Search
  • Follow NativePlanet
Share
» »ಭಾರತದ ಈ ಸ್ಥಳಗಳಲ್ಲಿ ಕೆಲವು ಪ್ರಮುಖ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ

ಭಾರತದ ಈ ಸ್ಥಳಗಳಲ್ಲಿ ಕೆಲವು ಪ್ರಮುಖ ಹಬ್ಬಗಳನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ

ಭಾರತದ ವಿಶಿಷ್ಟ ಉತ್ಸವಗಳನ್ನು ಅನುಭವಿಸಲು ನೆರವಾಗುವಂತಹ ಪ್ರಯಾಣ ಮಾರ್ಗದರ್ಶಿ

ಭಾರತದ ಹಬ್ಬಗಳು ಮತ್ತು ಹಬ್ಬದ ಸಮಯದಲ್ಲಿ ಅವುಗಳು ಪ್ರತಿನಿಧಿಸುವಂತಹ ವಿನೋದಗಳು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. ಇಂದು ಹೋಳಿ ಹಬ್ಬಗಳಂತಹ ಹಬ್ಬಗಳನ್ನು ಭಾರತ ಮಾತ್ರವಲ್ಲದೆ ಬೇರೆ ದೇಶಗಳಲ್ಲಿಯೂ ಕೂಡ ಉತ್ಸಾಹ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ಭಾರತದಲ್ಲಿ, ಸೆಪ್ಟೆಂಬರ್ ತಿಂಗಳು ವರ್ಣರಂಜಿತ ಮತ್ತು ವಿಶಿಷ್ಟವಾದ ಹಬ್ಬಗಳ ಸರಮಾಲೆಯ ಆರಂಭವನ್ನು ಸೂಚಿಸುತ್ತದೆ, ಅದು ಜನವರಿ ತಿಂಗಳವರೆಗೆ ಮುಂದುವರಿಯುತ್ತದೆ. ದೇಶದಲ್ಲಿ ಆಚರಿಸಲಾಗುವ ಪ್ರತಿಯೊಂದೂ ಹಬ್ಬಗಳೂ ಆಯಾ ಪ್ರದೇಶಗಳಿಗೆ ವಿಶಿಷ್ಟವಾಗಿದೆ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲ್ಪಡುತ್ತದೆ. ಆದ್ದರಿಂದ ಯಾವುದಾದರೂ ಒಂದು ಹಬ್ಬವನ್ನು ಆರಿಸಿ ಮತ್ತು ನಿಮ್ಮ ಜೀವನದ ಅತ್ಯಂತ ಶ್ರೇಷ್ಟವಾದ ಪ್ರಯಾಣದ ಅನುಭವಕ್ಕಾಗಿ ಹೊರಡಲು ಸಿದ್ಧರಾಗಿ.

ಭಾರತಾದ್ಯಂತದಲ್ಲಿ ಪ್ರಯಾಣಿಸುವಾಗ ಆಯಾ ಪ್ರದೇಶದ ಸಂಸ್ಕೃತಿ, ಭಾಷೆ, ಭೂದೃಶ್ಯಗಳು ಮತ್ತು ವೇಷಭೂಷಣಗಳೂ ಕೂಡ ಕೆಲವೇ ಕೆಲವು ಕಿಲೋಮೀಟರ್ ಗಳಿಗೂ ಬದಲಾಗುತ್ತಾ ನಿಮ್ಮನ್ನು ಆಶ್ಚರ್ಯಚಕಿತರನ್ನಾಗಿಸುತ್ತದೆ. ಶೀಮಂತ ಇತಿಹಾಸವನ್ನು ಹೊಂದಿದ್ದ ಈ ಹಬ್ಬಗಳು ಆಧುನಿಕ ಕಾಲದಲ್ಲಿ ದೊಡ್ಡ, ಭವ್ಯವಾದ ಮತ್ತು ವೈವಿಧ್ಯಮಯವಾಗಿ ವಿಕಸನಗೊಂಡಿವೆ. ಹೆಚ್ಚು ಆಸಕ್ತಿದಾಯಕ ವಿಷಯವೆಂದರೆ ಭಾರತದ ವಿವಿಧ ಭಾಗಗಳಲ್ಲಿ ಈ ಹಬ್ಬಗಳನ್ನು ಯಾವ ರೀತಿಯಾಗಿ ಆಚರಿಸಲಾಗುತ್ತದೆ ಎಂಬುದು. ಅವುಗಳಲ್ಲಿ ಕೆಲವು ವಾಸ್ತವವಾಗಿ, ವಿವಿಧ ಪ್ರದೇಶಗಳಲ್ಲಿ ಅನುಸರಿಸಿದ ವಿವಿಧ ಪೌರಾಣಿಕ ದಂತಕಥೆಗಳನ್ನು ಸಹ ಹೊಂದಿವೆ. ಆದ್ದರಿಂದ ನಿಮಗೆ ಬೇಕಾದ ಹಬ್ಬವನ್ನು ಆರಿಸಿಕೊಳ್ಳಿ ಮತ್ತು ನಿಮ್ಮ ಜೀವನದ ಅತ್ಯಂತ ಶ್ರೀಮಂತ ಪ್ರಯಾಣದ ಅನುಭವಕ್ಕಾಗಿ ಹೊರಡಲು ಸಿದ್ಧರಾಗಿ.

ಕೇರಳ

ಕೇರಳ

ಓಣಂ - ಕೇರಳ

ದಿನಾಂಕ : ಆಗಸ್ಟ್ 30ರಿಂದ ಸೆಪ್ಟೆಂಬರ್ 08.

