ಭಾರತದೇಶದಲ್ಲಿ ಅತ್ಯಧಿಕ ಪ್ರವಾಸಿಗರು ಭೇಟಿ ನೀಡುವ ಪ್ರವಾಸಿ ಸ್ಥಳಗಳು. ಆ ಪ್ರದೇಶಗಳಿಗೆಲ್ಲಾ ಕೇಂದ್ರ ಸರ್ಕಾರ ಅತ್ಯಂತ ಪ್ರತಿಷ್ಟಾತ್ಮಕವಾಗಿ ಅಂತರರಾಷ್ಟ್ರೀಯ ಸ್ಥಾನವನ್ನು ಕಲ್ಪಿಸಿತು. ಅವಸರವಿದ್ದರೆ ಈ ಪ್ರದೇಶವನ್ನು ಸಾಂಕೇತಿಕ ಪರಿಜ್ಞಾನವನ್ನು ಉಪಯೋಗಿಸಿ ಅವುಗಳ ಪರಿಶುಭ್ರತೆಯನ್ನು ಮಾಡಲು ಭಾವಿಸುತ್ತದೆ. ಇಷ್ಟಕ್ಕೆ ಆ ಪ್ರದೇಶಗಳು ಯಾವುದು ಎಂಬುದರ ಬಗ್ಗೆ ಸಂಕ್ಷೀಪ್ತವಾಗಿ ತಿಳಿಯೋಣ.
ಭಾರತ ದೇಶದಲ್ಲಿ ಕಾಣಲು ಆನೇಕ ಪ್ರವಾಸಿ ಪ್ರದೇಶಗಳಿವೆ. ಅದರಲ್ಲಿ ಕೆಲವು ಆ ಪ್ರದೇಶಗಳು ಇಷ್ಟ ಪಡಬಹುದು, ಇನ್ನು ಉಳಿದವರಿಗೆ ಇಷ್ಟವಾಗದೇ ಇರಬಹುದು. ಪ್ರವಾಸಿಗರು ಮಾತ್ರ ಕೆಲವು ಪ್ರದೇಶಗಳಿಗೆ ಮಾತ್ರ ಆಗಾಗ ಭೇಟಿ ನೀಡಿ ಬರುತ್ತಿರುತ್ತಾರೆ. ಅಂಥಹ ಪ್ರದೇಶಗಳ ಬಗ್ಗೆ ನಾವು ತಿಳಿಯೋಣ.

ತಿರುಪತಿ
ಆಂಧ್ರ ಪ್ರದೇಶದಲ್ಲಿನ ತಿರುಪತಿ ಅತ್ಯಂತ ದೊಡ್ಡದಾದ ಪುಣ್ಯಕ್ಷೇತ್ರವಾಗಿದೆ ಎಂಬುದು ಸಾಮಾನ್ಯವಾಗಿ ನಮಗೆ ತಿಳಿದೇ ಇರುವ ಸಂಗತಿಯೇ ಆಗಿದೆ. ವರ್ಷಕ್ಕೆ ಲಕ್ಷ-ಲಕ್ಷ ಭಕ್ತರು ಭೇಟಿ ನೀಡುತ್ತಲೇ ಇರುತ್ತಾರೆ. ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನವನ್ನು ಕೋರಿ ಕೇವಲ ದೇಶದಿಂದಲೇ ಅಲ್ಲದೇ ವಿದೇಶಗಳಿಂದಲೂ ಅಪಾರ ಭಕ್ತರು ಭೇಟಿ ನೀಡುತ್ತಿರುತ್ತಾರೆ. ಭಾರತ ದೇಶದಲ್ಲಿ ಹೆಚ್ಚು ಮಂದಿ ಯಾತ್ರಿಕರು ಭೇಟಿ ನೀಡುವ ಸ್ಥಳಗಳಲ್ಲಿ ಇದು ಕೂಡ ಒಂದು. ಅಂತಹ ಪ್ರದೇಶವನ್ನು ಪರಿಶುಭ್ರವಾಗಿ ಇಡಬೇಕು ಎಂದು ಕೇಂದ್ರ ಸರ್ಕಾರವು ಭಾವಿಸುತ್ತಿದೆ.

