Search
  • Follow NativePlanet
Share
» »ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಲಕ್ಷ್ಮೀ ನೃಸಿಂಹ ಸ್ವಾಮಿ ಕ್ಷೇತ್ರದಲ್ಲಿ ರಕ್ತ ಪ್ರವಹಿಸಿದ ಕ್ಷೇತ್ರ ಯಾವುದು ಗೊತ್ತ?

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ 4 ನೇ ಆವತಾರ ಶ್ರೀ ನೃಸಿಂಹ ಸ್ವಾಮಿ ಅವತಾರ. ಮಾನವ ಹಾಗೂ ಸಿಂಹವು ಸೇರಿ ಸೃಷ್ಠಿಯಾದ ರೂಪವೇ ನೃಸಿಂಹ ಅವತಾರ. ಈ ಸ್ವಾಮಿಯನ್ನು ನರಹರಿ ಎಂದೂ ಕೂಡ ಕರೆಯುತ್ತಾರೆ. ಶ್ರೀ ಮಹಾ ವಿಷ್ಣುವು ನರಸಿಂಹ ರೂಪವನ್ನು ಧರಿ

ಶ್ರೀ ಮಹಾವಿಷ್ಣುವಿನ ದಶಾವತಾರಗಳಲ್ಲಿ 4 ನೇ ಆವತಾರ ಶ್ರೀ ನೃಸಿಂಹ ಸ್ವಾಮಿ ಅವತಾರ. ಮಾನವ ಹಾಗೂ ಸಿಂಹವು ಸೇರಿ ಸೃಷ್ಠಿಯಾದ ರೂಪವೇ ನೃಸಿಂಹ ಅವತಾರ. ಈ ಸ್ವಾಮಿಯನ್ನು ನರಹರಿ ಎಂದೂ ಕೂಡ ಕರೆಯುತ್ತಾರೆ. ಶ್ರೀ ಮಹಾ ವಿಷ್ಣುವು ನರಸಿಂಹ ರೂಪವನ್ನು ಧರಿಸಿ ಹಿರಣ್ಯ ಕಶ್ಯಪನ್ನು ಹೊಟ್ಟೆ ಬಗೆದು ಸಂಹರಿಸುತ್ತಾನೆ.

ಅದ್ದರಿಂದಲೇ ಶತ್ರು ಭಯ ಇರುವವರು, ಶನಿ ದೋಷ ಇರುವವರು, ಕುಜದೋಷ ಇರುವವರು ಮೊದಲು ನರಸಿಂಹ ಸ್ವಾಮಿಯನ್ನು ಆರಾಧಿಸುಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ಜೀವನದಲ್ಲಿ ಕಷ್ಟಗಳು ವಿಪರೀತ ಇರುವಾಗ ಕ್ರೂರವಾದ ಪ್ರಾಣಿಗಳು, ಶತ್ರುಗಳು ಸತ್ತುವರೆದಿದ್ದಾಗ ದುಷ್ಟ ಗ್ರಹ ನಿವಾರಣೆಗೆ ನರಸಿಂಹ ಸ್ವಾಮಿಯ ಹೆಸರು ಸ್ಮಾರಿಸಿದರೆ ಆ ಕಷ್ಟಗಳೆಲ್ಲಾ ತ್ವರಿತವಾಗಿ ದೂರವಾಗುತ್ತದೆ ಎಂದು ಪುರಾಣಗಳು ಹೇಳುತ್ತವೆ.

