Search
  • Follow NativePlanet
Share
» »ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ

ಪುಷ್ಕರ್‌ ಮೇಳ 2018: ರಾಜಸ್ತಾನದಲ್ಲಿ ನಡೆಯುತ್ತೆ ವಿಶೇಷ ಸೌಂದರ್ಯ ಸ್ಪರ್ಧೆ, ನೋಡಿದ್ರೆ ನೀವು ಶಾಕ್ ಆಗ್ತೀರಾ

ನೀವು ಈವರೆಗೆ ಸೌಂದರ್ಯ ಸ್ಪರ್ಧೆಗಳ ಬಗ್ಗೆ ಕೇಳಿರುವಿರಿ. ಅದನ್ನು ಹೇಗೆ ಆಯೋಜನೆ ಮಾಡಲಾಗುತ್ತದೆ. ಅದರಲ್ಲಿ ಭಾಗವಹಿಸುವ ಸ್ಪರ್ಧಿಗಳು ಎಷ್ಟು ಸುಂದರವಾಗಿರುತ್ತಾರೆ ಅನ್ನೋದು ನಿಮಗೆ ಗೊತ್ತೇ ಇರುತ್ತದೆ. ಇಂದು ನಾವು ಒಂದು ವಿಶೇಷ ಸೌಂದರ್ಯ ಸ್ಪರ್ಧೇಯ ಬಗ್ಗೆ ತಿಳಿಸಲಿದ್ದೇವೆ. ಅದೂ ಕೂಡಾ ಮನುಷ್ಯರ ಸೌಂದರ್ಯ ಸ್ಪರ್ಧೆ ಅಲ್ಲ. ಬದಲಾಗಿ ಒಂಟೆಗಳ ಸೌಂದರ್ಯ ಸ್ಪರ್ಧೆ.

ಎಲ್ಲಿ ನಡೆಯುತ್ತದೆ ಈ ಸ್ಪರ್ಧೆ

ಎಲ್ಲಿ ನಡೆಯುತ್ತದೆ ಈ ಸ್ಪರ್ಧೆ

PC:Rudolph.A.furtado

ರಾಜಸ್ತಾನಲ್ಲಿ ಪ್ರತಿವರ್ಷ ಪುಷ್ಕರ್‌ ಮೇಳ ನಡೆಯುತ್ತದೆ. ಈ ಮೇಳವೇ ಒಂಟೆಗಳಿಗಾಗಿ ಸ್ಪರ್ಧೆಯನ್ನು ಇಟ್ಟಿರುವಂತಹದ್ದು. ಈ ಮೇಳವು ನೋಡಲೂ ತುಂಬಾ ಸುಂದರವಾಗಿರುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಮೇಳದಲ್ಲಿ ಭಾಗವಹಿಸುತ್ತಾರೆ.

ಪುಷ್ಕರ್‌ ಪಶು ಮೇಳ

ಪುಷ್ಕರ್‌ ಪಶು ಮೇಳ

PC: Koshy Koshy

ಪುಷ್ಕರ್‌ ಪಶು ಮೇಳವು ಭಾರತದ ಹಳೆಯ ಮೇಳಗಳಲ್ಲಿ ಒಂದಾಗಿದೆ. ಇಲ್ಲಿ ದೇಶದ ಸಂಸ್ಕೃತಿಯ ವಿವಿಧ ಬಣ್ಣಗಳನ್ನು ಕಾಣಸಿಗುತ್ತದೆ. ಪುಷ್ಕರ್‌ ಮೇಳ ಎನ್ನುವ ಹೆಸರಿನಿಂದ ಪ್ರಸಿದ್ಧಿ ಹೊಂದಿರುವ ಈ ಮೇಳವನ್ನು ಕಾರ್ತಿಕ ಹುಣ್ಣಿಮೆಯಂದು ಆಚರಿಸಲಾಗುತ್ತದೆ.

ಒಂಟೆಗಳ ಉತ್ಸವ

ಒಂಟೆಗಳ ಉತ್ಸವ

PC:sheetal saini

ಈ ಮೇಳದ ಆಕರ್ಷಣೆಯೆಂದರೆ ಜನರು ಈ ಮೇಳಕ್ಕೆ ತಮ್ಮ ಒಂಟೆಗಳನ್ನು ಕರೆದುಕೊಂಡು ಬರುತ್ತಾರೆ. ಒಂಟೆಯನ್ನು ಹೊರತುಪಡಿಸಿ ಇತರ ಪ್ರಾಣಿಗಳೂ ಈ ಉತ್ಸವದಲ್ಲಿ ಭಾಗಿಗೊಳ್ಳುತ್ತವೆ. ಈ ಉತ್ಸವದ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯಲು ದೇಶಾದ್ಯಂತದ ಫೋಟೋಗ್ರಾಫರ್‌ಗಳು ಬರುತ್ತಾರೆ.

