Search
  • Follow NativePlanet
Share
» »Pitru Paksha 2024: ಐಆರ್‌ಸಿಟಿಸಿಯಿಂದ ಧಾರ್ಮಿಕ ಸ್ಥಳಗಳಿಗೆ 10 ದಿನಗಳ ಪ್ರವಾಸ, ಹರಿದ್ವಾರ-ಋಷಿಕೇಶ ಇನ್ನು ಏನೆಲ್ಲಾ ನೋಡಬಹುದು?

Pitru Paksha 2024: ಐಆರ್‌ಸಿಟಿಸಿಯಿಂದ ಧಾರ್ಮಿಕ ಸ್ಥಳಗಳಿಗೆ 10 ದಿನಗಳ ಪ್ರವಾಸ, ಹರಿದ್ವಾರ-ಋಷಿಕೇಶ ಇನ್ನು ಏನೆಲ್ಲಾ ನೋಡಬಹುದು?

ಹಿಂದೂ ಧರ್ಮದಲ್ಲಿ ಪಿತೃ ಪಕ್ಷಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಇದನ್ನು ಪಿತೃ ಅಥವಾ ಶ್ರಾದ್ಧ ಪಕ್ಷ ಎಂದೂ ಕರೆಯುತ್ತಾರೆ. ಪ್ರತಿ ವರ್ಷ ಪಿತೃ ಪಕ್ಷವು ಭಾದ್ರಪದ ಮಾಸದ ಹುಣ್ಣಿಮೆಯಿಂದ ಆಶ್ವಯುಜ ಮಾಸದ ಅಮಾವಾಸ್ಯೆಯವರೆಗೆ ಇರುತ್ತದೆ. ಈ ವರ್ಷ ಪಿತೃ ಪಕ್ಷವು ಸೆಪ್ಟೆಂಬರ್ 17 ರಿಂದ ಪ್ರಾರಂಭವಾಗಿ ಅಕ್ಟೋಬರ್ 2 ರಂದು ಕೊನೆಗೊಳ್ಳುತ್ತದೆ. ಈ ಸಮಯದಲ್ಲಿ ಜನರು ತಮ್ಮ ಪೂರ್ವಜರ ಆತ್ಮಕ್ಕೆ ಶಾಂತಿಗಾಗಿ ವಿಶೇಷ ಪ್ರಾರ್ಥನೆ ಮತ್ತು ಆಚರಣೆಗಳನ್ನು ಕೈಗೊಳ್ಳುತ್ತಾರೆ. ಇಂತಹ ಸಮಯದಲ್ಲಿ ಐಆರ್‌ಸಿಟಿಸಿ ಪಿತೃ ಪಕ್ಷ ಹಿನ್ನೆಲೆಯಲ್ಲಿ ವಿಶೇಷ ಟೂರ್ ಪ್ಯಾಕೇಜ್ ಕೂಡ ತಂದಿದೆ. ಈ ಪ್ರವಾಸ ಪ್ಯಾಕೇಜ್ ಮೂಲಕ ನೀವು ರಿಷಿಕೇಶದಿಂದ ಹರಿದ್ವಾರದ ತನಕ ಪ್ರಯಾಣಿಸಬಹುದು.

ಪುಣೆಯಿಂದ ಆರಂಭ

ಐಆರ್‌ಸಿಟಿಸಿ pitra chaya express ಟೂರ್ ಪ್ಯಾಕೇಜ್ ಅನ್ನು ತಂದಿದೆ. ಪ್ರವಾಸ ಪ್ಯಾಕೇಜ್ ಅನ್ನು ದೇಖೋ ಅಪ್ನಾ ದೇಶ್ ಅಡಿಯಲ್ಲಿ ಪರಿಚಯಿಸಲಾಗಿದೆ. ಶ್ರಾದ್ಧ ಪಕ್ಷ ಹಿನ್ನೆಲೆಯಲ್ಲಿ ಈ ಟೂರ್ ಪ್ಯಾಕೇಜ್ ಆಯೋಜಿಸಲಾಗಿದೆ. ಪ್ರವಾಸ ಪ್ಯಾಕೇಜ್‌ನ ಆರಂಭಿಕ ಬೆಲೆ 44,990 ರೂ. ಪ್ರವಾಸದ ಪ್ಯಾಕೇಜ್‌ನಲ್ಲಿ ನೀವು ಭಾರತ್ ಗೌರವ್ ಟೂರಿಸ್ಟ್ ಟ್ರೈನ್ ಮೂಲಕ ತೆರಳುತ್ತೀರಿ. ಪ್ರವಾಸ ಪ್ಯಾಕೇಜ್ ಪುಣೆಯಿಂದ ಆರಂಭವಾಗಲಿದೆ.

pitrupaksha

ಏನೆಲ್ಲಾ ನೋಡಬಹುದು?

ಐಆರ್‌ಸಿಟಿಸಿ (IRCTC) ಯ ಈ ಪ್ರವಾಸದ ಪ್ಯಾಕೇಜ್‌ನಲ್ಲಿ, ಪ್ರಯಾಣಿಕರು ಹರಿದ್ವಾರ, ಋಷಿಕೇಶ, ರುದ್ರಪ್ರಯಾಗ, ಕರ್ಣಪ್ರಯಾಗ ಮತ್ತು ಜೋಶಿಮಠಕ್ಕೆ ಭೇಟಿ ನೀಡುತ್ತಾರೆ.

