Search
  • Follow NativePlanet
Share
» »ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಶ್ರೀ ಸೋಮ್ನಳಮ್ಮೆ ನೆಲೆಸಿರುವ ಸೋಮನಹಳ್ಳಿಯು ಕರ್ನಾಟಕದ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದ್ದು ನಾಗಮಂಗಲದಿಂದ ಸುಮಾರು ಹದಿನೈದು ಕಿ.ಮೀ ಗಳಷ್ಟು ದೂರದಲ್ಲಿದೆ

By Vijay

ನಮ್ಮ ದೇಶದಲ್ಲಿ ಅದೆಷ್ಟೊ ಚಿತ್ರ, ವಿಚಿತ್ರ ಹಿನ್ನೆಲೆಯಿರುವ ದೇವಾಲಯಗಳಾಗಲಿ ಅಥವಾ ಸ್ಥಳಗಳಾಗಲಿ ನೆಲೆಸಿವೆ. ಕೆಲವು ಸಾಕಷ್ಟು ಜನಪ್ರೀಯತೆ ಪಡೆದು ಪ್ರವಾಸಿ ಕ್ಷೇತ್ರಗಳಾಗಿ ಹೆಸರುವಾಸಿಯಾಗಿದ್ದರೆ ಇನ್ನೂ ಹಲವು ಸ್ಥಳಗಳು ತಮ್ಮ ರಹಸ್ಯವನ್ನು ರಹಸ್ಯಮಯವಾಗಿಯೆ ಇಟ್ಟುಕೊಂಡು ಒಂದು ರೀತಿಯ ಕುತೂಹಲ ಕೆರಳಿಸುವ ತಾಣಗಳಾಗಿ ಗಮನಸೆಳೆಯುತ್ತವೆ.

ಸಾಮಾನ್ಯವಾಗಿ ಧಾರ್ಮಿಕ ಕ್ಷೇತ್ರಗಳೆಂದಾಗ ಹಿಂದು ಧರ್ಮದ ಪ್ರಮುಖ ದೇವ, ದೇವತೆಗಳು ನೆಲೆಸಿರುವ ತಾಣಗಳು ಅವಾಗಿದ್ದು ಭಕ್ತಾದಿಗಳನ್ನು ಸೆಳೆಯುತ್ತವೆ. ಆದರೆ ನಿಮಗೆ ಗೊತ್ತೆ ಭಾರತದ ಅದೆಷ್ಟೊ ಪ್ರಾಂತ್ಯಗಳಲ್ಲಿ ಸ್ಥಳೀಯವಾಗಿ ಹೆಸರುವಾಸಿಯಾಗಿದ್ದ ಪುರುಷ ಅಥವಾ ಸ್ತ್ರೀ ದೈವಿ ಪ್ರಭಾವ ಪಡೆದುಕೊಂಡು ಆ ಸ್ಥಳದ ಪ್ರಧಾನ ದೈವಗಳಾಗಿಯೂ ಪ್ರಸಿದ್ಧರಾಗಿರುತ್ತಾರೆ.

ಇಂತಹ ಸ್ಥಳಗಳು ತಮ್ಮದೆ ಆದ ವಿಶೇಷ ಘಟನೆಗಳನ್ನೊ ಅಥವಾ ಹಿನ್ನೆಲೆಯನ್ನೊ ಹೊಂದಿರುತ್ತವೆ. ಅದಕ್ಕೆ ತಕ್ಕಂತೆ ಕಾಲ ಕ್ರಮೇಣ ಆ ಸ್ಥಳಗಳಿಗೆ ಪ್ರಧಾನ ಗ್ರಾಮ ದೇವತೆಗಳಾಗಿ ಪರಿವರ್ತಿತರಾಗುತ್ತಾರೆ. ದೇಶದ ವಿಶಿಷ್ಟ ಸಂಸ್ಕೃತಿ-ಸಮ್ಪ್ರದಾಯಗಳ ಕುರಿತು ಅನ್ವೇಷಿಸಬಯಸುವ ಪ್ರವಾಸಿಗರಿಗೆ ಇಂತಹ ಸ್ಥಳಗಳು ಅಥವಾ ದೇವಾಲಯಗಳಿಗೆ ಭೇಟಿ ನೀಡುವುದೆಂದರೆ ಬಲು ಇಷ್ಟವಾಗಬಹುದು.

ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಶ್ರೀ ಸೋಮ್ನಳಮ್ಮ, ಚಿತ್ರಕೃಪೆ: Devudilip

ಅಂತಹ ಒಂದು ದೇವಾಲಯ ಹಾಗೂ ಕ್ಷೇತ್ರದ ಕುರಿತು ಪ್ರಸ್ತುತ ಲೇಖನದಲ್ಲಿ ತಿಳಿಸಲಾಗಿದೆ. ಅದರಂತೆ ಈ ಗ್ರಾಮದ ದೇವಿಯು ಇಲ್ಲಿನ ಜನರನ್ನು ಸಕಲ ಕಷ್ಟ-ಕಾರ್ಪಣ್ಯಗಳಿಂದ ಕಾಪಾಡುತ್ತಾಳೆಂಬ ನಂಬಿಕೆಯಿದೆ. ಆ ಕಾರಣದಿಂದಾಗಿ ಆಕೆಗೆ ಮುಡಿಪಾದ ದೇವಾಲಯ ಇಲ್ಲಿದೆ. ಈ ದೇವಾಲಯದ ಕುರಿತು ಖಂಡಿತವಾಗಿಯೂ ಬಹುಜನರಿಗೆ ತಿಳಿದಿಲ್ಲ.

