ಹೌದು, ಕೆಲವು ಸ್ಥಳಗಳ ವಿಶೇಷತೆಗಳೆ ಹಾಗಿರುತ್ತವೆ. ತಮ್ಮ ವಿಶಿಷ್ಟ, ಅಲೌಕಿಕ, ರೋಚಕ ದಂತ ಕಥೆಯ ಹಿನ್ನಿಲೆ ಅಥವಾ ವಾತಾವರಣದ ಅತಿ ಅಪರೂಪದ ಗುಣಲಕ್ಷಣಗಳನ್ನು ಹೊಂದಿದ್ದು ಬಹುಶಃ ಪ್ರಪಂಚದಲ್ಲಿ ಮತ್ತಿನ್ನೆಲ್ಲೂ ಕಾಣ ಸಿಗದ ಹಾಗಿರುತ್ತವೆ. ಇಂತಹ ಸ್ಥಳಗಳಿಗೆ ಜೀವಿತಾವಧಿಯಲ್ಲೊಮ್ಮೆಯಾದರೂ ಭೇಟಿ ನೀಡಿದರೆ...ಏನೋ ಒಂದು ಸಾರ್ಥಕತೆಯ ಭಾವ ಮೂಡುವುದು ನಿಜ.
ವಿಶೇಷ ಲೇಖನ : ಅದ್ಭುತ ಪ್ರಾಕೃತಿಕ ವಿಸ್ಮಯಗಳು
ಇಂತಹ ಕೆಲವು ಅಪರೂಪದ ಸ್ಥಳಗಳನ್ನು ಭಾರತದಲ್ಲೂ ಸಹ ಕಾಣಬಹುದಾಗಿದೆ. ನೀವು ವೃತ್ತಿಪರ ಪ್ರವಾಸಗಾರರಾಗಿದ್ದರೆ ಅಥವಾ ನಿಮಗೆ ಪ್ರವಾಸವು ಇತಿಹಾಸದ ಕಳೆದುಹೋದ ಪುಟಗಳನ್ನು, ಸ್ಥಳದ ಹಿನ್ನಿಲೆಯನ್ನು ನಿಮ್ಮದೆ ಆದ ಕಾಲ್ಪನಿಕ ಲೋಕದಲ್ಲಿ ಮರುಜೀವಿಸುವುದಕ್ಕೆ ಪ್ರೇರಣೆ ಕೊಡುತ್ತಿದ್ದರೆ ಈ ಕೆಳಗಿನ ಸ್ಥಳಗಳಿಗೆ ಒಮ್ಮೆಯಾದರೂ ಭೇಟಿ ನೀಡಲು ಪ್ರಯತ್ನಿಸಿ.

ಅಸಾಮಾನ್ಯ ತಾಣಗಳು:
ಈ ಸ್ಥಳಗಳು ತಮ್ಮದೆ ಆದ ವಿಶೇಷತೆಗಳನ್ನು ಹೊಂದಿದ್ದು ಅಪರೂಪದ ತಾಣಗಳಾಗಿವೆ.

ಅಸಾಮಾನ್ಯ ತಾಣಗಳು:
ಕುಲ್ಧಾರಾ : ರಾಜಸ್ಥಾನ ರಾಜ್ಯದ ಜೈಸಲ್ಮೇರ್ ನಗರದ ಬಳಿಯಿರುವ ಕುಲ್ಧಾರಾ, ಜನರು ತೊರೆದ ಗ್ರಾಮವಾಗಿದ್ದು ಪಿಶಾಚಗ್ರಸ್ಥ ಗ್ರಾಮವಾಗಿದೆ ಎನ್ನಲಾಗಿದೆ. ಪಾಳು ಬಿದ್ದ ಈ ಹಳ್ಳಿಯು ಇಂದು ಒಂದು ಪ್ರವಾಸಿ ಆಕರ್ಷಣೆಯಾಗಿದ್ದು ವಿದೇಶಿಯರು ಇದರ ರೋಚಕ ಹಿನ್ನಿಲೆಯಿಂದ ಆಕರ್ಷಿತರಾಗಿ ಭೇಟಿ ನೀಡುತ್ತಾರೆ.
ಚಿತ್ರಕೃಪೆ: Tomas Belcik

