Search
  • Follow NativePlanet
Share
» »ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ನಂದಿಯ ಬಾಯಿಯಿಂದ ಬರುವ ಈ ತೀರ್ಥ ಮೈಗೆ ಸೋಕಿದರೆ ರೋಗ ಗುಣವಾಗುತ್ತಂತೆ!

ಕೆಲವು ತೀರ್ಥ ಸ್ನಾನದಲ್ಲಿ ಸ್ನಾನ ಮಾಡಿದರೆ ರೋಗ ಗುಣಮುಖ ಆಗುತ್ತದೆ ಎನ್ನುವುದನ್ನು ನೀವು ಕೇಳಿರುವಿರಿ. ಇಂದು ನಾವು ನಿಮಗೆ ಅಂತಹದ್ದೇ ಒಂದು ಪ್ರಾಮುಖ್ಯವಾದ ತೀರ್ಥದ ಬಗ್ಗೆ ಹೇಳಲಿದ್ದೇವೆ.

ನಮ್ಮ ದೇಶದಲ್ಲಿ ಎಷ್ಟೆಲ್ಲಾ ಪುಣ್ಯಕ್ಷೇತ್ರಗಳಿವೆ, ತೀರ್ಥಸ್ನಾನಗಳಿವೆ. ಒಂದೊಂದೊಂದು ತೀರ್ಥಸ್ನಾನಕ್ಕೂ ಅದರದೇ ಆದ ಮಹತ್ವವಿದೆ. ತೀರ್ಥ ಸ್ನಾನದಲ್ಲಿ ಸ್ನಾನ ಮಾಡಿದರೆ ಪಾಪ ವಿಮೋಚನೆಯಾಗುತ್ತದೆ ಎಂದು ಹೇಳುತ್ತಾರೆ. ಅಂತಹದ್ದೇ ಕೆಲವು ತೀರ್ಥ ಸ್ನಾನದಲ್ಲಿ ಸ್ನಾನ ಮಾಡಿದರೆ ರೋಗ ಗುಣಮುಖ ಆಗುತ್ತದೆ ಎನ್ನುವುದನ್ನು ನೀವು ಕೇಳಿರುವಿರಿ. ಇಂದು ನಾವು ನಿಮಗೆ ಅಂತಹದ್ದೇ ಒಂದು ಪ್ರಾಮುಖ್ಯವಾದ ತೀರ್ಥದ ಬಗ್ಗೆ ಹೇಳಲಿದ್ದೇವೆ. ಅದುವೇ ದಕ್ಷಿಣ ಮುಖ ನಂದಿ ತೀರ್ಥ.

ದಕ್ಷಿಣ ಮುಖ ನಂದಿ ತೀರ್ಥ

ದಕ್ಷಿಣ ಮುಖ ನಂದಿ ತೀರ್ಥ

PC: Masterzatak

ಶಿವಲಿಂಗದ ಮೇಲೆ ನೀರು ಬೀಳುವುದು ಹಾಗೂ ಲಿಂಗದ ಎದುರು ಕಲ್ಯಾಣಿ ಇರುವುದು ಈ ದೇಗುಲದ ವಿಶೇಷ. ತಗ್ಗು ಪ್ರದೇಶದಲ್ಲಿರುವ ಈ ದೇಗುಲ ಅನೇಕ ವಿಸ್ಮಯಗಳನ್ನು ಒಳಗೊಂಡಿದೆ. ಮಲ್ಲೇಶ್ವರಂನ 15ನೇ ಅಡ್ಡರಸ್ತೆ ವ್ಯಾಪ್ತಿಯಲ್ಲಿರುವ ಈ ದೇಗುಲಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ.

ಬಾಯಿಯಿಂದ ನೀರು ಸುರಿಸುತ್ತಿರುವ ನಂದಿ

ಬಾಯಿಯಿಂದ ನೀರು ಸುರಿಸುತ್ತಿರುವ ನಂದಿ

PC: Masterzatak

ಗೌತಮ ಮಹರ್ಷಿಗಳ ಅನುಮತಿಯಂತೆ ವೃಷಭಾವತಿ ನದಿಯು ಬಸವನ ಬಾಯಿಂದ ಹರಿಯುತ್ತಿದ್ದಾಳೆ ಎನ್ನುತ್ತದೆ ಪುರಾಣ. ಹಾಗಾಗಿಯೇ ಬಸವನ ಬಾಯಲ್ಲಿ ವರ್ಷವಿಡೀ ನೀರು ಜಿನುಗುತ್ತದೆ. ನಂದಿಯ ಬಾಯಿಂದ ಬರುವ ನೀರಲ್ಲಿ ರೋಗ ನಿವಾರಕ ಶಕ್ತಿ ಅಡಗಿದೆ. ಈ ನೀರನ್ನು ಮೈಗೆ ಸೋಕಿಸಿಕೊಂಡರೆ ಅನೇಕ ರೋಗಗಳು ಗುಣಮುಖವಾಗುತ್ತದೆ ಎನ್ನುವ ಪ್ರತೀತಿ ಇದೆ.