ಮಯ ಮತ ಎಂಬ ಶಾಸ್ತ್ರ ಗ್ರಂಥದಲ್ಲಿ ನರಸಿಂಹ ಸ್ವಾಮಿಯನ್ನು ಪರ್ವತದ ಮೇಲೆ, ಗುಹಾಯಲ್ಲಿ, ಅರಣ್ಯದಲ್ಲಿ ಶತ್ರು ದೇಶ ಸರಿಹದ್ದುಗಳಲ್ಲಿ ಪ್ರತಿಷ್ಟಾಪಿಸುತ್ತಾರೆ. ಅದ್ದರಿಂದಲೇ ಲಕ್ಷ್ಮಿ ನರಸಿಂಹ ದೇವಾಲಯವನ್ನು ಪರ್ವತದ ಮೇಲೆ, ಗುಹೆಗಳಲ್ಲಿ ಇರುವುದು ಕಾಣಬಹುದಾಗಿದೆ. ಸಾಮಾನ್ಯವಾಗಗಿ ಭಾರತದಲ್ಲಿ ಆನೇಕ ಪ್ರದೇಶದಲ್ಲಿ ನರಸಿಂಹ ಸ್ವಾಮಿಯ ಹಲವಾರು ದೇವಾಲಯಗಳನ್ನು ಕಾಣಬಹುದಾಗಿದೆ. ಆದರೆ ಅವುಗಳಲ್ಲಿ ಅತ್ಯಂತ ಮುಖ್ಯವಾದುದೆಂದರೆ ಅಂತರ್ ವೇದಿ.

ಎಲ್ಲಿದೆ?

ಎಲ್ಲಿದೆ?

ನರಸಿಂಹ ಸ್ವಾಮಿಯ ಅತ್ಯಂತ ಮಾಹಿಮಾನ್ವಿತವಾದ ದೇವಾಲಯವು ಆಂಧ್ರ ಪ್ರದೇಶ ರಾಜ್ಯದ ಪೂರ್ವ ಗೋದಾವರಿ ಜಿಲ್ಲೆಯಲ್ಲಿನ ಅಂತರ್ ವೇದಿ ಲಕ್ಷ್ಮಿ ನರಸಿಂಹ ಸ್ವಾಮಿ ಕ್ಷೇತ್ರ.

PC:YOUTUBE

ಅಂತರ್ ವೇದಿ

ಅಂತರ್ ವೇದಿ

ಈ ಪವಿತ್ರವಾದ ಕ್ಷೇತ್ರದಲ್ಲಿ ನೆಲೆಸಿರುವ ನರಸಿಂಹ ಸ್ವಾಮಿ ಮಾಹಾ ಶಕ್ತಿಯುತನಾದವನು, ಎಂತಹ ಭಾದೆಗಳಿದ್ದರೂ ಕೂಡ ಅದನ್ನು ಪರಿಹರಿಸುವ ಮಹಿಮಾನ್ವಿತನು ಎಂದು ಇತನ ಭಕ್ತರು ಭಾವಿಸುತ್ತಾರೆ. ಈ ಕ್ಷೇತ್ರವನ್ನು ದಕ್ಷಿಣ ಕಾಶಿ ಎಂದೂ ಸಹ ಕರೆಯುತ್ತಾರೆ.


PC:YOUTUBE

ಬ್ರಹ್ಮ ದೇವ

ಬ್ರಹ್ಮ ದೇವ

ಪುರಾಣಕಾಲದಲ್ಲಿ ಬ್ರಹ್ಮ ದೇವ ತಾನು ಮಾಡಿದ ಪಾಪಗಳನ್ನು ಕಳೆಯಲು ಅಂತರ್ ವೇದಿ ಪ್ರದೇಶಕ್ಕೆ ಬಂದು ಅಲ್ಲಿಯೇ ನೀಲಕಂಠೇಶ್ವರ ಎನ್ನುವ ಹೆಸರುನ್ನು ಇಟ್ಟು ಶಿವಲಿಂಗವನ್ನು ಸ್ಥಾಪಿಸಿದರು. ತದ ನಂತರ ಯಜ್ಞಕ್ಕಾಗಿ ಒಂದು ಸುಂದರವಾದ ವೇದಿಕೆಯನ್ನು ನಿರ್ಮಾಣ ಮಾಡಿ ಕೆಲವು ಕಾಲ ನೀಲಕಂಠೇಶ್ವರನಿಗೆ ಪೂಜಿಸಿ ತನ್ನ ಶಿವದೋಷವನ್ನು ಕಳೆದುಕೊಂಡನು.


