ನೀವು ಸಾಕಷ್ಟು ದೇವಸ್ಥಾನಕ್ಕೆ ಭೇಟಿ ನೀಡಿರುವಿರಿ. ಅಲ್ಲಿ ಪೂಜೆಯ ಸಮಯದಲ್ಲಿ ಪೂಜಾರಿಗಳು ದೇವರ ಮೂರ್ತಿಗೆ ಆರತಿ ಬೆಳಗುವುದನ್ನು ನೀವು ನೋಡಿರುವಿರಿ. ಆ ಕ್ಷಣ ನೋಡಲು ಬಹಳ ಸುಂದರವಾಗಿರುತ್ತದೆ.. ಆದರೆ ಯಾವತ್ತಾದರೂ ಆರತಿ ಮಾಡುವಾಗ ಕಣ್ಣು ತೆರೆಯುವ ದೇವರನ್ನು ನೀವೆಲ್ಲಾದರೂ ನೋಡಿದ್ದೀರಾ? ಇಲ್ಲ ಎಂದರೆ ಇಂದು ನಾವು ಅಂತಹದ್ದೊಂದು ವಿಶೇಷ ದೇವಾಲಯದ ಬಗ್ಗೆ ತಿಳಿಸಲಿದ್ದೇವೆ.

ಕರಿ ವರದರಾಜ ಪೆರುಮಾಳ್ ದೇವಾಲಯ
PC: youtube
ಈ ವಿಶೇಷ ದೇವಾಲಯವೇ ಚೆನ್ನೈನಲ್ಲಿನ ನೆರುಕುಂಡ್ರದಲ್ಲಿನ ಕರಿವರದರಾಜು ಪೆರುಮಾಳ್ ಎಂಬ ದೇವಾಲಯವಿದೆ. ಅ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿಯು ನೆಲೆಸಿದ್ದಾನೆ. ಅವನನ್ನು ಇಲ್ಲಿ ಕರಿವರದರಾಜು ಪೆರುಮಾಳ್ ಎಂದು ಕರೆಯುತ್ತಾರೆ.

ಆರತಿ ಬೆಳಗುವಾಗ ಕಣ್ಣು ತೆರೆಯುವ ದೇವರು
ವೆಂಕಟೇಶ್ವರ ಸ್ವಾಮಿ ದೇವಾಲಯದಲ್ಲಿ ಶ್ರೀ ದೇವಿ ಮತ್ತು ಭೂದೇವಿ ಸುತ್ತುವರಿಯುತ್ತಿದ್ದಾರೆ. ಪೂಜೆಯ ಸಮಯದಲ್ಲಿ, ಆರತಿ ಎತ್ತುವ ಸಂದರ್ಭದಲ್ಲಿ ಪೂಜಾರಿ ಗರ್ಭಗುಡಿಯ ಪರದೆಯನ್ನು ಮುಚ್ಚಿ ಲೈಟ್‌ನ್ನು ಆಫ್ ಮಾಡುತ್ತಾರೆ. ಪೂಜಾರಿಯು ಆರತಿಯನ್ನು ದೇವರ ಸಮೀಪಕ್ಕೆ ತರುವಾಗ ಆರತಿಯ ಬೆಳಕಿಗೆ ದೇವರ ಕಣ್ಣುಗಳು ವಿಶಾಲವಾಗಿ ತೆರೆದಿರುತ್ತವೆ. ದೇವಿಯ ಕಣ್ಣುಗಳು ಆರತಿಯ ಬೆಳಕನ್ನೇ ನೋಡುತ್ತಿರುವಂತೆ ಕಾಣುತ್ತದೆ.

ಕರ್ಪೂರ ಕಾಂತಿಗೆ ಕಣ್ತೆರೆಯುತ್ತಾರೆ
ಕರ್ಪೂರ ಕಾಂತಿಯಲ್ಲಿ ಸ್ವಾಮಿಯು ಕಣ್ಣು ತೆರೆದಿರುವ ಹಾಗೆ ದರ್ಶನ ನೀಡುವ ಏಕೈಕ ದೇವಾಲಯ. ಈ ಮಾಹಿಮಾನ್ವಿತವಾದ ದೇವಾಲಯವಿರುವುದು ತಮಿಳು ನಾಡಿನ ಚೆನ್ನೈನಲ್ಲಿ. ಆರತಿ ಸಮಯದಲ್ಲಷ್ಟೇ ದೇವರು ಕಣ್ಣು ಬಿಡುತ್ತಾರೆ.

