ಸಿಕ್ಕಿಂ ನಲ್ಲಿರುವ ಈ ದೇವಾಲಯಗಳು ನಿಮಗೆ ದೈವಿಕತೆಯ ಅನುಭವವನ್ನು ನೀಡುತ್ತವೆ
ಸಿಕ್ಕಿಂ ಭಾರತದ ಅತ್ಯಂತ ಸುಂದರ ರಾಜ್ಯಗಳಲ್ಲಿ ಒಂದಾಗಿರುವುದು ಮಾತ್ರವಲ್ಲದೆ ಇದು ಅತ್ಯಂತ ಜನಪ್ರಿಯ ಪ್ರವಾಸಿ ತಾಣಗಳಿಗೂ ನೆಲೆಯಾಗಿದೆ ಮತು ಸುಂದರ ಗಿರಿಧಾಮಗಳು, ದಟ್ಟ ಹಸಿರು ಪರಿಸರ ಮತ್ತು ಪ್ರಶಾಂತವಾದ ವಾತಾವರಣವನ್ನು ಹೊಂದಿರುವುದಕ್ಕೂ ಇದು ಹೆಸರುವಾಸಿಯಾಗಿದೆ. ಸಿಕ್ಕಿಂನಲ್ಲಿ ಪ್ರಾಚೀನ ಕಾಲಕ್ಕೆ ಸಂಬಂಧಿಸಿದ ಹಲವಾರು ಐತಿಹಾಸಿಕ ಸ್ಥಳಗಳನ್ನೂ ಹೊಂದಿರುವುದರಿಂದ ಇದು ಇತಿಹಾಸ ಪ್ರಿಯರಲ್ಲೂ ಜನಪ್ರಿಯವಾಗಿದೆ. ಆದ್ದರಿಂದ ಸಿಕ್ಕಿಂ ಎಲ್ಲಾ ತರಹದ ಪ್ರಯಾಣಿಕರಿಗೂ ಬೇಕಾಗುವಂತಹ ಸ್ಥಳವೆಂದರೆ ತಪ್ಪಾಗಲಾರದು. ಇಲ್ಲಿ ಟ್ರಕ್ಕಿಂಗ್ ಮಾಡುವ ಮಾರ್ಗಗಳಿಂದ ಹಿಡಿದು ಗಗನ ಚುಂಬಿ ಪರ್ವತಗಳವರೆಗೆ ಮತ್ತು ದಟ್ಟವಾದ ಹಸಿರು ಕಣಿವೆಗಳಿಂದ ಸುಂದರವಾದ ಜಲಪಾತಗಳು ಮತ್ತು ಐತಿಹಾಸಿಕ ಸ್ಮಾರಕಗಳಿಂದ ಸುಂದರ ದೇವಾಲಯಳವರೆಗೆ ನಿಮ್ಮನ್ನು ಅಚ್ಚರಿಪಡಿಸುವಂತಹ ಎಲ್ಲಾ ವಿಷಯಗಳನ್ನೂ ತನ್ನಲ್ಲಿ ಹೊಂದಿದೆ.
ಈ ಋತುವಿನಲ್ಲಿ ಇಂತಹ ಅತ್ಯದ್ಬುತ ರಾಜ್ಯಕ್ಕೆ ಪ್ರವಾಸ ಕೈಗೊಂಡು ಇಲ್ಲಿಯ ಅನನ್ಯ ಸೌಂದರ್ಯತೆಯನ್ನೊಳಗೊಂಡ ದೇವಾಲಯವನ್ನು ಅನ್ವೇಷಿಸುವುದು ಹೇಗಿರಬಹುದು? ಈ ದೇವಾಲಯಗಳು ಶಾಂತಿಯುತವಾದ ಪರಿಸರ ಮತ್ತು ದೈವಿಕ ವಾತಾವರಣಕ್ಕೆ ಹೆಸರುವಾಸಿಯಾಗಿವೆ. ಆದುದರಿಂದ, ಆದ್ದರಿಂದ, ಒಬ್ಬರು ಇದರ ಗಡಿಗಳಲ್ಲಿ ದೈವಿಕತೆಯ ಸಾರವನ್ನು ಅಕ್ಷರಶಃ ಅನುಭವಿಸಬಹುದು. ಇಲ್ಲಿಯ ದೇವಾಲಯಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಮುಂದೆ ಓದಿ.