ತಾಜ್ ಮಹಲ್
ತಾಜ್ ಮಹಲ್ ಆಗ್ರಾದಲ್ಲಿದೆ. ಇದು ಪ್ರಪಂಚದಲ್ಲಿನ 7 ಅದ್ಭುತಗಳಲ್ಲಿ ಇದು ಕೂಡ ಒಂದು. ಪ್ರೇಮದ ನೆನಪಿಗಾಗಿ ನೆಲೆಸಿರುವ ಈ ಅದ್ಭುತವಾದ ಕಟ್ಟಡವನ್ನು ಸಂದರ್ಶನವನ್ನು ಆನೇಕ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಈ ಪ್ರದೇಶದಲ್ಲಿ ಗಿಡವನ್ನು ಬೆಳಸಿ, ಪರಿಮಳವಾದ ಕೃಷಿಯನ್ನು ಮಾಡಬೇಕು ಎಂದು ಕೇಂದ್ರ ಸರ್ಕಾರ ಭಾವಿಸುತ್ತಿದ್ದಾರೆ.

ಮಣಿಕರ್ಣಿಕಾ ಘಾಟ್
ಮಣಿಕರ್ಣಿಕಾ ಘಾಟ್ ಉತ್ತರ ಪ್ರದೇಶದಲ್ಲಿನ ವಾರಣಾಸಿಯಲ್ಲಿದೆ. ಈ ಘಾಟ್ ಅನ್ನು ಡೆತ್ ಟೂರಿಸಂ ಎಂದು ಕೂಡ ಕರೆಯುತ್ತಾರೆ. ಆನೇಕ ಮಂದಿ ಪ್ರವಾಸಿಗರು ಅಂತ್ಯಕ್ರಿಯೆಗಳನ್ನು ಇಲ್ಲಿಯೇ ಬಹಿರಂಗವಾಗಿ ಮಾಡುತ್ತಾರೆ. ಗಂಗಾ ನದಿ ತೀರದಲ್ಲಿ ಈ ಪ್ರದೇಶವನ್ನು "ಗಂಗಾ ನದಿ ಸ್ವಚ್ಛ್" ಕಾರ್ಯಕ್ರಮದ ಭಾಗವಾಗಿ ಪರಿಶುಭ್ರ ಮಾಡಬೇಕು ಎಂದು ಕೇಂದ್ರ ಸರ್ಕಾರವು ಭಾವಿಸುತ್ತಿದೆ.
PC:Dennis Jarvis

ವೈಷ್ಣವ ದೇವಿ ದೇವಾಲಯ
ವೈಷ್ಣವ ದೇವಿ ದೇವಾಲಯವು ಹಿಂದೂಗಳಿಗೆ ಪ್ರವಿತ್ರವಾದ ಸ್ಥಳವಾಗಿದೆ. ಜಮ್ಮುದಿಂದ 46 ಕಿ.ಮೀ ದೂರದಲ್ಲಿರುವ ಕಾಟ್ರಾದಲ್ಲಿನ ತ್ರಿಕೂಟ ಹಿಲ್ಸ್‍ದಲ್ಲಿದೆ. ಇದು ಸಮುದ್ರ ಮಟ್ಟಕ್ಕೆ 1700 ಅಡಿ ಎತ್ತರದಲ್ಲಿದೆ. ವರ್ಷಕ್ಕೆ ಹಲವಾರು ಲಕ್ಷ ಮಂದಿ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ. ಈ ದೇವಾಲಯವನ್ನು ಕೂಡ ಶುಭ್ರ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಆಲೋಚನೆ ಮಾಡುತ್ತಿದೆ. ತಿರುಪತಿ ವೆಂಕಟೇಶ್ವರ ಸ್ವಾಮಿಯ ನಂತರ ದೇಶದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಈ ದೇವಾಲಯವನ್ನು ದರ್ಶಿಸುತ್ತಾರೆ.
PC:www.maavaishnodevi.org