ತಾಣಗಳು : ತ್ರಿಶೂರ್, ಪಾಲಘಾಟ್, ಅರನ್ಮೂಲಾ, ಪಥನಂಥಿಟ್ಟಾ, ಪಾಲಕ್ಕಾಡ್, ಅಲ್ಲೆಪ್ಪಿ

ನಯನಮನೋಹರ ಭೂದೃಶ್ಯಗಳನ್ನು ತನ್ನಲ್ಲಿ ಹೊಂದಿರುವ ಕೇರಳದಲ್ಲಿ ಓಣಂ ಹಬ್ಬವನ್ನು ಹೆಚ್ಚು ಸಂಭ್ರಮದಿಂದ ಆಚರಿಸಲಾಗುತ್ತದೆ. ಈ ಸಮಯದಲ್ಲಿ ನಗರಗಳು, ಹಳ್ಳಿಗಳು ಎಲ್ಲಾ ಕಡೆಯಲ್ಲಿಯೂ ಒಂದು ವಾರದವರೆಗೆ ನಡೆಯುವ ಈ ಹಬ್ಬದ ಸಮಯವು ಜೀವಂತ ಕಳೆಯನ್ನು ತುಂಬುತ್ತದೆ. ಮಹಿಳೆಯರಿಂದ ರಚಿಸಲ್ಪಡುವ ವರ್ಣರಂಜಿತ ಹೂವುಗಳ ಪೂಕಳಂ ನ ದೃಶ್ಯವು ನಯನ ಮನೋಹರವಾಗಿರುತ್ತದೆ ಅಲ್ಲದೆ ಈ ಸಮಯದಲ್ಲಿ ಕೇರಳ ಸೀರೆ ಮತ್ತು ಸಾಂಪ್ರದಾಯಿಕ ಬಂಗಾರದ ಬಣ್ಣದ ಅಂಚಿರುವ ಮುಂಡುಗಳನ್ನು ತೊಟ್ಟು ಪುರುಷರು ಮತ್ತು ಮಹಿಳೆಯರು ಹಬ್ಬಕ್ಕಾಗಿ ತಯಾರಾಗುತ್ತಾರೆ. ಪುಲ್ಲಿಕಲಿಯಂತಹ ವಿವಿಧ ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಬೋಟ್ ರೇಸ್‌ಗಳಂತಹ ಕ್ರೀಡಾಕೂಟಗಳು ಎಲ್ಲವನ್ನೂ 'ದೇವರ ಸ್ವಂತ ನಾಡು' ಕೇರಳದಲ್ಲಿ ವೀಕ್ಷಿಸಬಹುದು.

ಆದುದರಿಂದ ಕೇರಳದ ಹಲವಾರು ತಾಣಗಳಿಗೆ ಪ್ರಯಾಣಿಸಿ ಅಲ್ಲಿ ವಿಭಿನ್ನ ರೀತಿಯಲ್ಲಿ ನಡೆಯುವ ಓಣಂನ ಆಚರಣೆಗಳ ಅನುಭವವನ್ನು ಪಡೆಯಿರಿ. ಪುಲ್ಲಿಕಲಿಯ ಉತ್ಸಾಹಭರಿತ ಪ್ರದರ್ಶನವನ್ನು ವೀಕ್ಷಿಸಲು ತ್ರಿಶೂರ್‌ಗೆ ಭೇಟಿ ನೀಡಿ ಅಥವಾ ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುವಂತಹ ಸ್ನೇಕ್ ಬೋಟ್ ರೇಸ್‌ಗಳಲ್ಲಿ ಭಾಗವಹಿಸಲು ಅರನ್ಮುಲಾಗೆ ಹೋಗಿ. ಮತ್ತು ನೀವು ಕೇರಳದಲ್ಲಿ ಎಲ್ಲೇ ಇದ್ದರೂ ಸುಂದರವಾದ ಪೂಕಲಂ ಅನ್ನು ರಚಿಸಲು ನೀವೂ ಪ್ರಯತ್ನಿಸಿ. ನೀವು ಎಲ್ಲಾ ಉತ್ಸಾಹದಿಂದ ದಣಿದ ನಂತರ, ತಾಜಾ ಹಸಿರು ಬಾಳೆ ಎಲೆಯ ಮೇಲೆ ಬಡಿಸುವ ಓಣಂಸದ್ಯವನ್ನು ರೂಪಿಸುವ 26 ಭಕ್ಷ್ಯಗಳ ರುಚಿಕರವಾದ ಭೋಜನವನ್ನು ಸವಿಯಲು ಬಯಸುವುದಿಲ್ಲವೆ ?

ಲಡಾಖ್

ಲಡಾಖ್

ಲಡಾಖ್ ಹಬ್ಬ-ಲೇಹ್

ದಿನಾಂಕ : ಸೆಪ್ಟೆಂಬರ್ 01-15

ತಾಣಗಳು : ಲೇಹ್ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳು

ಲಡಾಖ್‌ನ ಒರಟಾದ ಮತ್ತು ಬೆರಗುಗೊಳಿಸುವ ಭೂಮಿಗೆ ಪ್ರವಾಸ ಮಾಡುವ ಬಯಕೆಯನ್ನು ನೀವು ಬಹಳ ಹಿಂದಿನಿಂದಲೂ ಹೊಂದಿದ್ದಲ್ಲಿ, ಅದಕ್ಕೆ ಪೂರಕವಾಗಿರುವ ಹಾಗೂ ತುಂಬಾ ಆಕರ್ಷಕವಾಗಿರುವ ಅವಕಾಶ ಇಲ್ಲಿದೆ ಲಡಾಖ್ ಹಬ್ಬವು ಒಂದು ಸಾಂಸ್ಕೃತಿಕ ರಸದೌತಣವನ್ನು ಪ್ರಯಾಣಿಕರಿಗೆ ನೀಡುತ್ತದೆ. ಸುಗ್ಗಿಯ ಆಚರಣೆಯೊಂದಿಗೆ ಹೊಂದಿಕೆಯಾಗುವ ಹಬ್ಬವು ಈ ಪ್ರದೇಶದ ವಿವಿಧ ಗೊಂಪಗಳು, ಹಳ್ಳಿಗಳು ಮತ್ತು ಪಟ್ಟಣಗಳನ್ನು ಜೀವಂತಗೊಳಿಸುತ್ತದೆ. ಎಲ್ಲಾ ಆಚರಣೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುವ ಲೇಹ್‌ಗೆ ಪ್ರವಾಸವು ಅತ್ಯಗತ್ಯವಾಗಿರುತ್ತದೆ.