ಹರಿದ್ವಾರ: ಹಿಮಾಲಯ ಪರ್ವತಗಳಿಂದ ಸುತ್ತುವರಿದಿರುವ ಹರಿದ್ವಾರ ಭಾರತದ ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಜನರು ಪೂಜೆ ಸಲ್ಲಿಸಲು, ಗಂಗೆಯಲ್ಲಿ ಸ್ನಾನ ಮಾಡಲು ಮತ್ತು ತಮ್ಮ ಪ್ರೀತಿಪಾತ್ರರ ಅಂತಿಮ ವಿಧಿಗಳನ್ನು ನೇರವೇರಿಸಲು ಇಲ್ಲಿಗೆ ಬರುತ್ತಾರೆ. ಅಲ್ಲದೆ ಶ್ರಾವಣ ಮಾಸದಲ್ಲಿ ಅಂದರೆ ಜೂನ್, ಜುಲೈ ತಿಂಗಳಿನಲ್ಲಿ ಲಕ್ಷಗಟ್ಟಲೆ ಕಾವಾಡಿಗಳು ಇಲ್ಲಿಗೆ ಬರುತ್ತಾರೆ.

ರಿಷಿಕೇಶ: ಇದು ದೆಹಲಿಯಿಂದ ಹತ್ತಿರದ ಪ್ರವಾಸಿ ಸ್ಥಳ. ರಿಷಿಕೇಶವು ಆಧ್ಯಾತ್ಮಿಕತೆ ಮತ್ತು ಯೋಗದ ನಗರ ಎಂದೇ ಜನಪ್ರಿಯತೆ ಗಳಿಸಿದೆ. ಈ ಸ್ಥಳವು ಧಾರ್ಮಿಕ ಪ್ರಾಮುಖ್ಯತೆಯನ್ನು ಮಾತ್ರವಲ್ಲದೆ ಸಾಹಸ ಪ್ರಿಯರನ್ನು ಆಕರ್ಷಿಸುತ್ತದೆ. ವಿಶೇಷವೆಂದರೆ ನೀವು ಯಾವುದೇ ಋತುವಿನಲ್ಲಿ ಋಷಿಕೇಶಕ್ಕೆ ಭೇಟಿ ನೀಡಬಹುದು. ಬೇಸಿಗೆಯಿಂದ ಚಳಿಗಾಲದವರೆಗಿನ ಪ್ರಯಾಣವನ್ನು ನೀವು ಆನಂದಿಸಬಹುದು. ಅಲ್ಲದೆ, ಇಲ್ಲಿಗೆ ಭೇಟಿ ನೀಡಲು ಹೆಚ್ಚು ಖರ್ಚು ಮಾಡಬೇಕಾಗಿಲ್ಲ.

ರುದ್ರಪ್ರಯಾಗ: ಉತ್ತರಾಖಂಡದಲ್ಲಿರುವ ರುದ್ರಪ್ರಯಾಗವು ಅಲಕನಂದಾ ಮತ್ತು ಮಂದಾಕಿನಿ ನದಿಗಳ ಸಂಗಮವಾಗಿದೆ. ಇಲ್ಲಿನ ಪ್ರವಾಸವು ನಿಜವಾಗಿಯೂ ಜೀವನದ ಅತ್ಯಂತ ಸುಂದರ ಕ್ಷಣಗಳನ್ನು ಜೀವಿಸಿದಂತೆ. ಮೋನಲ್ ಪಕ್ಷಿಗಳು, ಬುರಾನ್ ಹೂವುಗಳ ಜೊತೆಗೆ ಚೋಪ್ಟಾ, ತುಂಗನಾಥ್ ಬುಗ್ಯಾಲ್ ಇತ್ಯಾದಿಗಳ ದಟ್ಟವಾದ ಕಾಡುಗಳಲ್ಲಿ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ಇದೇ ಸಮಯದಲ್ಲಿ, ಕೇದಾರ ತುಂಗನಾಥ ಮತ್ತು ಚಂದ್ರಶಿಲಾದಿಂದ ಹಿಮಾಲಯದ ಶಿಖರಗಳನ್ನು ಕಾಣಬಹುದು.

pitrupaksha varanasi

ಕರ್ಣಪ್ರಯಾಗ: ಕರ್ಣಪ್ರಯಾಗಕ್ಕೆ ಸುತ್ತಮುತ್ತಲಿನ ಹಳ್ಳಿಗಳಿಂದ ಜನರು ಎಲ್ಲಾ ಅಗತ್ಯ ವಸ್ತುಗಳನ್ನು ಕೊಳ್ಳಲು ಬರುತ್ತಾರೆ. ಮಹಾಭಾರತದ ಉದಾತ್ತ ಪಾತ್ರವಾದ ಕರ್ಣನ ಹೆಸರಿನಿಂದ ಈ ನಗರಕ್ಕೆ ಕರ್ಣಪ್ರಯಾಗ ಎಂದು ಹೆಸರಿಸಲಾಗಿದೆ ಎಂದು ನಂಬಲಾಗಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಕರ್ಣಪ್ರಯಾಗ ನಗರವು ಧಾರ್ಮಿಕ, ಪ್ರವಾಸೋದ್ಯಮ ಮತ್ತು ರಾಜಕೀಯ ಐತಿಹಾಸಿಕ ದೃಷ್ಟಿಕೋನದಿಂದ ಬಹಳ ಮುಖ್ಯವಾದ ಸ್ಥಾನವನ್ನು ಹೊಂದಿದೆ.