ಠಾಕೂರ್ ಬರಿ ದೇವಾಲಯ
ನೀವು ನಿಜವಾದ ಇತಿಹಾಸಪ್ರಿಯರೆಂದಾದಲ್ಲಿ, ಇಲ್ಲಿಯ ಪ್ರಾಚೀನ ಠಾಕೂರ್ ಬರೀ ದೇವಾಲಯಕ್ಕೆ ಭೇಟಿ ನೀಡಲು ತಪ್ಪಿಸಲೇ ಬಾರದು. ಈ ದೇವಾಲಯವು ಸಿಕ್ಕಿಂನ ರಾಜಧಾನಿಯಾದ ಗ್ಯಾಂಗ್ಟೋಕ್ ನ ಹೃದಯ ಭಾಗದಲ್ಲಿ ನೆಲೆಸಿದೆ. ಈ ದೇವಾಲಯವು ರಾಜ್ಯದ ಅತ್ಯಂತ ಪ್ರಾಚೀನ ದೇವಾಲಯವೆಂದು ಕರೆಯಲ್ಪಡುತ್ತದೆ. ದಾಖಲೆಗಳ ಪ್ರಕಾರ, ಇದನ್ನು ಚೋಗ್ಯಾಲರ ಕಾಲದಲ್ಲಿ ಸ್ಥಾಪಿಸಲಾಯಿತು ಎಂದು ಹೇಳಲಾಗಿದೆ.
ಠಾಕೂರ್ ಬರಿ ದೇವಾಲಯದ ರಚನೆಯಾದಂದಿನಿಂದಲೂ ಇದು ಹಿಂದೂ ಭಕ್ತರಲ್ಲಿ ಅತ್ಯಂತ ಮಹತ್ವವನ್ನು ಪಡೆದುದಾಗಿದೆ. ಈ ದೇವಾಲಯವು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ದೇವತೆಗಳನ್ನು ಪೂಜಿಸಲ್ಪಡುವ ಕೆಲವೇ ಕೆಲವು ದೇವಾಲಯಗಳಲ್ಲಿ ಇದೂ ಒಂದಾಗಿದೆ. ಆದ್ದರಿಂದ ಎಲ್ಲಾ ಪಂಗಡದ ಜನರಿಂದಲೂ ಇದು ಭೇಟಿ ನೀಡಲ್ಪಡುತ್ತದೆ. ದೇವಾಲಯವು ಹಲವಾರು ಗಮನಾರ್ಹ ವಾಸ್ತುಶಿಲ್ಪವನ್ನು ಹೊಂದಿದೆ ಆದ್ದರಿಂದ ವಾಸ್ತುಶಿಲ್ಪ ಉತ್ಸಾಹಿಗಳಿಗೂ ಇದು ಭೇಟಿ ಕೊಡಲೇ ಬೇಕಾದಂತಹ ಸ್ಥಳವಾಗಿದೆ.

ಕಿರಾತೇಶ್ವರ ಮಹಾದೇವ ದೇವಾಲಯ
ಶಿವ್ ಮಂದಿರ್ ಎಂದು ಸ್ಥಳೀಯರಿಂದ ಕರೆಸಿಕೊಳ್ಳುವ ಕಿರಾತೇಶ್ವರ ಮಹದೇವ ದೇವಾಲಯವು ಸಿಕ್ಕಿಂನ ಒಂದು ಅತ್ಯಂತ ದೊಡ್ಡ ದೇವಾಲಯ ಸಂಕೀರ್ಣವಾಗಿದ್ದು ಇಲ್ಲಿ ಶಿವದೇವರನ್ನು ಪೂಜಿಸಲಾಗುತ್ತದೆ. ಇಲ್ಲಿಯ ಸ್ಥಳೀಯ ದಂತಕಥೆಗಳ ಪ್ರಕಾರ ಈ ಸ್ಥಳದಲ್ಲಿ ಅರ್ಜುನನಿಗೆ ಶಿವನು ಪ್ರತ್ಯಕ್ಷನಾಗಿ ಮಹಾಭಾರತ ಯುದ್ದದಲ್ಲಿ ಜಯಶೀಲನಾಗುವಂತೆ ಹರಸಿದನೆನ್ನಲಾಗುತ್ತದೆ. ಇದು ಗ್ಯಾಂಗ್‌ಟಾಕ್‌ನಿಂದ ಸುಮಾರು 107 ಕಿಮೀ ದೂರದಲ್ಲಿರುವ ಲೆಗ್‌ಶಿಪ್ ಎಂಬ ಸಣ್ಣ ಪಟ್ಟಣದಲ್ಲಿದೆ.
