ತ್ರಿಮೂರ್ತಿಗಳಲ್ಲಿ ಒಬ್ಬನಾದ ಪರಮಶಿವನಿಗೆ ಕುಮಾರ ಸ್ವಾಮಿಯೇ ಗುರು. ಈ ಸೃಷ್ಟಿಗೆ ಮೂಲಕಾರಕನಾದ ಓಂಕಾರನಾದಕ್ಕೆ ಅರ್ಥವನ್ನು ಬಿಡಿಸಿ ಹೇಳಿದನು. ತಮಿಳುವಾಸಿಗಳು ಕುಮಾರ ಸ್ವಾಮಿಯನ್ನು ಮುರುಗನ್ ಎಂದು ಕರೆಯುತ್ತಾ ಆರಾಧಿಸುತ್ತಾರೆ. ಇದಕ್ಕೆ ಸಂಬಂಧಿಸಿದ ಸ್ಥಳ ಪುರಾಣಗಳೆಲ್ಲಾ ತಮಿಳುನಾಡಿನ ಕುಂಭಕೋಣಕ್ಕೆ ಸಮೀಪದಲ್ಲಿರುವ ಒಂದು ಪರಮಪವಿತ್ರವಾದ ಕ್ಷೇತ್ರದಲ್ಲಿ ಕಾಣಬಹುದು.
ಹಾಗಾಗಿಯೇ ಈ ಕ್ಷೇತ್ರದ ಸಂದರ್ಶನದಿಂದ ಅಪರಿಮಿತವಾದ ಬುದ್ಧಿ, ಜ್ಞಾನವು ದೊರೆಯುತ್ತದೆ ಹೇಳುತ್ತಾರೆ. ಈ ಕ್ಷೇತ್ರದ ಭೇಟಿಗಾಗಿ ಭಾರತ ದೇಶದಲ್ಲಿನ ವಿವಿಧ ರಾಜ್ಯಗಳಿಂದಲೇ ಅಲ್ಲದೇ ವಿದೇಶಗಳಿಂದಲೂ ಕೂಡ ಅತಿ ಹೆಚ್ಚು ಮಂದಿ ಭಕ್ತರು ಭೇಟಿ ನೀಡುತ್ತಿರುತ್ತಾರೆ.
ಈ ಕ್ಷೇತ್ರದಲ್ಲಿನ ನದಿಯಲ್ಲಿ ಸ್ನಾನವನ್ನು ಆಚರಿಸಿದರೆ ಸಕಲ ಪಾಪಗಳು ತೊಲಗಿ ಹೋಗುತ್ತದೆ ಎಂದು ನಂಬಲಾಗಿದೆ. ಸಮುದ್ರಮಟ್ಟದಿಂದ ಸುಮಾರು 60 ಅಡಿ ಎತ್ತರದಲ್ಲಿರುವ ಈ ದೇವಾಲಯದಿಂದ ಕೆಳಗೆ ನೋಡಿದರೆ ಪ್ರಕೃತಿ ಸೌಂದರ್ಯವು ಕಂಗೊಳಿಸುತ್ತದೆ. ಇಷ್ಟು ವಿಶೇಷತೆಗಳನ್ನು ಹೊಂದಿರುವ ಈ ಪುಣ್ಯಕ್ಷೇತ್ರಕ್ಕೆ ಸಂಬಂಧಿಸಿದ ವಿವರಗಳು ನಿಮಗಾಗಿ....

1.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ತಮಿಳುನಾಡಿನಲ್ಲಿ ಸುಬ್ರಹ್ಮಣ್ಯಸ್ವಾಮಿಗೆ ಇಷ್ಟವಾದ ಹಾಗು ನೆಲೆಸಿರುವ ಪ್ರದೇಶಗಳು 6. ಅವುಗಳೆಂದರೆ, ತಿರುತ್ತಣಿ, ಸ್ವಾಮಿಮಲೈ, ಪಳನಿ, ಪಝಮಡಿದಿರ್ ಚೊಲೈ, ತಿರುಪುರಕುಂಡ್ರಂ, ತಿರುಚೆಂದುರ್. ಈ ಆರು ಪುಣ್ಯಕ್ಷೇತ್ರಗಳು 6 ವಿಭಿನ್ನವಾದ ಪುರಾಣ ಸಂಬಂಧ ಕಥೆಗಳು ಇವೆ. ಅವುಗಳಲ್ಲಿ ಅತಿ ಮುಖ್ಯವಾದುದು ಸ್ವಾಮಿಮಲೈ.

