• Follow NativePlanet
Share
Menu
» »ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

Written By:

ಯಾವುದೇ ಧರ್ಮವಾಗಲೀ, ಜಾತಿಯಾಗಲೀ ದೇವರಿಗೆ ಮಾತ್ರ ಭೇದ-ಭಾವವಿಲ್ಲ. ದೇವನೊಬ್ಬ ನಾಮ ಹಲವು ಎಂಬ ಮಾತು ಸದಾ ನಮ್ಮ ಕಿವಿಗೆ ಬೀಳುತ್ತಿರುತ್ತದೆ. ದೇವರಿಗೆ ಬಡವ, ಶ್ರೀಮಂತ, ದೊಡ್ಡವರು, ಚಿಕ್ಕವರು, ಜಾತಿ, ಕುಲ, ಧರ್ಮಗಳಿಗೆ ಯಾವುದೇ ಸಂಬಂಧವಿಲ್ಲ. ಯಾರು ಭಕ್ತಿಯಿಂದ ಆತನನ್ನು ಪೂಜಿಸುತ್ತಾರೆಯೋ ಅವರನ್ನು ಕಪಾಡುತ್ತಾನೆ. ಇವೆಲ್ಲಾ ಏಕೆ ಹೇಳುತ್ತಿದ್ದೇನೆ ಎಂದು ಅಂದುಕೊಳ್ಳುತ್ತಿದ್ದೀರಾ?