PC:YOUTUBE

ಅಂತರ್ ವೇದಿ ಎಂಬ ಹೆಸರು ಹೇಗೆ ಬಂತು?

ಅಂತರ್ ವೇದಿ ಎಂಬ ಹೆಸರು ಹೇಗೆ ಬಂತು?

ಬ್ರಹ್ಮ ದೇವನ ಕೈಯಲ್ಲಿ ಈ ಪ್ರದೇಶದಲ್ಲಿ ಯಜ್ಞ ವೇದಿಕೆ ಸ್ಥಾಪಿಸಿದ್ದಕ್ಕಾಗಿ ಈ ಕ್ಷೇತ್ರವನ್ನು ಅಂತರ್ ವೇದಿ ಎಂದು ಪ್ರಖ್ಯಾತಿ ಪಡೆದಿದೆ.


PC:YOUTUBE

ಮುಕ್ತಿ ಕ್ಷೇತ್ರ

ಮುಕ್ತಿ ಕ್ಷೇತ್ರ

ಈ ಕ್ಷೇತ್ರವನ್ನು ದರ್ಶನ ಮಾಡಿದವರಿಗೆ ತಪ್ಪದೇ ಮುಕ್ತಿ ಲಭಿಸುವುದರಿಂದ ಈ ಕ್ಷೇತ್ರಕ್ಕೆ ಮುಕ್ತಿ ಕ್ಷೇತ್ರ ಎಂದೂ ಸಹಾ ಕರೆಯುತ್ತಾರೆ.


PC:YOUTUBE

ಕೋರಿಕೆಗಳು

ಕೋರಿಕೆಗಳು

ಈ ಕ್ಷೇತ್ರಕ್ಕೆ ಬಂದು ನರಸಿಂಹ ಸ್ವಾಮಿಯ ದರ್ಶನ ಪಡೆದರೆ ಯಾವ ಕೋರಿಕೆಯನ್ನು ಕೋರಿಕೊಂಡರೂ ತಪ್ಪದೇ ನೆರವೇರುತ್ತದೆ ಎಂದು ಭಕ್ತರು ಭಾವಿಸುತ್ತಾರೆ.

PC:YOUTUBE

108 ನರಸಿಂಹ ಕ್ಷೇತ್ರದಲ್ಲಿ ಒಂದು

108 ನರಸಿಂಹ ಕ್ಷೇತ್ರದಲ್ಲಿ ಒಂದು

ಅಂತರ್ ವೇದಿ ಒಂದು ಗ್ರಾಮ. ಈ ಗ್ರಾಮದ ವಿಸ್ತೀರ್ಣ 4 ಚದರ ಕಿ,ಮೀ ಇರುತ್ತದೆ. ಭಾರತ ದೇಶದಲ್ಲಿಯೇ 108 ನರಸಿಂಹ ಸ್ವಾಮಿ ಕ್ಷೇತ್ರಗಳಲ್ಲಿ ಅಂತರ್ ವೇದಿ ಕೂಡ ಒಂದಾಗಿದೆ.

PC:YOUTUBE

ನದಿಗಳು

ನದಿಗಳು

ಈ ಕ್ಷೇತ್ರದಲ್ಲಿ ಪೂರ್ವ ಹಾಗೂ ದಕ್ಷಿಣ ದಿಕ್ಕುಗಳಲ್ಲಿ ಬಂಗಾಳಾ ಕೊಲ್ಲಿ, ಪಶ್ಚಿಮ ದಿಕ್ಕಿನಲ್ಲಿ ವಿಶಿಷ್ಟ ಗೌತಮಿ ನದಿ ಮತ್ತು ಉತ್ತರ ದಿಕ್ಕಿಗೆ ರಕ್ತ ಕುಲ್ಯಾನದಿ ಪ್ರವಹಿಸುತ್ತದೆ.