ಈ ದೇವಾಲಯವು ರಂಗೀಟ್ ನದಿಯ ದಡದಲ್ಲಿ ನಿರ್ಮಿಸಲಾಗಿರುವುದರಿಂದ ದೇವಾಲಯದ ಸುತ್ತಮುತ್ತಲೂ ಶಾಂತಿಯುತವಾಗಿದ್ದು ವರ್ಷಪೂರ್ತಿ ಅದೇತರಹ ಇರುತ್ತದೆ. ನಿಮ್ಮನ್ನು ಅಕ್ಷರಶಃ ಆನಂದಮಯ ಜಗತ್ತಿಗೆ ಕೊಂಡೊಯ್ಯುವ, ರಾಜ್ಯ ಕೆಲವು ದೇವಾಲಯಗಳಲ್ಲಿ ಇದೂ ಒಂದಾಗಿದೆ. ಅದರ ವಾತಾವರಣದಲ್ಲಿ ದೈವತ್ವದ ಉಪಸ್ಥಿತಿಯು ಧ್ಯಾನ ಮತ್ತು ಆತ್ಮಾವಲೋಕನಕ್ಕೆ ಭೇಟಿ ನೀಡಬಹುದಾದ ವಾರಾಂತ್ಯದ ಸೂಕ್ತ ತಾಣವಾಗಿದೆ.

ಹನುಮಾನ್ ಟೋಕ್
ಶಕ್ತಿ, ಮತ್ತು ಬಲದ ದೇವರೆನಿಸಿರುವ ಹನುಮಾನ್ ದೇವರಿಗೆ ಅರ್ಪಿತವಾದ ಹನುಮಾನ್ ಟೋಕ್ ದೇವಾಲಯವು ಗ್ಯಾಂಗ್ಟಾಕ್‌ನ ಮೇಲ್ಭಾಗದಲ್ಲಿ ನೆಲೆಗೊಂಡಿದೆ ಮತ್ತು ಈ ಪ್ರದೇಶದಲ್ಲಿನ ಅತ್ಯಂತ ಮಹತ್ವದ ಹಿಂದೂ ದೇವಾಲಯಗಳಲ್ಲಿ ಒಂದಾಗಿದ್ದು ಇದು ಈಗ ಭಾರತೀಯ ಸೇನೆಯ ರಕ್ಷಣೆಯಲ್ಲಿದೆ. ಹಿಂದೂ ಪುರಾಣಗಳ ಪ್ರಕಾರ, ಈ ದೇವಾಲಯವು ಹನುಮಂತನು ಲಕ್ಷ್ಮಣನನ್ನು ರಕ್ಷಿಸುವ ಸಲುವಾಗಿ ದ್ರೋಣಗಿರಿ ಪರ್ವತದೊಂದಿಗೆ ಹಾರುತ್ತಿದ್ದಾಗ ಮಾರ್ಗದಲ್ಲಿ ಸ್ವಲ್ಪ ಸಮಯದವರೆಗೆ ವಿಶ್ರಾಂತಿ ಪಡೆದ ಸ್ಥಳವಿದು ಎಂದು ಎಂದು ನಂಬಲಾಗಿದೆ.
ಇಂದು, ದೇವಾಲಯವು ಹೆಚ್ಚಿನ ಧಾರ್ಮಿಕ ಮಹತ್ವವನ್ನು ಹೊಂದಿದೆ ಮತ್ತು ಪ್ರತಿವರ್ಷ ನೂರಾರು ಪ್ರವಾಸಿಗರು ಮತ್ತು ಸ್ಥಳೀಯರು ಭೇಟಿ ನೀಡುತ್ತಾರೆ. ನೀವು ಹತ್ತಿರದ ಗಣೇಶ ಟೋಕ್ ಅನ್ನು ಸಹ ಭೇಟಿ ಮಾಡಬಹುದು, ಇದು ಗಣೇಶನಿಗೆ ಸಮರ್ಪಿತವಾದ ಸಣ್ಣ ದೇವಾಲಯವನ್ನು ಹೊಂದಿದೆ.