ಈ ಪಟ್ಟಣವು ಸುತ್ತಮುತ್ತಲಿನ ವಿವಿಧ ಪ್ರದೇಶಗಳು ಮತ್ತು ಮಠಗಳಿಗೆ ದಾರಿ ಮಾಡಿಕೊಡುತ್ತದೆ, ಇವು ಉತ್ಸವಗಳಲ್ಲಿ ಭಾಗವಹಿಸಲು ಸುಲಭವಾಗಿ ಪ್ರವೇಶಿಸಬಹುದು. ಉತ್ಸವವು ನೃತ್ಯ, ರಂಗಭೂಮಿ, ಮೆರವಣಿಗೆಗಳು, ಆಚರಣೆಗಳು, ಬಿಲ್ಲುಗಾರಿಕೆ ಇತ್ಯಾದಿಗಳ ಪ್ರದರ್ಶನಗಳನ್ನು ಒಳಗೊಂಡಿದೆ. ಇದು ಸಾಮಾನ್ಯವಾಗಿ ಲಡಾಖ್‌ಗೆ ಪ್ರಯಾಣಿಸಲು ಋತುವಿನ ಅಂತ್ಯವನ್ನು ಸೂಚಿಸುವ ತಿಂಗಳ ಅಗ್ರಸ್ಥಾನದಲ್ಲಿದೆ ಮತ್ತು ಮನೆಗೆ ಮರಳುವ ಸಮಯದಲ್ಲಿ ಎದ್ದುಕಾಣುವ ಭೂದೃಶ್ಯಗಳಿಗಿಂತ ಹೆಚ್ಚಿನದನ್ನು ನೀಡುತ್ತವೆ.

ಗುಜರಾತ್

ಗುಜರಾತ್

ನವರಾತ್ರಿ- ಗುಜರಾತ್

ದಿನಾಂಕ : ಸೆಪ್ಟಂಬರ್ 26 ರಿಂದ - ಅಕ್ಟೋಬರ್ 5.

ತಾಣಗಳು : ವಡೋದರ , ಅಂಬಾಜಿ

ನವರಾತ್ರಿಯ ಸಂತೋಷದ ಹಬ್ಬವು ಧಾರ್ಮಿಕ ಮತ್ತು ಸಾಂಸ್ಕೃತಿಕ ಉತ್ಸವವಾಗಿದೆ. ಈ ಹಬ್ಬವು ಹೆಸರೇ ಸೂಚಿಸುವಂತೆ ಒಂಬತ್ತು ರಾತ್ರಿಗಳಲ್ಲಿ ಆಚರಿಸಲಾಗುವ ಹಬ್ಬವು ಶಕ್ತಿ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ಈ ಹಬ್ಬವು ದೇಶದಾದ್ಯಂತದಲ್ಲಿ ಆಚರಿಸಲಾಗುತ್ತಿದ್ದು, ಇದನ್ನು ಗುಜರಾತ್ ರಾಜ್ಯದಲ್ಲಿ ವಿಶಿಷ್ಟವಾಗಿ ವರ್ಣರಂಜಿತವಾಗಿ ಆಚರಿಸಲಾಗುತ್ತದೆ. ರಾಜ್ಯದ ಸಾಂಸ್ಕೃತಿಕ ರಾಜಧಾನಿ ವಡೋದರಾವು ಉತ್ಸವಕ್ಕೆ ಕಾರಣವಾಗುವ ಚಟುವಟಿಕೆಗಳ ನವೀಕೃತ ಉತ್ಸಾಹವನ್ನು ನೋಡುತ್ತದೆ. ಬೀದಿಗಳು ಮತ್ತು ಸಭೆಯ ಕೇಂದ್ರಗಳು ಅಲಂಕರಿಸಲ್ಪಡುತ್ತವೆ ಮತ್ತು ಸಾಂಪ್ರದಾಯಿಕ ಗರ್ಬಾದಂತಹ ಉತ್ಸಾಹ ಭರಿತ ನೃತ್ಯ ಪ್ರದರ್ಶನದಲ್ಲಿ ಜನರು ಭಾಗವಹಿಸುತ್ತಾರೆ. ಸಾಂಪ್ರದಾಯಿಕ ಉಡುಗೆ ತೊಡುಗೆಗಳನ್ನು ಧರಿಸಿ ದಾಂಡಿಯಾದ ನೃತ್ಯ, ಹಾಗೂ ದಾಂಡಿಯಾದ ಲಯಬದ್ಧ ಹೆಜ್ಜೆಗಳು ಅಥವಾ ವಿವಿಧ ನರ್ತಕರು ನಡೆಸುವ ಕೋಲಾಟಗಳನ್ನು ವೀಕ್ಷಿಸಲು ಸಂತೋಷವನ್ನು ನೀಡುತ್ತದೆ ಮತ್ತು ಇದರಲ್ಲಿ ನೀವೂ ಭಾಗಿಯಾದಲ್ಲಿ ನಿಮಗೆ ಇನ್ನೂ ಹೆಚ್ಚಿನ ವಿನೋದವನ್ನು ನೀಡುತ್ತದೆ. ಮೋಜಿನ ಚಟುವಟಿಕೆಗಳನ್ನು ಬದಿಗಿಟ್ಟು, ಸುಂದರವಾದ ಅಂಬಾಜಿ ದೇವಸ್ಥಾನಕ್ಕೆ ಭೇಟಿ ನೀಡಲು ಮರೆಯದಿರಿ ಮತ್ತು ಸರ್ವಶಕ್ತ ದೇವತೆಯ ಆಶೀರ್ವಾದವನ್ನು ಪಡೆದುಕೊಳ್ಳಿ.