PC:YOUTUBE

ಪುಣ್ಯ ಕ್ಷೇತ್ರ

ಪುಣ್ಯ ಕ್ಷೇತ್ರ

ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಸಾಕಿನೇಟಿ ಪಲ್ಲಿ ಮಂಡಲದಲ್ಲಿ ಈ ಅಂತರ್ ವೇದಿ ಕ್ಷೇತ್ರ ಇದೆ. ಅಮಲಾಪುರಂ ನಿಂದ ಸುಮಾರು 65 ಕಿ,ಮೀ ದೂರದಲ್ಲಿ, ರಾಜಮಂಡ್ರಿಯಿಂದ 100 ಕಿ,ಮೀ ದೂರ ಹಾಗೂ ಕಾಕಿನಾಡದಿಂದ 130 ಕಿ,ಮೀ ದೂರದಲ್ಲಿ ಈ ಕ್ಷೇತ್ರ ನೆಲೆಸಿದೆ.


PC:YOUTUBE

ಸ್ಥಳ ಪುರಾಣ

ಸ್ಥಳ ಪುರಾಣ

ಸ್ಥಳ ಪುರಾಣಗಳ ಪ್ರಕಾರ ಕೃತ ಯುಗದಲ್ಲಿ ಶ್ವನಕಾದಿ ಮಾಹಾ ಮುನಿಯು ನೈಮಿಶಾ ಅರಣ್ಯದಲ್ಲಿ ಮಾಹಾ ಯಾಗ ಮಾಡಲು ನಿರ್ಣಯ ಮಾಡಿಕೊಳ್ಳುತ್ತಾರೆ. ಆಗ ಶ್ವನಕ ಮಾಹಾ ಮುನಿಗೆ ಅಂತರ್ ವೇದಿ ಕ್ಷೇತ್ರದ ಮಹತ್ವದ ಬಗ್ಗೆ ವಿವರಿಸುತ್ತಾನೆ.

PC:YOUTUBE

ರಕ್ತ ವಿಲೊಚನ

ರಕ್ತ ವಿಲೊಚನ

ರಕ್ತ ವಿಲೋಚನ ಎಂಬ ರಾಕ್ಷಸ ಈ ಪ್ರದೇಶದಲ್ಲಿ ಪರಮಶಿವನಿಗಾಗಿ ವಿಶಿಷ್ಟ ಗೋದಾವರಿ ತೀರದಲ್ಲಿ ಹಲವಾರು ವರ್ಷಗಳ ಕಾಲ ಘೋರವಾದ ತಪಸ್ಸು ಮಾಡುತ್ತಾನೆ. ಶಿವನ ಒಂದು ಅನುಗ್ರಹದಿಂದ ಒಂದು ವರವನ್ನು ಪಡೆಯುತ್ತಾನೆ.

PC:YOUTUBE

ವರ

ವರ

ಆ ವರ ಪ್ರಕಾರ, ತನಗೆ ಏನಾದರೂ ಅನಾಹುತವಾಗಿ ರಕ್ತ ಚಿಮ್ಮಿದರೆ ಪ್ರತಿ ಹನಿಯು ನನ್ನ ಪ್ರತಿರೂಪವಾದ ಹಾಗೂ ಪರಾಕ್ರಮವಂತರು ಉದ್ಭವಿಸಬೇಕು ಎಂದು ಕೋರಿದನು. ಹಾಗೇಯೆ ತನಗೆ ಈ ವರದ ಬಗ್ಗೆ ಸಹಕರಿಸಬೇಕು ಎಂದು ಕೇಳಿಕೊಂಡನು.


