Search
  • Follow NativePlanet
Share
» »ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಇಲ್ಲಿ ಕಾಗೆಗಳು ತಿಂದ ಆಹಾರವೇ ಭಕ್ತರಿಗೆ ಪ್ರಸಾದ!

ಹಿಂದೂಗಳಿಗೆ ಶನಿ ದೇವರೆಂದರೆ ಅಪಾರ ಗೌರವ ಹಾಗೆಯೇ ಭಯವೂ ಕೂಡಾ. ತಮ್ಮ ಮೇಲೆ ಯಾವುದೇ ಸಂಕಷ್ಟಗಳು , ಶನಿಯ ಕೆಟ್ಟ ದೃಷ್ಠಿ ಇರಬಾರದೆಂದು ಶನಿದೇವನನ್ನು ಭಕ್ತಯಿಂದ ಪೂಜಿಸುತ್ತಾರೆ. ಶನಿದೇಸೆ ತಮ್ಮ ಹಾಗೂ ಕುಟುಂಬದ ಮೆಲೆ ಬೀಳಬಾರದೆಂದು ಶನಿದೇವಾಲಯಕ್ಕೆ ಹೋಗಿ ಭಕ್ತಿಯಿಂದ ದೀಪ ಬೆಳಗಿಸ್ತಾರೆ. ಸಾಮಾನ್ಯವಾಗಿ ಮಹಾರಾಷ್ಟ್ರದ ಶನಿ ಸಿಂಗ್ನಾಪುರದಲ್ಲಿ ಸ್ವಯಂ ಭೂ ಆಗಿರುವ ಶನಿದೇವರ ವಿಗ್ರಹ ಇದೆ ಎನ್ನುತ್ತಾರೆ. ಆದರೆ ತಮಿಳುನಾಡಿನಲ್ಲೂ ಸ್ವಯಂ ಭೂ ಶನಿಯ ವಿಗ್ರಹವಿದೆ ಎನ್ನಲಾಗುತ್ತದೆ.

ತಮಿಳುನಾಡಿನ ಕುಚನೂರು

ತಮಿಳುನಾಡಿನ ಕುಚನೂರು

PC: youtube

ತಮಿಳುನಾಡಿನಲ್ಲಿ ಥೇಣಿ ಜಿಲ್ಲೆಯ ಕುಚನೂರು ಎನ್ನುವಲ್ಲಿ ಸ್ವಯಂ ಭೂ ಆಗಿ ಉದ್ಭವಿಸಿರುವ ಈ ಶನಿ ದೇವಾಲಯ ಇದೆ ಎನ್ನಲಾಗುತ್ತದೆ. ಇದು ಸುರಭಿ ಎನ್ನುವ ನದಿ ತೀರದಲ್ಲಿದೆ. ಹಾಗಾಗಿ ಇಲ್ಲಿನ ಸುತ್ತಲಿನ ಪರಿಸರವೂ ಬಹಳ ಸುಂದರವಾಗಿದೆ.

ಸ್ವಯಂ ಭೂ

ಸ್ವಯಂ ಭೂ

PC: youtube ಈ ದೇವಾಲಯದ ಗರ್ಭಗುಡಿಯಲ್ಲಿ ಇರುವ ಶನೀಶ್ವರನ ವಿಗ್ರಹವು ಸ್ವಯಂ ಭು ಆಗಿ ಸಿಕ್ಕಿರೋದು ಎನ್ನಲಾಗುತ್ತದೆ. ನವಗ್ರಹಗಳಲ್ಲಿ ಒಂದಾಗಿರುವ ಶನಿಗೆ ವಿಶೇಷ ಸ್ಥಾನ ಇದೆ ಎನ್ನುವುದು ನಮಗೆಲ್ಲರಿಗೂ ತಿಳಿದೇ ಇದೆ.