ಚಮತ್ಕಾರವೋ, ಕೈಚಳಕವೋ
ಉಳಿದ ಸಮಯದಲ್ಲಿ ಕಣ್ಣು ಮುಚ್ಚಿಯೇ ಇರುತ್ತಾರೆ. ಇದು ದೇವರ ಚಮತ್ಕಾರವೋ ಅಥವಾ ಆ ಮೂರ್ತಿಯನ್ನು ಸೃಷ್ಠಿಸಿದ ಕಲಾವಿದನ ಕೈ ಚಳಕವೋ ಹೇಳಲಾಗದು.

9.ರೂ ಅರ್ಪಣೆ
ಕರಿ ವರದರಾಜ ಪೆರುಮಾಳ್ ದೇವರನ್ನು 27 ನಕ್ಷತ್ರಗಳ ದೇವರು ಎನ್ನುತ್ತಾರೆ. ಅವನು 9 ಸಂಖ್ಯೆಯ ಆದಿಬಾಧಿಯೂ ಆಗಿದ್ದಾನೆ. ಆದ್ದರಿಂದ ಭಕ್ತರು ತಮ್ಮ ಕೋರಿಕೆಯನ್ನು ದೇವರ ಮುಂದೆ ಇಟ್ಟು 9 ರೂ.ಯನ್ನು ದೇವರ ಪಾದದ ಬಳಿ ಇಡುತ್ತಾರೆ. ಹೆಚ್ಚಾಗಿ 9 ದಿನಗಳ ಒಳಗೆ ಭಕ್ತರು ಮರಳಿ ಬಂದು ತಮ್ಮ ಬೇಡಿಕೆ ಈಡೇರಿಸಿದ್ದಕ್ಕಾಗಿ ಧನ್ಯವಾದನ್ನು ತಿಳಿಸುತ್ತಾರೆ.

ಗಜೇಂದ್ರ ಮೋಕ್ಷ
ವಿಷ್ಣುಪುರಾಣದಲ್ಲಿ ತಿಳಿಸಲಾಗಿರುವ ಗಜೇಂದ್ರ ಮೋಕ್ಷದ ಘಟನೆ ನಡೆದಿದ್ದು ಇಲ್ಲೇ ಎನ್ನಲಾಗುತ್ತದೆ. ಆನೆಯ ಕಾಲನ್ನು ಮೊಸಳೆ ಕಡಿದಿದ್ದು, ಇವೆರಡಕ್ಕೂ ಮೋಕ್ಷ ಲಭಿಸಿದ್ದು ಇಲ್ಲೇ ಎನ್ನಲಾಗುತ್ತದೆ.

ಹಳೆಯ ದೇವಾಲಯ
ಈ ದೇವಾಲಯವು 1100 ವರ್ಷ ಹಳೆಯದು ಎನ್ನಲಾಗುತ್ತದೆ. ಆದರೆ ಇಲ್ಲಿನ ಮೂರ್ತೀ ಸ್ವಯಂ ಭೂ ಮೂರ್ತಿಯ ಅಥವಾ ಯಾರೋ ನಿರ್ಮಿಸಿದ್ದಾ ಎನ್ನುವುದು ತಿಳಿದಿಲ್ಲ. ಇಲ್ಲಿಆಂಜನೇಯ ಸ್ವಾಮಿ, ರಾಮಾನುಜರ್ ಅಲ್ವಾರ್ ಗಾಗಿ ಪ್ರತ್ಯೇಕ ಸನ್ನಿಧಿಗಳನ್ನು ನಿರ್ಮಿಸಲಾಗಿದೆ.

ತಲುಪುವುದು ಹೇಗೆ?
ಈ ದೇವಾಲಯವು ಚೆನ್ನೈನಲ್ಲಿನ ಕೊಯಂಬಿಡು ಬಸ್ಸು ನಿಲ್ದಾಣದಿಂದ ಕೇವಲ ಒಂದುವರೆ ಕಿ.ಮೀ ದೂರದಲ್ಲಿದೆ. ಈ ದೇವಾಲಯವು ಅಷ್ಟೊಂದು ಪ್ರಸಿದ್ಧವಾಗಿಲ್ಲ. ಹಾಗಾಗಿ ಇಲ್ಲಿ ಹೆಚ್ಚಿನ ಜನಸಂದಣಿ ಇರೋದಿಲ್ಲ. ನೀವು ಆರಾಮವಾಗಿ ದೇವಿಯ ದರ್ಶನ ಪಡೆಯಬಹುದು.


Click it and Unblock the Notifications

















