Search
  • Follow NativePlanet
Share
» »ಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆ

ಇಲ್ಲಿಗೆ ಹೋದ್ರೆ ಈ ಮೂರು ನಕ್ಷತ್ರದವರು ಕೋಟ್ಯಾಧೀಶರಾಗ್ತಾರಂತೆ

ಶ್ರೀಮಂತರಾಗಬೇಕು, ಕೋಟ್ಯಾಧಿಪತಿಗಳು ಆಗಬೇಕು ಎನ್ನುವ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಆದರೆ ಶ್ರೀಮಂತರಾಗೋದು ಅಷ್ಟು ಸುಲಭನೂ ಅಲ್ಲ. ಎಲ್ಲರ ಭಾಗ್ಯದಲ್ಲಿ ಅದು ಇರೋದಿಲ್ಲ. ಆದರೆ ಈ ದೇವಸ್ಥಾನಕ್ಕೆ ಹೋದರೆ ಈ ಮೂರು ನಕ್ಷತ್ರದವರು ಕೋಟ್ಯಾಧಿಪತಿಗಳಾಗ್ತಾರಂತೆ.

ಜ್ಯೋತಿಷ್ಯದಲ್ಲಿ ನಂಬಿಕೆ

ಜ್ಯೋತಿಷ್ಯದಲ್ಲಿ ನಂಬಿಕೆ

ಜ್ಯೋತಿಷ್ಯದಲ್ಲಿ ನಂಬಿಕೆ ಇಟ್ಟಿರುವವರು ಜನ್ಮದಿನ, ಜನ್ಮ ನಕ್ಷತ್ರ, ಹುಟ್ಟಿದ ಸಮಯದ ಬಗ್ಗೆ ವಿಶ್ವಾಸ ಇಟ್ಟಿರುತ್ತಾರೆ. ಹಾಗಾಗಿ ತಮ್ಮ ಜೀವನದಲ್ಲಿ ನಡೆಯುವ ಪ್ರತಿಯೊಂದು ಸನ್ನಿವೇಶಗಳು, ಮಹತ್ತರ ಬದಲಾವಣೆಗಳು ಅದರಿಂದಲೇ ಎಂದು ನಂಬುತ್ತಾರೆ.

ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?ಗಂಗಾವತಿಯಲ್ಲಿರುವ ಆನೆಗುಂಡಿಯೇ ರಾಮಾಯಣದ ಕಿಷ್ಕಿಂದ ಅನ್ನೋದು ಗೊತ್ತಾ?

27 ನಕ್ಷತ್ರಗಳು

27 ನಕ್ಷತ್ರಗಳು

ಇರುವ 27 ನಕ್ಷತ್ರಗಳಲ್ಲಿ ಈ ಮೂರು ನಕ್ಷತ್ರಗಳು ಶ್ರೀಮಂತರಾಗುವ ಯೋಗವನ್ನು ಹೊಂದಿವೆ. ಆ ನಕ್ಷತ್ರಗಳು ಯಾವುವು ಹಾಗೂ ಆ ದೇವಸ್ಥಾನಗಳು ಯಾವುವು ಅನ್ನೋದನ್ನು ತಿಳಿಯಿರಿ.

ಅಶ್ವಿನಿ ನಕ್ಷತ್ರ

ಅಶ್ವಿನಿ ನಕ್ಷತ್ರ

ತಿರುತುರೈಪೂಂಡಿ ಎನ್ನುವುದು ತಿರುವರೂರು ಜಿಲ್ಲೆಯಲ್ಲಿರುವ ಸಣ್ಣ ಪಟ್ಟಣ. ಮರೂಂಡೇಶ್ವರ ದೇವಸ್ಥಾನದ ಜನ್ಮಸ್ಥಳ ಶಿವ ದೇವಾಲಯವಾಗಿದೆ. ಇದು ಅಶ್ವಿನಿ ನಕ್ಷತ್ರದ ದೇವಸ್ಥಾನ.

ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?ಬೆಂಗಳೂರಿಗೆ ಬಂದಿದೆ ಹಾರುವ ರೆಸ್ಟೋರೆಂಟ್ : ಒಂದು ಊಟದ ಬೆಲೆ ಎಷ್ಟು ಗೊತ್ತಾ?

