ದೆವ್ವ, ದೇವರು ಎಂಬ ಪರಿಕಲ್ಪನೆ ಇದೆಯೇ ಎಂಬುದಕ್ಕೆ ಉತ್ತರ ಅವರವರ ನಂಬಿಕೆಗೆ ಬಿಟ್ಟಿದ್ದು. ಕೆಲವರು ದೇವರು ಇದ್ದಾರೆ ಅವರೇ ಬ್ರಹ್ಮಾಂಡವನ್ನು ಆಳುವವರು ಅವರೇ ಆದರೆ ದೆವ್ವ ಎನ್ನುವುದು ಇಲ್ಲ ಎಂದು ವಾದಿಸುತ್ತಾರೆ. ಒಳ್ಳೆಯದು ಇದೆ ಎಂದರೆ ಕೆಟ್ಟದ್ದು ಇರಲೇಬೇಕು ಅಲ್ಲವೇ ಹಾಗೆಯೇ ದೇವರು ಇದೆ ಎಂದರೆ ದೆವ್ವ ಕೂಡ ಇರಲೇಬೇಕು ಅಲ್ಲವೇ ಎಂದು ವಾದಿಸುತ್ತಾರೆ. ನಮ್ಮ ಭಾರತ ದೇಶದಲ್ಲಿ ಹಲವಾರು ಪ್ರದೇಶಗಳಲ್ಲಿ ದುಷ್ಟ ಶಕ್ತಿಗಳ ವಾಸಸ್ಥಾನಗಳಿವೆ. ಅವುಗಳಲ್ಲಿ ಇದೂ ಕೂಡ ಒಂದು. ಈ ಊರಿನಲ್ಲಿ ಪ್ರೇತಾತ್ಮಗಳಿವೆ. ಆ ಪ್ರೇತಾತ್ಮಗಳಿಗೆ ನಿಮ್ಮನ್ನು ಕಂಡರೆ ಅಷ್ಟೆ. ಸೂರ್ಯಾಸ್ತ ಸಮಯದ ನಂತರ ಅಲ್ಲಿಗೆ ಭೇಟಿಯ ಬಗ್ಗೆ ಭಾರತದ ಪುರಾವಸ್ತು ಸಂಸ್ಥೆಯೇ ಎಚ್ಚರಿಕೆಯ ಫಲಕಗಳನ್ನು ಹಾಕಿದ್ದಾರೆ ಎಂದರೆ ಊಹಿಸಿ ಆ ಪ್ರದೇಶ ಎನ್ನೂ ಎಷ್ಟು ಅಪಾಯಕರವಾದುದು ಎಂಬುದನ್ನು.....

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಹಳ್ಳಿಯು ದೆವ್ವಗಳ ವಾಸಸ್ಥಾನ ಎಂದೇ ಹೆಸರುವಾಸಿಯಾಗಿದೆ. ಒಂದೇ ರಾತ್ರಿಯಲ್ಲಿ ಊರೆಲ್ಲಾ ಖಾಲಿ-ಖಾಲಿಯಾದ ಸ್ಥಳವಿದು. ಒಂದು ಕಾಲದಲ್ಲಿ ಜನರಿಂದ ತುಂಬಿತುಳುಕಾಡುತ್ತಿದ್ದ ಈ ಹಳ್ಳಿ ಇಂದು ಆತ್ಮಗಳಿಂದ ತುಂಬಿರುವ ಹಳ್ಳಿಯಾಗಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಒಂದು ಗ್ರಾಮದಲ್ಲಿ ಸುಮಾರು 1588 ಮಂದಿ ವಾಸಿಸುತ್ತಿದ್ದರು. ಒಂದು ದಿನ ಅದು ಏನಾಯಿತೂ ಏನೊ? ಊರೇ ಖಾಲಿ ಮಾಡಿ ಹೋಗಿಬಿಟ್ಟರು. ನಿತ್ಯವು ಸಂತೋಷದಾಯಕವಾಗಿ ಕಾಣಿಸುತ್ತಿದ್ದ ಆ ಗ್ರಾಮದಲ್ಲಿ ಇಂದು ಗಾಳಿ ಬಿಟ್ಟು ಇನ್ನೂ ಯಾವ ಶಬ್ಧಗಳು ಕೇಳಿಸುವುದಿಲ್ಲವಂತೆ. ಇಂದಿಗೂ ಆ ಗ್ರಾಮದಲ್ಲಿ ಯಾರೂ ಕೂಡ ವಾಸಿಸಲು ಧೈರ್ಯ ಮಾಡುವುದಿಲ್ಲವಂತೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಗ್ರಾಮದಲ್ಲಿ ಎಲ್ಲಿ ನೋಡಿದರೂ ಕೂಡ ಪಾಳು ಬಿದ್ದ ಮನೆಗಳು ಅಸ್ತವ್ಯಸ್ತ ವಾತಾವಾರಣಗಳನ್ನು ಕಾಣಬಹುದಾಗಿದೆ. ಇಲ್ಲಿ ಒಂದು ಜೀವಿಯಾಗಲೀ ಮನುಷ್ಯರಾಗಲೀ ಕಾಣಲಾಗುವುದಿಲ್ಲ. ಪಾಳು ಬಿದ್ದಿರುವ ಈ ಪ್ರದೇಶವು ಸುಮಾರು 600 ವರ್ಷಗಳಿಂದ ಭಯಾನಕವನ್ನು ಒಳಗೊಂಡಿದ್ದ ಈ ಸ್ಥಳ ಈಗ ಪ್ರವಾಸಿ ತಾಣವಾಗಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಭಯಾನಕವಾದ ಪ್ರದೇಶವು ರಾಜಸ್ಥಾನ ರಾಜ್ಯದ ಜೈಸಲ್ಮಾರ್ ಜಿಲ್ಲೆಯ ಕುಲಧಾರ ಎಂಬ ಗ್ರಾಮ. 13 ನೇ ಶತಮಾನದಿಂದ ಅತ್ಯಂತ ಸುಂದರವಾಗಿ ಪ್ರಜೆಗಳಿಂದ ಕೂಡಿದ್ದ ಈ ಪ್ರದೇಶ ಈಗ ಆತ್ಮಗಳ ವಾಸಸ್ಥಾನವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಇಲ್ಲಿ ಹಲವಾರು ಪ್ರವಾಸಿಗರು ಪ್ರವಾಸಕ್ಕಾಗಿ ಈ ಗ್ರಾಮಕ್ಕೆ ಭೇಟಿ ನೀಡುತ್ತಾರೆ. ಆದರೆ ಸೂರ್ಯಾಸ್ತದ ಸಮಯದಲ್ಲಿ ಮಾತ್ರ ಇಲ್ಲಿ ಒಂದು ಜೀವಿಯು ಕೂಡ ಇರುವುದಿಲ್ಲ. ನಿಶ್ಯಬ್ಧವಾದ ವಾತಾವಾರಣ ಇಲ್ಲಿ ಮೂಡುತ್ತದೆ. ಈ ಗ್ರಾಮದಲ್ಲಿನ ಪ್ರಜೆಗಳು ಎಲ್ಲಿ ಹೋದರು? ಯಾಕೆ ಇಲ್ಲಿ ಒಬ್ಬರೂ ಕೂಡ ವಾಸಿಸುವುದಿಲ್ಲ ಎಂಬ ಪ್ರೆಶ್ನೆಗೆ ಹಲವಾರು ವಿಧ ವಿಧವಾದ ಕಾರಣಗಳನ್ನು ಹಾಗೂ ಕಥೆಗಳನ್ನು ಹೇಳುತ್ತಾರೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಸಲೀಂ ಸಿಂಗ್ ಎಂಬ ಮಂತ್ರಿಯೇ ಇದಕ್ಕೆಲ್ಲಾ ಕಾರಣ ಹಾಗೂ ಅತನಿಂದಲೇ ಊರೆಲ್ಲಾ ಖಾಲಿಯಾಯಿತು ಎಂದು ಹೇಳುತ್ತಾರೆ. ಸಲೀಂ ಸಿಂಗ್ ಎಂಬುವವನು ಅತ್ಯಂತ ಕ್ರೂರವಾದ ಮಂತ್ರಿಯಾಗಿದ್ದನು. ಈ ಜೈಸಲ್ಮಾರ್ ಪ್ರದೇಶವನ್ನು ಮಂತ್ರಿಯ ಕೈಯಲ್ಲಿಯೇ ಇತ್ತು.