ಮೀನಾಕ್ಷಿ ದೇವಾಲಯ
ದೇವಾಲಯ ಭೂಮಿ ಎಂದೇ ಖ್ಯಾತಿಯಾಗಿರುವ ತಮಿಳುನಾಡಿನ ಮಧುರೈ ದೇವಾಲಯವಿದೆ. ಇಲ್ಲಿ 12 ಗೇಟುಗಳು, 6 ಹೆಕ್ಟರ್‍ಗಳಲ್ಲಿ ವಿಸ್ತಾರ ಮಾಡಿಕೊಂಡಿರುವ ಈ ದೇವಾಲಯವು ಅದ್ಭುತವಾದ ಶಿಲ್ಪ ಸಂಪತ್ತಿಗೆ ಸಾಕ್ಷಿಯಾಗಿದೆ. ವರ್ಷಕ್ಕೆ ಅತ್ಯಧಿಕ ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಭೇಟಿ ನೀಡುತ್ತಾರೆ. ದೇವಾಲಯದ ಪರಿಸರವನ್ನು ಸುಂದರವಾಗಿ ಇಡಲು ಸರ್ಕಾರ ಭಾವಿಸುತ್ತಿದೆ.

ಛತ್ರಪತಿ
ಶಿವಾಜಿ ಟೆರ್ಮಿನಲ್ ಮುಂಬೈ ನಗರದಲ್ಲಿದೆ. ಇದನ್ನು ಮೊದಲು ವಿಕ್ಟೋರಿಯಾ ಟೆರ್ಮಿನಲ್ ಎಂದು ಕರೆಯುತ್ತಿದ್ದರು. ಈ ಪ್ರದೇಶವು ವಾಣಿಜ್ಯ ಕೇಂದ್ರವಾಗಿದೆ. ವರ್ಷದುದ್ದಕ್ಕೂ ಮುಂಬೈಗೆ ಬರುವ ಪ್ರವಾಸಿಗರು ಟೆರ್ಮಿನಲ್ ಅನ್ನು ತಪ್ಪದೇ ಭೇಟಿ ನೀಡುತ್ತಾರೆ. ಪುರಾತನವಾದ ಪುಸ್ತಕಗಳು, ಚಾರಿತ್ರಿಕ ವಸ್ತುಗಳು, ಕಂಪ್ಯೂಟರ್‍ಗಳು ಇತರ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಾರುವ ಅಂಗಡಿಗಳನ್ನು ಇಲ್ಲಿ ಕಾಣಬಹುದು. ಈ ಪ್ರದೇಶವನ್ನು ಕೂಡ ಪರಿಶುಭ್ರವಾಗಿಡಲು ಕೇಂದ್ರ ಸರ್ಕಾರವು ಅಲೋಚನೆ ಮಾಡುತ್ತಿದೆ.

ದರ್ಗಾ ಷರಿಫ್
ದರ್ಗಾ ಷರಿಫ್ ಅಜ್ಮೀರ್‍ನಲ್ಲಿದೆ. ಈ ಸ್ಥಳವು ಮೊಹಮ್ಮದಿಯರ ಪವಿತ್ರವಾದ ಸೂಫಿ ಸನ್ಯಾಸಿ ನಿವಾಸಿಸಿದ್ದ ಪ್ರದೇಶವಾಗಿದೆ. ಈ ಸ್ಥಳಕ್ಕೆ ಎಲ್ಲಾ ಧರ್ಮದ ಯಾತ್ರಿಕರು ಕೂಡ ಭೇಟಿ ನೀಡುತ್ತಿರುತ್ತಾರೆ. ವರ್ಷದಲ್ಲಿ ದೇಶ ವಿದೇಶಗಳಿಂದ ಆನೇಕ ಮಂದಿ ಭಕ್ತರು ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ.