ನಾಗಾಭರಣಗಳಿಂದ ಅಲಂಕರಿಸಲಾದ ಶಿವಲಿಂಗ

ನಾಗಾಭರಣಗಳಿಂದ ಅಲಂಕರಿಸಲಾದ ಶಿವಲಿಂಗ

PC: Masterzatak

ವಿಶೇಷ ಶಿವಲಿಂಗವನ್ನು ನಾಗಾಭರಣಗಳಿಂದ ಅಲಂಕರಿಸಲಾಗುತ್ತದೆ. ರಾತ್ರಿಯ ದೀಪಾಲಂಕಾರ ಬಹಳ ವಿಶೇಷವಾಗಿರುತ್ತದೆ. ದೇಗುಲದಲ್ಲಿರುವ ಕೆತ್ತನೆಗಳು, ಪ್ರವೇಶ ದ್ವಾರದ ಗೋಪುರಗಳು ಹಾಗೂ ಗೋಪುರದ ಮೇಲಿರುವ ನಂದಿ, ಶಿವ-ಪಾರ್ವತಿಯ ಮೂರ್ತಿಗಳು ಮನಮೋಹಕವಾಗಿವೆ. ದೇಗುಲದ ಆರಂಭದಲ್ಲೇ ಗಣಪತಿ ವಿಗ್ರಹವನ್ನು ಇಡಲಾಗಿದೆ. ದೇಗುಲದ ಎದುರಲ್ಲಿರುವ ಸುಂದರ ಕಲ್ಯಾಣಿ ಇದೆ.

ಶುಭಕಾರ್ಯಗಳಲ್ಲಿ ಈ ತೀರ್ಥದ ಬಳಕೆ

ಶುಭಕಾರ್ಯಗಳಲ್ಲಿ ಈ ತೀರ್ಥದ ಬಳಕೆ

PC:Masterzatak

ನಂಬಿಕೆ ನಂದಿಯ ಬಾಯಿಂದ ಬರುವ ನೀರು ಶಿವಲಿಂಗದ ಮೇಲೆ ಬೀಳುತ್ತದೆ. ನಂತರ ಕಲ್ಯಾಣಿಗೆ ಹರಿದು ಸಾಗುತ್ತದೆ. ಅದನ್ನು ಜನರು ತೀರ್ಥವೆಂದು ಸ್ವೀಕರಿಸುತ್ತಾರೆ. ಈ ನೀರನ್ನು ಗುದ್ದಲಿ ಪೂಜೆಗೆ, ಬಾವಿ ತೋಡಿಸುವಾಗ ಮಾಡುವ ಗಂಗಾ ಪೂಜೆಗೆ, ಮದುವೆ, ಮುಂಜಿ ಹಾಗೂ ಇತರ ಶುಭ ಕಾರ್ಯಗಳಲ್ಲಿ ಬಳಸಲು ಕೊಂಡೊಯ್ಯುತ್ತಾರೆ. ಇದರಿಂದ ಕಾರ್ಯಗಳು ಸುಗಮಗೊಂಡು, ಮನದ ಆಸೆಗಳು ಪೂರೈಸುತ್ತವೆ ಎನ್ನುವ ನಂಬಿಕೆಯಿದೆ.

ಇನ್ನಿತರ ದೇವಾಲಯಗಳು

ಇನ್ನಿತರ ದೇವಾಲಯಗಳು

PC:Masterzatak

ಆಕರ್ಷಣೆ ದೇಗುಲದ ಹತ್ತಿರ ಸ್ಯಾಂಕಿ ಕೆರೆ, ಕಾಡು ಮಲ್ಲೇಶ್ವರ ದೇಗುಲ, ಚೌಡಯ್ಯಾ ಮೆಮೊರಿಯಲ್ ಹಾಲ್, ಸಾಯಿ ಬಾಬಾ ದೇಗುಲ, ಮಾರಮ್ಮಾ ದೇಗುಲ ಹಾಗೂ ಗಂಗಮ್ಮಾ ದೇಗುಲವಿದೆ.

ಎಲ್ಲಿದೆ ಈ ದಕ್ಷಿಣ ಮುಖ ನಂದಿ ತೀರ್ಥ

ಎಲ್ಲಿದೆ ಈ ದಕ್ಷಿಣ ಮುಖ ನಂದಿ ತೀರ್ಥ

PC:Masterzatak

ಶ್ರೀ ದಕ್ಷಿಣಮುಖು ನಂದಿ ತೀರ್ಥ ಕಲ್ಯಾಣಿ ಕ್ಷೇತ್ರವು ಗಂಗಮ್ಮ ದೇವಸ್ಥಾನದ ಮುಂದೆ ಇರುವ ಒಂದು ಸಣ್ಣ ದೇವಾಲಯವಾಗಿದ್ದು ಬೆಂಗಳೂರು ನಗರದ ವಾಯುವ್ಯ ಪ್ರದೇಶದಲ್ಲಿ ಮಲ್ಲೆಶ್ವರಂಮ್ ಲೇಔಟ್ ನ 2 ನೇ ಟೆಂಪಲ್ ಸ್ಟ್ರೀಟ್ನನಲ್ಲಿರುವ ಕಾಡು ಮಲ್ಲೆಶ್ವರ ದೇವಾಲಯಕ್ಕೆ ವಿರುದ್ಧವಾಗಿ ಈ ದೇವಾಲಯವಿದೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+