ಹಾಗಾದರೆ ಕೇಳಿ ಇಲ್ಲೊಂದು ದೇವಾಲಯವಿದೆ. ಅದು ಒಂದು ಹಿಂದೂ ದೇವಾಲಯ. ಆ ದೇವಾಲಯದಲ್ಲಿ ಯಾವುದೇ ಧರ್ಮ ಎಂಬ ಭೇದ-ಭಾವವಿಲ್ಲದೇ ಮುಸ್ಲಿಂರಿಗೂ ಕೂಡ ಪ್ರವೇಶವನ್ನು ನೀಡಲಾಗುತ್ತದೆ. ಆ ದೇವಾಲಯವಾದರೂ ಯಾವುದು? ಅಲ್ಲಿನ ಮಹತ್ವವೇನು? ಎಂಬ ಹಲವಾರು ಪ್ರಶ್ನೆಗೆ ಉತ್ತರ ಲೇಖನದ ಮೂಲಕ ಸಂಕ್ಷೀಪ್ತವಾಗಿ ತಿಳಿಯಿರಿ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ನೀವು ಎಂದಾದರೂ ಕೇಳಿದ್ದೀರಾ? ಹಿಂದೂ ದೇವತೆಯ ದೇವಾಲಯಕ್ಕೆ ಮುಸ್ಲಿಂರು ಸ್ವಾಮಿಯ ದರ್ಶನಕ್ಕೆ ಸರದಿಯಲ್ಲಿ ನಿಂತಿರುವುದು?. ಹಾಗಾದರೆ ಕೇಳಿ ಆ ದೇವಾಲಯ ಯಾವುದೆಂದರೆ ಆಂಧ್ರ ಪ್ರದೇಶದಲ್ಲಿರುವ ಪೆರುಮಾಳ್ ದೇವಾಲಯ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಪೆರುಮಾಳ್ ದೇವಾಲಯವು ಆಂಧ್ರ ಪ್ರದೇಶದ ಕಡಪ ನಗರದಲ್ಲಿದೆ. ಅದೇ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೆರುಮಾಳ್ ದೇವಾಲಯ. ಇಲ್ಲಿನ ನಂಬಿಕೆಯ ಪ್ರಕಾರ ಬಡವರು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತದೆ. ಹಾಗಾಗಿಯೇ ಈ ಮಹಿಮಾನ್ವಿತವಾದ ದೇವಾಲಯಕ್ಕೆ ಹಲವಾರು ಭಕ್ತರು ದಿನನಿತ್ಯ ಭೇಟಿ ನೀಡುತ್ತಿರುತ್ತಾರೆ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಆಂಧ್ರ ಪ್ರದೇಶದ ಕಡಪ ಅತ್ಯಂತ ಸಂಪ್ರದಾಯಬದ್ಧವಾದ ನಗರವಾಗಿದ್ದು, ಲಕ್ಷ್ಮೀಯನ್ನು ವೆಂಕಟೇಶ್ವರರನ್ನು ಅತ್ಯಂತ ಭಕ್ತಿ, ಶ್ರದ್ಧೆಯಿಂದ ಪೂಜೆಗಳನ್ನು ಮಾಡುತ್ತಾರೆ. ಶ್ರೀಮಂತರಾಗುವ ಬಯಕೆ ಸಾಮಾನ್ಯವಾಗಿ ಎಲ್ಲರಿಗೂ ಇರುವಂಹದು. ಹಾಗಾಗಿಯೇ ಈ ದೇವಾಲಯಕ್ಕೆ ಭಕ್ತರ ದಂಡೇ ಆಗಮಿಸುತ್ತದೆ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಈ ದೇವಾಲಯವು ಕಡಪ ನಗರದಲ್ಲಿ ಅತ್ಯಂತ ಪ್ರಸಿದ್ಧವಾದುದು. ತೆಲುಗು ಭಾಷೆಯವರಿಗೆ ಹೊಸ ವರ್ಷದ ದಿನದಂದು ಈ ದೇವಾಲಯಕ್ಕೆ ಆನೇಕ ಮಂದಿ ಮುಸ್ಲಿಂ ಜನರು ಈ ಮಹಿಮಾನ್ವಿತವಾದ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ನೀವು ಚಿತ್ರದಲ್ಲಿ ಕಾಣಬಹುದು, ಸ್ವಾಮಿಯ ದರ್ಶನಕ್ಕೆ ಸರದಿಯ ಪ್ರಕಾರ ನಿಂತಿರುವುದು.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಇಲ್ಲಿಗೆ ಹಿಂದೂಗಳಂತೆಯೇ ಮುಸ್ಲಿಂರು ಕೂಡ ಪೆರುಮಾಳ್‍ನನ್ನು ಭಕ್ತಿ, ಶ್ರದ್ಧೆಯಿಂದ ಪೂಜೆಗಳನ್ನು ಮಾಡುತ್ತಾರೆ. ಇಲ್ಲಿನ ಗರ್ಭಗುಡಿಯ ಸ್ವಾಮಿಗೆ ಹೂವುಗಳು, ಬೆಲ್ಲ, ಕಬ್ಬು, ಹಳದಿ, ನಿಂಬೆ ಹಣ್ಣನ್ನು ದೇವರಿಗೆ ಅರ್ಪಿಸುತ್ತಾರೆ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಈ ದೇವಾಲಯಕ್ಕೆ ಭೇಟಿ ನೀಡುವ ಮುಸ್ಲಿಂರಿಗೆ ಗೌರವದಿಂದ ಬರಮಾಡಿಕೊಳ್ಳುತ್ತಾರೆ. ಬೇಸಿಗೆಯ ಕಾಲದಲ್ಲಿ ಅತ್ಯಂತ ಬಿಸಿ ಹೆಚ್ಚಾಗಿದ್ದರು ಕೂಡ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಮಾತ್ರ ಕಡಿಮೆಯಾಗುವುದಿಲ್ಲ. ದರ್ಗಾಗೆ ಬರುವ ರೀತಿಯಲ್ಲಿ ಭಕ್ತ ಜನಸಾಗರ ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ.

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಮುಸ್ಲಿಂರು ಭಕ್ತಿಯಿಂದ ಪೂಜಿಸುವ ಹಿಂದೂ ದೇವಾಲಯವಿದು....

ಇಲ್ಲಿನ ಪೆರುಮಾಳ್ ಸ್ವಾಮಿಯನ್ನು ದರ್ಶನ ಮಾಡುವ ಸಲುವಾಗಿ ಮುಸ್ಲಿಂರು ಭೇಟಿ ನೀಡುವ ಹಿಂದೆ ಒಂದು ರೋಚಕವಾದ ಕಥೆ ಕೂಡ ಇದೆ. ಕಡಪ ದೇವಾಲಯವು ಒಂದು ಮಹಿಮಾನ್ವಿತವಾದ ದೇವಾಲಯವಾಗಿದ್ದು, ಬಡವರು ಶ್ರೀಮಂತರಾಗುತ್ತಾರೆ ಎಂಬ ನಂಬಿಕೆ ಜನರದ್ದು.

ಪ್ರವಾಸದ ಬಗ್ಗೆ ಇನ್ನಷ್ಟು ಮಾಹಿತಿ, ಪ್ರವಾಸದ ಸಲಹೆಗಳು ಹಾಗೂ ಪ್ರವಾಸ ಲೇಖನಗಳನ್ನು ಪಡೆಯಿರಿ