ಪಟಾಲಮ್ಮ ದೇವಿ ದೇವಸ್ಥಾನಗಳಲ್ಲಿ ಒಂದು ದೇವಸ್ಥಾನ ಜಯನಗರ 3 ನೇ ಬ್ಲಾಕ್ ನಲ್ಲಿದೆ. ಈ ದೇವಸ್ಥಾನದಿಂದಾಗಿಯೇ ಆ ರಸ್ತೆಗೆ ಪಟಾಲಮ್ಮ ರಸ್ತೆ, ಎಲಿಫೆಂಟ್ ರಾಕ್ ರಸ್ತೆ ಎನ್ನುವ ಹೆಸರು ಬಂದಿದೆ. ಈ ಇತಿಹಾಸ ಪ್ರಸಿದ್ಧ ದೇವಸ್ಥಾನಕ್ಕೆ ಸಾಕಷ್ಟು ಹಿನ್ನೆಲೆ ಇದೆ.

ಆಕಾಶದಿಂದ ಭೂಮಿಗಿಳಿದ ಪಟಾಲಮ್ಮ
ಪಟಾಲಮ್ಮ ದೇವಿಯು ತನ್ನ ವಾಹನ ಆನೆಯನ್ನೇರಿ ಆಕಾಶದಲ್ಲಿ ಸಂಚರಿಸುತ್ತಿದ್ದಾಗ ಭೂಮಿಯಲ್ಲಿನ ಒಂದು ಸ್ಥಳವನ್ನು ನೋಡಿ ಅಲ್ಲಿ ಕಾಲಕಳೆಯ ಬೇಕೆಂದು ಬಯಸಿ ಆಕಾಶದಿಂದ ತನ್ನ ಆನೆಯ ಜೊತೆ ಕೆಳಗಿಳಿದಳು ಎನ್ನಲಾಗುತ್ತದೆ. ಆ ಸ್ಥಳವೇ ಬೆಂಗಳೂರು ದಕ್ಷಿಣದ ಎಲಿಫೆಂಟ್ ರಾಕ್ ರಸ್ತೆ.

ಎಲ್ಲಿದೆ ಎಲಿಫೆಂಟ್ ರಾಕ್ ರಸ್ತೆ
ಎಲಿಫೆಂಟ್ ರಾಕ್ ರಸ್ತೆ ಮತ್ತು ದೇವಿಯ ದೇವಸ್ಥಾನದ ರಸ್ತೆಯು ತುಂಬಾ ಪ್ರಸಿದ್ಧವಾಗಿದೆ. ಎಲಿಫೆಂಟ್ ರಾಕ್, ರಸ್ತೆಯ ಒಂದು ಬದಿಯಲ್ಲಿದ್ದರೆ, ದೇವಿಯ ದೇವಸ್ಥಾನವು ರಸ್ತೆಯ ಇನ್ನೊಂದು ಬದಿಯಲ್ಲಿದೆ. ಇದು ಸೌತ್ ಎಂಡ್ ಸರ್ಕಲ್‌ನಿಂದ ಜಯನಗರ 3 ನೇ ಬ್ಲಾಕ್, ಜಯನಗರ 4 ನೇ ಬ್ಲಾಕ್ ಕಡೆಗೆ ಹೋಗುವ ದಾರಿಯಲ್ಲಿ ಎಲಿಫೆಂಟ್ ರಾಕ್ ರಸ್ತೆ ಸಿಗುತ್ತದೆ .

ದಂತಕಥೆಯ ಪ್ರಕಾರ
ಬೆಂಗಳೂರಿನ ನಾಲ್ಕು ಸ್ಥಳೀಯ ದೇವತೆಗಳ ಪೈಕಿ ಒಬ್ಬಳಾದ ಪಟಾಲಮ್ಮ ದೇವಿಯು ತನ್ನ ವಾಹನ ಆನೆಯಯಿಂದ ಕೆಳಗಿಳಿದು ಈಗಿನ ಎಲಿಫೆಂಟ್ ರಾಕ್ ರಸ್ತೆ ಬಳಿ ಸ್ವಲ್ಪ ಕಾಲ ಕಳೆದು , ನಂತರ ಮರಳಿ ಆಕಾಶಕ್ಕೆ ತೆರಳಿದಳು ಎನ್ನಲಾಗುತ್ತದೆ.