ಅಸಾಮಾನ್ಯ ತಾಣಗಳು:
ಮಿರಿಸ್ಟಿಕಾ ಜೌಗು ಕಾಡು : ಇದೊಂದು ತಾಜಾ ನೀರಿನ ಜೌಗು ಪ್ರದೇಶದ ಕಾಡಾಗಿದ್ದು ಭಾರತದಲ್ಲಿ ಕೇರಳ ಹಾಗೂ ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ಕೆಲ ಭಾಗಗಳಲ್ಲಿ ಮಾತ್ರವೆ ಕಾಣಲು ಸಿಗುತ್ತದೆ. ಇಂದು ಇವುಗಳನ್ನು ಅತ್ಯಂತ ಅಪಾಯದಂಚಿನಲ್ಲಿರುವ ಜೈವಿಕ ಪರಿಸರ ಎಂದು ಪರಿಗಣಿಸಲಾಗಿದೆ.
ಚಿತ್ರಕೃಪೆ: Nairpv

ಅಸಾಮಾನ್ಯ ತಾಣಗಳು:
ಮಾವ್ಸಿನ್ರಾಮ್ : ಮೇಘಾಲಯದ ಪೂರ್ವ ಖಾಸಿ ಹಿಲ್ ಜಿಲ್ಲೆಯ ಒಂದು ಹಳ್ಳಿಯೆ ಮಾವ್ಸಿನ್ರಾಮ್. ಜಗತ್ತಿನಲ್ಲಿಯೆ ಅತಿ ಹೆಚ್ಚು ಮಳೆ ಪಡೆವ ಸ್ಥಳ ಎಂಬ ಖ್ಯಾತಿಗೆ ಕಾರಣವಾಗಿದೆ ಮಾವ್ಸಿನ್ರಾಮ್. ಹೌದು ಚಿರಾಪುಂಜಿಗಿಂತಲೂ ಅಧಿಕ ಮಳೆ ಇಲ್ಲಿ ಬೀಳುತ್ತದೆ. ಗಿನ್ನಿಸ್ ಪುಸ್ತಕದ ದಾಖಲೆಯಂತೆ 1985 ರಲ್ಲಿ ಮಾವ್ಸಿನ್ರಾಮ್ 26000 ಮಿ.ಮೀ ಗಳಷ್ಟು ಮಳೆ ಇಲ್ಲಿ ಬಿದ್ದಿತ್ತು. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Masrur Ashraf

ಅಸಾಮಾನ್ಯ ತಾಣಗಳು:
ಲಕ್ಷದ್ವೀಪ ಸ್ಕೂಬಾ ಡೈವಿಂಗ್ : ಲಕ್ಕಾಡೀವ್ಸ್ ಎಂತಲೂ ಕರೆಯಲ್ಪಡುವ ಲಕ್ಷದ್ವೀಪವು ಕಡಲಾಳದ ಹವಳದ ದಿಬ್ಬಗಳಿಗೆ ಅತಿ ಪ್ರಸಿದ್ಧವಾಗಿದ್ದು ಬಣ್ಣ ಬಣ್ಣದ ವೈವಿಧ್ಯಮಯ ಜಲಜೀವಿಗಳ ವೀಕ್ಷಣೆಗೆ ಹೆಸರುವಾಸಿಯಾಗಿದೆ. ಸಮುದ್ರದಾಳದಲ್ಲಿ ವಿಹರಿಸಬಹುದಾದ ಜಗತ್ತಿನ ಅತಿ ಸುಂದರ ಸ್ಥಳಗಳ ಪೈಕಿ ಲಕ್ಷದ್ವೀಪವು ಒಂದಾಗಿದೆ. ಸಾಂದರ್ಭಿಕ ಚಿತ್ರ.
ಚಿತ್ರಕೃಪೆ: Global Panorama

ಅಸಾಮಾನ್ಯ ತಾಣಗಳು:
ಝಂನ್ಸ್ಕಾರ್ ಹಿಮ ನದಿ : ಹಿಮಾಲಯ ಪರ್ವತ ಪ್ರದೇಶಗಳು ಹಾಗೂ ಜಮ್ಮು ಕಾಶ್ಮೀರ ಕಣಿವೆಗಳು ಟ್ರೆಕ್ ಮಾರ್ಗಗಳಿಗಾಗಿ ಅಪಾರ ಖ್ಯಾತಿಯನ್ನು ಗಳಿಸಿವೆ. ಇಲ್ಲಿನ ಟ್ರೆಕ್ ಎಷ್ಟು ರೋಮಾಂಚನ ನೀಡುತ್ತವೆಯೋ ಅಷ್ಟೆ ಕಠಿಣದಾಯಕವಾಗಿಯೂ ಇರುತ್ತದೆ. ಲಡಾಖ್ ಪ್ರದೇಶದ ಝಂನ್ಸ್ಕಾರ್ ಒಂದಿ ಹಿಮನದಿಯಾಗಿದ್ದು ಟ್ರೆಕ್ ಮಾಡುವವರಿಗೆ ಕಠಿಣ ಸವಾಲೆಸೆಯುತ್ತದೆ.
ಚಿತ್ರಕೃಪೆ: Partha Chowdhury