2.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಇಲ್ಲಿ ತಮಿಳುನಾಟ ಮುರುಗನ್ ಎಂದು ಭಕ್ತರಿಂದ ಕರೆಯಿಸಿಕೊಳ್ಳುವ ಆ ಕುಮಾರ ಸ್ವಾಮಿಯು ತನ್ನ ತಂದೆಗೆ ಗುರುವಾದನು. ಅದ್ದರಿಂದಲೇ ಈ ಕ್ಷೇತ್ರವನ್ನು ಪರಮ ಪವಿತ್ರವಾದ ಪುಣ್ಯಕ್ಷೇತ್ರವೆಂದು ಹೇಳುತ್ತಾರೆ. ಇದಕ್ಕೆ ಸಂಬಂಧಿಸಿದ ಪುರಾಣ ಕಥೆಯ ಪ್ರಕಾರ ಸೃಷ್ಟಿಕರ್ತನಾದ ಬ್ರಹ್ಮನು ಒಮ್ಮೆ ಕೈಲಾಸಕ್ಕೆ ತೆರಳಿದನು.

3.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಮಾರ್ಗ ಮಧ್ಯೆಯಲ್ಲಿ ಆತನಿಗೆ ಕುಮಾರಸ್ವಾಮಿ ಕಾಣಿಸಿಕೊಂಡನು. ಈ ಮುರುಗನ್ ಬ್ರಹ್ಮನನ್ನು ಪ್ರಣವ ಮಂತ್ರವಾದ ಓಂಕಾರದ ಅರ್ಥವನ್ನು ಹೇಳು ಎಂದು ಕೇಳಿದನು. ಆದರೆ ಆ ಸೃಷ್ಟಿಕರ್ತನಾದ ಬ್ರಹ್ಮನು ಅದಕ್ಕೆ ಉತ್ತರ ಹೇಳಲಿಲ್ಲ. ಇದರಿಂದಾಗಿ ಕುಮಾರಸ್ವಾಮಿಗೆ ಕೋಪ ಬಂದು ಆ ಬ್ರಹ್ಮನನ್ನು ಬಂಧಿಯನ್ನಾಗಿ ಮಾಡುತ್ತಾನೆ.

4.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ ಪರಿಣಾಮದಿಂದಾಗಿ ಸೃಷ್ಟಿಕಾರ್ಯವು ನಿಂತುಹೋಯಿತು. ಮೂರು ಲೋಕಗಳು ಕೂಡ ಅಲ್ಲೋಲ್ಲ-ಕಲ್ಲೋಲವಾಯಿತು. ಇದರಿಂದಾಗಿ ದೇವತೆಗಳೆಲ್ಲಾರು ಸೇರಿ ಕುಮಾರಸ್ವಾಮಿಯ ಬಳಿ ತೆರಳಿ ಬ್ರಹ್ಮ ದೇವನನ್ನು ಬಿಡುಗಡೆಗೊಳಿಸು ಎಂದು ಕೇಳಿಕೊಳ್ಳುತ್ತಾರೆ. ಅದಕ್ಕೆ ಕುಮಾರಸ್ವಾಮಿಯು ಒಪ್ಪಲಿಲ್ಲ. ಇದರಿಂದಾಗಿ ದೇವತೆಗಳೆಲ್ಲಾ ಸೇರಿ ಕುಮಾರಸ್ವಾಮಿಯ ತಂದೆಯಾದ ಪರಮಶಿವನ ಬಳಿ ಹೋಗಿ ಎಲ್ಲಾ ಪರಿಸ್ಥಿತಿಗಳನ್ನು ವಿವರವಾಗಿ ತಿಳಿಸಿ, ರಕ್ಷಿಸಬೇಕು ಎಂದು ಬೇಡಿಕೊಂಡರು.

5.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಇದರಿಂದಾಗಿ ಸ್ವಯಂವಾಗಿ ಆ ಪರಮಶಿವನೇ ರಂಗಕ್ಕೆ ಇಳಿದನು. ಕುಮಾರಸ್ವಾಮಿಗೆ ಬ್ರಹ್ಮನನ್ನು ಬಂಧನದಿಂದ ವಿಮುಕ್ತಿಯನ್ನು ನೀಡಲು ಸೂಚಿಸುತ್ತಾನೆ. ಅಷ್ಟೇ ಅಲ್ಲದೇ ಬ್ರಹ್ಮ ಓಂಕಾರಕ್ಕೆ ಅರ್ಥ ನಿನಗೆ ಗೊತ್ತೆ ಎಂದು ಕುಮಾರಸ್ವಾಮಿಯನ್ನು ಪ್ರೆಶ್ನೆಸುತ್ತಾನೆ. ಇದರಿಂದಾಗಿ ಕುಮಾರಸ್ವಾಮಿಯು ತಾನು ಆ ಓಂಕಾರ ಮಂತ್ರದ ಅರ್ಥವನ್ನು ಹೇಳುತ್ತೇನೆ ಎಂದೂ, ಆದರೆ ನೀವು ಅದನ್ನು ಶ್ರದ್ಧೆಯಾಗಿ ಕೇಳಿಸಿಕೊಳ್ಳಬೇಕು ಎಂದು ಹೇಳುತ್ತಾನೆ.

