲಿರುವ ಮಹಾಕಾಳಿ ಮಂದಿರವನ್ನು ದೇವಿಯ ಜಾಗೃತ ನಿವಾಸ ಎನ್ನಲಾಗುತ್ತದೆ. ದೇವಿ ಸತಿಯ ದೇಹದ ಭಾಗಗಳೂ ಯಾವ್ಯಾವ ಸ್ಥಳದಲ್ಲೆಲ್ಲಾ ಬಿದ್ದಿದ್ದವೋ ಅಲ್ಲಿ ಶಕ್ತಿ ಪೀಠಗಳಾಗಿವೆ. ಇಲ್ಲಿ ದೇವಿಯ ಬಲಗಾಲಿನ ಬೆರಳುಗಳು ಬಿದ್ದವು ಎನ್ನಲಾಗಿದೆ. ಇಲ್ಲಿನ ದರ್ಶನ ಪಡೆದ ನಂತರ ದೇವಿಯು ಭಕ್ತರ ಪ್ರತಿಯೊಂದು ಇಚ್ಛೆಯನ್ನು ಈಡೇರಿಸುತ್ತದೆ ಎನ್ನಲಾಗುತ್ತದೆ.


Click it and Unblock the Notifications



