ಜೈಪುರ

ಜೈಪುರ

ಜೈಪುರ ಶಾಪಿಂಗ್ ಫ಼ೆಸ್ಟಿವಲ್

ಸ್ಥಳ : ಜೈಪುರ

ಭಾರತದಲ್ಲಿಯ ಅತ್ಯಂತ ದೊಡ್ಡ ಶಾಪಿಂಗ್ ಫೆಸ್ಟಿವಲ್ ಎಂದು ಪ್ರಚಾರದಲ್ಲಿರುವ ಜೈಪುರ್ ಶಾಪಿಂಗ್ ಪೆಸ್ಟಿವಲ್ ಸುಂದರವಾದ 'ಪಿಂಕ್ ಸಿಟಿ' ಯನ್ನು ಭೇಟಿ ಕೊಡಲು ಒಂದು ಕಾರಣವಷ್ಟೆ. ದೀಪಾವಳಿ ಹಬ್ಬಕ್ಕೆ ಮುನ್ನ ಸುಮಾರು ಒಂದು ತಿಂಗಳ ಕಾಲ ಈ ಮಹಾ ಕಾರ್ಯಕ್ರಮ ನಡೆಯುತ್ತದೆ. ಜೈಪುರವು ತನ್ನ ಅನೇಕ ಪಾರಂಪರಿಕ ಸ್ಮಾರಕಗಳೊಂದಿಗೆ ಜನಪ್ರಿಯ ಪ್ರವಾಸಿ ಆಕರ್ಷಣೆಯಾಗಿದೆ, ಆದರೆ ಶಾಪಿಂಗ್ ಫೆಸ್ಟಿವಲ್ ಸಮಯದಲ್ಲಿ ನಗರದಲ್ಲಿ ಹೊರಹೊಮ್ಮುವ ಸೆಳೆತವು ಹೆಚ್ಚು ಪ್ರಸಿದ್ದಿಯನ್ನು ಪಡೆದಿದೆ.

ಸಾವಿರಾರು ಅಂಗಡಿಕಾರರು ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ ಮತ್ತು ಅವುಗಳಲ್ಲಿ ಹೆಚ್ಚಿನವು ವರ್ಣರಂಜಿತವಾಗಿರುತ್ತವೆ. ಪ್ರದರ್ಶನದಲ್ಲಿರುವ ಎಲ್ಲಾ ಆಕರ್ಷಕ ವಸ್ತುಗಳನ್ನು ಖರೀದಿಸಲು ನಿಮ್ಮ ಜೇಬಿಗೆ ಒತ್ತಡವಾಗಬಹುದು, ಆದ್ದರಿಂದ ಪ್ರದರ್ಶನದಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಪ್ರದರ್ಶನಗಳೊಂದಿಗೆ ವಿರಾಮ ತೆಗೆದುಕೊಳ್ಳಿ. ಕುಟುಂಬ, ಸ್ನೇಹಿತರೊಂದಿಗೆ ಅಥವಾ ಏಕಾಂಗಿಯಾಗಿ ಪ್ರಯಾಣಿಸಿ, ನೀವು ಹೇಗೆ ಹೋದರೂ ಇಲ್ಲಿ ಉತ್ತಮ ಸಮಯವನ್ನು ಕಳೆಯಬಹುದು!

ಮೈಸೂರು

ಮೈಸೂರು

ದಸರಾ- ಮೈಸೂರು

ದಿನಾಂಕ : ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 3

ಸ್ಥಳ : ಮೈಸೂರು

ದಸರ ಅಂದರೆ ನವರಾತ್ರಿಯ ಆಚರಣೆ ಇದು ಶಕ್ತಿಯುತ ದೇವಿಯನ್ನು ಪೂಜಿಸುವ ಹಾಗೂ ದುಷ್ಟ ಶಕ್ತಿಯಿಂದ ಮುಕ್ತಿ ಪಡೆಯಲು ಆಚರಿಸುವ ಹಬ್ಬವಾಗಿದೆ. ಮೈಸೂರಿನಲ್ಲಿ ಮಹಿಷಾಸುರನ ಮೇಲೆ ಚಾಮುಂಡೇಶ್ವರಿ ದೇವಿಯ ವಿಜಯೋತ್ಸವದ ಪ್ರತೀಕವಾಗಿ ಆಚರಿಸಲಾಗುತ್ತದೆ ಈ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಮೈಸೂರು ನಗರದಲ್ಲಿ ನಡೆಯುವ ಅತ್ಯಂತ ದೊಡ್ಡ ಹಬ್ಬವಾಗಿದ್ದು ಇದರಲ್ಲಿ ರಾಜವಂಶಸ್ಥರೂ ವೈಭವೋಪೇತವಾಗಿ ಭಾಗವಹಿಸುವುದು ಒಂದು ವಿಶೇಷ. ಈ ಸಮಯದಲ್ಲಿ ಮೈಸೂರು ಅರಮನೆಯು ದೀಪಗಳಿಂದ ಆವೃತವಾಗಿರುವುದರಿಂದ ಸಂಜೆಯ ಸಮಯದಲ್ಲಿ ಅದ್ಭುತ ನೋಟವನ್ನು ನೀಡುತ್ತದೆ.

ಅಲ್ಲದೆ ಅನೇಕ ಬೀದಿಗಳನ್ನೂ ಸಹ ಅಲಂಕರಿಸಲಾಗುತ್ತದೆ ಮತ್ತು ಹಬ್ಬಗಳಲ್ಲಿ ಭಾಗವಹಿಸಲು ಜನರು ಸಾಗರೋಪಾದಿಯಲ್ಲಿ ಸೇರುತ್ತಾರೆ. ಜಂಬೋ ಸವಾರಿ ಎಂಬ ಭವ್ಯ ಮೆರವಣಿಗೆಯನ್ನು ಆಭರಣಗಳಲ್ಲಿ ಅಲಂಕರಿಸಿದ ಮತ್ತು ಚಾಮುಂಡೇಶ್ವರಿ ದೇವಿಯನ್ನು ಹೊತ್ತ ಆನೆಗಳ ಮೆರವಣಿಗೆಯನ್ನು ಕಾಣಬಹುದು.