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಸಲೀಂ ಸಿಂಗ್ ಕುಲ್ದಾರ್ ಗ್ರಾಮದಲ್ಲಿನ ಒಂದು ಕನ್ಯೆಯನ್ನು ಕಂಡು ಮರುಳಾದನು. ಏನಾದರೂ ಆಗಲೀ ಆ ಸುಂದರವಾದ ಕನ್ಯೆಯನ್ನು ವರಿಸಬೇಕು ಎಂದೂ ಇಲ್ಲವಾದರೆ ಆ ಗ್ರಾಮವನ್ನೇ ಸ್ಮಶಾನ ಮಾಡಿಬಿಡಬೇಕು ಎಂದು ಪಣ ತೊಟ್ಟನು.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಇದರಿಂದಾಗಿ ಗ್ರಾಮಸ್ಥರು ಉದಯವೇ ಅವಳನ್ನು ನಿನ್ನ ಬಳಿ(ಮಂತ್ರಿ) ಕರೆತಂದು ಬಿಡುತ್ತೇವೆ ಎಂದು ನಂಬಿಸಿ ಅವನನ್ನು ಕಳುಹಿಸಿದರು. ರಾತ್ರಿಗೆ ರಾತ್ರಿಗೆ ಆ ಕನ್ಯೆಯನ್ನು ಕರೆದುಕೊಂಡು ಊರು ಖಾಲಿ ಮಾಡಿದರು ಎಂದು ಪ್ರಚಾರವಿದೆ. ಆದರೆ ಬ್ರಿಟೀಷರ ಕಾಲದಲ್ಲಿ ಇಲ್ಲಿ ಬರಗಾಲ ಬಂದಿತು. ವ್ಯವಸಾಯಕ್ಕೆ ನೀರು ಇಲ್ಲದೇ ಜನರು ಊರು ಬಿಟ್ಟು ಹೋಗಿರಬಹುದು ಎಂದು ಊಹಿಸಲಾಗಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಆದರೆ ಈ ಗ್ರಾಮಕ್ಕೆ ಸಮೀಪದಲ್ಲಿರುವ ಕೊಳವು ಎಂದಿಗೂ ನೀರಿನಿಂದ ತುಂಬಿ ತುಳುಕುತ್ತಿರುತ್ತದೆ.ಇಲ್ಲಿ ಪೂರ್ವದಲ್ಲಿ 600 ಮನೆಗಳಿದ್ದು ಈಗ ಆ ಮನೆಗಳ ಸ್ಥಿತಿಯು ದೀನಾವಸ್ಥೆಯಾಗಿದೆ. ಪಾಳುಬಿದ್ದು ಭಯಾಂಕರವಾಗಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಗ್ರಾಮದಲ್ಲಿ ಆಗೋಚರವಾದ ಶಕ್ತಿಗಳು ಹಾಗೂ ಭಯಂಕರವಾದ ಶಬ್ಧಗಳು ಕೇಳಿಸುತ್ತಿರುತ್ತವೆ ಎಂದು ಹೇಳುತ್ತಾರೆ. ಈ ಗ್ರಾಮದಲ್ಲಿ ನಿಜವಾಗಿಯೂ ದೆವ್ವಗಳ ವಾಸಸ್ಥಳವೇ ಎಂದು ತಿಳಿದುಕೊಳ್ಳಲು ಇಂಡಿಯನ್ ಪಾರಾನಾರ್ಮಲ್ ಸೊಸೈಟಿ ಸಭ್ಯ ಗೌರವ್ ಥಿವರ್ ತನ್ನ ಗುಂಪಿನ ಜೊತೆ ಈ ಗ್ರಾಮದಲ್ಲಿ ಒಂದು ದಿನ ರಾತ್ರಿ ಇದ್ದು ದೆವ್ವಗಳು ಈ ಗ್ರಾಮದಲ್ಲಿ ಇವೆ ಎಂದು ವರದಿ ನೀಡಿದನು.