Search
  • Follow NativePlanet
Share
» »ದೇವಿ ಸತಿಯ ಕಣ್ಣುಗುಡ್ಡೆ ಬಿದ್ದಿರುವ ಜಾಗ ಇದು

ದೇವಿ ಸತಿಯ ಕಣ್ಣುಗುಡ್ಡೆ ಬಿದ್ದಿರುವ ಜಾಗ ಇದು

ದೇವಿ ಸತಿಯ ದೇಹವು 51 ಭಾಗಗಳಾಗಿ ವಿಭಿನ್ನ ಜಾಗದಲ್ಲಿ ಬಿದ್ದಿರುವ ಕಥೆ ನಿಮಗೆ ಗೊತ್ತೇ ಇದೆ. ಆ ದೇಹದ ಒಂದೊಂದು ಭಾಗ ಬಿದ್ದಿರುವ ಜಾಗವು ಶಕ್ತಿಪೀಠ ಎಂದು ಕರೆಸಿಕೊಳ್ಳುತ್ತಿದೆ. ಈಗಾಗಲೇ ನೀವು ಸತಿಯ ನಾಲಗೆ, ಯೋನಿ, ಭುಜ, ಕೂದಲು ಬಿದ್ದ ಜಾಗದ ಬಗ್ಗೆ ತಿಳಿದುಕೊಂಡಿದ್ದೀರಿ ಈಗ ಸತಿಯ ಕಣ್ಣುಗುಡ್ಡೆ ಎಲ್ಲಿ ಬಿದ್ದಿತ್ತು ಎನ್ನುವುದನ್ನು ತಿಳಿಯಿರಿ.

ಎಲ್ಲಿದೆ ಈ ತಾರಾಪೀಠ

ಎಲ್ಲಿದೆ ಈ ತಾರಾಪೀಠ

PC: Pinakpani

ಪಶ್ಚಿಮಬಂಗಾಲದ ಕೊಲ್ಕತ್ತಾದ ಬಿರುಬುಮ್‌ನಿಂದ ಸುಮಾರು ೨೬೪ ಕಿ.ಮೀ ದೂರದಲ್ಲಿ ಈ ದೇವಸ್ಥಾನವಿದೆ. ಇದು ಶಕ್ತಿ ಪೀಠಗಳಲ್ಲಿ ಒಂದಾಗಿದ್ದು ಇದನ್ನು ಹಿಂದೂಗಳ ಪವಿತ್ರ ಸ್ಥಳ ಎನ್ನಲಾಗುತ್ತದೆ. ಇಲ್ಲಿ ಸತಿಯ ಕಣ್ಣಿನ ಗುಡ್ಡೆ ಬಿದ್ದಿದ್ದವು ಎನ್ನಲಾಗುತ್ತದೆ. ಬಂಗಾಳಿ ಭಾಷೆಯಲ್ಲಿ ಕಣ್ಣಿನ ಗುಡ್ಡೆಯನ್ನು ತಾರ ಎನ್ನುತ್ತಾರೆ. ಹಾಗಾಗಿ ಈ ಊರಿನ ಹೆಸರು ಮೊದಲು ಚಂದಿಪುರ್ ಎಂದು ಇದ್ದಿದ್ದನ್ನು ತಾರಪೀಠ ಎಂದು ಬದಲಾಯಿಸಲಾಯಿತು.

ಕಾಳಿಯ ರೂಪದಲ್ಲಿ ಪೂಜೆ

ಕಾಳಿಯ ರೂಪದಲ್ಲಿ ಪೂಜೆ

PC:Debojyoti Roy

ಈ ದೇವಸ್ಥಾನದಲ್ಲಿ ಕಾಳಿಯ ಅವತಾರದಲ್ಲಿ ದೇವರನ್ನು ಪೂಜಿಸಲಾಗುತ್ತದೆ. ದೇವರನ್ನು ಶಾಂತಗೊಳಿಸಲು ಪ್ರತಿದಿನ ಬೆಳಗ್ಗೆ ಪ್ರಾಣಿ ಬಲಿ ಮಾಡಲಾಗುತ್ತದೆ. ಇಲ್ಲಿ ಸತಿಯನ್ನು ಕಾಳಿಕಾ, ಉಗ್ರಕಾಳಿ, ಮಹಾಕಾಳಿ, ಭದ್ರಕಾಳಿ ಎಂದೂ ಕರೆಯಲಾಗುತ್ತದೆ.
ಮುಖ್ಯ ದೇವಸ್ಥಾನವು ನಾಲ್ಕು-ಬದಿಯ, ಮಾರ್ಬಲ್ ಬ್ಲಾಕ್ ರಚನೆಯಾಗಿದ್ದು, ಡೊಚಾಲಾ ಎಂದು ಕರೆಯಲ್ಪಡುವ ವಕ್ರ ಮೇಲ್ಛಾವಣಿಯನ್ನು ಹೊಂದಿದೆ. ನಾಲ್ಕು-ಭಾಗದಲ್ಲಿ ಸಣ್ಣ ಗೋಪುರವನ್ನು ಹೊಂದಿದೆ. ಈ ದೇವಸ್ಥಾನಕ್ಕೆ ದಪ್ಪಗಿನ ಗೋಡೆಯನ್ನು ನಿರ್ಮಿಸಲಾಗಿದೆ,. ಕೆಂಪು ಇಟ್ಟಿಗೆಯಿಂದ ನಿರ್ಮಿಸಲಾಗಿದೆ.

