Search
  • Follow NativePlanet
Share
» »ಬೃಹದ್ ಮೂರ್ತಿ ಗೋಮಟೇಶ್ವರನ ವಿಗ್ರಹವಿರುವ ಪುಣ್ಯ ಸ್ಥಳ ಶ್ರವಣಬೆಳಗೊಳ

ಬೃಹದ್ ಮೂರ್ತಿ ಗೋಮಟೇಶ್ವರನ ವಿಗ್ರಹವಿರುವ ಪುಣ್ಯ ಸ್ಥಳ ಶ್ರವಣಬೆಳಗೊಳ

17.5 ಮೀಟರ್ ಎತ್ತರದ ಗೋಮಟೇಶ್ವರನ ವಿಗ್ರಹವು ಶ್ರವಣಬೆಳಗೊಳ ಪಟ್ಟಣಕ್ಕೆ ತಲುಪುವ ಮೊದಲೇ ದೂರದಿಂದಲೇ ಕಾಣ ಸಿಗುತ್ತದೆ.

ಈ ವಿಗ್ರಹವು ಕ್ರಿ.ಶ 978 ರ ಹಿಂದಿನ ಪ್ರತಿಮೆಯು ಶ್ರವಣಬೆಳಗೊಳವು ಯುಗಯುಗಗಳಿಂದಲೂ ಪ್ರಮುಖ ಜೈನ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

sravanabelagola

ಪ್ರತಿಮೆಗಳು ಮತ್ತು ಶಾಸನಗಳು

ಶ್ರವಣಬೆಳಗೊಳ ಎಂದರೆ ಬಿಳಿಕೊಳದ ಸನ್ಯಾಸಿ ಎಂದು ಅರ್ಥೈಸುತ್ತದೆ.

ಈ ಪ್ರತಿಮೆಯು ಜಗತ್ತಿನ ಅತ್ಯಂತ ದೊಡ್ಡ ಏಕಶಿಲಾ ಪತಿಮೆಯಾಗಿದ್ದು ಇದನ್ನು ಏಕಶಿಲೆಯಿಂದ ಕೆತ್ತಲಾಗಿದೆ.

ಈ ಪ್ರತಿಮೆಯ ಹೊರತಾಗಿಯೂ ಶ್ರವಣಬೆಳಗೊಳವು ಗತ ಕಾಲದ ಹಲವಾರು ನೋಟಗಳನ್ನು ಒದಗಿಸುತ್ತದೆ. ರಾಜ ಚಂದ್ರಗುಪ್ತ ಮೌರ್ಯನು, ಹಲವಾರು ವರ್ಷಗಳ ಯುದ್ಧ ಮತ್ತು ಅಧಿಕಾರದ ಒಳಸಂಚುಗಳಿಂದ ದಣಿದು ನಂತರ ಶ್ರವಣಬೆಳಗೊಳದ ಬೆಟ್ಟಗಳಲ್ಲಿ ಶಾಂತಿಯನ್ನು ಪಡೆಯ ಬಯಸಿದನು ಎಂದು ಹೇಳಲಾಗುತ್ತದೆ ಹಾಗೂ ಇವರು ದಕ್ಷಿಣ ಭಾರತದಲ್ಲಿ ಜೈನ ಧರ್ಮವನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸಿದರೆನ್ನಲಾಗುತ್ತದೆ.

ಕ್ರಿ.ಶ 600-1830ಕ್ಕಿಂತಲೂ ಹಿಂದಿನ ಶಾಸನಗಳನ್ನು ಶ್ರವಣಬೆಳಗೊಳವು ಹೊಂದಿರುವುದರಿಂದ ಈ ಸ್ಥಳವು ಹೆಚ್ಚಿನ ಪ್ರಮಾಣದಲ್ಲಿ ಇತಿಹಾಸಪ್ರಿಯರನ್ನು ಆಕರ್ಷಿಸುತ್ತದೆ. ಗಂಗಾ, ಹೊಯ್ಸಳರು ಮತ್ತು ಒಡೆಯರ್‌ರಂತಹ ವಿವಿಧ ರಾಜವಂಶಗಳ ಉದಯವನ್ನು ವಿವರಿಸುವ ಸುಮಾರು 800 ಶಾಸನಗಳಿವೆ. ಈ ಲಿಖಿತ ದಾಖಲೆಗಳು ಪ್ರಾಚೀನ ಯುಗದ ಜೀವನದ ನೋಟಗಳನ್ನು ನೀಡುತ್ತವೆ.

shravana belagola-2

ಚನ್ನರಾಯಪಟ್ಟಣವು ಶ್ರವಣಬೆಳಗೊಳ ಅತ್ಯಂತ ಹತ್ತಿರವಿರುವ ಬಸ್ಸು ನಿಲ್ದಾಣವಾಗಿದೆ. ನೀವು ಬೆಂಗಳೂರು ಮತ್ತು ಮೈಸೂರಿನಿಂದ ಚನ್ನರಾಯಪಟ್ಟಣಕ್ಕೆ ಬಸ್ಸಿನಿಂದ ಸುಲಭವಾಗಿ ತಲುಪಬಹುದು. ಸ್ಥಳೀಯ ವಾಹನಗಳ ಮೂಲಕ ನಂತರದ ಮುಂದಿನ ಪ್ರಯಾಣವನ್ನು ಪೂರ್ಣಗೊಳಿಸಬಹುದಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X