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಅಂದಿನಿಂದ ದೆವ್ವಗಳ ಗ್ರಾಮ ಎಂದೇ ಈ ಪ್ರದೇಶವನ್ನು ಇನ್ನಷ್ಟು ಪ್ರಚಾರಗೊಳಿಸಿದರು. ದೆವ್ವಗಳನ್ನು ಪಕ್ಕಕ್ಕೆ ಇಟ್ಟರೆ ಈ ಗ್ರಾಮ ಅತ್ಯಂತ ಸುಂದರವಾಗಿದೆಯಂತೆ. ಈ ಸುಂದರವಾದ ಗ್ರಾಮಕ್ಕೆ ಭೇಟಿ ನೀಡಲು ದೇಶ ವಿದೇಶಗಳಿಂದ ಭೇಟಿ ನೀಡುತ್ತಾರಂತೆ. ಅಂದಿನ ಮನೆಗಳ ನಿರ್ಮಾಣ ಶೈಲಿಯು ಅತ್ಯಂತ ಸುಂದರವಾದ ಹಾಗೂ ಭಧ್ರವಾಗಿದೆ ಎಂತೆ. ಹಾಗೆಯೇ ಅಂದಿನ ದೇವಾಲಯಗಳು ಕೂಡ ಬರುವ ಪ್ರವಾಸಿಗರಿಗೆ ಆರ್ಕಷಿಸುತ್ತವೆ ಎಂತೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ನಿಮಗೂ ಕೂಡ ಈ ಪ್ರದೇಶವನ್ನು ನೋಡಬೇಕು ಎಂದು ಬಯಸಿದರೆ ರಾಜಸ್ಥಾನಕ್ಕೆ ಒಮ್ಮೆ ಭೇಟಿ ಕೊಡಿ. ರಾಜಸ್ಥಾನದ ಜೈಪುರದಿಂದ ಸುಮಾರು 587 ಕಿ,ಮೀ ದೂರದಲ್ಲಿ ಈ ಗ್ರಾಮವಿದೆ. ಆದರೆ ಈ ಗ್ರಾಮದಲ್ಲಿನ ಪ್ರಜೆಗಳು ರಾತ್ರೋ ರಾತ್ರಿ ಏಕೆ ಊರನ್ನು ಖಾಲಿ ಮಾಡಿದರು ಹಾಗೆಯೇ ಏಕೆ ಇಲ್ಲಿ ದೆವ್ವಗಳು ಬಂದವು ಎಂಬುದು ಇನ್ನೂ ರಹಸ್ಯವಾಗಿಯೇ ಉಳಿದಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಇದೇ ರೀತಿ ರಾಜಸ್ಥಾನದಲ್ಲಿ ಮತ್ತೊಂದು ಭಯಾನಕವಾದ ಪ್ರದೇಶವು ಕೂಡ ಇದೆ. ಅದರ ಬಗ್ಗೆ ಕೂಡ ಲೇಖನದಲ್ಲಿ ಮಾಹಿತಿಯನ್ನು ಪಡೆಯೋಣ ಬನ್ನಿ. ಈ ಭಯಾನಕ ಪ್ರದೇಶದ ಹೆಸರು ಭಾಸ್ಘುಡ್.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಭಯಾನಕ ಪ್ರದೇಶವು ದೆಹಲಿಯಿಂದ ಸುಮಾರು 300 ಕಿ,ಮೀ ದೂರದ ರಾಜಸ್ಥಾನದಲ್ಲಿದೆ. ಈ ಪ್ರದೇಶ ಸುತ್ತಮುತ್ತ ಇರುವ ಆರಾವಳಿ ಪರ್ವತದಿಂದ ಅವೃತ್ತಗೊಂಡಿದೆ. ಈ ಭಯಾನಕ ಪ್ರದೇಶದಲ್ಲಿ ಜನರು