ಹೋಟೆಲ್ ಬುಕ್ ಮಾಡಿ

ಹೋಟೆಲ್ ಬುಕ್ ಮಾಡಿ

ಒಂದು ವೇಳೆ ನಿವು ಪುಷ್ಕರ್‌ ಮೇಳಕ್ಕೆ ಹೋಗಬೇಕೆಂಬ ಪ್ಲ್ಯಾನ್‌ ಹಾಕಿದ್ದರೆ ಅಲ್ಲಿ ಉಳಿಯಲು ಹೊಟೇಲ್‌ಗಳನ್ನು ಮೊದಲೇ ಬುಕ್ ಮಾಡಿ. ಮೇಳದ ಸಂದರ್ಭದಲ್ಲಿ ಪುಷ್ಕರ್‌ ಹಾಗೂ ಅಲ್ಲಿನ ಸುತ್ತಮುತ್ತಲಿನ ಸೌಂದರ್ಯ ನೋಡಲು ಬಹಳ ಸುಂದರವಾಗಿರುತ್ತದೆ.

ಸಾಕಷ್ಟು ಜನರು ಆಗಮಿಸುತ್ತಾರೆ

ಸಾಕಷ್ಟು ಜನರು ಆಗಮಿಸುತ್ತಾರೆ

ದೇಶ ವಿದೇಶಗಳಿಂದ ಜನರು ಈ ಮೇಳವನ್ನು ನೋಡಲು ಬರುತ್ತಾರೆ. ಹಾಗಾಗಿ ಪುಷ್ಕರ್‌ ಸುತ್ತಮುತ್ತಲಿರುವ ಹೋಟೆಲ್‌ಗಳೆಲ್ಲಾ ತುಂಬಿರುತ್ತವೆ. ಅದಕ್ಕಾಗಿ ನೀವು ಮುಂಚಿತವಾಗಿಯೇ ರೂಮ್ ಬುಕ್ ಮಾಡಿಕೊಳ್ಳುವುದು ಒಳ್ಳೆಯದು.

ಬ್ರಹ್ಮ ಮಂದಿರ

ಬ್ರಹ್ಮ ಮಂದಿರ

ಪುಷ್ಕರ್‌ ಒಂದು ಧಾರ್ಮಿಕ ತಾಣವೂ ಹೌದು. ಇಲ್ಲಿ ವಿಶ್ವದ ಏಕೈಕ ಬ್ರಹ್ಮ ಮಂದಿರವಿದೆ. ಜನರು ಇಲ್ಲಿನ ಪುಷ್ಕರ್‌ ಸರೋವರದಲ್ಲಿ ಸ್ನಾನ ಮಾಡಿ ಬ್ರಹ್ಮ ಮಂದಿರದ ದರ್ಶನ ಪಡೆಯುತ್ತಾರೆ.

ರಾಜಸ್ತಾನಿ ಸಂಸ್ಕೃತಿ

ರಾಜಸ್ತಾನಿ ಸಂಸ್ಕೃತಿ

ಈ ಪಶುಮೇಳದಲ್ಲಿ ನಿಮಗೆ ರಾಜಸ್ತಾನಿ ವಿಧಿ ವಿಧಾನಗಳು, ಸಂಸ್ಕೃತಿಯನ್ನು ಕಾಣಬಹುದು. ಈ ಮೇಳವನ್ನು ಬಹಳ ಸುಂದರವಾಗಿ ಆಚರಿಸಲಾಗುತ್ತದೆ. ಜನರು ತಮ್ಮ ತಮ್ಮ ಒಂಟೆಗಳನ್ನು ಸುಂದರವಾಗಿ ಶೃಂಗರಿಸುತ್ತಾರೆ.

ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ

ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ

ಈ ಮೇಳದಲ್ಲಿ ಒಂಟೆಗಳಿಗೆ ಸೌಂದರ್ಯ ಸ್ಪರ್ಧೆ ಹಾಗೂ ನೃತ್ಯವನ್ನು ಆಯೋಜಿಸಲಾಗುತ್ತದೆ. ಅದನ್ನು ಹೊರತುಪಡಿಸಿ ಈ ಮೇಳದಲ್ಲಿ ಹಾಡುಗಾರರು, ಜಾದುಗಾರರು ಪಾಲ್ಗೊಳ್ಳುತ್ತಾರೆ. ಈ ಬಾರಿ ಪುಷ್ಕರ್‌ ಮೇಳವು ನವಂಬರ್‌ 15ರಿಂದ ನವಂಬರ್ 23ರವರೆಗೆ ನಡೆಯಲಿದೆ.

ತಲುಪುವುದು ಹೇಗೆ?

ತಲುಪುವುದು ಹೇಗೆ?

ಪುಷ್ಕರಕ್ಕೆ ಬರಲು ದೆಹಲಿ, ಜೈಪುರ, ಆಗ್ರಾದಂತಹ ಪ್ರಮುಖ ನಗರಗಳಿಂದ ಬಸ್‌ ವ್ಯವಸ್ಥೆ ಇದೆ. ರೈಲಿನಲ್ಲಿ ಪ್ರಯಾಣಿಸುವುದಾದರೆ ಸಮೀಪದ ರೈಲು ನಿಲ್ದಾಣವೆಂದರೆ ಅಜ್ಮೀರ್ ರೈಲು ನಿಲ್ದಾಣ. ಇನ್ನು ನೀವು ವಿಮಾನದ ಮೂಲಕವೂ ಇಲ್ಲಿಗೆ ಬರಬಹುದು. ಜೈಪುರ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇಲ್ಲಿಗೆ ಸಮೀಪದಲ್ಲಿದೆ. ಹೆಚ್ಚಿನವರು ಮೊದಲು ಅಜ್ಮೀರ್ ತಲುಪಿ ನಂತರ ಪುಷ್ಕರ್‌ಗೆ ಬರುತ್ತಾರೆ.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+