ದೇವಿಯ ಹಣೆಯ ಕುಂಕುಮವೇ ಭಕ್ತರಿಗೆ ಪ್ರಸಾದ

ದೇವಿಯ ಹಣೆಯ ಕುಂಕುಮವೇ ಭಕ್ತರಿಗೆ ಪ್ರಸಾದ

PC: youtube

ಇಲ್ಲಿನ ವಿಗ್ರಹವು ಮೂರು ಫೀಟ್ ಎತ್ತರದ ಮೆಟಲ್‌ನ ಮೂರ್ತಿಯಾಗಿದ್ದು ನಾಲ್ಕು ಕೈಗಳನ್ನು ಹೊಂದಿದೆ. ಬುರುಡೆಗಳ ಮಾಲೆಯನ್ನು ಕುತ್ತಿಗೆಯಲ್ಲಿ ಧರಿಸಿದ್ದು, ನಾಲಗೆಯನ್ನು ಹೊರಹಾಕಿ, ಕೂದಲು ಬಿಟ್ಟುಕೊಂಡ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾಳೆ. ದೇವಿಯ ಹಣೆಯು ಕುಂಕುಮದಲ್ಲಿ ಕೂಡಿರುತ್ತದೆ. ಇಲ್ಲಿನ ಅರ್ಚಕರು ದೇವಿಯ ಆಶೀರ್ವಾದದ ಸಂಕೇತವಾಗಿ ದೇವಿಯ ಹಣೆಯಲ್ಲಿರುವ ಕುಂಕುಮವನ್ನು ತೆಗೆದು ಭಕ್ತರ ಹಣೆಗೆ ಹಚ್ಚುತ್ತಾರೆ.

ಭಕ್ತರು ವಿಸ್ಕೀಯನ್ನೂ ಅರ್ಪಿಸುತ್ತಾರೆ

ಭಕ್ತರು ವಿಸ್ಕೀಯನ್ನೂ ಅರ್ಪಿಸುತ್ತಾರೆ

PC: tarapith official

ಡ್ಯಾಮೇಜ್ ಆಗಿರುವ ಹಳೆಯ ಮಂದಿರ

ಡ್ಯಾಮೇಜ್ ಆಗಿರುವ ಹಳೆಯ ಮಂದಿರ

ಹಳೆಯ ದೇವಸ್ಥಾನವು ಡ್ಯಾಮೇಜ್ ಆಗಿದೆ. ಈಗಿನ ದೇವಾಲಯವು ಎಂಟು ಛಾವಣಿಯೊಂದಿಗೆ 1225 ರಲ್ಲಿ ಮಲ್ಲರ್ ಪುರ ಗ್ರಾಮದ ಒಂದು ಜಗನ್ನಾಥ್ ರೇ ಅವರಿಂದ ನಿರ್ಮಿಸಲ್ಪಟ್ಟಿದೆ. ಮುಖ್ಯ ದ್ವಾರದ ಬಳಿ ದುರ್ಗಾ ಮೂರ್ತಿ ಇದ್ದರೆ, ಎಡಬದಿಯಲ್ಲಿ ಕುರುಕ್ಷೇತ್ರ ಯುದ್ದದ ಚಿತ್ರಣ ಹಾಗೂ ಬಲಬದಿಯಲ್ಲಿ ರಾಮಾಯಣದ ಚಿತ್ರಣವಿದೆ.

ಅತ್ಯಂತ ಪ್ರಭಾವಶಾಲಿ ಪೀಠ

ಅತ್ಯಂತ ಪ್ರಭಾವಶಾಲಿ ಪೀಠ

PC:Pinakpani

ಇಲ್ಲಿ ಸತಿಯ ಕಣ್ಣು ಗುಡ್ಡೆ ಬಿದ್ದಿರುವುದರಿಂದ ಉಳಿದ ಶಕ್ತಿಪೀಠಗಳಿಗಿಂತಲೂ ಅತ್ಯಂತ ಪ್ರಭಾವಶಾಲಿ ಪೀಠ ಎನ್ನಲಾಗುತ್ತದೆ. ಈ ದೇವಿಯನ್ನು ಭೇಟಿಯಾದವರಿಗೆ ಅತೀಂದ್ರ ಶಕ್ತಿಗಳು ಸಿಗುತ್ತವೆ ಎನ್ನಲಾಗುತ್ತದೆ. ಮುಖ್ಯವಾಗಿ ಅಮಾವಾಸ್ಯೆ ದಿನ ದೇವಿಯ ಮೂರ್ತಿಗೆ ಅತೀತವಾದ ಶಕ್ತಿ ದೊರೆಯುತ್ತದೆ. ಈ ಸಂದರ್ಭದಲ್ಲಿ ದೇವಿಯನ್ನು ಆಹ್ವಾನಿಸಿದವರಿಗೆ ಆ ಶಕ್ತಿ ದೊರೆಯುತ್ತದೆ ಎನ್ನಲಾಗುತ್ತದೆ.

More News

Read more about: india temple travel kolkata
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+