ನಿವಾಸವಿಲ್ಲ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಪ್ರದೇಶವನ್ನು ದೆವ್ವದ ನಗರ ಎಂದೇ ಪ್ರಖ್ಯಾತಿಯನ್ನು ಪಡೆದಿದೆ. ಸೂರ್ಯಾಸ್ತ ಸಮಯದ ನಂತರ ಈ ಪ್ರದೇಶದ ಒಳ ಪ್ರವೇಶ ನಿಷಿಧ್ದ. ಏಕೆಂದರೆ ಆ ಸಮಯದಲ್ಲಿ ದೆವ್ವಗಳ ಹಾವಳಿ ಹೆಚ್ಚಾಗುತ್ತದೆ ಎಂತೆ. ಈ ಪ್ರದೇಶದ ಸಮೀಪದಲ್ಲಿ ನಿವಾಸಿಸುವ ಕೆಲವರು ರಾತ್ರಿಯ ಸಮಯದಲ್ಲಿ ದೆವ್ವಗಳ ಚಿರಾಟ, ನಗುವುದು, ಆಳುವುದು ಇನ್ನೂ ಹಲವಾರು ವಿಧ ವಿಧವಾದ ಭಯಂಕರ ಶಬ್ಧಗಳು ಕೇಳಿಸುತ್ತವೆ ಎಂದು ಹೇಳುತ್ತಾರೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಪ್ರದೇಶದ ಬಗ್ಗೆ ತಿಳಿದ ಅದೆಷ್ಟೊ ಪ್ರವಾಸಿಗರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ. ಇಲ್ಲಿನ ದೆವ್ವದ ನಗರಕ್ಕೆ ಹಲವಾರು ಪ್ರಚಾರ ದೊರೆತ್ತಿದ್ದರಿಂದಲೇ ದೆವ್ವವನ್ನು ಕಾಣಲು ಬರುತ್ತಾರೆ. ದಿನದಿಂದ ದಿನಕ್ಕೆ ಪ್ರವಾಸಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ದೆವ್ವಗಳ ಮಾತು ಪಕ್ಕಕ್ಕೆ ಇಟ್ಟರೆ ಇಲ್ಲಿ ಪುರಾತನವಾದ ಪ್ಯಾಲೆಸ್, ದೇವಾಲಯಗಳು ನಿಮಗೆ ವಿಶೇಷವಾದ ಆಕರ್ಷಣೆಯಾಗಲಿದೆ. ಮುಂಜಾನೆಯಿಂದ ಸೂರ್ಯಾಸ್ತ ಸಮಯದವರೆವಿಗೂ ಈ ಪ್ರದೇಶದ ಪ್ರವೇಶಕ್ಕೆ ಅನುಮತಿಯನ್ನು ನೀಡುತ್ತಾರೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಅಲ್ಲಿನ ಸಮೀಪದ ಪ್ರಜೆಗಳು ಇಲ್ಲಿನ ಪ್ರದೇಶವು ಅತ್ಯಂತ ಭಯಾನಕವಾಗಿದ್ದು, ಹೆಚ್ಚಾಗಿ ದೆವ್ವಗಳ ಸಂಚಾರವಿರುವುದರಿಂದ ಸೂರ್ಯಾಸ್ತದ ನಂತರ ಈ ಪ್ರದೇಶವನ್ನು ಬಿಟ್ಟು ಹೊರಡಿ ಎಂದು ತಿಳಿಸುತ್ತಾರೆ. ದೆವ್ವದ ನಗರ ಎಂದು ಹೆಸರು ಪಡೆದಿರುವ ಈ ನಗರ ಒಂದು ಕಾಲದಲ್ಲಿ ಸ್ವರ್ಗದಂತೆ ಬಾಳಿದ ನಗರವಾಗಿತ್ತು.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