ಕಲ್ಲಾದ ಆನೆ
ಪಟಾಲಮ್ಮ ತನ್ನ ವಾಹನದ ಹೊರತಾಗಿ ಆಕಾಶಕ್ಕೆ ತೆರಳಿದಳು, ನಂತರ ಆನೆ ಕಲ್ಲಾಗಿ ಮಾರ್ಪಾಟಾಗಿತ್ತು. ಆ ಕಲ್ಲಿನ ಮೇಲೆ ಆನೆಯ ಚಿತ್ರವನ್ನು ಬರೆಯಲಾಗಿದೆ. ಸ್ಥಳೀಯರು ಆ ರಸ್ತೆಯಲ್ಲಿ ಪಟಾಲಮ್ಮ ದೇವಿಯ ದೇವಸ್ಥಾನವನ್ನು ನಿರ್ಮಿಸಿದರು.

ಭವಾನಿ ಶಂಕರ ದೇವಾಲಯ
ಇಂದು ಅಲ್ಲಿ ಆನೆಯ ವರ್ಣಚಿತ್ರವನ್ನು ಹೊಂದಿರುವ ದೊಡ್ಡ ಬಂಡೆಯಿದೆ. ಎಲಿಫೆಂಟ್ ರಾಕ್ ಹತ್ತಿರನೇ ಒಂದು ಸಣ್ಣ ಭವಾನಿ ಶಂಕರ ದೇವಾಲಯವಿದೆ. ಅಲ್ಲಿ ಇನ್ನೂ ಅನೇಕ ಸಣ್ಣಪುಟ್ಟ ಬಂಡೆಗಳಿವೆ, ಇವುಗಳನ್ನು ಆನೆಯ ಹಿಂಡಿನ ಭಾಗ ಎನ್ನಲಾಗುತ್ತದೆ. ಈ ದೇವಾಲಯವನ್ನು ಶಾಂತವೀರ ಮಹಾಸ್ವಾಮಿಯವರು ಪ್ರತಿಷ್ಠಾಪಿಸಿದರು.

ಬಂಡೆಯನ್ನು ತೆಗೆಯುವ ಪ್ರಯತ್ನ
ಬಿಲ್ಡರ್‌ಗಳು ಆ ಬಂಡೆಯನ್ನು ತೆಗೆಯಲು ಪ್ರಯತ್ನಿಸಿದರು ಅದಕ್ಕಾಗಿ ಇಬ್ಬರು ಇಂಜಿನಿಯರ್‌ರನ್ನು ನೇಮಿಸಲಾಯಿತು. ಆದರೆ ಬಂಡೆಯನ್ನು ತೆಗೆಯುವ ಸಾಹಸಕ್ಕೆ ಕೈ ಹಾಕಿದ ಇಂಜಿನಿಯರ್‌ಗಳು ಸಾವನ್ನಪ್ಪಿದರು. ಆ ನಂತರದದಿಂದ ಯಾರೂ ಕೂಡಾ ಇಂತಹ ದುಸ್ಸಾಹಸಕ್ಕೆ ಕೈ ಹಾಕುವುದಿಲ್ಲ.

