ಸಾಂಸ್ಕೃತಿಕ ನಗರಿ ಮೈಸೂರಿನ ದಸರಾ ಹಬ್ಬವು ದೇಶದ ಉಳಿದೆಲ್ಲಾ ಪ್ರಾಂತ್ಯಕ್ಕಿಂತಲೂ ವಿಭಿನ್ನವಾಗಿರುತ್ತದೆ. ಇಲ್ಲಿನ ರಾಜ ಮನೆತನದ ವೈಭವ, ಅರಮನೆಯ ಶೃಂಗಾರ ಇವೆಲ್ಲವೂ ನೋಡಲು ಅದ್ಭುತವಾಗಿರುತ್ತದೆ. ಇನ್ನೂ ಅರಮನೆಯ ಲೈಂಟಿಗ್‌ನ್ನಂತೂ ರಾತ್ರಿ ಹೊತ್ತಿನಲ್ಲೇ ನೋಡಬೇಕು. ಮೈಸೂರು ದಸರಾವನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಜನರು ಇಲ್ಲಿಗೆ ಆಗಮಿಸುತ್ತಾರೆ.

ಅರಮನೆ ನಗರಿ
PC: youtube
ದಸರಾ ಸಂದರ್ಭದಲ್ಲಿ ಅರಮನೆ ನಗರಿ ಮದುಮಗಳಂತೆ ಕಂಗೊಳಿಸುತ್ತಿರುತ್ತದೆ. ಈ ಬಾರಿ ಮೈಸೂರು ದಸರಾ ಯಾವಾಗ ನಡೆಯಲಿದೆ. ಅಲ್ಲಿ ನೀವು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳೇನು ಅನ್ನೋದನ್ನು ನಾವಿಂದು ನಿಮಗೆ ತಿಳಿಸಲಿದ್ದೇವೆ.

ಮೈಸೂರು ದಸರಾ
PC: youtube
ಮೈಸೂರು ದಸರಾವನ್ನು ರಾಜಾ ಒಡೆಯರ್-೧ ಕ್ರಿಶ. ೧೬೧೦ರಲ್ಲಿ ಈ ಉತ್ಸವವನ್ನು ಆರಂಭಿಸಿದರು. ಮೈಸೂರಿನ ಚಾಮುಂಡಿ ಬೆಟ್ಟದ ಮೇಲೆ ಇರುವ ಮಾತೆಗೆ ವಿಶೇಷ ಪೂಜೆಯನ್ನು ಮಾಡುವ ಮೂಲಕ ಈ ಉತ್ಸವವನ್ನು ಪ್ರಾರಂಭಿಸಲಾಗುತ್ತದೆ.

10 ದಿನಗಳ ವೈಭವ
ಮೈಸೂರು ದಸರಾವು 10 ದಿನಗಳ ಕಾಲ ವೈಭವದಿಂದ ನಡೆಯುತ್ತದೆ. ಅಕ್ಟೋಬರ್ 10 ರಿಂದ 19ರವರೆಗೆ ಮೈಸೂರು ದಸರಾ ನಡೆಯಲಿದೆ. ಸುಧಾಮೂರ್ತಿ ಈ ಬಾರಿಯ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ. ಮೈಸೂರಿನ ಚಾಮುಂಡಿ ಹಿಲ್ಸ್, ಅರಮನೆ, ಎಕ್ಸ್‌ಮಿಶನ್ ಗ್ರೌಂಡ್, ಅಡಿಟೋರಿಯಂ ಎಲ್ಲಾ ಕಡೆ ಈ ಉತ್ಸವ ನಡೆಯಲಿದೆ.

ದೀಪಾಲಂಕೃತ ಅರಮನೆ
ಮೈಸೂರು ದಸರಾ ಸಂದರ್ಭ ಅರಮನೆಯನ್ನು ಬಲ್ಭ್‌ಗಳಿಂದ ದೀಪಾಲಂಕರಿಸಲಾಗುತ್ತದೆ. ರಾತ್ರಿ ೭ ಗಂಟೆಯಿಂದ ೧೦ ಗಂಟೆಗಳ ವರೆಗೆ ನೀವು ಈ ದೀಪಾಲಂಕೃತ ಅರಮನೆಯನ್ನು ಕಣ್ತುಂಬಿಸಿಕೊಳ್ಳಬಹುದು.