ಈ ಕ್ಷೇತ್ರದ ಹೆಸರೆ ಸೋಮನಹಳ್ಳಿ. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿದೆ. ಇಲ್ಲಿರುವ ಆ ದೇವಿಯೆ ಶ್ರೀ ಸೋಮ್ನಳಮ್ಮ. ನಾಗಮಂಗಲದಿಂದ ದಕ್ಷಿಣಕ್ಕೆ ಸುಮಾರು 15 ಕಿ.ಮೀ ಗಳಷ್ಟು ದೂರದಲ್ಲಿ ಸೊಮನಹಳ್ಳಿ ಇದ್ದು ಅಲ್ಲಿ ಈಕೆಯ ದೇವಾಲಯವಿದೆ. ಹತ್ತಿರದಲ್ಲೆ ಪವಿತ್ರವಾದ ಲೋಕಪಾವನಿ ನದಿ ಹರಿದಿದೆ. ಸಮಯ ಸಿಕ್ಕರೆ ಹಾಗೆ ಒಂದು ಸಲ ಇಲ್ಲಿ ಭೇಟಿ ನೀಡಿ.

ಸ್ಥಳಪುರಾಣದ ಪ್ರಕಾರ, ಸೋಮನಳ್ಳಮ್ಮ ನ ಮೂಲ ಹೆಸರು ಸೋಮನಾಯಕಿ ಹಾಗೂ ಇವಳು ಬೊಮ್ಮನಾಯಕ ಎಂಬ ಪಾಳೇಗಾರನ ಮಗಳು. ಬೊಮ್ಮನಾಯಕನ ಸೇನಾನಿ ತಿಮ್ಮನಾಯಕನ ಮಗ ಹಿಮ್ಮಡಿದಾಸ ಮತ್ತು ಸೋಮನಾಯಕಿ ಒಟ್ಟಿಗೆ ಬೆಳೆಯುತ್ತಾರೆ. ಮದುವೆ ವಯಸ್ಸಿಗೆ ಬಂದಾಗ ಆಕೆಯನ್ನು ನಾಗಮಂಗಲದ ಪಾಳೆಯಗಾರನ ಮಗನಿಗೆ ಮದುವೆ ಮಾಡಿಕೊಡಲಾಗುತ್ತದೆ.

ಕುತೂಹಲಕರ ಹಿನ್ನೆಲೆಯ ಸೋಮ್ನಳಮ್ಮ!

ಇಲ್ಲಿ ಹರಿದಿರುವ ನದಿ, ಚಿತ್ರಕೃಪೆ: mandya.nic.in

ತಿಮ್ಮನಾಯಾಕನ ಮಗನಾದ ಹಿಮ್ಮಡಿದಾಸನು ರಾಜ್ಯ ಕಬಳಿಸುವ ದುರಾಸೆಗೆ ಬಿದ್ದು ಸೋಮನಾಯಕಿಯನ್ನು ಅಪಹರಿಸುತ್ತಾನೆ. ಸೋಮನಾಯಕಿ ವಾಸ್ತವವಾಗಿ ನಿರ್ದೋಷಿ. ಇದನ್ನು ತಿಳಿಯದ ಈಕೆಯ ತಂದೆ ಮಾಯಿಗನೆಂಬ ವ್ಯಕ್ತಿಯ ಮೂಲಕ ಇಬ್ಬರನ್ನೂ ಹಿಡಿಸಿ ಬೆಂಕಿ ಹಾಕಿ ಕೊಂದು ಬಿಡುತ್ತಾನೆ.

ಸಕ್ಕರೆನಾಡು ಮಂಡ್ಯದ ಸವಿ ಸವಿ ಆಕರ್ಷಣೆಗಳು!

ಸೋಮನಾಯಕಿ (ಸೋಮ್ನಳಮ್ಮ) ಸಾಯುವ ಮುನ್ನ ನಿಮ್ಮ ವಂಶದ ಹೆಣ್ಣು ಮಕ್ಕಳು ಹೆಸರೆತ್ತದಿರಲಿಎಂದು ಶಪಿಸಿ ಅಗ್ನಿಗೆ ಆಹುತಿಯಾಗುತ್ತಾಳೆ. ಅದೇ ಜಾಗದಲ್ಲಿ ಇಂದು ಈ ದೇವಾಲಯವಿದೆ. ಅದೇ ಸೋಮ್ನಳ್ಳಮ್ಮನ ದೇವಾಲಯ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+