ಕೋಲ್ಕತ್ತಾ

ಕೋಲ್ಕತ್ತಾ

ದುರ್ಗಾ ಪೂಜೆ - ಕೋಲ್ಕತ್ತಾ

ದಿನಾಂಕ : ಸೆಪ್ಟಂಬರ್ 25- ಅಕ್ಟೋಬರ್ 01ರವರೆಗೆ

ಸ್ಥಳ : ಕೋಲ್ಕತ್ತಾ

ಅತ್ಯಂತ ಪೌರಣಿಕ ಕಥೆಗಳು ದುರ್ಗಾ ದೇವಿಯ ವಿಜಯೋತ್ಸವಕ್ಕೆ ಸಂಬಂಧಿಸಿದ ಸುಂದರ ಕಥೆಗಳನ್ನು ಹೇಳುತ್ತವೆ ಹಾಗೂ ಸುಂದರರೂಪಿ ದೇವಿಯು ಹೇಗೆ ದುಷ್ಟ ಶಕ್ತಿಯ ಮೇಲೆ ವಿಜಯ ಸಾಧಿಸಿದಳು ಎನ್ನುವುದನ್ನು ವಿಸ್ತಾರವಾಗಿ ನಮಗೆ ಹೇಳುತ್ತವೆ. ದುರ್ಗಾ ಪೂಜೆಯ ಹಬ್ಬವು ಮೌಲ್ಯಗಳು ಮತ್ತು ಭಾವನೆಗಳ ಅದೇ ಸಂಗಮವನ್ನು ಪ್ರತಿಬಿಂಬಿಸುತ್ತಾ ಸೌಂದರ್ಯ ಮತ್ತು ಶಕ್ತಿಯ ಪ್ರತಿರೂಪವಾಗಿ ಆಚರಿಸುವ ಹಬ್ಬವಾಗಿದೆ. ದುರ್ಗಾ ಪೂಜೆಯ ಅವಿಸ್ಮರಣೀಯ ಅನುಭವಕ್ಕಾಗಿ ಭೇಟಿ ಕೊಡಲು ಅತ್ಯಂತ ಸುಂದರವಾದ ತಾಣವೆಂದರೆ ಕೋಲ್ಕತ್ತಾ. ಹಬ್ಬಕ್ಕೆ ತಿಂಗಳುಗಳಿಗೆ ಮೊದಲೇ ನಗರವು ಉತ್ಸಾಹದಿಂದ ತಯಾರಾಗುತ್ತದೆ, ಪ್ರತಿ ಬೀದಿಯು 'ಪೆಂಡಾಲ್ 'ಅಥವಾ ವಿವಿಧ ಸೆಟ್ಟಿಂಗ್‌ಗಳಲ್ಲಿ ದುರ್ಗಾ ದೇವಿಯ ಪ್ರದರ್ಶನವನ್ನು ಹಾಕಲು ಸಿದ್ಧವಾಗುತ್ತದೆ.

ಈ ಪ್ರತಿಮೆಗಳನ್ನು ಸಾವಿರಾರು ಕುಶಲಕರ್ಮಿಗಳು ಹಗಲಿರುಳು ದಣಿವರಿಯಿಲ್ಲದೆ ದುಡಿಯುವ ಕೈಯಿಂದ ಸೊಗಸಾಗಿ ರಚಿಸಿರುತ್ತಾರೆ ಅಲ್ಲದೆ ಅನೇಕ ಪೆಂಡಲ್ ಗಳ ಉದ್ದಕ್ಕೂ ನಡೆದಲ್ಲಿ ಇದು ನಿಮ್ಮನ್ನು ಕಲೆಯ ಸೌಂದರ್ಯದಲ್ಲಿ ಮುಳುಗಿಸುತ್ತದೆ. ನಗರದಾದ್ಯಂತ ಅದ್ಭುತ ಉತ್ಸವದ ದೃಶ್ಯಗಳು, ಶಬ್ದಗಳು ಮತ್ತು ವಾಸನೆಗಳಲ್ಲಿ ತಲ್ಲೀನರಾಗಿರಿ.ಇಲ್ಲಿಯ ಅತ್ಯಂತ ಪ್ರಸಿದ್ದ ಸಿಹಿ ಖಾದ್ಯವಾದ ರಸಗುಲ್ಲಾದ ಬಗ್ಗೆ ಹೇಳಲು ಮರೆಯಲು ಸಾಧ್ಯವೆ? ಇಲ್ಲಿಯ ಪ್ರಸಿದ್ದ ಹಾಗೂ ಬಾಯಿ ನೀರೂರಿಸುವ ಸಿಹಿ ತಿಂಡಿಯಾದ ರಸಗುಲ್ಲಾವನ್ನು ಸವಿಯಲು ಮರೆಯದಿರಿ.

ಕೋಟಾ

ಕೋಟಾ

ಕೋಟ ದಸರಾ -ಕೋಟಾ

ದಿನಾಂಕ : ಅಕ್ಟೋಬರ್

ಸ್ಥಳ : ಕೋಟಾ

ಚಂಬಲ್ ನದಿಯ ದಡದಲ್ಲಿ ನೆಲೆಸಿರುವ ಕೋಟಾ ರಾಜಸ್ಥಾನದ ಒಂದು ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾಗಿದೆ. ಆದರೆ ಈ ನಗರಕ್ಕೆ ಪ್ರವಾಸ ಮಾಡುವುದಾದರೆ ಒಂದು ವಿಶೇಷ ಸಮಯವಿದೆ ಅದೇ ದಸರಾ ಹಬ್ಬದ ಅಕ್ಟೋಬರ್ ತಿಂಗಳು. ಭಾರತದ ಹಲವಾರು ವರ್ಣರಂಜಿತ ಹಬ್ಬಗಳ ಜೊತೆಗೆ ಕೋಟಾದ ದಸರಾ ಹಬ್ಬವು ಒಂದು ದೊಡ್ಡ ಮೇಳ ಅಥವಾ ಉತ್ಸವವಾಗಿದ್ದು ಇದು ಸಾಂಪ್ರದಾಯಿಕ ಸೆಳೆತವನ್ನು ನೀಡುತ್ತದೆ. ಪ್ರಯಾಣಿಕರು ಈ ಮೇಳದಲ್ಲಿ ಹಾಕಲಾಗುವ ಟೆಂಟ್ ಗಳತ್ತ ಹೆಜ್ಜೆ ಹಾಕುತ್ತಾ ಅಲ್ಲಿ ಕರಕುಶಲ ಕರ್ಮಿಗಳಿಂದ ಮಾರಾಟ ಮಾಡಲಾಗುವ ವಸ್ತುಗಳನ್ನು ಖರೀದಿಸಬಹುದು ಅಷ್ಟೇ ಅಲ್ಲದೆ ರಾತ್ರಿಯಲ್ಲಿ ನಡೆಯುವ ಭವ್ಯವಾದ ಕಾರ್ಯಕ್ರಮಗಳಲ್ಲಿಯೂ ಭಾಗವಹಿಸಬಹುದಾಗಿದೆ.