ಮರೂಂದೀಶ್ವರ ದೇವಸ್ಥಾನ

ಮರೂಂದೀಶ್ವರ ದೇವಸ್ಥಾನ

ಮರೂಂದೀಶ್ವರ ದೇವಸ್ಥಾನವು ಬಹಳ ಪ್ರಸಿದ್ಧ ದೇವಸ್ಥಾನವಾಗಿದೆ. ಅಶ್ವಿನಿ ನಕ್ಷತ್ರದ ಭಕ್ತರು ಇದನ್ನು ಪೂಜಿಸುತ್ತಾರೆ. ಭಗವಾನ್ ಶಿವನನ್ನು ಅಶ್ವಿನಿ ದೇವಸ್ಥಾನವೆಂದು ಪರಿಗಣಿಸಲಾಗಿದೆ. ಅಶ್ವಿನಿ ನಕ್ಷತ್ರದ ಭಕ್ತರು ತಮ್ಮ ಜೀವನವನ್ನು ಸುಧಾರಿಸಲು ಇಲ್ಲಿಗೆ ಬರುತ್ತಾರೆ.

ಭೇಟಿಯ ಸಮಯ

ಭೇಟಿಯ ಸಮಯ

ದೇವಸ್ಥಾನವು ಬೆಳಗ್ಗೆ ೬ ಗಂಟೆಯಿಂದ ೧೧ ಗಂಟೆ ವರೆಗೆ ಹಾಗೂ ಸಂಜೆ ೪ ಗಂಟೆಯಿಂದ ರಾತ್ರಿ ೮ ಗಂಟೆಯವರೆಗೆ ತೆರೆದಿರುತ್ತದೆ. ಭಕ್ತರು ಈ ಸಮಯದಲ್ಲಿ ದೇವರ ದರ್ಶನ ಪಡೆಯಬಹುದು. ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಮತ್ತು ರಾತ್ರಿಯಲ್ಲಿ ಮೇಳಗಳನ್ನು ಆಯೋಜಿಸಲಾಗುತ್ತದೆ. ವಿಶೇಷ ದಿನಗಳಲ್ಲಿ ವಿಶೇಷ ಪೂಜೆಗಳನ್ನು ಆಯೋಜಿಸಲಾಗುವುದು.

ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?ಸಾಯಿಬಾಬಾ ಜೀವಸಮಾಧಿಯಾಗಿದ್ದು ಎಲ್ಲಿ ಮತ್ತು ಯಾವಾಗ ಗೊತ್ತಾ?

ಭಕ್ತರ ಬೇಡಿಕೆಗಳು

ಭಕ್ತರ ಬೇಡಿಕೆಗಳು

ಮದುವೆ ವಿಚಾರ, ಸಂತಾನ ಭಾಗ್ಯ, ವಿದ್ಯಾಭ್ಯಾಸ, ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳಿಗಾಗಿ ಭಕ್ತರು ಇಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ಭಕ್ತರು ದೇವರಿಗೆ ಅಭೀಷೇಕ ಹಾಗೂ ವಸ್ತ್ರಗಳನ್ನು ನೀಡುತ್ತಾರೆ.

ಆಶ್ಲೇಷ ನಕ್ಷತ್ರ

ಆಶ್ಲೇಷ ನಕ್ಷತ್ರ

ಕಾರ್ಕಾಡೇಶ್ವರ ದೇವಸ್ಥಾನದ ತಂಜಾವೂರು ಜಿಲ್ಲೆಯಲ್ಲಿದೆ. ಇದು ತಂಜಾವೂರು ಜಿಲ್ಲೆಯ ತಿರುಕುಂಡೇವಾವವಾಡಿನಲ್ಲಿರುವ ದೇವಾಲಯವಾಗಿದೆ. ಆಶ್ಲೇಷ ನಕ್ಷತ್ರದವರು ಈ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದರೆ ಒಳ್ಳೆಯದು.

ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?ವಿಜಯವಾಡದ ಬಳಿ ಇರುವ ಈ ಪ್ರಸಿದ್ಧ ತಾಣಗಳನ್ನು ನೋಡಿದ್ದೀರಾ?

ಕಾರ್ಕಾಡೇಶ್ವರ ದೇವಸ್ಥಾನ

ಕಾರ್ಕಾಡೇಶ್ವರ ದೇವಸ್ಥಾನ

ಆಸ್ತಿ ಸಮಸ್ಯೆಯನ್ನು ಬಗೆಹರಿಯುತ್ತದೆ ಮತ್ತು ಉದ್ಯಮದಲ್ಲಿನ ಲಾಭಗಳು ದೀರ್ಘಕಾಲದವರೆಗೆ ಇರುತ್ತವೆ ಮತ್ತು ದೀರ್ಘಾವಧಿಯ ಅಡಚಣೆಗಳುಬಗೆಹರಿಯುತ್ತದೆ. ಆಶ್ಲೇಷ ನಕ್ಷತ್ರದವರು ಈ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿದರೆ ಕೋಟಿಯೇಶ್ವರ ಯೋಗ ಬರುತ್ತದೆ ಎನ್ನಲಾಗುತ್ತದೆ.