6.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಕುಮಾರನಾದ ತನಗೆ ಗುರುವಾಗಿ ಮಾರ್ಪಾಟಾಗಿ ತನಗೆ ತಿಳಿಯದ ವಿಷಯಗಳನ್ನು ಹೇಳುತ್ತೇನೆ ಎಂದರೆ ಯಾವ ತಂದೆಗಾದರೂ ಸಂತೋಷವಾಗುತ್ತದೆ. ಇದಕ್ಕೆ ಪರಮಶಿವನು ಹೊರತಲ್ಲ. ಕುಮಾರಸ್ವಾಮಿ ಕೋರಿಕೆಯನ್ನು ಮನ್ನಿಸಿ ಶಿಷ್ಯನಾಗಿ ಆ ಓಂಕಾರ ಶಬ್ಧಕ್ಕೆ ಅರ್ಥವನ್ನು ತಿಳಿದುಕೊಳ್ಳುತ್ತಾನೆ. ಹಾಗೆಯೇ ಕುಮಾರಸ್ವಾಮಿಯು ಬ್ರಹ್ಮನನ್ನು ಕೂಡ ಬಿಡುಗಡೆಗೊಳಿಸುತ್ತಾನೆ.

7.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ ಎಲ್ಲಾ ಘಟನೆ ನಡೆದ ಸ್ಥಳವೇ ಪ್ರಸ್ತುತ ತಮಿಳುನಾಡಿನಲ್ಲಿನ ಸ್ವಾಮಿಮಲೈನಲ್ಲಿಯೇ. ಇನ್ನು ಪರಮಶಿವನು ಜಗತ್ತಿಗೆ ಸ್ವಾಮಿ, ಆ ಸ್ವಾಮಿಗೆ ಕುಮಾರಸ್ವಾಮಿಯೇ ಗುರುವು. ಹಾಗಾಗಿಯೇ ಈ ಕ್ಷೇತ್ರದಲ್ಲಿನ ಕುಮಾರಸ್ವಾಮಿಗೆ ಸ್ವಾಮಿನಾಥ ಎಂದೂ ಕರೆಯುತ್ತಾ, ಈ ಕ್ಷೇತ್ರಕ್ಕೆ ಸ್ವಾಮಿ ಮಲೈ ಎಂದು ಕರೆಯುತ್ತಾರೆ.

8.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ ದೇವಾಲಯವು ಅತ್ಯಂತ ಪುರಾತನವಾದುದು. ಇದನ್ನು ಕಾರ್ತಿವೀರಾರ್ಜುನ ನಿರ್ಮಾಣ ಮಾಡಿದನು ಎನ್ನಲಾಗಿದೆ. ಗರ್ಭಗುಡಿಯ ಹೊರಗೆ ಇರುವ ಮಂಟಪದಲ್ಲಿ ಆತನಿಗೆ ವಿಗ್ರಹವನ್ನು ಕೂಡ ನಾವು ಕಾಣಬಹುದು. ಇನ್ನು ದೇವಾಲಯವು ಚಿಕ್ಕದಾದ ಒಂದು ಗುಡ್ಡದ ಮೇಲೆ ಇದೆ. ದೇವಾಲಯಕ್ಕೆ ತಲುಪಲು 60 ಮೆಟ್ಟಿಲುಗಳನ್ನು ಏರಬೇಕು.