ರಾವಣನ ಎತ್ತರದ ಪ್ರತಿಮೆಗಳನ್ನು ವರ್ಣರಂಜಿತ ಮತ್ತು ಸಾರಸಂಗ್ರಹಿ ರೀತಿಯಲ್ಲಿ ರಚಿಸಲಾಗುತ್ತದೆ ಮತ್ತು. ದುಷ್ಟರ ಮೇಲೆ ಒಳಿತಿನ ವಿಜಯದ ಸಂಕೇತವಾಗಿ ಕತ್ತಲೆಯಲ್ಲಿ ಈ ಪ್ರತಿಕೃತಿಗಳನ್ನು ಸುಡಲಾಗುತ್ತದೆ ಈ ದೃಶ್ಯವನ್ನು ವಿಕ್ಷಿಸಲು ಜನರು ದೊಡ್ಡ ಸಂಖ್ಯೆಯಲ್ಲಿ ಸೇರುತ್ತಾರೆ. ನೃತ್ಯದ ಜ್ವಾಲೆಯ ದೃಶ್ಯಗಳು ನಿಮ್ಮನ್ನು ಹಿಡಿದಿಟ್ಟು ಕೊಂಡರೆ ಅರಮನೆಯಿಂದ ಮೇಳದ ಪ್ರದೇಶದವರೆಗೆ ನಡೆಯುವ ಮೆರವಣಿಗೆಯನ್ನು ವೀಕ್ಷಿಸಲು ಮರೆಯದಿರಿ. ಅಲಂಕರಿಸಿದ ಆನೆಗಳು, ಒಂಟೆಗಳು ಮತ್ತು ಕುದುರೆಗಳ ದೃಶ್ಯಗಳು ಮತ್ತು ಸಾಂಸ್ಕೃತಿಕ ಪ್ರದರ್ಶನಗಳು ನಿಮ್ಮ ಇಂದ್ರಿಯಗಳನ್ನು ಆಕರ್ಷಿಸುವುದು ಖಚಿತ.

ಅಳ್ವಾರ್

ಅಳ್ವಾರ್

ಮತ್ಸಾಯಾ- ಅಳ್ವಾರ್

ದಿನಾಂಕ - ಅಕ್ಟೋಬರ್ - 2-3

ಸ್ಥಳ: ಆಲ್ವಾರ್

ರಾಜಸ್ಥಾನವು ಕೇವಲ ಅಪರೂಪದ ತಾಣಗಳಿಗಾಗಿ ಮಾತ್ರ ಜನಪ್ರಿಯವಾಗಿರುವುದು ಮಾತ್ರವಲ್ಲದೆ ಈ ಮರುಭೂಮಿಯ ಮರಳಿನಾದ್ಯಂತ ವರ್ಣರಂಜಿತ ಹಲವಾರು ಹಬ್ಬಗಳ ಆಚರಣೆಗೂ ಪ್ರಸಿದ್ದಿಯನ್ನು ಪಡೆದಿದ್ದು ಇದಕ್ಕಾಗಿಯೂ ಇಲ್ಲಿಗೆ ಭೇಟಿ ಕೊಡಬಹುದಾಗಿದೆ. ಭಾರತದಲ್ಲಿ ಬೇರೆ ಬೇರೆ ಸ್ಥಳಗಳಲ್ಲಿ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ನಡೆಯುವ ಹಬ್ಬಗಳ ಹಾಗೆಯೇ ಇಲ್ಲಿಯೂ ಸಹ ಈ ತಿಂಗಳುಗಳಲ್ಲಿ ಮತ್ಸಾಯಾ ಹಬ್ಬವು ಅಲ್ವಾರ್ ನಲ್ಲಿ ನಡೆಯುತ್ತದೆ. ಮರುಭೂಮಿಯಲ್ಲಿರುವ ಓಯಸಿಸ್‌ನಂತಿರುವ ಅಲ್ವಾರ್ ನಗರವು ರೋಮಾಂಚಕ ಸಾಂಸ್ಕೃತಿಕ ಹಬ್ಬವನ್ನು ಬಹಳ ಉತ್ಸಾಹದಿಂದ ಆಚರಿಸುತ್ತದೆ. ಎರಡು ದಿನಗಳ ಉತ್ಸವವು ಅಕ್ಲ್ವಾರ್‌ನಲ್ಲಿ ಕಲಾತ್ಮಕ ಪ್ರದರ್ಶನಗಳನ್ನು ವೀಕ್ಷಿಸುವುದರ ಜೊತೆಗೆ ಮಾಡಲು ಅನೇಕ ವಿಷಯಗಳನ್ನು ಒದಗಿಸುತ್ತದೆ.

ಪ್ರಯಾಣಿಕರು ಪ್ಯಾರಾಸೈಲಿಂಗ್ ಮತ್ತು ಬಿಸಿ ಗಾಳಿಯ ಬಲೂನಿಂಗ್‌ನಂತಹ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸಬಹುದು. ಪ್ರವಾಸಿಗರು ಸಾಂಪ್ರದಾಯಿಕ ಆಟಗಳಲ್ಲಿ ಪಾಲ್ಗೊಳ್ಳಬಹುದು, ಆದಾಗ್ಯೂ, ಸ್ಥಳೀಯರಿಂದ ಕಠಿಣ ಸ್ಪರ್ಧೆಯನ್ನು ಎದುರಿಸಲು ಸಿದ್ಧರಾಗಿರಿ!