ಉತ್ಸವಗಳು

ಉತ್ಸವಗಳು

ಫೆಬ್ರವರಿ-ಮಾರ್ಚ್‌ನಲ್ಲಿ ಮಹಾಶಿವರಾತ್ರಿ ಹಾಗೂ ನವಂಬರ್-ಡಿಸೆಂಬರ್‌ನಲ್ಲಿ ತಿರುಕಾರ್ತಿಕೈ ಉತ್ಸವವನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಇಲ್ಲಿನ ವಿನಾಯಕನನ್ನು ಕಾರ್ಕಡ ವಿನಾಯಕ ಎನ್ನಲಾಗುತ್ತದೆ.

ಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲ<br /> ಇನ್ನುಮುಂದೆ ನಂದಿಹಿಲ್ಸ್‌ಗೆ ಒಂಟಿಯಾಗಿ ಹೋದ್ರೆ ಎಂಟ್ರಿ ಇಲ್ಲ

ಎಣ್ಣೆ ಅಭಿಷೇಕ

ಎಣ್ಣೆ ಅಭಿಷೇಕ

ಭಕ್ತರು ತಮ್ಮ ಗ್ರಹದಲ್ಲಿನ ದೋಷಗಳ ಪರಿಹಾರಕ್ಕೆ ಇಲ್ಲಿನ ಕಾರ್ಕಡೇಶ್ವರನಿಗೆ ಎಣ್ಣೆಯ ಅಭಿಷೇಕವನ್ನು ಅರ್ಪಿಸುತ್ತಾರೆ. ಇನ್ನು ತಮಗಿರುವ ರೋಗಗಳ ನಿವಾರಣೆಗಾಗಿ ಅಭಿಷೇಕದ ಎಣ್ಣೆಯನ್ನು ಔಷಧಿಯಂತೆ ಸೇವಿಸುತ್ತಾರೆ.

ಅನುರಾಧ ನಕ್ಷತ್ರ

ಅನುರಾಧ ನಕ್ಷತ್ರ

ಅನುರಾಧ ನಕ್ಷತ್ರದವರಿಗೆ ಮಹಾಲಕ್ಷ್ಮೀಶ್ವರರ್‌ ದೇವಸ್ಥಾನ ತಿರುನಿಂಡ್ರೆಯೂರುಗೆ ಹೋದರೆ ಒಳ್ಳೆಯದು. ಈ ದೇವಸ್ಥಾನದಲ್ಲಿರುವು ಸ್ವಯಂಭೂ ಶಿವನ ಮೂರ್ತಿ. ಇಲ್ಲಿ ಮಹಾಲಕ್ಷ್ಮೀಯನ್ನೂ ಪೂಜಿಸಲಾಗುತ್ತದೆ.

ಉತ್ಸವಗಳು

ಉತ್ಸವಗಳು

ಜೂನ್‌-ಜುಲೈಯಲ್ಲಿ ನಡೆಯುವ ತಿರುಮಾಂಜನಮ್ , ಮಹಾಶಿವರಾತ್ರಿ ಹಾಗೂ ತಿರುಕಾರ್ತಿಕೈ ಉತ್ಸವವನ್ನು ಇಲ್ಲಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಸೆಲ್ವಗಣಪತಿ

ಸೆಲ್ವಗಣಪತಿ

ಇಲ್ಲಿನ ವಿನಾಯಕನನ್ನು ಸೆಲ್ವಗಣಪತಿ ರೂಪದಲ್ಲಿ ಪೂಜಿಸಲಾಗುತ್ತದೆ. ಅನುರಾಧ ನಕ್ಷತ್ರದಲ್ಲಿ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ. ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಕುಟುಂಬದಲ್ಲೂ ಗೌರವ ಪಡೆಯುತ್ತಾರೆ. ಸರ್ಕಾರಿ ಗೌರವ ಪಡೆಯುತ್ತಾರೆ. ಇತರರ ಮನಸ್ಸನ್ನು ಅರಿತು ಅದಕ್ಕನುಗುಣವಾಗಿ ವರ್ತಿಸುತ್ತಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X