ಸ್ವರ್ಣ ದೇವಾಲಯ
ಸ್ವರ್ಣ ದೇವಾಲಯವು ಅಮೃತಸರದಲ್ಲಿದೆ. ಸಿಖ್‍ರ ಪವಿತ್ರವಾದ ಸ್ಥಳವಾಗಿ ಖ್ಯಾತಿಯನ್ನು ಪಡೆದಿದೆ. ಈ ಒಂದು ದೇವಾಲಯವು ಗುರುದ್ವಾರದಲ್ಲಿದ್ದು, 400 ಕೆ.ಜಿ ಬಂಗಾರವನ್ನು ಬಳಸಲಾಗಿದೆ. ಪ್ರಪಂಚ ವ್ಯಾಪಕವಾಗಿರುವ ಸಿಖ್‍ರು ಈ ಪವಿತ್ರವಾದ ಶ್ರೀ ಹಾರಮಂದಿರ್ ಸಾಹಿಬ್ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಈ ಪ್ರದೇಶವನ್ನು ಅಂತರಾಷ್ಟ್ರೀಯ ಸ್ಥಾನಕ್ಕೆ ತೆಗೆದುಕೊಂಡು ಹೋಗಲು ಕೇಂದ್ರ ಅಲೋಚನೆ ಮಾಡುತ್ತಿದೆ.

ಕಾಮಾಕ್ಷಿ ದೇವಾಲಯ
ಕಾಮಾಕ್ಷಿ ದೇವಾಲಯವು ತಮಿಳುನಾಡಿನ ಕಾಂಚಿಪುರನಲ್ಲಿದೆ. ಪಲ್ಲವ ರಾಜನಿಂದ ನಿರ್ಮಾಣ ಮಾಡಲ್ಪಟ್ಟ ದೇವಾಲಯವನ್ನು ದೇವಿ ಯೋಗ ಮುದ್ರೆಯಲ್ಲಿ ಪದ್ಮಾಸನದ ಮೇಲೆ ಕುಳಿತುಕೊಂಡಿದ್ದಾಳೆ. ದೇವಾಲಯದ ಶಿಲ್ಪವು ಅತ್ಯಂತ ಸುಂದರವಾಗಿದ್ದು, ಇಲ್ಲಿಗೂ ಕೂಡ ಸಾವಿರಾರು ಭಕ್ತರು ಭೇಟಿ ನೀಡುತ್ತಿರುತ್ತಾರೆ.

ಜಗನ್ನಾಥ ದೇವಾಲಯ
ಒರಿಸ್ಸಾ ರಾಜ್ಯದಲ್ಲಿನ ಪೂರಿ ಪಟ್ಟಣದಲ್ಲಿ ಪ್ರಸಿದ್ಧ ಪಡೆದಿರುವ ಜಗನ್ನಾಥ ದೇವಾಲಯವಿದೆ. ವರ್ಷಕ್ಕೆ ಒಮ್ಮೆ ನಿರ್ವಹಿಸುವ ರಥಯಾತ್ರೆಯ ಸಮಯದಲ್ಲಿ ಲಕ್ಷಾಧಿ ಭಕ್ತರು ಶ್ರೀ ಕೃಷ್ಣನನ್ನು ಭಕ್ತಿಯಿಂದ ಆರಾಧಿಸುತ್ತಾರೆ. ಜಗನ್ನಾಥನು ನಿವಾಸ ಮಾಡುವ ಈ ಸ್ಥಳವನ್ನು ಕೇಂದ್ರ ಸರ್ಕಾರ ಪರಿಶುಭ್ರವಾಗಿ ಇಡಬೇಕು ಎಂದು ಅಲೋಚನೆ ಮಾಡುತ್ತಿದೆ.


Click it and Unblock the Notifications

