PC:YOUTUBE

 ಅಹಂಕಾರ

ಅಹಂಕಾರ

ರಕ್ತ ವಿಲೋಚನ ಈ ವರವನ್ನು ಶಿವನಿಂದ ಪಡೆದು ಅಹಂಕಾರದಿಂದ ಬ್ರಹ್ಮಣರನ್ನು, ಋಷಿಗಳನ್ನು ಹಿಂಸಿಸುತ್ತಿದ್ದನು. ಈ ವಿಷಯವನ್ನು ತಿಳಿದ ಮಾಹಾ ಋಷಿ ಮುನಿ ವಿಶ್ವ ಮಿತ್ರ ಅಗಸ್ತ್ಯಮುನಿಯ ಕೂಮಾರರು ಈ ರಕ್ಷಸನ್ನು ಕೊಲ್ಲುಬಹುದು ಹಾಗೂ ಅವರಿಗೆ ಇರುವ ತಪೋಫಲದಿಂದ ಸಂಹಾರ ಮಾಡಬಹುದೆಂದು ಸಲಹೆಯನ್ನು ನೀಡುತ್ತಾನೆ.

PC:YOUTUBE

ಅಗಸ್ತ್ಯ

ಅಗಸ್ತ್ಯ

ರಕ್ತ ವಿಲೋಚನ ಅಗಸ್ತ್ಯವಿಲ್ಲದ ಸಮಯದಲ್ಲಿ ಅಗಸ್ತ್ಯ ಕೂಮಾರರನ್ನು ಸಂಹರಿಸುತ್ತಾನೆ. ತಿರುಗಿ ಬಂದ ಅಗಸ್ತ್ಯ ಮಾಹಾ ಮುನಿಯು ಪುತ್ರ ಶೋಕ ಅನುಭವಿಸುತ್ತಾನೆ. ಆಗ ನೊಂದು ಮಹಾ ವಿಷ್ಣುವನ್ನು ಕೂಗುತ್ತಾನೆ.


PC:YOUTUBE

ಮಾಹಾವಿಷ್ಣು

ಮಾಹಾವಿಷ್ಣು

ಆಗ ಮಹಾವಿಷ್ಣುವು ತನ್ನ ಗರುಡ ವಾಹನದಲ್ಲಿ ನರಹರಿ ರೂಪದಲ್ಲಿ ಅಂತರ್ ವೇದಿಗೆ ಬಂದು ಅಗಸ್ತ್ಯ ಮಾಹಾ ಮುನಿಗೆ ಧೈರ್ಯ ಹೇಳಿ ತದನಂತರ ನೃಸಿಂಹ ಅವತಾರ ಧರಿಸಿ ಭಯಂಕರವಾಗಿ ಘರ್ಜಿಸುತ್ತಾ ರಕ್ತ ವಿಲೋಚನನ ಮೇಲೆ ದಾಳಿ ಮಾಡುತ್ತಾನೆ. ನರಹರಿ ತನ್ನ ಪಾಂಚ ಜನ್ಯ ಶಂಕವನ್ನು ಕೂಗಿದನು. ಶಂಖ ನಾದವನ್ನು ಕೇಳಿದ ರಕ್ತ ವಿಲೋಚನ ಸೈನ್ಯ ಸಮೇತನಾಗಿ ನರಹರಿಯ ಮುಂದೆ ಬಂದು ನಿಂತನು.

PC:YOUTUBE

 ಯುದ್ಧ

ಯುದ್ಧ

ಶಿವಬಲದಿಂದ ಮದಿಸಿದ್ದ ರಕ್ತ ವಿಲೋಚನ ಹಲವು ಆಯುದ್ಧಗಳನ್ನು ನೃಸಿಂಹ ಸ್ವಾಮಿಯ ಮೇಲೆ ಪ್ರಯೋಗ ಮಾಡಿದನು. ನರಹರಿ ಸ್ವಾಮಿಯು ತನ್ನ ಸುದರ್ಶನ ಚಕ್ರವನ್ನು ಪ್ರಯೋಗಿಸಿ ರಕ್ತ ವಿಲೋಚನನ ತಲೆಯನ್ನು ತುಂಡು ತುಂಡಾಗಿ ಕತ್ತರಿಸಿದನು. ಆ ರಕ್ತದ ಹನಿಗಳಿಂದ ಶಿವನ ವರದ ಪ್ರಭಾವದಿಂದಾಗಿ ಸಾವಿರಾರು ರಕ್ತ ವಿಲೋಚನ ಉದ್ಭವಿಸಿನು.