ಶ್ರೀ ವಿಶ್ವ ವಿನಾಯಕ ಮಂದಿರ
ಸಿಕ್ಕಿಂ ರಾಜ್ಯದಲ್ಲಿರುವ ಅತ್ಯುತ್ತಮ ದೇವಾಲಯಗಳ ಪಟ್ಟಿ ಮಾಡುವಾಗ ಮೊದಲ ಸ್ಥಾನದಲ್ಲಿರುವ ದೇವಾಲಯವೆಂದರೆ ಅದು ಖಚಿತವಾಗಿಯೂ ಶ್ರೀ ವಿಶ್ವ ವಿನಾಯಕ ಮಂದಿರವೆನ್ನಬಹುದಾಗಿದೆ. ಬೆಟ್ಟದ ಮೇಲೆ ನೆಲೆಸಿರುವತ್ತು ಸಿಕ್ಕಿಂನ ಹಚ್ಚ ಹಸಿರಿನ ಕಣಿವೆಗಳ ಮೇಲಿರುವ ಈ ಸುಂದರ ದೇವಾಲಯವು ಗಣೇಶನಿಗೆ ಸಮರ್ಪಿತವಾಗಿದ್ದು, 2016 ರಲ್ಲಿ ಸ್ಥಾಪಿಸಲಾಯಿತು.
ಇದು ಪೂರ್ವ ಸಿಕ್ಕಿಂ ಜಿಲ್ಲೆಯ ರೆನಾಕ್ ರುಂಗ್‌ಡಂಗ್‌ನಲ್ಲಿರುವ ಈ ದೇವಾಲಯವು ಇದು 12 ಅಡಿ ಎತ್ತರದ ಗಣೇಶನ ಪ್ರತಿಮೆಯನ್ನು ಹೊಂದಿದೆ. ನಗರಗಳ ಗದ್ದಲದಿಂದ ವಿರಾಮ ತೆಗೆದುಕೊಳ್ಳಲು ಮತ್ತು ಪ್ರಶಾಂತತೆ ಮತ್ತು ದೈವಿಕತೆಯನ್ನು ಅನುಭವಿಸಲು ಎದುರು ನೋಡುತ್ತಿದ್ದರೆ, ನೀವು ಶ್ರೀ ವಿಶ್ವ ವಿನಾಯಕ ಮಂದಿರದ ಪ್ರವಾಸವನ್ನು ಯೋಜಿಸಿ.

ಸಂದ್ರುಪ್ಸೆ ಶಿವ ದೇವಾಲಯ
ಸಂದ್ರುಪ್ಸೆ ಬೆಟ್ಟವು ನಾಮ್ಚಿಯಿಂದ ಸುಮಾರು 5 ಕಿ.ಮೀ ದೂರದಲ್ಲಿದ್ದು ಬಯಕೆಯನ್ನು ಈಡೇರಿಸುವ ಬೆಟ್ಟ ಎಂದು ಕರೆಯಲಾಗುವ ಈ ಸುಂದರ ಬೆಟ್ಟದಲ್ಲಿ ದೇವಾಲಯವು ನೆಲೆಸಿದ್ದು, ಇದು ಶಿವನ ಎತ್ತರದ ಪ್ರತಿಮೆಯನ್ನು ಹೊಂದಿರುವ ಈ ದೇವಾಲಯಕ್ಕೆ ಪ್ರತಿ ವರ್ಷ ಸಾವಿರಾರು ಹಿಂದೂ ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ ಅಲ್ಲದೆ ಈ ಸ್ಥಳವು ಹಲವಾರು ಛಾಯಾಗ್ರಾಹಕರಿಗೆ ಪ್ರಮುಖ ಆಕರ್ಷಣೆಯಾಗಿದೆ.
ಈ ಪ್ರಾಚೀನ ಸ್ಥಳವು ಶಾಂತಿಯುತವಾದ ಪರಿಸರವನ್ನು ಹೊಂದಿರುವುದರಿಂದ ಈ ದೇವಾಲಯಕ್ಕೆ ಪ್ರವಾಸಿಗರು ಭೇಟಿ ಕೊಡುತ್ತಾರೆ. ಇದು ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯಲು ಸೂಕ್ತವಾದ ಸ್ಥಳವಾಗಿದೆ.


Click it and Unblock the Notifications

