ಚೆನ್ನೈ

ಚೆನ್ನೈ

ಗೋಲು - ಚೆನ್ನೈ

ದಿನಾಂಕ : ಸೆಪ್ಟೆಂಬರ್ 26ರಿಂದ ಅಕ್ಟೋಬರ್ 05

ತಾಣ : ಚೆನ್ನೈ

ಭಾರತದಲ್ಲಿಯ ಅತ್ಯಂತ ವಿಭಿನ್ನವಾದ ಹಬ್ಬಗಳಲ್ಲಿ ಒಂದಾದ ತಮಿಳುನಾಡಿನ ಸಾಂಸ್ಕೃತಿಕ ಮತ್ತು ರಾಜಕೀಯ ರಾಜಧಾನಿಯು ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ಭಾರತದಲ್ಲಿ ಅತ್ಯಂತ ವಿಶಿಷ್ಟವಾದ ಹಬ್ಬಗಳಲ್ಲಿ ಒಂದನ್ನು ಆಚರಿಸುತ್ತದೆ, ಗೋಲು ಅಥವಾ ಕೋಲು ಹಬ್ಬವನ್ನು ಗೋಲು ಬೊಮ್ಮಾಯಿ ಎಂದೂ ಕರೆಯಲಾಗುತ್ತದೆ.ಈ ಹಬ್ಬವು ರಾಜ್ಯದಲ್ಲಿ ನವರಾತ್ರಿ ಆಚರಣೆಯ ಒಂದು ಭಾಗವಾಗಿದೆ. ನವರಾತ್ರಿಯ ದಿನಗಳಲ್ಲಿ ಕುಟುಂಬದ ಮಂದಿಯೆಲ್ಲಾ ಒಟ್ಟು ಸೇರಿ ಗೊಂಬೆಗಳನ್ನು ಆಕರ್ಶಕ ರೀತಿಯಲ್ಲಿ ಜೋಡಿಸುವ ಒಂದು ಸಾಂಪ್ರದಾಯಿಕ ಹಾಗೂ ಆಸಕ್ತಿದಾಯಕ ಚಟುವಟಿಕೆಯಲ್ಲಿ ತೊಡಗುತ್ತಾರೆ.

ಅದರಂತೆಯೇ ಇಲ್ಲಿ ದೇವಿ ಮಹಿಷಾಸುರ ಮರ್ಧಿನಿಯು ತನ್ನ ರಾಕ್ಷಸನ ಸಂಹಾರಕ್ಕೆ ಮುನ್ನ ದೇವಿ ಮಹಿಷಾಸುರಮರ್ದಿನಿ ತನ್ನ ಸಾರ್ವಭೌಮ ದರ್ಬಾರ್‌ನಲ್ಲಿ ಕುಳಿತಿರುವಂತೆ ಗೊಂಬೆಗಳನ್ನು ಅತ್ಯಂತ ಸೃಜನಾತ್ಮಕ ವಿಧಾನದಲ್ಲಿ ಕೂರಿಸುತ್ತಾರೆ. ಗೊಂಬೆಗಳನ್ನು ವರ್ಷಗಳಾದ್ಯಂತ ಸಂಗ್ರಹಿಸಲಾಗುತ್ತದೆ ಮತ್ತು ಪ್ರದರ್ಶನಕ್ಕೆ ಇರಿಸುವ ಸಮಯದಲ್ಲಿ ಅದನ್ನು ಹೊರತರಲಾಗುತ್ತದೆ. ಗೊಂಬೆಗಳನ್ನು ನೋಡಲು ಮತ್ತು ಬಜನ್ ಮತ್ತು ಹಾಡುಗಳ ಪಠಣ ಮಾಡಲು ಅತಿಥಿಗಳನ್ನು ಆಹ್ವಾನಿಸಲಾಗುತ್ತದೆ. ಅತ್ಯಂತ ವಿಶಿಷ್ಟವಾದ ಈ ಹಬ್ಬಗಳನ್ನು ಮಕ್ಕಳು ಮತ್ತು ವಯಸ್ಕರು ಸಂಪೂರ್ಣವಾಗಿ ಆನಂದಿಸುತ್ತಾರೆ.

ಮಾರ್ವಾರ್

ಮಾರ್ವಾರ್

ಮಾರ್ವಾರ್ ಹಬ್ಬ- ಮಾರ್ವಾರ್

ದಿನಾಂಕ ಅಕ್ಟೋಬರ್ 12-13

ಸ್ಥಳ : ಮಾರ್ವಾರ್ ಪ್ರಾಂತ್ಯ

ಅತ್ಯಂತ ಶ್ರೀಮಂತ ಪ್ರಾಂತ್ಯವಾದ ರಾಜಸ್ಥಾನದ ಮಾರ್ವಾರ್ ವಿಭಿನ್ನವಾದ ಹಬ್ಬವನ್ನು ಆಚರಿಸುತ್ತದೆ ಮಾರ್ವಾರ್ ಅಥವಾ ಮಾಂಡ್ ಎಂದು ಕರೆಯಲ್ಪಡುವ ನೃತ್ಯ ಮತ್ತು ಸಂಗೀತವನ್ನು ಆಚರಿಸುವ ವಿಶಿಷ್ಟ ಹಬ್ಬವನ್ನು ಆಚರಿಸುತ್ತದೆ. ಮಾರ್ವಾರ್ ತನ್ನ ಅನೇಕ ಸೊಗಸಾದ ಸ್ಮಾರಕಗಳು ಮತ್ತು ಅರಮನೆಗಳೊಂದಿಗೆ ಜನಪ್ರಿಯ ಪ್ರವಾಸಿ ತಾಣವಾಗಿದೆ. ಎರಡು ದಿನಗಳ ಉತ್ಸವವು ಜಾನಪದ ಪ್ರದರ್ಶನಗಳೊಂದಿಗೆ ಪ್ರದೇಶದ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಆಸಕ್ತಿದಾಯಕ ಉತ್ಸವವು ಮನರಂಜಿಸುವ ಒಂಟೆ ಹಚ್ಚೆ ಪ್ರದರ್ಶನವನ್ನು ಸಹ ಹೊಂದಿದೆ. ಅಲಂಕರಿಸಲ್ಪಟ್ಟ ಒಂಟೆಗಳು ಮತ್ತು ಅವುಗಳನ್ನು ಓಡಿಸುವವರು ಸ್ಪರ್ಧೆಗಳಲ್ಲಿ ಬಹುಮಾನಕ್ಕಾಗಿ ಹಾತೊರೆಯುತ್ತಾರೆ.