ಎಲ್ಲಿದೆ ಈ ದೇವಾಲಯ

ಎಲ್ಲಿದೆ ಈ ದೇವಾಲಯ

PC: youtube

ಶನೀಶ್ವರನು ಸ್ವಯಂ ಭೂ ಆಗಿರುವ ದೇಶದ ಎರಡೇ ಎರಡು ದೇವಾಲಯಗಳಲ್ಲಿ ಇದೂ ಒಂದು. ಈ ದೇವಾಲಯವು ತಮಿಳುನಾಡಿನ ಥೇಣಿ ಜಿಲ್ಲೆಯಿಂದ ಸುಮಾರು ೨೦ ಕಿ.ಮೀ ದೂರದಲ್ಲಿದೆ. ಅಲ್ಲಿಗೆ ಬಸ್ ಸೌಲಭ್ಯಗಳೂ ಇವೆ.

ಸ್ಥಳೀಯ ಕಥೆಗಳ ಪ್ರಕಾರ

ಸ್ಥಳೀಯ ಕಥೆಗಳ ಪ್ರಕಾರ

PC: youtube

ಒಂದು ದಂತಕಥೆಯ ಪ್ರಕಾರ, ಒಂದು ಕಾಲದಲ್ಲಿ ದಿನಕರನ್ ಎಂಬ ರಾಜ ಕಳಿಂಗ ದೇಶವನ್ನು ಆಳುತ್ತಿದ್ದನು. ರಾಜಧಾನಿಯನ್ನು ಮಣಿಕರ್ಣನಿಂದ ಆಳ್ವಿಕೆ ಮಾಡಲ್ಪಡುತ್ತಿತ್ತು ಎಂದು ಪುರಾಣಗಳು ಹೇಳುತ್ತವೆ. ಅವನ ಮಗನಾದ ಚಂದ್ರವಂತನು ಖ್ಯಾತ ಜ್ಯೋತಿಷಿಯಾಗಿದ್ದನು.

 7 ವರೆ ವರ್ಷ ಶನಿ

7 ವರೆ ವರ್ಷ ಶನಿ

PC: youtube

ಆತನ ಜ್ಯೋತಿಷ್ಯ ಶಾಸ್ತ್ರದ ಜ್ಞಾನದ ಮೂಖಾಂತರ ಅವನ ತಂದೆ ಸತತ 7 ವರೆ ವರ್ಷಗಳಿಂದ ಕಷ್ಟವನ್ನು ಅನುಭವಿಸುತ್ತಿದ್ದಾನೆ ಎಂದು ತಿಳಿದುಕೊಂಡನು. ತನ್ನ ತಂದೆಗೆ ಒದಗಿರುವ ಕಷ್ಟಗಳೆಲ್ಲಾ ಆ ಶನಿ ದೇವನನ್ನು ಪ್ರಾರ್ಥಿಸಿದಾಗ ಮಾತ್ರ ನಿವಾರಣೆಯಾಗುತ್ತದೆ ಎಂದು ಲೆಕ್ಕಾಚಾರ ಹಾಕಿದನು.

ಮತ್ತೊಂದು ದಂತಕತೆ

ಮತ್ತೊಂದು ದಂತಕತೆ

PC: youtube

ಮತ್ತೊಂದು ದಂತಕತೆಯ ಪ್ರಕಾರ, ಶ್ರೀ ಶನಿ ಭಗವಾನನು ತಪಸ್ಸು ಮಾಡಿದ ಸ್ಥಳ ಇದಾಗಿದ್ದು, ಇದರಿಂದ ಬ್ರಹ್ಮ ಹತ್ಯಾ ದೋಷದಿಂದ ಬಿಡುಗಡೆ ಹೊಂದಿದನು ಎಂದು ಹೇಳಲಾಗುತ್ತದೆ. ಒಂದು ಶಿವಲಿಂಗವು ನೆಲದಿಂದ ಹೊರಬಂದು, ಬೆಳೆಯಲು ಪ್ರಾರಂಭ ಮಾಡಿತು. ಆ ಲಿಂಗದ ಬೆಳವಣಿಗೆಯನ್ನು ಅರಿಶಿಣವನ್ನು ಹಚ್ಚುವುದರ ಮೂಲಕ ನಿಯಂತ್ರಿಸಲಾಯಿತು ಎಂದು ಹೇಳಲಾಗುತ್ತಿದೆ.