ಜೋಶಿಮಠ: ಜೋಶಿಮಠವು ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಒಂದು ಪಟ್ಟಣವಾಗಿದ್ದು, ಎಂಟನೇ ಶತಮಾನದಲ್ಲಿ ಧಾರ್ಮಿಕ ಸುಧಾರಕರಾದ ಆದಿ ಗುರು ಶಂಕರಾಚಾರ್ಯರು ಇಲ್ಲಿ ಮೊದಲ ಮಠವನ್ನು ಸ್ಥಾಪಿಸಿದರು. ಇದನ್ನು ಜೋಶಿಮಠ ಎಂದು ಕರೆಯಲಾಗುತ್ತದೆ. ಆದಿ ಗುರು ಶಂಕರಾಚಾರ್ಯರು ಇಲ್ಲಿ ಕಠಿಣ ತಪಸ್ಸು ಮಾಡಿದರು. ಜೋಶಿಮಠವು ಸುಂದರವಾದ ಕಣಿವೆಗಳಿಗೆ ಹೆಸರುವಾಸಿಯಾಗಿದೆ. ಈ ಸ್ಥಳವು ಧಾರ್ಮಿಕವಾಗಿಯೂ ಸಹ ಪ್ರಸಿದ್ಧಿ ಪಡೆದಿದೆ. ಬದರಿನಾಥವನ್ನು ಭೇಟಿ ಮಾಡುವ ಮೊದಲು, ಎಲ್ಲಾ ಭಕ್ತರು ಮೊದಲು ಜೋಶಿಮಠಕ್ಕೆ ಭೇಟಿ ನೀಡುತ್ತಾರೆ. ಇಲ್ಲಿನ ವಿವಿಧ ದೇವಸ್ಥಾನಗಳಲ್ಲಿ ಸದಾ ಭಕ್ತರ ನೂಕುನುಗ್ಗಲು ಇರುತ್ತದೆ.

pitrupaksha kashi

ಪ್ಯಾಕೇಜ್‌ನಲ್ಲಿರುವ ಸೌಲಭ್ಯಗಳು

ಪ್ರವಾಸದ ಪ್ಯಾಕೇಜ್ 9 ರಾತ್ರಿ ಸೇರಿದಂತೆ 10 ದಿನಗಳ ಕಾಲ ಇರುತ್ತದೆ. ಐಆರ್‌ಸಿಟಿಸಿಯ ಈ ಪ್ರವಾಸ ಪ್ಯಾಕೇಜ್ ಸೆಪ್ಟೆಂಬರ್ 20 ರಿಂದ ಪ್ರಾರಂಭವಾಗುತ್ತದೆ. ಪ್ಯಾಕೇಜ್‌ನಲ್ಲಿ ಪ್ರವಾಸಿಗರಿಗೆ ವಸತಿ ಮತ್ತು ಆಹಾರದ ವ್ಯವಸ್ಥೆಯು ಉಚಿತವಾಗಿರುತ್ತದೆ. ಐಆರ್‌ಸಿಟಿಸಿ ದೇಶ ಮತ್ತು ವಿದೇಶಗಳಲ್ಲಿನ ಪ್ರವಾಸಿಗರಿಗೆ ವಿವಿಧ ಪ್ರವಾಸ ಪ್ಯಾಕೇಜ್‌ಗಳನ್ನು ನೀಡುತ್ತಿದೆ ಎಂಬುದು ಗಮನಾರ್ಹ. ಈ ಪ್ರವಾಸ ಪ್ಯಾಕೇಜ್‌ಗಳ ಮೂಲಕ ಪ್ರವಾಸಿಗರು ಅಗ್ಗವಾಗಿ ಮತ್ತು ಅನುಕೂಲಕರವಾಗಿ ಪ್ರಯಾಣಿಸಬಹುದು. ಈ ಪ್ರವಾಸ ಪ್ಯಾಕೇಜ್‌ನಲ್ಲಿ 300 ಆಸನಗಳಿವೆ. ಡೀಲಕ್ಸ್ ವರ್ಗದ ಪ್ರವಾಸಿಗರಿಗೆ 44990 ರೂ. ಪ್ರವಾಸಿಗರು ಈ ಪ್ರವಾಸದ ಪ್ಯಾಕೇಜ್ ಅನ್ನು ಅಧಿಕೃತ ವೆಬ್‌ಸೈಟ್ ಮೂಲಕ ಬುಕ್ ಮಾಡಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+