ಜೋಧಪುರ

ಜೋಧಪುರ

ರಾಜಸ್ಥಾನಿ ಜನಪದ ಹಬ್ಬ - ಜೋಧಪುರ

ದಿನಾಂಕ : ಅಕ್ಟೋಬರ್ 6-10

ಸ್ಥಳ : ಜೋಧಪುರ

ರಾಜಸ್ಥಾನದಲ್ಲಿರುವ ಜೋಧಪುರವು ಅತ್ಯಂತ ಪ್ರಸಿದ್ದ ಪ್ರವಾಸಿ ತಾಣವಾಗಿದ್ದು ಇದು ಹಲವಾರು ಹಬ್ಬಗಳನ್ನು ತನ್ನದೇ ಆದ ವಿಭಿನ್ನ ರೀತಿಯಲ್ಲಿ ಆಯೋಜಿಸುತ್ತದೆ. ಇದನ್ನು ರಾಜಸ್ಥಾನಿ ಜನಪದ ಹಬ್ಬ (ರಾಜಸ್ಥಾನಿ ಫ಼ೋಕ್ ಫ಼ೆಸ್ಟಿವಲ್) ಎಂದೂ ಕರೆಯುತ್ತಾರೆ. ಇದು ಹಲವಾರು ಪ್ರಯಾಣಿಕರು ಮತ್ತು ಉತ್ಸಾಹಿಗಳನ್ನು ಇಲ್ಲಿಯ ಅವಿಸ್ಮರಣೀಯ ಸಾಂಸ್ಕೃತಿಕ ಮತ್ತು ಜನಪದ ಕಾರ್ಯಕ್ರಮಗಳ ಅನುಭವವನ್ನು ಪಡೆಯಲು ಬರುವವರನ್ನು ಆಕರ್ಷಿಸುತ್ತದೆ. ಇಲ್ಲಿಯ ಸ್ಥಳೀಯ ಉಡುಪುಗಳು ಆಚರಣೆಗಳು ಹಬ್ಬಕ್ಕಾಗಿ ಇಲ್ಲಿಗೆ ಪ್ರಯಾಣಿಸುವ ಎಲ್ಲರನ್ನು ವಿಸ್ಮಯಗೊಳಿಸುವುದು ಖಚಿತ. ಅದ್ಭುತವಾದ ಮೆಹ್ರಾನ್‌ಗಡ್ ಕೋಟೆಯು ಉತ್ಸವದ ಸ್ಥಳವಾಗಿದೆ. ದೇಶದ ಹೊರಗಿನ ಕುಶಲಕರ್ಮಿಗಳನ್ನು ಪ್ರದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಮತ್ತು ಪ್ರದರ್ಶನಗಳು ರಾತ್ರಿಯ ಕತ್ತಲೆಯಲ್ಲಿ ನಡೆಯುತ್ತವೆ.

ದೀಪಾವಳಿ

ದೀಪಾವಳಿ

ದೀಪಾವಳಿ

ದಿನಾಂಕ : ಅಕ್ಟೋಬರ್ 24-26

ಸ್ಥಳ : ಭಾರತಾದ್ಯಂತ

ಭಾರತದಲ್ಲಿ ಆಚರಿಸಲಾಗುವ ಅತ್ಯಂತ ಜನಪ್ರಿಯ ಹಬ್ಬವಾದ ದೀಪಾವಳಿಯು ದೇಶದ ವಿವಿಧ ಭಾಗಗಳಲ್ಲಿ ವಿಶಿಷ್ಟವಾದ ಧಾರ್ಮಿಕ ಮಹತ್ವವನ್ನು ಹೊಂದಿದೆ. ಈ ಹಬ್ಬವನ್ನು ಭಾರತದ ನಗರಗಳು ಮತ್ತು ಪಟ್ಟಣಗಳಲ್ಲಿ ವಿಭಿನ್ನವಾಗಿ ಆಚರಿಸಲಾಗುತ್ತದೆ. ಆದಾಗ್ಯೂ, ಎಲ್ಲಾ ಸ್ಥಳಗಳಲ್ಲಿನ ಸಾಮಾನ್ಯ ಲಕ್ಷಣಗಳೆಂದರೆ ದೀಪಗಳು ಮತ್ತು ರಂಗೋಲಿಯ ಅಲಂಕಾರಗಳು ಅಥವಾ ವಿವಿಧ ಬಣ್ಣದ ಪುಡಿಗಳಲ್ಲಿ ವಿನ್ಯಾಸಗಳು ಎಲ್ಲಾ ಕಡೆ ಕಂಡು ಬರುವ ದೃಶ್ಯವಾಗಿದೆ. ಈ ಸಮಯದಲ್ಲಿ ಸಿಹಿತಿಂಡಿಗಳನ್ನು ನೀಡುತ್ತಾ ಶುಭಾಶಯಗಳನ್ನು ವಿನಿಮಯ ಮಾಡಿಕೊಳ್ಳಲಾಗುತ್ತದೆ, ಹೊಸ ಬಟ್ಟೆಗಳನ್ನು ಖರೀದಿಸಲಾಗುತ್ತದೆ ಮತ್ತು ಪಟಾಕಿಗಳು ಸಂಜೆಯೆಲ್ಲ ಆಕಾಶವನ್ನು ಬೆಳಗಿಸುತ್ತವೆ. ಭಾರತದ ಯಾವುದೇ ಗಮ್ಯಸ್ಥಾನಕ್ಕೆ ಪ್ರಯಾಣಿಸಿ ಮತ್ತು ಹಬ್ಬಗಳು ಎಲ್ಲಾ ಹಿನ್ನೆಲೆಯ ಜನರನ್ನು ಹೇಗೆ ಒಟ್ಟುಗೂಡಿಸುತ್ತವೆ ಎಂಬುದನ್ನು ನೋಡಿ ಆಶ್ಚರ್ಯಚಕಿತರಾಗಿ, ಒಟ್ಟಾಗಿ ಉತ್ತಮ ಭವಿಷ್ಯಕ್ಕಾಗಿ ಆಶಿಸಿ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+