ಸುರಭಿ ನದಿಯಲ್ಲಿ ಸ್ನಾನ

ಸುರಭಿ ನದಿಯಲ್ಲಿ ಸ್ನಾನ

PC: youtube

ಪ್ರತಿವರ್ಷವೂ ಪ್ರತಿ ತಿಂಗಳ ಶನಿವಾರ ತಮಿಳು ಆಚರಣೆಯ "ಆದಿ" ಯಲ್ಲಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಶನಿ ದೇವನ ದರ್ಶನ ಮಾಡುವ ಮೊದಲು ಸುರಭಿ ನದಿಯಲ್ಲಿ ಸ್ನಾನ ಮಾಡಿ ನಂತರ ದೇವಾಲಯಕ್ಕೆ ತೆರಳಬೇಕಾಗಿದೆ.

ಕಾಗೆಗಳು ತಿನ್ನುತ್ತವೆ

ಕಾಗೆಗಳು ತಿನ್ನುತ್ತವೆ

PC: youtube

ಶನಿ ದೇವನಿಗೆ ಇಟ್ಟ ನೈವೇದ್ಯವನ್ನು ಮೊದಲು ಕಾಗೆಗಳು ತಿಂದ ನಂತರವೇ ಭಕ್ತರಿಗೆ ನೀಡಲಾಗುತ್ತದೆ. ಸಾಮಾನ್ಯವಾಗಿ ನಮಗೆಲ್ಲಾ ತಿಳಿದಿರುವಂತೆ ಕಾಗೆ ಶನಿ ದೇವನ ವಾಹನವೇ ಆಗಿದೆ. ಒಂದು ಪಕ್ಷ ಕಾಗೆಗಳು ಪ್ರಸಾದವನ್ನು ತಿನ್ನದೇ ಹೋದರೆ ತಮ್ಮಿಂದ ಏನೋ ತಪ್ಪಾಗಿದೆ ಎಂದು ಭಾವಿಸಿ, ಪುರೋಹಿತರು ಸೇರಿದಂತೆ ಇಡೀ ಸಭೆಯೇ ಶನಿ ಭಗವಾನನ್ನು ಕ್ಷಮಿಸು ಎಂದು ಕೇಳಿಕೊಳ್ಳುತ್ತಾರೆ.

ಶನಿದೆಸೆ ಮುಕ್ತಿ

ಶನಿದೆಸೆ ಮುಕ್ತಿ

PC: youtube

ಶನಿದೆಸೆಯಿಂದ ಮುಕ್ತಿ ಪಡೆಯಲು ತಮಿಳುನಾಡು ಮಾತ್ರವಲ್ಲ ಇಡೀ ದೇಶಾದಾದ್ಯಂತ ಜನರು ಇಲ್ಲಿಗೆ ಆಗಮಿಸುತ್ತಾರೆ. ಶನೀಶ್ವರನ ದರ್ಶನ ಪಡೆಯುತ್ತಾರೆ. ಮುಖ್ಯವಾಗಿ ತಮಿಳು ತಿಂಗಳು ಆದಿಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ.

ಕಾಗೆಗಳು ತಿನ್ನದಿದ್ದಲ್ಲಿ

ಕಾಗೆಗಳು ತಿನ್ನದಿದ್ದಲ್ಲಿ

PC: youtube

ಒಂದು ವೇಳೆ ಅಲ್ಲಿ ಇಟ್ಟಿರುವ ನೈವೇದ್ಯವನ್ನು ಕಾಗೆಗಳು ಬಂದಿ ತಿಂದಿಲ್ಲವೆಂದಾದಲ್ಲಿ ಭಕ್ತರು ತಮ್ಮ ತಪ್ಪನ್ನು ಕ್ಷಮಿಸಿ ಎಂದು ದೇವಸ್ಥಾನ ಅರ್ಚಕರನ್ನು ಶನೀಶ್ವರನನ್ನು ಪ್ರಾರ್ಥಿಸುತ್ತಾರೆ. ಜೊತೆಗ ಕಾಗೆಗಳನ್ನೂ ಪ್ರಾರ್ಥಿಸುತ್ತಾರೆ. ಆಗ ಕಾಗೆಗಳು ಬಂದು ನೇವೇದ್ಯವನ್ನು ತಿನ್ನುತ್ತವೆ ಎನ್ನಲಾಗುತ್ತದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+