ಹದಿನಾಲ್ಕು ಹಳ್ಳಿಗಳ ದೇವತೆ
ಕೆಲವು ದಶಕಗಳ ಹಿಂದೆಯೇ ಪಟಾಲಮ್ಮ ದೇವಸ್ಥಾನವು ಜಯನಗರ - ನಾಗಸಂದ್ರ, ಕನಕಪಾಳ್ಯ , ಸಿದ್ದಪುರ, ಬೈರಾಸಂದ್ರ ಮತ್ತು ಯಡಿಯೂರು ಎಂಬ ಐದು ಗ್ರಾಮಗಳ ಹಳ್ಳಿಯಾಗಿತ್ತು. 19 ನೇ ಶತಮಾನದ ಆರಂಭಿಕ ವರ್ಷಗಳಲ್ಲಿ, ಇದು ಹದಿನಾಲ್ಕು ಹಳ್ಳಿಗಳ ದೇವತೆಯಾಗಿದೆ.

500 ವರ್ಷ ಹಳೆಯ ದೇವಾಲಯ
ಈ ದೇವಾಲಯವು 500 ರಿಂದ 600 ವರ್ಷಗಳಷ್ಟು ಹಳೆಯದಾಗಿದೆ. ಮೂರು ವರ್ಷಗಳಲ್ಲಿ ಒಮ್ಮೆ ನಡೆಯುವ ಅಗ್ನಿ-ತ್ಯಾಗದ ಆಚರಣೆ ಪ್ರಸಿದ್ಧವಾಗಿದೆ. ಮಂಗಳವಾರ ಮತ್ತು ಶುಕ್ರವಾರದಂದು ದೇವಸ್ಥಾನಕ್ಕೆ ಹೆಚ್ಚಿನ ಸಂಖ್ಯೆಯ ಭಕ್ತರು ಆಗಮಿಸುತ್ತಾರೆ.

ದೇವಿ ಕೂರುತ್ತಿದ್ದ ಉಯ್ಯಾಲೆ
ದೇವಾಲಯದ ಆವರಣದಲ್ಲಿ ಎರಡು ಕಂಬಗಳು ಇವೆ, ಇಲ್ಲಿ ಪಟಾಳಮ್ಮ ದೇವಿಯ ಉಯ್ಯಾಲೆ ಇತ್ತು. ಅವಳು ಆನೆಯಿಂದ ಇಳಿದಾಗ ಈ ಉಯ್ಯಾಲೆಯ ಮೇಲೆ ಕುಳಿತುಕೊಂಡಿದ್ದಳು ಎನ್ನಲಾಗುತ್ತದೆ. ಇಂದು ಆ ಉಯ್ಯಾಲೆಯನ್ನು ವಿಧ್ಯುಕ್ತ ಸಂದರ್ಭಗಳಲ್ಲಿ ಮಾತ್ರ ಬಳಸಲಾಗುತ್ತದೆ. ಪಟಾಳಮ್ಮ ದೇವಸ್ಥಾನದ ಹತ್ತಿರ ಮಹಾ ಗಣಪತಿಗೆ ಅರ್ಪಿಸಲಾದ ಮತ್ತೊಂದು ಸಣ್ಣ ದೇವಾಲಯವಿದೆ.

ಪಟಾಲಮ್ಮ ಜಾತ್ರೆ
ಇದೇ ಮೇ 15 ರಂದು ಪಟಾಲಮ್ಮ ಜಾತ್ರಾ ಮಹೋತ್ಸವ ಪ್ರಾರಂಭವಾಗಲಿದೆ. ಪಟಾಲಮ್ಮ ದೇವಸ್ಥಾನದ ಇತಿಹಾಸ ತಿಳಿಯದೇ ಇರುವವರು, ಈ ದೇವಸ್ಥಾನವನ್ನು ನೋಡ ಬೇಕೆಂದಿರುವವರಿಗೆ ಇದೊಂದು ಸುವರ್ಣಾವಕಾಶವಾಗಿದೆ. ಈ ಸಮಯದಲ್ಲಿ ಭೇಟಿ ನೀಡಿದರೆ ಪಟಾಲಮ್ಮನ ಜಾತ್ರೆಯ ಅನುಭವವನ್ನೂ ಪಡೆಯಬಹುದು.


Click it and Unblock the Notifications

