PC:YOUTUBE

ರಕ್ತದ ರಾಕ್ಷಸರು

ರಕ್ತದ ರಾಕ್ಷಸರು

ಆಗ ಗರುಡ ವಾಹನದ ಮೇಲೆ ಇದ್ದ ನೃಸಿಂಹ ಸ್ವಾಮಿಯ ಮೇಲೆ ದಾಳಿ ಮಾಡಿದರು. ನೃಸಿಂಹ ಸ್ವಾಮಿ ತನ್ನ ಯೋಗ ವಿದ್ಯೆಯಿಂದ ಆಶ್ವರೋಡನ್ನು ಸೃಷ್ಟಿಸಿದನು. ಇದರಿಂದಾಗಿ ಸಾವಿರಾರು ರಾಕ್ಷಸರ ರಕ್ತವು ಕೆಳಗೆ ಬೀಳದೇ ಕುಡಿಯಲು ಮುಂದಾಯಿತು. ನಂತರ ರಕ್ತ ವಿಲೋಚನನ್ನು ಸುದರ್ಶನ ಚಕ್ರದಿಂದ ಖಂಡಿಸಿ. ಆತನ ರಕ್ತವನ್ನು ಕೂಡ ಮಾಯಾ ಶಕ್ತಿ ಕುಡಿಯಿತು.

PC:YOUTUBE

 ಮಾಯಾ ಶಕ್ತಿ

ಮಾಯಾ ಶಕ್ತಿ

ತಾನು ಶೇಖರಿಸಿ ಇಟ್ಟು ಕೊಂಡಿದ್ದ ಸಾವಿರಾರು ರಾಕ್ಷಸರ ರಕ್ತವನ್ನು ನೆಲದ ಮೇಲೆ ಬಿಟ್ಟಿತು. ಆ ಮಾಯಾ ಶಕ್ತಿ ವಿರ್ಸಜಿಸಿದ ರಕ್ತವೇ ನದಿಯಾಗಿ ಆ ನದಿಯನ್ನು "ರಕ್ತ ಕುಲ್ಯಾ ನದಿ" ಎಂದು ಕರೆಯುತ್ತಾರೆ. ಹೀಗೆ ನರಸಿಂಹ ಸ್ವಾಮಿಯು ರಕ್ತ ವಿಲೋಚನನನ್ನು ಸಂಹರಿಸಿದ ಎಂದು ಪುರಾಣವಿದೆ.

PC:YOUTUBE

 ರಸ್ತೆ ಮಾರ್ಗದ ಮೂಲಕ

ರಸ್ತೆ ಮಾರ್ಗದ ಮೂಲಕ

ಅಂತರವೇದಿ ಪಶ್ಚಿಮ ಗೋದಾವರಿ ಜಿಲ್ಲೆ ಹಾಗೂ ಪೂರ್ವ ಗೋದಾವರಿ ಜಿಲ್ಲೆಯಿಂದ ಸೇರಬಹುದು. ರಾಜಮಂಡ್ರಿ, ಕಾಕಿನಾಡನಿಂದ ರಾವುಲಪಾಲಂಗೆ ಸೇರಿಕೊಳ್ಳಬಹುದು. ಇಲ್ಲಿಂದ ಹಲವಾರು ಬಸ್ಸುಗಳು ಅಂತರ್ ವೇದಿಗೆ ಇವೆ.

ರೈಲು ಮಾರ್ಗದ ಮೂಲಕ

ರೈಲು ಮಾರ್ಗದ ಮೂಲಕ

ಹೈದ್ರಾಬಾದ್‍ನಿಂದ ನರಸಾಪೂರ ಎಕ್ಸ್‍ಪ್ರೆಸ್ ನಿಂದ ನರಸಾಪುರಕ್ಕೆ ಸೇರಬಹುದು.

More News

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+