ಅಸಾಮಾನ್ಯ ತಾಣಗಳು:
ದ್ರಾಸ್ ಕಣಿವೆ ಪಟ್ಟಣ : ಜನಪ್ರೀಯವಾಗಿ ಲಡಾಖ್ ನ ಹೆಬ್ಬಾಗಿಲು ಎಂದು ಕರೆಯಲ್ಪಡುವ ಕಾರ್ಗಿಲ್ ಜಿಲ್ಲೆಯಲ್ಲಿರುವ ದ್ರಾಸ್ ಕಣಿವೆ ಪಟ್ಟಣವು ಭಾರತದ ಅತ್ಯಂತ ತಂಪಾದ ಜನವಾಸವಿರುವ ಪ್ರದೇಶವಾಗಿದೆ. ಅಲ್ಲದೆ ಜಗತ್ತಿನ ಅತಿ ತಂಪಾದ ಜನವಾಸವಿರುವ ಸ್ಥಳಗಳ ಪೈಕಿ ಎರಡನೇಯ ಸ್ಥಾನದಲ್ಲಿದೆ.
ಚಿತ್ರಕೃಪೆ: Narender9

ಅಸಾಮಾನ್ಯ ತಾಣಗಳು:
ಮೇಘಾಲಯದ ಆಳ ಗುಹೆಗಳು : ಮೇಘಾಲಯ ರಾಜ್ಯವು ತನ್ನಲ್ಲಿರುವ ಅತಿ ಹೆಚ್ಚಿನ ಸಂಖ್ಯೆಯ ಗುಹೆಗಳು ಹಾಗೂ ಆಳಮಯ ಗುಹೆಗಳಿಹೆ ಖ್ಯಾತಿ ಪಡೆದಿದೆ. ಮೇಘಾಲಯದ ಜಂನ್ಷಿಯಾ ಹಿಲ್ಸ್ ನಲ್ಲಿ ಕಂಡುಬರುವ ಒಂದು ಗುಹೆ. ಆಸಕ್ತಿಯಿರುವ ಪ್ರವಾಸಿಗರು ಇಲ್ಲಿರುವ ಗುಹೆಗಳನ್ನು ಅನ್ವೇಷಿಸಲು ಬರುತ್ತಿರುತ್ತಾರೆ.
ಚಿತ್ರಕೃಪೆ: Biospeleologist

ಅಸಾಮಾನ್ಯ ತಾಣಗಳು:
ರಹಸ್ಯ ರೂಪಕುಂಡ ಸರೋವರ : ರೂಪಕುಂಡ ಒಂದು ಹಿಮನದಿಯಾಗಿದ್ದು, ಉತ್ತರಾಖಂಡ ರಾಜ್ಯದಲ್ಲಿ ಕಂಡುಬರುತ್ತದೆ. ಈ ಕೆರೆಯ ಅಂಚುಗಳಲ್ಲಿ ನೂರಾರು ಸಂಖ್ಯೆಯಲ್ಲಿ ಮನುಷ್ಯನ ಅಸ್ಥಿಪಂಜರಗಳು ದೊರೆತಿದ್ದರಿಂದ ಇದು ಹೆಸರುವಾಸಿಯಾಗಿದೆ. ಕೆರೆಯು ಸುತ್ತಲು ಹಿಮ ಪರ್ವತಗಳಿಂದ ಸುತ್ತುವರೆದಿದ್ದು, ಉತ್ತಮ ಚಾರಣ ಸ್ಥಳವೂ ಸಹ ಆಗಿದೆ.[ಸಾಂದರ್ಭಿಕ ಚಿತ್ರ] ರೂಪಕುಂಡದ ಕುರಿತು ಹೆಚ್ಚು ತಿಳಿಯಿರಿ.
ಚಿತ್ರಕೃಪೆ: rajkumar1220