ಚಿನ್ನದ ಸಿಂಹಾಸನ
ದಸರಾ ಉತ್ಸವದ ಸಂದರ್ಭ ಅರಮನೆಯಲ್ಲಿರುವ ಬಂಗಾರದ ಸಿಂಹಾಸನವನ್ನು ಹೊರಗೆತರಲಾಗುತ್ತದೆ. ಈ ಚಿನ್ನದ ಸಿಂಹಾಸನದಲ್ಲಿ ಮೈಸೂರು ಒಡೆಯರ್ ಕುಳಿತುಕೊಂಡು ಪ್ರಜಾ ದರ್ಶನ ಮಾಡುತ್ತಾರೆ. ಇನ್ನು ಕೇವಲ ಮೈಸೂರು ದಸರಾ ಸಂದರ್ಭ ನೋಡಲು ಸಿಗುವಂತಹ ಪ್ರಮುಕ ಆಕರ್ಷಣೆಯೆಂದರೆ ಜಂಬೂ ಸವಾರಿ .

ಜಂಬೂ ಸವಾರಿ
ಜಂಬೂ ಸವಾರಿ ಮೈಸೂರು ಅರಮನೆಯಿಂದ ಬನ್ನಿ ಮಂಟಪದವರೆಗೂ ಸಾಗುತ್ತದೆ. ಚಾಮುಂಡಿ ಮಾತೆಯನ್ನು ಅಂದವಾಗಿ ಅಲಂಕರಿಸಿ ಜಂಬೂ ಸವಾರಿಯಲ್ಲಿ ಕುಳ್ಳಿರಿಸುತ್ತಾರೆ. ಇದೇ ಸಂದರ್ಭದಲ್ಲಿ ನಾಟ್ಯ ವೈಭವ, ಸಂಗೀತ ಕಾರ್ಯಕ್ರಮಗಳು ನಡೆಯುತ್ತವೆ. ಪಂಜಿನ ಕವಾಯಿತು ಕೂಡಾ ನಡೆಯುತ್ತದೆ. ಇದು ನೋಡಲು ಬಹಳ ಆಕರ್ಷಕವಾಗಿರುತ್ತದೆ.

ಮೋಟಾರ್ ಸೈಕಲ್ ಸ್ಟಂಟ್
ಮೋಟಾರ್ ಸೈಕಲ್ ಸ್ಟಂಟ್, ಲೇಜರ್ ಶೋ ಕೂಡಾ ಇಲ್ಲಿನ ಆಕರ್ಷಣೆಗಳಲ್ಲೊಂದು. ಇಲ್ಲಿ ಯುವ ದಸರಾ ಕೂಡಾ ಇಲ್ಲಿನ ಪ್ರಧಾನ ಆಕರ್ಷಣೆ. ದಸರಾಕ್ಕಾಗಿಯೆ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವಿಶೇಷ ಆಫರ್‌ಗಳನ್ನೂ ನೀಡಿದೆ.

ಪ್ಯಾಲೇಸ್ ಆನ್ ವೀಲ್ಸ್
ಪ್ಯಾಲೇಸ್ ಆನ್ ವೀಲ್ಸ್ ಎನ್ನುವ ಹೆಸರಿನಲ್ಲಿ ಒಂದು ದಿನ ಇಡೀ ಮೈಸೂರು ದರ್ಶನಕ್ಕೆ ಸಾರಿಗೆ ಸಂಸ್ಥೇಯು 999ರೂ. ತೆಗೆದುಕೊಳ್ಳುತ್ತದೆ. ಇನ್ನು ಹೆಲಿಕಾಫ್ಟರ್ ವ್ಯೂ ತೋರಿಸಲು ಹೆಲಿಕಾಫ್ಟರ್ ಕೂಡಾ ತಯಾರಾಗಿದೆ.10 ನಿಮಿಷಕ್ಕೆ 2300 ರೂ. ತೆಗೆದುಕೊಳ್ಳುತ್ತಾರೆ.

ತಂಗಲು ವ್ಯವಸ್ಥೆ ಇದೆ
ಬಜೆಟ್ ಹೋಟೆಲ್‌ಗಳಿಂದ ಹಿಡಿದು ಸ್ಟಾರ್ ಹೋಟೆಲ್ಸ್‌ವರೆಗೂ ನಮಗೆ ಇಲ್ಲಿ ಇರಲು ಎಲ್ಲಾ ರೀತಿಯ ವ್ಯವಸ್ಥೆಗಳು ಇವೆ.ತಿರುಗಾಡಲು ಸೈಕಲ್ ವ್ಯವಸ್ಥೆ ಕೂಡಾ ಇದೆ.


Click it and Unblock the Notifications

