9.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ 60 ಮೆಟ್ಟಿಲುಗಳು 60 ತಮಿಳರ ವರ್ಷಗಳ ಪ್ರತೀಕ. ಅದೇ ವಿಧವಾಗಿ ಒಂದೊಂದು ವರ್ಷಕ್ಕೆ ಒಂದೊಂದು ದೇವತೆಗಳು ಅದಿದೇವತೆಗಳಾಗಿರುತ್ತಾರೆ. ಆಯಾ ವರ್ಷದಲ್ಲಿ ಆ ಅಧಿದೇವತೆಗಳು ಇಲ್ಲಿಗೆ ಸ್ವಾಮಿಯನ್ನು ಭೇಟಿ ಮಾಡಲು ಬರುತ್ತಾರೆ ಎಂಬುದು ಸ್ಥಳೀಯ ಕಥೆಯ ಪ್ರಕಾರ ತಿಳಿದು ಬರುತ್ತದೆ. ಆಯಾ ಮೆಟ್ಟಿಲುಗಳ ಮೇಲೆ ಆಯಾ ವರ್ಷಗಳ ಅಧಿದೇವತೆಗಳ ಹೆಸರನ್ನು ಬರೆದಿದ್ದಾರೆ.

10.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಬಲಭಾಗದಲ್ಲಿ ಕುಮಾರಸ್ವಾಮಿಯು ಶಿವನಿಗೆ ಓಂಕಾರನಾದದ ಅರ್ಥವನ್ನು ಬೋಧಿಸಿದ ಸ್ಥಳದಲ್ಲಿ ವಿಗ್ರಹವನ್ನು ಕೂಡ ಕಾಣಬಹುದು. ಇನ್ನು ಗುಟ್ಟದ ಮೇಲ್ಭಾಗವನನು ನೋಡಿದರೆ ಸುಂದರವಾದ ಪ್ರಕೃತಿ ಸೌಂದರ್ಯದಿಂದ ಕೇವಲ ಭಕ್ತರಿಗೇ ಅಲ್ಲದೇ, ಪ್ರವಾಸಿಗರನ್ನು ಆಕರ್ಷಿಸುತ್ತದೆ.

11.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ ದೇವಾಲಯದ ಕೆಳಗಿನ ಭಾಗದಲ್ಲಿ ಶಿವನ ಹಾಗು ಪಾರ್ವತಿಯ ಮಂಟಪಗಳಿವೆ. ಅವುಗಳನ್ನು ಇಲ್ಲಿ ಮೀನಾಕ್ಷಿ ಸುಂದರೇಶ್ವರ, ಮೀನಾಕ್ಷಿ ಎಂಬ ಹೆಸರುಗಳಿಂದ ಆರಾಧಿಸುತ್ತಾರೆ. ಇನ್ನು ಧ್ವಜಸ್ತಂಭದ ಬಳಿ ವಿನಾಯಕನಿಗೆ ಧ್ವಜಸ್ತಂಭವು ಕೂಡ ಇದೆ. ಈ ವಿನಾಯಕನನ್ನು ನೇತ್ರ ವಿನಾಯಗರ್ ಎಂದು ಕರೆಯುತ್ತಾರೆ. ನೇತ್ರ ಸಂಬಂಧ ಸಮಸ್ಯೆಗಳಿಂದ ಬಾಧೆಯಲ್ಲಿರುವವರು ಈ ವಿನಾಯಕನನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆ ಭಕ್ತರದ್ದು.

12.ಸ್ವಾಮಿಮಲೈ, ಸ್ವಾಮಿನಾಥನ್ ದೇವಾಲಯ
PC:YOUTUBE
ಈ ದೇವಾಲಯವು ಚೆನ್ನೈನಿಂದ ಸ್ವಾಮಿಮಲೈಗೆ 300 ಕಿ.ಮೀ ದೂರದಲ್ಲಿದೆ. ಚೆನ್ನೈ- ವಿಲ್ಲುಪುರಂ- ಟ್ರಿಚಿ- ಕನ್ಯಾಕುಮಾರಿ ರಸ್ತೆಯ ಮೂಲಕ ಸ್ವಾಮಿಮಲೈಗೆ ಸೇರಿಕೊಳ್ಳಬಹುದು. ಇನ್ನು ಕುಂಭಕೋಣಂನಿಂದ ಸ್ವಾಮಿಮಲೈಗೆ ಕೇವಲ 11.8 ಕಿ.ಮೀ ದೂರದಲ್ಲಿದೆ. ಕುಂಭಕೋಣಂನಿಂದ ನಿತ್ಯವು ಇಲ್ಲಿಗೆ ಸರ್ಕಾರಿ ಹಾಗು ಖಾಸಗಿ ಬಸ್ಸುಗಳು ಸಂಚಾರ ಮಾಡುತ್ತಿರುತ್ತವೆ. ಟ್ಯಾಕ್ರಿಯ ಸೌಲಭ್ಯ ಕೂಡ ಇಲ್ಲಿದೆ.


Click it and Unblock the Notifications

