ಅಸಾಮಾನ್ಯ ತಾಣಗಳು:
ಬ್ಯಾರನ್ ನಡುಗಡ್ಡೆ : ಅಂಡಮಾನ್ ನಿಕೋಬಾರ್ ದ್ವೀಪಗಳ ರಾಜಧಾನಿ ನಗರ ಪೋರ್ಟ್ ಬ್ಲೇರ್ ಬಳಿಯಿರುವ ಬ್ಯಾರನ್ ನಡುಗಡ್ಡೆ ದಕ್ಷಿಣ ಏಷಿಯಾ ಭಾಗದ ಏಕೈಕ ಜೀವಂತ ಜ್ವಾಲಾಮುಖಿಯಿರುವ ದ್ವೀಪವಾಗಿದೆ. ಹಿಂದೂ ಮಹಾ ಸಾಗರದಲ್ಲಿರುವ ಭೇಟಿ ನೀಡಲೇ ಬೇಕಾದ ನಡುಗಡ್ಡೆ ದ್ವೀಪ ಇದಾಗಿದೆ.
ಚಿತ್ರಕೃಪೆ: NASA

ಅಸಾಮಾನ್ಯ ತಾಣಗಳು:
ವಾರಣಾಸಿಯ ಊರಿಯುವ ಘಾಟುಗಳು : ಕಾಶಿ ಅಥವಾ ಬನಾರಸ್ ಎಂತಲೂ ಕರೆಯಲ್ಪಡುವ ಶಿವನ ನೆಚ್ಚಿನ ತಾಣವೆ ವಾರಣಾಸಿ. ನಿರಂತರ ಜನವಸತಿಯಿರುವ ವಿಶ್ವದ ಅತಿ ಪ್ರಾಚೀನ ನಗರಗಳಲ್ಲಿ ಒಂದಾಗಿರುವ ವಾರಣಾಸಿಯ ಇತಿಹಾಸವು ಪ್ರಸ್ತುತ ಜಗತ್ತಿನ ಕೆಲವು ಪ್ರಮುಖ ಧರ್ಮಗಳಿಗಿಂತಲೂ ಹಿಂದಿನದ್ದಾಗಿದೆ. ಹಿಂದೂ ನಂಬಿಕೆಯಂತೆ ಮನುಷ್ಯನ ಅಂತ್ಯಕ್ರಿಯೆಯು ಇಲ್ಲಿ ಜರುಗಿದರೆ ಆತ ಮೋಕ್ಷ ಪಡೆಯುತ್ತಾನೆಂದು ನಂಬಲಾಗಿದೆ. ಅಂತೆಯೆ ಇಲ್ಲಿನ ಊರಿಯುವ ಘಾಟುಗಳು ವಿಶಿಷ್ಟ ವೈರಾಗ್ಯ ಅನುಭೂತಿಯನ್ನು ಕರುಣಿಸುತ್ತವೆ.
ಚಿತ್ರಕೃಪೆ: Arian Zwegers

ಅಸಾಮಾನ್ಯ ತಾಣಗಳು:
ಅತ್ಯಂತ ಸ್ವಚ್ಛ ಹಳ್ಳಿ : ಮೇಘಾಲಯದ ಪೂರ್ವ ಖಾಸಿ ಜಿಲ್ಲೆಯಲ್ಲಿರುವ ಮಾವ್ಲಿನ್ನಾಂಗ್ ಎಂಬ ಹಳ್ಳಿಯು ಏಷಿಯಾ ಖಂಡಲದಲ್ಲೆ ಅತ್ಯಂತ ಸ್ವಚ್ಛತೆ ಹೊಂದಿರುವ ಹಳ್ಳಿ ಖ್ಯಾತಿಗೆ ಪಾತ್ರವಾಗಿದೆ. ಇಲ್ಲಿನ ಜನರು ಸ್ವಚ್ಛತೆಗೆ ಅತ್ಯಂತ ಮಹತ್ವ ನೀಡಿದ್ದು ಪ್ರತಿಯೊಬ್ಬರಲ್ಲೂ ಇದರ ಕುರಿತು ಜಾಗೃತಿ ಮೂಡಿಸಿರುವುದೆ ಇದಕ್ಕೆ ಕಾರಣವಾಗಿದೆ. ಒಮ್ಮೆಯಾದರೂ ಸ್ವಚ್ಛತೆಯ ನಡುವೆ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯಲು ಇಲ್ಲಿಗೆ ಭೇಟಿ ನೀಡಲೇಬೇಕು.
ಚಿತ್ರಕೃಪೆ: Ashwin Kumar


Click it and Unblock the Notifications


