1631ರಲ್ಲಿ ಅಕ್ಬರ್ ಸಂಸ್ಥಾನದಲ್ಲಿ ಮಾನ್ ಸಿಂಗ್ ಕುಮಾರ ಮಧುಸಿಂಗ್ ಈ ನಗರವನ್ನು ನಿರ್ಮಿಸಿದನು. ಸುಮಾರು 700 ವರ್ಷಗಳ ಹಿಂದೆ ಅತ್ಯಂತ ವೈಭವದಿಂದ ಸುಖ ಸಂತೋಷದಿಂದ ಬಾಳಿದ ರಾಜ್ಯವಿದು. ಒಬ್ಬ ತಾಂತ್ರಿಕನ ಶಾಪದಿಂದ ಸ್ಮಶಾನವಾಗಿದೆ ಎಂದು ಸ್ಥಳೀಯರು ತಿಳಿಸುತ್ತಾರೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಬೆಳಗ್ಗೆಯ ಸಮಯದಲ್ಲಿ ಹಲವಾರು ಪ್ರವಾಸಿಗರಿಂದ ಕೂಡಿರುತ್ತದೆ. ಸಂಜೆಯಾಗುತ್ತಾ ಹೋದಂತೆ ಇಲ್ಲಿ ಒಂದು ಶ್ವಾನ ಕೂಡ ಇರುವುದಿಲ್ಲ. ಇಲ್ಲಿ ಹಲವಾರು ಸುಂದರವಾದ ಕಟ್ಟಡಗಳು ಇವೆ. ಅವುಗಳು ಕೂಡ ಪ್ರವಾಸಿ ಆರ್ಕಣೆಗಳಲ್ಲಿ ಒಂದಾಗಿದೆ.

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಇಲ್ಲಿ ಹನುಮಂತ, ಗೋಪಿನಾಥ, ನವೀನ ಮಂದಿರಗಳಿಗೆ ಭೇಟಿ ನೀಡಬಹುದು. ಮುಖ್ಯವಾಗಿ ಜಿ.ಕಿ ಬಾಗ್ ತಪ್ಪದೇ ನೋಡಬೇಕಾದ ಸುಂದರವಾದ ತಾಣ. ಮತ್ತೆ ಇನ್ನು ಏಕೆ ಆಲಸ್ಯ ತ್ವರಿತವಾಗಿ ದೆವ್ವಗಳ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೊರಡಿ......

ಇದು ದೆವ್ವಗಳ ಹಳ್ಳಿ....ಇಂದಿಗೂ ಬಗೆಹರಿಸಲಾಗದ ರಹಸ್ಯ
ಈ ಕೋಟೆಯು ರಾಜಸ್ಥಾನದಲ್ಲಿರುವುದರಿಂದ ಅತ್ಯಂತ ಬೇಸಿಗೆಯ ತಾಣ. ಅಕ್ಟೋಬರ್‍ನಿಂದ ಫೆಬ್ರವರಿಯವರೆವಿಗೂ ಈ ಕೋಟೆಗೆ ಭೇಟಿ ನೀಡಲು ಉತ್ತಮವಾದ ಸಮಯವಾಗಿದೆ. ಈ ಭಯಾನಕ ಸ್ಥಳಕ್ಕೆ ತೆರಳಲು ಸಮೀಪವಾದ ವಿಮಾನ ನಿಲ್ದಾಣವೆಂದರೆ ಅದು ರಾಜಸ್ಥಾನದ ಜೈಪುರ್ ವಿಮಾನ ನಿಲ್ದಾಣ. ಇಲ್ಲಿಂದ ಸುಮಾರು 88.33 ಕಿ,ಮೀ ದೂರದಲ್ಲಿ ಇದೆ.


Click it and Unblock the Notifications
















